Children Murder: ತನ್ನ 6 ಮಕ್ಕಳನ್ನು ಬಾವಿಗೆ ತಳ್ಳಿದ ತಾಯಿ! ಬೇಡಮ್ಮ ಅಂತ ಕಣ್ಣೀರಿಟ್ಟರೂ ಕರಗಲಿಲ್ಲ ಮಾತೃ ಹೃದಯ

ಇಲ್ಲಿ ತಾಯಿಯೇ ಮಕ್ಕಳ ಪಾಲಿಗೆ ಕ್ರೂರಿಯಾಗಿದ್ದಾಳೆ. ಮಕ್ಕಳನ್ನು ಬಾವಿಗೆ ತಳ್ಳಿ ಈ ತಾಯಿ ಹಂತಕಿಯಾಗಿದ್ದಾಳೆ. “ಅಮ್ಮ ಬೇಡಮ್ಮ, ಬಿಡ್ಬಿಡಮ್ಮ” ಅಂತ ಮಕ್ಕಳು ಅಳುತ್ತಾ, ಕಾಲಿಗೆ ಬಿದ್ದು ಕೇಳಿದರೂ ಆಕೆ ಬಿಡಲೇ ಇಲ್ಲ. ನೋಡ ನೋಡುತ್ತಿದ್ದಂತೆಯೇ ಮಕ್ಕಳನ್ನು ಬಾವಿಗೆ ತಳ್ಳಿದ್ದಾಳೆ! ಅದೂ 6 ಮಕ್ಕಳನ್ನು ತಳ್ಳಿ ಸಾಯಿಸಿದ್ದಾಳೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಮಹಾರಾಷ್ಟ್ರ: ತಾಯಿ (Mother) ದೇವರು (God) ಅಂತಾರೆ, ಮಕ್ಕಳು (Children) ಏನೇ ಮಾಡಿದ್ರೂ ತಾಯಿ ಅವರನ್ನು ಪ್ರೀತಿಸುತ್ತಾಳೆ. ಕೆಲವೊಮ್ಮೆ ಮಕ್ಕಳು ತಪ್ಪು ಮಾಡಿದಾಗ ಅವರನ್ನು ಶಿಕ್ಷಿಸುತ್ತಾಳೆ (Punishment) ನಿಜ, ಆದರೆ ತಾಯಿ ಯಾವತ್ತೂ ಕ್ರೂರಿಯಾಗುವುದಿಲ್ಲ. ತಾಯಿ ಕೋಪ (Angry) ಕ್ಷಣ ಮಾತ್ರ, ಮರುಕ್ಷಣದಲ್ಲೇ ಆಕೆ ಕೋಪ ಮರೆತು ಮಕ್ಕಳ ಮೇಲೆ ತಾಯಿ ಪ್ರೀತಿಯ ಮಳೆಯನ್ನೇ (Rain) ಸುರಿಸುತ್ತಾಳೆ. ಆದರೆ ಇಲ್ಲಿ ಆಗಿದ್ದು ಎಲ್ಲವೂ ಉಲ್ಟಾ ಪಲ್ಟಾ. ಇಲ್ಲಿ ತಾಯಿಯೇ ಮಕ್ಕಳ ಪಾಲಿಗೆ ಕ್ರೂರಿಯಾಗಿದ್ದಾಳೆ. ಮಕ್ಕಳನ್ನು ಬಾವಿಗೆ (Well) ತಳ್ಳಿ ಈ ತಾಯಿ ಹಂತಕಿಯಾಗಿದ್ದಾಳೆ. “ಅಮ್ಮ ಬೇಡಮ್ಮ, ಬಿಡ್ಬಿಡಮ್ಮ” ಅಂತ ಮಕ್ಕಳು ಅಳುತ್ತಾ (Cry), ಕಾಲಿಗೆ ಬಿದ್ದು ಕೇಳಿದರೂ ಆಕೆ ಬಿಡಲೇ ಇಲ್ಲ. ನೋಡ ನೋಡುತ್ತಿದ್ದಂತೆಯೇ ಮಕ್ಕಳನ್ನು ಬಾವಿಗೆ ತಳ್ಳಿದ್ದಾಳೆ! ಅದೂ 6 ಮಕ್ಕಳನ್ನು ತಳ್ಳಿ ಸಾಯಿಸಿದ್ದಾಳೆ. ಈ ಘಟನೆ ಬಗ್ಗೆ ತಿಳಿದು ಜನರೆಲ್ಲ ಆಘಾತಕ್ಕೆ ಒಳಗಾಗಿದ್ದಾರೆ. ಆದರೆ ತಾಯಿಯ ಈ ವರ್ತನೆಗೂ ಕಾರಣವಿದೆ. ಮಕ್ಕಳನ್ನೇ ಕೊಲೆ ಮಾಡಬೇಕು ಎಂಬ ಮನಸ್ಥಿತಿ ಬರುವಾಗ ಆಕೆ ಎಷ್ಟು ನೊಂದಿದ್ದಳು ಎನ್ನುವುದನ್ನು ಊಹಿಸಲೂ ಕಷ್ಟ.

6 ಮಕ್ಕಳನ್ನು ಬಾವಿಗೆ ತಳ್ಳಿ ಕೊಂದ ತಾಯಿ

ಮಹಾರಾಷ್ಟ್ರದ ರಾಯಗಡ ಜಿಲ್ಲೆಯಲ್ಲಿ 30 ವರ್ಷ ವಯಸ್ಸಿನ ತಾಯಿಯೊಬ್ಬಳು ತನ್ನ 6 ಮಕ್ಕಳನ್ನು ಬಾವಿಗೆ ತಳ್ಳಿ, ಅವರನ್ನು ಕೊಲೆ ಮಾಡಿದ್ದಾಳೆ. ಮುಂಬೈನಿಂದ ಸುಮಾರು 100 ಕಿಮೀ ದೂರದಲ್ಲಿರುವ ಮಹಾಡ್ ತಾಲೂಕಿನ ಖರಾವಲಿ ಗ್ರಾಮದಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. “ಅಮ್ಮ ಬೇಡಮ್ಮ, ಬಿಡ್ಬಿಡಮ್ಮ” ಅಂತ ಮಕ್ಕಳು ಅಳುತ್ತಾ ಕಾಲಿಗೆ ಬಿದ್ದು ಕೇಳಿದರೂ ಆಕೆ ಬಿಡಲೇ ಇಲ್ಲ. ಸ್ವಲ್ಪವೂ ಕರುಣೆ ತೋರದ ಆ ತಾಯಿ, ಮಕ್ಕಳನ್ನು ಬಾವಿಗೆ ತಳ್ಳಿದ್ದಾಳೆ.

ನೋಡ ನೋಡುತ್ತಲೇ ಹೋಯಿತು ಮಕ್ಕಳ ಪ್ರಾಣ

ಬಾವಿಗೆ ಬಿದ್ದ ಮಕ್ಕಳು ತಮ್ಮ ಪ್ರಾಣ ಉಳಿಸಿಕೊಳ್ಳಲು ಹರಸಾಹಸ ಪಟ್ಟಿದ್ದಾರೆ. ಕಾಪಾಡಿ ಅಂತ ಕಿರುಚಿ ಕೊಂಡಿದ್ದಾರೆ. ಅಲ್ಲೇ ಬಾವಿ ಬಳಿಯಲ್ಲಿ ಇದ್ದ ತಾಯಿ, ಏನೂ ಆಗಿಲ್ಲ ಎನ್ನುವಂತೆ ಗುಂಡು ಕಲ್ಲಿನಂತೆ ನಿಂತಿದ್ದಾಳೆ. ಇದನ್ನು ಗಮನಿಸಿದ ಸ್ಥಳೀಯರು ಸ್ಥಳಕ್ಕೆ ಬಂದು, ಮಕ್ಕಳನ್ನು ರಕ್ಷಿಸುವ ಯತ್ನ ಮಾಡಿದ್ದಾರೆ. ಆದರೆ ಅಷ್ಟರಲ್ಲಾಗಲೇ ಮಕ್ಕಳು ಬಾವಿಯಲ್ಲಿ ಮುಳುಗಿ, ಜನರೆಲ್ಲ ನೋಡ ನೋಡುತ್ತಿದ್ದಂತೆಯೇ ಪ್ರಾಣ ಬಿಟ್ಟಿದ್ದಾರೆ.

ಇದನ್ನೂ ಓದಿ: UP Accident: ಆ್ಯಂಬುಲೆನ್ಸ್-ಟ್ರಕ್ ಮುಖಾಮುಖಿ, ಚೆಕಪ್ ಮುಗಿಸಿ ಬರ್ತಿದ್ದ ಒಂದೇ ಕುಟುಂಬದ 6 ಜನ ಸೇರಿ 7 ಸಾವು

ಸತ್ತ ಮಕ್ಕಳೆಲ್ಲ 18 ತಿಂಗಳದಿಂದ 10 ವರ್ಷದ ಒಳಗಿನವರು

ಇನ್ನು ಈ 6 ಮಕ್ಕಳ ಪೈಕಿ 18 ತಿಂಗಳಿನಿಂದ 10 ವರ್ಷದ ಒಳಗಿನ ಮಕ್ಕಳಿದ್ದರು ಎನ್ನಲಾಗಿದೆ. ಆದರೆ ಪುಟ್ಟ ಮಕ್ಕಳೂ ಎನ್ನುವ ಕರುಣೆಯನ್ನೂ ತೋರದೆ ಪಾಪಿ ತಾಯಿ ಅವರನ್ನೆಲ್ಲರನ್ನೂ ಕೊಂದಿದ್ದಾಳೆ.

ಮಕ್ಕಳ ಪಾಲಿಗೆ ತಾಯಿಯೇ ರಾಕ್ಷಸಿಯಾಗಿದ್ದು ಏಕೆ?

ತಾಯಿಯೇ ಈ ರೀತಿ ತನ್ನ 6 ಪುಟ್ಟ ಪುಟ್ಟ ಮಕ್ಕಳನ್ನು ಕೊಲ್ಲಲು ಬಲವಾದ ಕಾರಣವೂ ಇದೆ. ಅದೇ ಕೌಟುಂಬಿಕ ಕಲಹ. ಪದೇ ಪದೇ ಈಕೆಯ ಮನೆಯಲ್ಲಿ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ಇತ್ತೀಚಿಗಷ್ಟೇ ಗಂಡ ಈಕೆಯ ಮೇಲೆ ದೈಹಿಕ ಹಲ್ಲೆ ನಡೆಸಿದ್ದ.  ಆತನ ಕುಟುಂಬಸ್ಥರೂ ಕೂಡ ಈಕೆಗೆ ದೈಹಿಕವಾಗಿ ಹಾಗೂ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. ಇದರಿಂದ ನೊಂದಿದ ಮಹಿಳೆ ಮನಸ್ಸಿನ ಕೈಗೆ ಬುದ್ದಿ ಕೊಟ್ಟು, ಆತುರದ ನಿರ್ಧಾರ ತೆಗೆದುಕೊಂಡಿದ್ದಾಳೆ.

ಇದನ್ನೂ ಓದಿ: Delhi Weather: ದೆಹಲಿಯಲ್ಲಿ ಬಿರುಗಾಳಿ ಸಹಿತ ಮಳೆ, ಆಲಿಕಲ್ಲು ಬಿದ್ದು ವ್ಯಕ್ತಿ ಸಾವು! ಇಲ್ನೋಡಿ ಫೋಟೋಸ್

ಪೊಲೀಸರಿಂದ ತಾಯಿಯ ವಿಚಾರಣೆ

ಮಾಹಿತಿ ಪಡೆದ ಪೊಲೀಸರು ಮತ್ತು ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿದ್ದು, ಆರು ಮಕ್ಕಳ ಶವಗಳನ್ನು ಬಾವಿಯಿಂದ ಹೊರತೆಗೆದು, ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಸದ್ಯ ಮಹಿಳೆಯನ್ನು ವಿಚಾರಣೆ ನಡೆಸಲಾಗುತ್ತಿದೆ.
Published by:Annappa Achari
First published: