Monkeypox: ಅಮೆರಿಕದಲ್ಲಿ ಜೋರಾಯ್ತು ಮಂಕಿಪಾಕ್ಸ್ ಅಬ್ಬರ! ಹೆಲ್ತ್ ಎಮೆರ್ಜೆನ್ಸಿ ಘೋಷಿಸಿದ ಸರ್ಕಾರ

ಅಮೆರಿಕಾದಲ್ಲಿ ಮಂಕಿಪಾಕ್ಸ್ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಸಾರ್ವಜನಿಕ ಆರೋಗ್ಯ ಅಧಿಕಾರಿಗಳು ಮಂಕಿಪಾಕ್ಸ್ ಕಾಯಿಲೆಯ ಹರಡುವಿಕೆಯನ್ನು ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿ ಎಂದು ಘೋಷಿಸಿದ್ದಾರೆ.

ಅಮೆರಿಕ ಅಧ್ಯಕ್ಷ ಜೋ ಬೈಡನ್

ಅಮೆರಿಕ ಅಧ್ಯಕ್ಷ ಜೋ ಬೈಡನ್

  • Share this:
ಅಮೆರಿಕಾ: ಜಗತ್ತಿನಾದ್ಯಂತ ಮಂಕಿಪಾಕ್ಸ್‌ನ (Monkeypox) ಅಬ್ಬರ ಜೋರಾಗಿದೆ. ಕರೋನಾ ಪ್ರಕರಣಗಳ (Corona Case) ಏರಿಕೆ ಬೆನ್ನಲ್ಲೇ ಮಂಕಿಪಾಕ್ಸ್ ಸೋಂಕೂ (Infection) ಸಹ ಏರಿಕೆ ಆಗುತ್ತಲೇ ಇದೆ. ಅಮೆರಿಕಾ (America), ಬ್ರಿಟನ್ (Britain), ಸಿಂಗಾಪುರ (Singapore) ಸೇರಿದಂತೆ ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಮಂಕಿಪಾಕ್ಸ್ ಸೋಂಕು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಭಾರತದಲ್ಲಿ (India) ಈಗಾಗಲೇ 9 ಮಂಕಿಪಾಕ್ಸ್ ಪ್ರಕರಣಗಳು ದೃಢಪಟ್ಟಿವೆ. ಅದರಲ್ಲಿ ಕೇರಳದ ಸೋಂಕಿತ ಯುವಕನೊಬ್ಬ ಮೃತಪಟ್ಟಿದ್ದಾನೆ. ಅತ್ತ ಅಮೆರಿಕದಲ್ಲೂ ಸೋಂಕು ತೀವ್ರಗತಿಯಲ್ಲಿ ಏರಿಕೆಯಾಗುತ್ತಿದ್ದು, ಅಲ್ಲಿನ ಸರ್ಕಾರ ಆರೋಗ್ಯ ತುರ್ತು ಪರಿಸ್ಥಿತಿ (Health Emergency) ಘೋಷಿಸಿದೆ.  

 ಅಮೆರಿಕದಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ ಘೋಷಣೆ

ಅಮೆರಿಕಾದಲ್ಲಿ ಮಂಕಿಪಾಕ್ಸ್ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಸಾರ್ವಜನಿಕ ಆರೋಗ್ಯ ಅಧಿಕಾರಿಗಳು ಮಂಕಿಪಾಕ್ಸ್ ಕಾಯಿಲೆಯ ಹರಡುವಿಕೆಯನ್ನು ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿ ಎಂದು ಘೋಷಿಸಿದ್ದಾರೆ. ಈ ಘೋಷಣೆಯು ವೈರಸ್ ಹರಡುವುದನ್ನು ತಡೆಯಲು ಹೆಚ್ಚುವರಿ ಸರ್ಕಾರಿ ಸಂಪನ್ಮೂಲಗಳನ್ನು ಮುಕ್ತಗೊಳಿಸುತ್ತದೆ ಅಂತ ಅಧಿಕಾರಿಗಳು ಹೇಳಿದ್ದಾರೆ.

ಮಂಕಿಪಾಕ್ಸ್ ತಡೆಗಟ್ಟಲು ಸರ್ಕಾರ ಬದ್ಧ ಎಂದ ಜೋ ಬೈಡನ್

ಮಂಕಿಪಾಕ್ಸ್‌ಗೆ ಪ್ರತಿಕ್ರಿಯೆ ನೀಡಲು, ಲಸಿಕೆ ವಿತರಣೆಯನ್ನು ವೇಗಗೊಳಿಸಲು, ಪರೀಕ್ಷೆಯನ್ನು ವಿಸ್ತರಿಸಲು ಮತ್ತು ಅಪಾಯದಲ್ಲಿರುವ ಸಮುದಾಯಗಳಿಗೆ ಸೂಕ್ತ ಸಮಯದಲ್ಲಿ ಸಹಾಯ ಮಾಡಲು ನಮ್ಮ ಸರ್ಕಾರವು ಬದ್ಧವಾಗಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ತಿಳಿಸಿದ್ದಾರೆ. ಆರೋಗ್ಯ ಮತ್ತು ಮಾನವ ಸೇವೆಗಳ ವಿಭಾಗದ ಮುಖ್ಯಸ್ಥ ಕ್ಸೇವಿಯರ್ ಬೆಸೆರಾ ಮಾತನಾಡಿ, ಮಂಕಿಪಾಕ್ಸ್ ಎದುರಿಸಲು ಮುಂದಿನ ಹಂತಕ್ಕೆ ಸ್ಪಂದಿಸಲು ದೇಶವು ಸಿದ್ಧವಾಗಿದೆ ಮತ್ತು ಸೋಂಕನ್ನು ಗಂಭೀರವಾಗಿ ಪರಿಗಣಿಸುವಂತೆ ನಾಗರಿಕರಿಗೆ ಮನವಿ ಮಾಡಿದರು.

ಇದನ್ನೂ ಓದಿ: Monkey Pox And Ayurveda: ಮಂಕಿಪಾಕ್ಸ್ ನಿಯಂತ್ರಿಸಲು ಆಯುರ್ವೇದದ ಚಿಕಿತ್ಸೆ

 ಅಮೆರಿಕದ ವಿಪಕ್ಷಗಳಿಂದ ಟೀಕೆ

ಮಂಕಿಪಾಕ್ಸ್ ಲಸಿಕೆ ಲಭ್ಯತೆಯ ಬಗ್ಗೆ ಬಿಡೆನ್ ಸರ್ಕಾರ ಟೀಕೆಗಳನ್ನು ಎದುರಿಸುತ್ತಿರುವ ಸಮಯದಲ್ಲಿ ಈ ಘೋಷಣೆ ಮಾಡಲಾಗಿದೆ. ನ್ಯೂಯಾರ್ಕ್ ಮತ್ತು ಸ್ಯಾನ್ ಫ್ರಾನ್ಸಿಸ್ಕೋದಂತಹ ದೊಡ್ಡ ನಗರಗಳಲ್ಲಿನ ಚಿಕಿತ್ಸಾಲಯಗಳು ಬೇಡಿಕೆಯನ್ನು ಪೂರೈಸಲು ಎರಡು ಡೋಸ್ ಲಸಿಕೆಯನ್ನು ಸಾಕಷ್ಟು ಪ್ರಮಾಣದಲ್ಲಿ ಸ್ವೀಕರಿಸಿಲ್ಲ ಎಂಬ ಟೀಕೆಗಳು ಕೇಳಿಬರುತ್ತಿವೆ.

ಅಮೆರಿಕದಲ್ಲಿ 6600ಕ್ಕೂ ಹೆಚ್ಚು ಸೋಂಕು ದೃಢ

ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಶನ್ (ಸಿಡಿಸಿ) ಪ್ರಕಾರ, ಆಗಸ್ಟ್ 3ರ ಹೊತ್ತಿಗೆ, ಯುಎಸ್‌ನಲ್ಲಿ 6,600 ಕ್ಕೂ ಹೆಚ್ಚು ಮಂಕಿಪಾಕ್ಸ್ ಪ್ರಕರಣಗಳು ದೃಢಪಟ್ಟಿವೆ.

ಭಾರತದಲ್ಲಿ 9 ಮಂಕಿಪಾಕ್ಸ್ ಪ್ರಕರಣ ದೃಢ

ಇತ್ತ ಭಾರತದಲ್ಲಿ ಈವರೆಗೆ ಮಂಕಿ ಪಾಕ್ಸ್‌ನ 9 ಪ್ರಕರಣಗಳು ದೃಢಪಟ್ಟಿವೆ. ಈ ಪೈಕಿ ಓರ್ವ ಸೋಂಕಿತ ಸಾವನ್ನಪ್ಪಿದ್ದಾನೆ. ಸೋಂಕು ಮುಂದಿನ ದಿನಗಳಲ್ಲಿ ಇನ್ನಷ್ಟು ವ್ಯಾಪಿಸುವ ಭೀತಿ ಇದೆ ಅಂತ ತಜ್ಞರು ಎಚ್ಚರಿಸಿದ್ದಾರೆ

ಇದನ್ನೂ ಓದಿ: Monkeypox Cases: ದೇಶದಲ್ಲಿ ಮೊದಲ ಬಾರಿಗೆ ಮಹಿಳೆಯಲ್ಲಿ ಮಂಕಿಪಾಕ್ಸ್ ದೃಢ: 9ಕ್ಕೇರಿದ ಪ್ರಕರಣಗಳ ಸಂಖ್ಯೆ

 ಮಂಕಿಪಾಕ್ಸ್ ತಡೆಗೆ ಕಠಿಣ ಕ್ರಮ

ಸದ್ಯ ಜಾರಿಯಲ್ಲಿ ಇರುವ ಮಂಕಿ ಪಾಕ್ಸ್ ಮಾರ್ಗಸೂಚಿ ಅನ್ವಯ, ಸೋಂಕಿನ ಲಕ್ಷಣ ಇರುವ ಯಾವುದೇ ವ್ಯಕ್ತಿಯನ್ನು 21 ದಿನಗಳ ಕಾಲ ನಿಗಾ ವಹಿಸಲಾಗುತ್ತದೆ. ಸೋಂಕಿತನಿಗೆ ವಿದೇಶ ಪ್ರಯಾಣ ಇತಿಹಾಸ ಇದ್ದರೆ ಆದ್ಯತೆ ಮೇರೆಗೆ ಪರಿಗಣಿಸಲಾಗುತ್ತದೆ. ದೇಹದಲ್ಲಿ ಗುಳ್ಳೆ, ದದ್ದುಗಳು ಇದ್ದರೆ, ಜ್ವರ, ತಲೆ ನೋವು, ಮೈ - ಕೈ ನೋವು ಇದ್ದರೆ, ಸುಸ್ತು ಇದ್ದರೆ ಇಂತಹ ಪ್ರಕರಣಗಳನ್ನು ಶಂಕಿತ ಮಂಕಿ ಪಾಕ್ಸ್ ಪ್ರಕರಣ ಎಂದು ಪರಿಗಣಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಸದ್ಯ ಜಾರಿಯಲ್ಲಿ ಇರುವ ನಿಯಮಾವಳಿಗಳನ್ನು ಮಾರ್ಪಾಡು ಮಾಡಬೇಕಾದ ಅಗತ್ಯತೆ ಇದೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.
Published by:Annappa Achari
First published: