New Delhi: ಇಶ್ರತ್‌ ಜಹಾನ್‌ ಎನ್‌ಕೌಂಟರ್‌ ತನಿಖೆಯಲ್ಲಿ ಭಾಗಿಯಾಗಿದ್ದ ಐಪಿಎಸ್ ಅಧಿಕಾರಿ ಸೇವೆಯಿಂದ ವಜಾ

ಐಐಟಿ ದೆಹಲಿಯ ಪದವೀಧರ ಮತ್ತು ಐಐಎಂ ಅಹಮದಾಬಾದ್‌ನ ಹಳೆಯ ವಿದ್ಯಾರ್ಥಿಯಾಗಿದ್ದ, 1986-ಬ್ಯಾಚ್ ನ ಗುಜರಾತ್ ಕೇಡರ್ ಅಧಿಕಾರಿ ಸತೀಶ್‌ ವರ್ಮಾ, 2014 ರಿಂದ ಕಳೆದ ಎಂಟು ವರ್ಷಗಳಲ್ಲಿ ಭ್ರಷ್ಟಾಚಾರ ಆರೋಪಗಳಿಗೆ ಸಂಬಂಧಿಸಿದಂತೆ ವಜಾಗೊಂಡಿರುವ ಕೆಲವು ಐಪಿಎಸ್ ಅಧಿಕಾರಿಗಳಲ್ಲಿ ಇವರೂ ಸಹ ಒಬ್ಬರು. ದೇಶದ ಅಂತಾರಾಷ್ಟ್ರೀಯ ಸಂಬಂಧಗಳನ್ನು ಕೆಡಿಸುವ ರೀತಿ ಮಾಧ್ಯಮಗಳೊಂದಿಗೆ ಮಾತನಾಡಿರುವುದು ಸೇರಿ ಹಲವು ಆರೋಪಗಳ ಕಾರಣಗಳಿಗಾಗಿ ಅವರನ್ನು ಸೇವೆಯಿಂದ ವಜಾಗೊಳಿಸಿ ಸರ್ಕಾರ ಆಗಸ್ಟ್ 30 ರಂದು ಆದೇಶ ಹೊರಡಿಸಿದೆ.

ಐಪಿಎಸ್ ಅಧಿಕಾರಿ ಸತೀಶ್‌ ವರ್ಮಾ

ಐಪಿಎಸ್ ಅಧಿಕಾರಿ ಸತೀಶ್‌ ವರ್ಮಾ

  • Share this:
ಹೊಸದಿಲ್ಲಿ: 2004 ರಲ್ಲಿ ಇಶ್ರತ್‌ ಜಹಾನ್‌ (Ishrat Jahan) ಎನ್‌ಕೌಂಟರ್‌ ಪ್ರಕರಣದ ತನಿಖೆಗಾಗಿ ರಚಿಸಲಾಗಿದ್ದ ವಿಶೇಷ ತನಿಖಾ ತಂಡದ (ಎಸ್‌ಐಟಿ) ಭಾಗವಾಗಿದ್ದ ಐಪಿಎಸ್‌ ಅಧಿಕಾರಿ ಸತೀಶ್‌ ಚಂದ್ರ ವರ್ಮಾ (Satish Chandra Verma) ಅವರನ್ನು ನಿವೃತ್ತಿಯಾಗುವ ಒಂದು ತಿಂಗಳ ಮೊದಲೇ ಆಗಸ್ಟ್‌ 30ರಂದು ಸೇವೆಯಿಂದ ವಜಾಗೊಳಿಸಲಾಗಿದೆ. ಐಐಟಿ ದೆಹಲಿಯ (IIT Delhi) ಪದವೀಧರ ಮತ್ತು ಐಐಎಂ ಅಹಮದಾಬಾದ್‌ನ ಹಳೆಯ ವಿದ್ಯಾರ್ಥಿಯಾಗಿದ್ದ, 1986-ಬ್ಯಾಚ್ ನ ಗುಜರಾತ್ ಕೇಡರ್ ಅಧಿಕಾರಿ ಸತೀಶ್‌ ವರ್ಮಾ, 2014 ರಿಂದ ಕಳೆದ ಎಂಟು ವರ್ಷಗಳಲ್ಲಿ ಭ್ರಷ್ಟಾಚಾರ ಆರೋಪಗಳಿಗೆ ಸಂಬಂಧಿಸಿದಂತೆ ವಜಾಗೊಂಡಿರುವ ಕೆಲವು ಐಪಿಎಸ್ ಅಧಿಕಾರಿಗಳಲ್ಲಿ (IPS Officers) ಇವರೂ ಸಹ ಒಬ್ಬರು.

ದೇಶದ ಅಂತಾರಾಷ್ಟ್ರೀಯ ಸಂಬಂಧಗಳನ್ನು ಕೆಡಿಸುವ ರೀತಿ ಮಾಧ್ಯಮಗಳೊಂದಿಗೆ ಮಾತನಾಡಿರುವುದು ಸೇರಿ ಹಲವು ಆರೋಪಗಳ ಕಾರಣಗಳಿಗಾಗಿ ಅವರನ್ನು ಸೇವೆಯಿಂದ ವಜಾಗೊಳಿಸಿ ಸರ್ಕಾರ ಆಗಸ್ಟ್ 30 ರಂದು ಆದೇಶ ಹೊರಡಿಸಿದೆ.

ದೆಹಲಿ ಹೈಕೋರ್ಟ್‌ ಮೊರೆ ಹೋದ ವರ್ಮಾ
ವಜಾಗೊಳಿಸುವ ಆದೇಶದ ವಿರುದ್ಧ ದೆಹಲಿ ಹೈಕೋರ್ಟ್‌ ಮೊರೆ ಹೋಗಿರುವ ವರ್ಮಾ ಅವರು ತಮ್ಮ ವಿರುದ್ಧ ಹಲವಾರು ಶಿಸ್ತು ಕ್ರಮಗಳನ್ನು ಪ್ರಶ್ನಿಸಿದ್ದರು. ವಜಾಗೊಳಿಸುವ ಆದೇಶವನ್ನು ಸೆಪ್ಟೆಂಬರ್ 1 ರಿಂದ ಜಾರಿಗೆ ತರಲು ಕೇಂದ್ರ ಸರ್ಕಾರವು ಅರ್ಜಿಯನ್ನು ಸಲ್ಲಿಸಿತು. ವರ್ಮಾ ಅವರ ವಜಾ ಪ್ರಕರಣ ದೆಹಲಿ ಹೈಕೋರ್ಟ್‌ನಲ್ಲಿ ಸುಮಾರು ಒಂದು ವರ್ಷದಿಂದ ಬಾಕಿ ಉಳಿದಿತ್ತು.

ಆದಾಗ್ಯೂ, ಅರ್ಜಿದಾರರು ವಜಾಗೊಳಿಸುವ ಆದೇಶದ ವಿರುದ್ಧ ಕಾನೂನಿನ ಪ್ರಕಾರ ಅವರ ಪರಿಹಾರಗಳನ್ನು ಪಡೆಯಲು ಅನುವು ಮಾಡಿಕೊಡಲು ಸೆಪ್ಟೆಂಬರ್ 19 ರವರೆಗೆ ಆದೇಶವನ್ನು ಜಾರಿಗೊಳಿಸಬಾರದು ಎಂದು ವರ್ಮಾ ವಿರುದ್ಧ ತ್ವರಿತವಾಗಿ ಶಿಸ್ತು ಕ್ರಮ ಕೈಗೊಳ್ಳದಂತೆ ಹೈಕೋರ್ಟ್ ಸರ್ಕಾರಕ್ಕೆ ಸೂಚಿಸಿತ್ತು.

ಸತೀಶ್ ಚಂದ್ರ ವರ್ಮಾ ಮೇಲೆ ಆರೋಪಗಳ ಸುರಿಮಳೆ
ಎನ್‌ಕೌಂಟರ್ ಬಗ್ಗೆ ತನಿಖೆ ನಡೆಸಲು ಗುಜರಾತ್ ಹೈಕೋರ್ಟ್ ರಚಿಸಿದ್ದ ವಿಶೇಷ ತನಿಖಾ ತಂಡದ ಸದಸ್ಯರಾಗಿದ್ದ ಐಪಿಎಸ್ ಅಧಿಕಾರಿ ಸತೀಶ್ ಚಂದ್ರ ವರ್ಮಾ ವಿರುದ್ಧ ಸರ್ಕಾರವು ಕಚೇರಿ ದುರ್ಬಳಕೆ ಸೇರಿದಂತೆ ವಿವಿಧ ಆರೋಪಗಳ ಮೇಲೆ ಮೂರು ಇಲಾಖೆ ತನಿಖೆಗಳನ್ನು ಆರಂಭಿಸಿತ್ತು.

ಇದನ್ನೂ ಓದಿ: Captain Amarinder Singh: ಬಿಜೆಪಿ ಜೊತೆ ಪಂಜಾಬ್ ಲೋಕ ಕಾಂಗ್ರೆಸ್ ವಿಲೀನ; ಕುಟುಂಬ ಸಮೇತ ಕಮಲ ಸೇರಲಿದ್ದಾರೆ ಕ್ಯಾಪ್ಟನ್

ವರ್ಮಾ ವಿರುದ್ಧ ಸರ್ಕಾರ ಹಲವು ಗಂಭೀರ ಆರೋಪಗಳನ್ನು ಮಾಡಿತ್ತು. ಇಶ್ರತ್ ಜಹಾನ್ ಎನ್‌ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಲ್ಲಿ ಹೇಳಿಕೆಗಳನ್ನು ನೀಡುವ ಮೂಲಕ ಸರ್ಕಾರದ ಇಮೇಜ್‌ಗೆ ಧಕ್ಕೆ ತಂದ ಆರೋಪಗಳು ಇದರಲ್ಲಿ ಸೇರಿವೆ.

ಇಶ್ರತ್‌ ಜಹಾನ್‌ ಎನ್‌ಕೌಂಟರ್‌ ಪ್ರಕರಣ ಏನು?
15 ಜೂನ್ 2004 ರಂದು, ಅಹಮದಾಬಾದ್‌ನ ಹೊರವಲಯದಲ್ಲಿ ಪೊಲೀಸ್ ಎನ್‌ಕೌಂಟರ್‌ನಲ್ಲಿ ಮಹಾರಾಷ್ಟ್ರದ 19 ವರ್ಷದ ಕಾಲೇಜು ವಿದ್ಯಾರ್ಥಿನಿ ಇಶ್ರತ್ ಜಹಾನ್ ಮತ್ತು ಇತರ ಮೂವರನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು. ಈ ನಾಲ್ವರು ಲಷ್ಕರ್-ಎ-ತೊಯ್ಬಾ ಕಾರ್ಯಕರ್ತರಾಗಿದ್ದು ಆಗಿನ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಕೊಲ್ಲಲು ಪ್ಲ್ಯಾನ್‌ ಮಾಡಿದ್ದರು ಎಂದು ಪೊಲೀಸರು ವರದಿ ನೀಡಿದ್ದರು.

ಈ ಸಲುವಾಗಿ ಗುಜರಾತ್ ಹೈಕೋರ್ಟ್ ಎನ್‌ಕೌಂಟರ್‌ ಕುರಿತಾದ ತನಿಖೆಗೆ ಎಸ್‌ಐಟಿಯನ್ನು ರಚಿಸಿತ್ತು. ವರ್ಮಾ ಅವರು ಈ ತಂಡದಲ್ಲಿ ಒಬ್ಬರಾಗಿದ್ದರು. ಎಸ್‌ಐಟಿ ತನಿಖೆಯ 2011 ರ ವರದಿಯಲ್ಲಿ ಇಶ್ರತ್ ಜಹಾನ್ ಎನ್‌ಕೌಂಟರ್ 'ನಕಲಿ' ಎಂದು ಅಧಿಕಾರಿಗಳು ತಿಳಿಸಿದ್ದರು. ನಂತರ, 2014 ರಲ್ಲಿ ವರ್ಮಾ ಅವರನ್ನು ಗುಜರಾತ್‌ನಿಂದ ವರ್ಗಾಯಿಸಲಾಯಿತು. ಅವರನ್ನು ಸಿಆರ್‌ಪಿಎಫ್‌ನಲ್ಲಿ ಇನ್ಸ್‌ಪೆಕ್ಟರ್ ಜನರಲ್ ಆಗಿ ನೇಮಿಸಲಾಯಿತು ಮತ್ತು ತ್ರಿಪುರಾದಲ್ಲಿ ನಿಯೋಜಿಸಲಾಯಿತು.

ಇದನ್ನೂ ಓದಿ:  Ladies Fight Video: ಟೋಲ್‌ನಲ್ಲಿ ಮಹಿಳೆಯರ ಡಿಶ್ಯುಂ ಡಿಶ್ಯುಂ! ಕೆರಳಿದ ನಾರಿಯರ ಜಡೆಜಗಳದಿಂದ ಟ್ರಾಫಿಕ್ ಜಾಮ್!

ಎರಡು ವರ್ಷಗಳ ನಂತರ, ಅವರು ಮೇಘಾಲಯದ ಶಿಲ್ಲಾಂಗ್‌ನಲ್ಲಿರುವ ನಾರ್ತ್ ಈಸ್ಟರ್ನ್ ಎಲೆಕ್ಟ್ರಿಕ್ ಪವರ್ ಕಾರ್ಪೊರೇಷನ್ ಲಿಮಿಟೆಡ್‌ನ (NEEPCO) ಮುಖ್ಯ ವಿಜಿಲೆನ್ಸ್ ಅಧಿಕಾರಿಯಾಗಿ (CVO) ನೇಮಕಗೊಂಡರು. 2021 ರಲ್ಲಿ, ಅವರನ್ನು CRPF ನ CTC ಯ ಪ್ರಾಂಶುಪಾಲರಾಗಿ ನೇಮಿಸಲಾಯಿತು. ಇದಾದ ಬಳಿಕ 2014 ರ ನಂತರ ಸರ್ಕಾರವು ಅವರ ವಿರುದ್ಧ ಶಿಸ್ತು ಕ್ರಮಗಳನ್ನು ಪ್ರಾರಂಭಿಸಿದಾಗಿನಿಂದ ಅವರಿಗೆ ಬಡ್ತಿ ನೀಡಲಾಗಿಲ್ಲ ಮತ್ತು ಅವರ ವೇತನ ಶ್ರೇಣಿಯನ್ನೂ ಸಹ ಬದಲಿಸಿರಲಿಲ್ಲ. ಗುಜರಾತ್‌ನಲ್ಲಿ 2004 ರಲ್ಲಿ ನಡೆದ ಇಶ್ರತ್ ಜಹಾನ್ ಎನ್‌ಕೌಂಟರ್ ಪ್ರಕರಣದ ತನಿಖೆ ನಡೆಸಿದ ಹಿರಿಯ ಐಪಿಎಸ್ ಅಧಿಕಾರಿಯೊಂದಿಗೆ ರಾಜ್ಯ ಸರ್ಕಾರಕ್ಕೆ ಅಸಮಾಧಾನವಿತ್ತು ಎಂದು ಹೇಳಲಾಗಿದೆ.

ಸತೀಶ್‌ ಚಂದ್ರ ವರ್ಮಾ ಪ್ರಸ್ತುತ ತಮಿಳುನಾಡಿನಲ್ಲಿ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (CRPF) ಕೇಂದ್ರೀಯ ತರಬೇತಿ ಕಾಲೇಜಿನ (CTC) ಪ್ರಾಂಶುಪಾಲರಾಗಿ ಇನ್ಸ್‌ಪೆಕ್ಟರ್ ಜನರಲ್ ಶ್ರೇಣಿಯಲ್ಲಿ ವೇತನ ಶ್ರೇಣಿ 14 ರಲ್ಲಿ ಕಾರ್ಯನಿರ್ವಹಿಸುತ್ತಿದ್ದರು.
Published by:Ashwini Prabhu
First published: