Ancient Skeleton: ಮೆಕ್ಸಿಕೋ ಗುಹೆಯಲ್ಲಿ ಪುರಾತನ ಅಸ್ಥಿಪಂಜರ ಪತ್ತೆ, ರೈಲು ಯೋಜನೆಯಿಂದ ಅಳಿವಿನಂಚಿನದೆ ಗುಹೆಗಳು

ಪುರಾತತ್ವ ಶಾಸ್ತ್ರಜ್ಞರ ಪ್ರಕಾರ, 8,000 ವರ್ಷಗಳ ಹಿಂದೆ ಕೊನೆಯ ಹಿಮಯುಗದ ಕೊನೆಯಲ್ಲಿ ಪ್ರವಾಹಕ್ಕೆ ಒಳಗಾದ ಗುಹೆಗಳಲ್ಲಿ ಮಾನವ ಅಸ್ಥಿಪಂಜರಗಳು ಕಂಡುಬಂದಿವೆ. ಮೆಕ್ಸಿಕನ್ ಸರ್ಕಾರವು ಕಾಡಿನ ಮೂಲಕ ಹೈಸ್ಪೀಡ್ ಟೂರಿಸ್ಟ್ ರೈಲನ್ನು ನಿರ್ಮಿಸಲು ಯೋಜಿಸಿರುವ ಗುಹೆಯಲ್ಲಿ ಪುರಾತತ್ವಶಾಸ್ತ್ರಜ್ಞ ಆಕ್ಟೇವಿಯೊ ಡೆಲ್ ರಿಯೊ ಹಾಗೂ ಮುಳುಗುತಜ್ಞ ಪೀಟರ್ ಬ್ರೋಗರ್ ಕೆಸರಿನಿಂದ ಆವೃತವಾಗಿರುವ ತಲೆಬುರುಡೆ ಮತ್ತು ಅಸ್ಥಿಪಂಜರವನ್ನು ನೋಡಿದ್ದಾರೆ. 

ಪುರಾತನ ಅಸ್ಥಿಪಂಜರ ಪತ್ತೆ

ಪುರಾತನ ಅಸ್ಥಿಪಂಜರ ಪತ್ತೆ

 • Share this:

  ಉತ್ತರ ಅಮೆರಿಕಾದಲ್ಲಿ (North America) ಕೆಲವು ಹಳೆಯ ಮಾನವ ಅವೇಶಷಗಳು ನೆಲದಲ್ಲಿನ ಕುಳಿಗಳಿರುವ ಗುಹೆಗಳಲ್ಲಿ ಪತ್ತೆಯಾಗಿದೆ. ಪುರಾತತ್ವ ಶಾಸ್ತ್ರಜ್ಞರ ಪ್ರಕಾರ, 8,000 ವರ್ಷಗಳ ಹಿಂದೆ ಕೊನೆಯ ಹಿಮಯುಗದ ಕೊನೆಯಲ್ಲಿ ಪ್ರವಾಹಕ್ಕೆ ಒಳಗಾದ ಗುಹೆಗಳಲ್ಲಿ ಮಾನವ ಅಸ್ಥಿಪಂಜರಗಳು (Skeleton) ಕಂಡುಬಂದಿವೆ. ಮೆಕ್ಸಿಕನ್ ಸರ್ಕಾರವು ಕಾಡಿನ ಮೂಲಕ ಹೈಸ್ಪೀಡ್ ಟೂರಿಸ್ಟ್ ರೈಲನ್ನು (Train) ನಿರ್ಮಿಸಲು ಯೋಜಿಸಿರುವ ಗುಹೆಯಲ್ಲಿ (Cave) ಪುರಾತತ್ವಶಾಸ್ತ್ರಜ್ಞ ಆಕ್ಟೇವಿಯೊ ಡೆಲ್ ರಿಯೊ ಹಾಗೂ ಮುಳುಗುತಜ್ಞ ಪೀಟರ್ ಬ್ರೋಗರ್ ಕೆಸರಿನಿಂದ ಆವೃತವಾಗಿರುವ ತಲೆಬುರುಡೆ ಮತ್ತು ಅಸ್ಥಿಪಂಜರವನ್ನು ನೋಡಿದ್ದಾರೆ.  ಗುಹೆಯ ಪ್ರವೇಶದ್ವಾರವನ್ನು ಪರಿಶೀಲನೆ ನಡೆಸಿರುವ ತಜ್ಞರು, ಆಧುನಿಕ ಈಜುವ ಉಪಕರಣಗಳಿಲ್ಲದೆ ಅಸ್ಥಿಪಂಜರ ಇಲ್ಲಿಗೆ ಬರಲು ಸಾಧ್ಯವಿಲ್ಲ ಹಾಗಾಗಿ ಇದು 8,000 ವರ್ಷಗಳಿಗಿಂತ ಹಳೆಯದಿರಬೇಕು ಎಂದು ಮಾಹಿತಿ ನೀಡಿದ್ದಾರೆ. 


  ಪತ್ತೆಯಾದ ಅಸ್ಥಿಪಂಜರ ಹಾಗೂ ತಲೆಬುರುಡೆ
  ಈ ಮೃತದೇಹವನ್ನು ಗುಹೆಯಲ್ಲಿ ಇಡಲಾಗಿದೆಯೇ ಅಥವಾ ಈ ವ್ಯಕ್ತಿ ಗುಹೆಯಲ್ಲಿಯೇ ಸಾವನ್ನಪ್ಪಿದ್ದಾನೆಯೇ ಎಂಬುದು ನಮಗೆ ತಿಳಿದಿಲ್ಲ ಡೆಲ್ ರಿಯೊ ಹೇಳಿದ್ದಾರೆ. ಅಸ್ಥಿಪಂಜರವು ಸುಮಾರು 8 ಮೀಟರ್ ನೀರಿನ ಅಡಿಯಲ್ಲಿ, ಸುಮಾರು ಅರ್ಧ ಕಿಲೋಮೀಟರ್ (ಮೈಲಿಯ ಮೂರನೇ ಒಂದು ಭಾಗ) ಗುಹೆ ರಚನೆಯೊಳಗಿದೆ ಎಂದು ಅವರು ಹೇಳಿದರು.


  ರೈಲು ಯೋಜನೆಯಿಂದ ಅಳಿವಿನಂಚಿನಲ್ಲಿರುವ ಗುಹೆಗಳು
  ದೇಶದ ಕೆರಿಬಿಯನ್ ಕರಾವಳಿಯಲ್ಲಿರುವ "ಸಿನೋಟ್ಸ್" ಎಂದು ಕರೆಯಲ್ಪಡುವ ಸಿಂಕ್‌ಹೋಲ್ ಗುಹೆಗಳಲ್ಲಿ ಉತ್ತರ ಅಮೆರಿಕಾದಲ್ಲಿನ ಕೆಲವು ಹಳೆಯ ಮಾನವ ಅಸ್ಥಿಪಂಜರಗಳನ್ನು ಕಂಡುಹಿಡಿಯಲಾಗಿದೆ ಮತ್ತು ಆ ಗುಹೆಗಳಲ್ಲಿ ಕೆಲವು ಮೆಕ್ಸಿಕನ್ ಸರ್ಕಾರದ ಮಾಯಾ ರೈಲು ಪ್ರವಾಸೋದ್ಯಮ ಯೋಜನೆ ಕಾರಣದಿಂದ ಅಪಾಯದಂಚಿನಲ್ಲಿದೆ ಎಂದು ತಜ್ಞರು ಹೇಳಿದ್ದಾರೆ.


  ಇದನ್ನೂ ಓದಿ: Astrology Themed Coins: ಜ್ಯೋತಿಷ್ಯಶಾಸ್ತ್ರ ನಂಬಿಕೆ ಹೊಂದಿದ್ದ ಮೊಘಲ್ ಚಕ್ರವರ್ತಿ; ಜಹಾಂಗೀರ್ ಕಾಲದ ನಾಣ್ಯ ಸಾಕ್ಷಿ  ಅಸ್ಥಿಪಂಜರ ದೊರಕಿರುವ ಗುಹೆಯ ಭಾಗವನ್ನು ನೋಂದಾಯಿಸಲಾಗಿದ್ದು ಹೊಲೊಸೀನ್ ಆರ್ಕಿಯಾಲಜಿ ಪ್ರಾಜೆಕ್ಟ್ನಿಂದ ತನಿಖೆ ನಡೆಸಲಾಗುತ್ತದೆ ಎಂದು ಡೆಲ್ ರಿಯೊ ಹೇಳಿದ್ದಾರೆ. ಗುಹೆಯು ಲೂಟಿ ಅಥವಾ ಇನ್ನಿತರ ತೊಂದರೆಗೆ ಒಳಗಾಬಹುದು ಎಂಬ ಅಂಶದಿಂದ ಸ್ಥಳವನ್ನು ಡೆಲ್ ಬಹಿರಂಗಪಡಿಸಲಿಲ್ಲ. ರೈಲು ಟ್ರ್ಯಾಕ್‌ಗಳನ್ನು ನಿರ್ಮಿಸಲು ಸರಕಾರವು ಕಾಡನ್ನು ಕತ್ತರಿಸಿರುವ ಭಾಗದಲ್ಲಿದ್ದು, ಕಟ್ಟಡ ಯೋಜನೆ ಹಾಗೂ ಅಭಿವೃದ್ಧಿಯಿಂದ ಗುಹೆಯು ಕುಸಿಯಬಹುದು ಹಾಗೂ ಕಲುಷಿತಗೊಳ್ಳಬಹುದು ಎಂದು ತಿಳಿಸಿದ್ದಾರೆ.


  ಆವಿಷ್ಕಾರಕ್ಕೆ ಇನ್ನೂ ಹೆಚ್ಚಿನ ಸಮಯ ಬೇಕು
  ಆವಿಷ್ಕಾರವನ್ನು ಸರಿಯಾಗಿ ಅರ್ಥೈಸಲು ಇನ್ನೂ ಹೆಚ್ಚಿನ ಅಧ್ಯಯನವನ್ನು ಮಾಡಬೇಕಾಗಿದೆ, ಅಸ್ಥಿಪಂಜರವು ಎಷ್ಟು ಹಳೆಯದು ಎಂಬುದನ್ನು ನಿಖರವಾಗಿ ನಿರ್ಧರಿಸಲು "ದಿನಾಂಕ, ಕೆಲವು ರೀತಿಯ ಛಾಯಾಗ್ರಹಣದ ಅಧ್ಯಯನಗಳು ಮತ್ತು ಕೆಲವು ಸಂಗ್ರಹಣೆ" ಅಗತ್ಯವಿದೆ ಎಂದು ಡೆಲ್ ರಿಯೊ ಹೇಳುತ್ತಾರೆ.


  ಹೆಚ್ಚು ವೇಗದ ರೈಲು ಯೋಜನೆಯು ಕರಾವಳಿ ಕಾಡನ್ನು ಛಿದ್ರಗೊಳಿಸುತ್ತದೆ ಹಾಗೂ ದುರ್ಬಲವಾದ ಸಣ್ಣ ಗುಹೆಗಳ ಮೇಲೆ ಓಡಾಡುತ್ತವೆ ಎಂಬುದು ಕಾರ್ಯರ್ತರ ಮಾತಾಗಿದೆ. ಪ್ರವಾಹಕ್ಕೆ ತುತ್ತಾಗಿ ಕೆಲವು ಭಾಗಗಳು ನಷ್ಟಗೊಂಡಿರುವುದ ಜೊತೆಗೆ ಕಿರಿದಾಗಿವೆ ಹಾಗಾಗಿ ಗುಹೆಗಳ ಅನ್ವೇಷಣೆಗೆ ಸಾಕಷ್ಟು ವರ್ಷಗಳು ಬೇಕಾಗುತ್ತವೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ. ಗುಹೆಗಳ ಮೇಲಿನ ನಿರ್ಮಾಣಗಳಿಂದಾಗಿ ಈ ಗುಹೆಗಳು ಈಗಾಗಲೇ ಹಾನಿಗೊಂಡಿದ್ದು ಮೇಲಿನ ತೂಕವನ್ನು ಬೆಂಬಲಿಸಲು ಸಿಮೆಂಟ್ ಫೈಲಿಂಗ್ ಬಳಸಲಾಗುತ್ತದೆ.


  ಕಾಡಿನ ಮೂಲಕ ನಿರ್ಮಿಸುವ ರೈಲು ಮಾರ್ಗದ ಯೋಜನೆ ಕೈಬಿಡುವಂತೆ ಒತ್ತಾಯ
  950-ಮೈಲಿ (1,500-ಕಿಲೋಮೀಟರ್) ಮಾಯಾ ರೈಲು ಮಾರ್ಗವು ಯುಕಾಟಾನ್ ಪರ್ಯಾಯ ದ್ವೀಪದ ಸುತ್ತಲೂ ಒರಟು ತಿರುವಿನಲ್ಲಿ ಚಲಿಸುವಂತೆ ಉದ್ದೇಶಿಸಿದ್ದು, ಬೀಚ್ ರೆಸಾರ್ಟ್‌ಗಳು ಮತ್ತು ಪುರಾತತ್ತ್ವ ಶಾಸ್ತ್ರದ ಸ್ಥಳಗಳನ್ನು ಸಂಪರ್ಕಿಸುತ್ತದೆ. 68-ಮೈಲಿ (110-ಕಿಲೋಮೀಟರ್) ಗಿಂತ ಹೆಚ್ಚು ದೂರವನ್ನು ಕಾಡಿನ ಮೂಲಕ ಚಲಿಸುತ್ತದೆ.


  ಇದನ್ನೂ ಓದಿ: Mohenjo-daro: ನಶಿಸಿಹೋಗುತ್ತಿದೆ ಮೊಹೆಂಜೋದಾರೋ ಕುರುಹು! ಕಳಚಿ ಹೋಗುತ್ತಾ ಐತಿಹಾಸಿಕ ಕೊಂಡಿ?

  ಡೆಲ್ ರಿಯೊ ಹೇಳುವಂತೆ ಕಾಡಿನ ಮೂಲಕ ನಿರ್ಮಿಸುವ ರೈಲು ಮಾರ್ಗದ ಯೋಜನೆಯನ್ನು ಕೈಬಿಡಬೇಕು ಹಾಗೆಯೇ ಕರಾವಳಿ ಹೆದ್ದಾರಿಯ ಮೇಲೆ ರೈಲು ಹಳಿಗಳ ನಿರ್ಮಾಣವಾಗಬೇಕು ಎಂದು ತಿಳಿಸಿದ್ದಾರೆ. ಈ ಸ್ಥಳದಲ್ಲಿ ಹಳಿಗಳನ್ನು ನಿರ್ಮಿಸಬೇಕೆಂದು ಹೊರಟಿರುವ ಯೋಜನೆಯನ್ನು ಬದಲಾಯಿಸಬೇಕು ಏಕೆಂದರೆ ಇಲ್ಲಿ ಪುರಾತತ್ತ್ವ ಶಾಸ್ತ್ರದ ಸಂಶೋಧನೆಗಳು ಮತ್ತು ಅವುಗಳ ಪ್ರಾಮುಖ್ಯತೆ ಇದೆ ಎಂದು ಡೆಲ್ ಹೇಳಿದ್ದಾರೆ.

  Published by:Ashwini Prabhu
  First published: