• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Deadly Avalanche: ನೋಡ್‌ನೋಡ್ತಿದ್ದಂತೆಯೇ ಹಿಮಪಾತ ಕುಸಿದು 2 ವಿದೇಶಿಗರು ಸಾವು! 19 ಮಂದಿ ಪ್ರವಾಸಿಗರ ರಕ್ಷಣೆ

Deadly Avalanche: ನೋಡ್‌ನೋಡ್ತಿದ್ದಂತೆಯೇ ಹಿಮಪಾತ ಕುಸಿದು 2 ವಿದೇಶಿಗರು ಸಾವು! 19 ಮಂದಿ ಪ್ರವಾಸಿಗರ ರಕ್ಷಣೆ

ಹಿಮಪಾತ ಸಂಭವಿಸಿ ಇಬ್ಬರು ಸಾವು

ಹಿಮಪಾತ ಸಂಭವಿಸಿ ಇಬ್ಬರು ಸಾವು

ಬುಧವಾರ ಮಧ್ಯಾಹ್ನ 12.30ರ ಸುಮಾರಿಗೆ ಗುಲ್ಮಾರ್ಗ್‌ ಬಳಿಯ ಹಾಪತ್‌ಕುಂಡ್ ಪ್ರದೇಶದ ಬಳಿ ಹಿಮಪಾತ ಕುಸಿದ ದುರ್ಘಟನೆ ಸಂಭವಿಸಿದ್ದು, ಇಬ್ಬರು ಮೃತಪಟ್ಟರೆ, 19 ಮಂದಿಯನ್ನು ರಕ್ಷಣೆ ಮಾಡಲಾಗಿದೆ. ಒಟ್ಟು 21 ಮಂದಿ ವಿದೇಶಿ ಪ್ರವಾಸಿಗರು ಮೂರು ತಂಡಗಳಲ್ಲಿ ಈ ಪ್ರದೇಶಕ್ಕೆ ಸ್ಕೀಯಿಂಗ್ ಮಾಡಲು ಬಂದಿದ್ದರು.

ಮುಂದೆ ಓದಿ ...
  • Share this:

ಶ್ರೀನಗರ: ಜಮ್ಮು ಕಾಶ್ಮೀರದ (Jammu and Kashmir) ಗುಲ್ಮಾರ್ಗ್ (Gulmarg) ಬಳಿ ಇರುವ ಪ್ರಸಿದ್ಧ ಸ್ಕೀ ರೆಸಾರ್ಟ್‌ ಸಮೀಪ ಭಾರೀ ಹಿಮಪಾತ ಕುಸಿತ (Deadly Avalanche) ಕಾರಣ ಇಬ್ಬರು ವಿದೇಶಿ ಪ್ರವಾಸಿಗರು ಸಾವನ್ನಪ್ಪಿ, 19ಕ್ಕೂ ಹೆಚ್ಚು ಜನರನ್ನು ರಕ್ಷಣೆ ಮಾಡಿದ ಘಟನೆ ನಡೆದಿದೆ. ಬುಧವಾರ ಮಧ್ಯಾಹ್ನದ ವೇಳೆ ಈ ದುರ್ಘಟನೆ ಸಂಭವಿಸಿದ್ದು, ಏಕಾಏಕಿ ಬೃಹತ್ ಮಟ್ಟದಲ್ಲಿ ಹಿಮಪಾತ ಕುಸಿದ ಕಾರಣ ಪ್ರವಾಸಿಗರ (Tourists) ಗುಂಪು ಸಮಸ್ಯೆಗೆ ಸಿಲುಕಿದೆ. ತಕ್ಷಣ ರಕ್ಷಣಾ ಸಿಬ್ಬಂದಿ ದುರ್ಘಟನಾ ಸ್ಥಳಕ್ಕೆ ಆಗಮಿಸಿದರಾದರೂ ಇಬ್ಬರು ವಿದೇಶಿ ಪ್ರವಾಸಿಗರು ಮೃತಪಟ್ಟರು. ಉಳಿದ 19 ಮಂದಿಯನ್ನು ರಕ್ಷಣೆ ಮಾಡಲಾಗಿದೆ.


ಮೃತ ವಿದೇಶಿ ಪ್ರವಾಸಿಗರು ಪೋಲೆಂಡ್ ಮೂಲದವರು ಎಂದು ತಿಳಿದು ಬಂದಿದ್ದು, ಸದ್ಯ ರಕ್ಷಣೆ ಮಾಡಲಾದ ಸ್ಕೀಯಿಂಗ್ ತಂಡದಲ್ಲಿದ್ದ ಉಳಿದ 19 ಮಂದಿ ಪ್ರವಾಸಿಗರನ್ನು ಸುರಕ್ಷಿತ ಸ್ಥಳಕ್ಕೆ ಭದ್ರತಾ ಪಡೆಗಳು ರವಾನೆ ಮಾಡಿದ್ದಾರೆ. ದುರಂತ ಸಂಭವಿಸಿದ ಜಾಗದಲ್ಲಿ ಮಂಜಿನಲ್ಲಿ ಸಮಾಧಿಯಾಗಿದ್ದ ಇಬ್ಬರು ಪೋಲೆಂಡ್ ದೇಶದ ಪ್ರಜೆಗಳ ಮೃತ ದೇಹವನ್ನು ರಕ್ಷಣಾ ಪಡೆ ಹುಡುಕಿ ಹೊರ ತೆಗೆದಿದ್ದು, ವೈದ್ಯಕೀಯ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಮರಣೋತ್ತರ ಪರೀಕ್ಷೆ ನಡೆದ ಬಳಿಕ ಇಬ್ಬರ ಮೃತದೇಹವನ್ನು ಸಂಬಂಧಿಕರಿಗೆ ರವಾನೆ ಮಾಡಲು ಪೊಲೀಸರು ನಿರ್ಧಾರ ಮಾಡಿದ್ದಾರೆ.


ಇದನ್ನೂ ಓದಿ: Kashmir: ಕಾಶ್ಮೀರದಲ್ಲಿ ಭಾರೀ ಹಿಮಪಾತ; ಸೇನಾ ವಾಹನದಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ ಮಹಿಳೆ


ಅಷ್ಟಕ್ಕೂ ಆಗಿದ್ದೇನು?


ನಿನ್ನೆ ಮಧ್ಯಾಹ್ನ 12.30 ರ ಸುಮಾರಿಗೆ ಗುಲ್ಮಾರ್ಗ್‌ ಬಳಿಯ ಹಾಪತ್‌ಕುಂಡ್ ಪ್ರದೇಶದ ಬಳಿ ಈ ದುರ್ಘಟನೆ ಸಂಭವಿಸಿದ್ದು, ಒಟ್ಟು 21 ಮಂದಿ ವಿದೇಶಿ ಪ್ರವಾಸಿಗರು ಮೂರು ತಂಡಗಳಲ್ಲಿ ಈ ಪ್ರದೇಶಕ್ಕೆ ಸ್ಕೀಯಿಂಗ್ ಮಾಡಲು ಬಂದಿದ್ದರು. ಸ್ಕೀ ರೆಸಾರ್ಟ್‌ ಸ್ಕೀಯಿಂಗ್ ಮಾಡಲೆಂದೇ ಪ್ರಸಿದ್ಧಿ ಪಡೆದ ಜಾಗವಾಗಿದ್ದು, ಇಲ್ಲಿಗೆ ನಿತ್ಯ ನೂರಾರು ಮಂದಿ ದೇಶ ವಿದೇಶಗಳ ಜನರು ಪ್ರವಾಸಕ್ಕೆ ಆಗಮಿಸುತ್ತಾರೆ. ಆದರೆ ದುರಾದೃಷ್ಟವಶಾತ್ ಬುಧವಾರ ಈ ದುರಂತ ಸಂಭವಿಸಿದೆ.


ಇದನ್ನೂ ಓದಿ: Viral Video: ಜಾಕೆಟ್‌ ಬಿಡಿ, ಮೈತುಂಬಾ ಬಟ್ಟೆನೂ ಹಾಕಿಲ್ಲ,19 ಡಿಗ್ರಿ ತಾಪಮಾನದಲ್ಲಿ ಹಿಮಾಲಯದಲ್ಲಿ ಹುಡುಗರ ಟ್ರಕ್ಕಿಂಗ್!


ಭಯಾನಕ ದೃಶ್ಯವನ್ನು ಕಣ್ಣಾರೆ ಕಂಡರು!


ಹಿಮಪಾತ ಕುಸಿಯುವ ದೃಶ್ಯವನ್ನು ಕಣ್ಣಾರೆ ಕಂಡು ಸಾವಿನಿಂದ ಪಾರಾದ ಪ್ರತ್ಯಕ್ಷದರ್ಶಿಗಳು ತಾವು ಪ್ರಾಣ ಉಳಿಸಿಕೊಂಡ ರೋಚಕ ಕ್ಷಣಗಳ ಅನುಭವಗಳನ್ನು ಹಂಚಿಕೊಂಡಿದ್ದು, ಸುಮಾರು 20 ಅಡಿ ಎತ್ತರದ ಹಿಮದ ಗೋಡೆಯೇ ಅಲ್ಲಿದ್ದ ಜನರ ಮೇಲೆ ಬಿತ್ತು ಎಂದು ಪ್ರವಾಸಿಗರು ಹೇಳಿಕೊಂಡಿದ್ದಾರೆ. ಅಲ್ಲದೇ, ಸ್ಕೀಯಿಂಗ್ ಮಾಡುತ್ತಿದ್ದ ಸಮಯದಲ್ಲೇ ಅಲ್ಲಿದ್ದವರ ಮೇಲೆ ಹಿಮಗುಡ್ಡೆ ಕುಸಿದು ಬಿದ್ದ ಪರಿಣಾಮ ಹಲವು ಮಂದಿ ಹಿಮದ ನಡುವೆ ಸಿಲುಕಿಕೊಂಡರು. ಆ ಪೈಕಿ ಇಬ್ಬರು ಜೀವಂತವಾಗಿಯೇ ಹಿಮದ ನಡುವೆ ಮುಚ್ಚಿ ಹೋದರು ಎಂದು ಘಟನೆಯನ್ನು ಕಣ್ಣಾರೆ ಕಂಡ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ದುರಂತ ಸಂಭವಿಸಿದ ಸ್ಥಳದಲ್ಲಿ ಎಐಸಿಸಿ ಸದಸ್ಯ ಕರ್ನಾಟಕ ಮೂಲದ ದೀಪಕ್ ಚಿಂಚೋರೆ ಕೂಡ ಇದ್ದರು. ಅವರು ಕೂಡ ಈ ದುರ್ಘಟನೆಯನ್ನು ಕಣ್ಣಾರೆ ಕಂಡಿದ್ದಾರೆ.
ರಕ್ಷಣೆಗೆ ಕೇಬಲ್ ಕಾರ್ ಬಳಕೆ
ದುರ್ಘಟನೆ ಸಂಭವಿಸಿದ ಕೆಲ ಕ್ಷಣದ ಹೊತ್ತಲ್ಲೇ ಸ್ಥಳಕ್ಕೆ ಆಗಮಿಸಿದ ರಕ್ಷಣಾ ಪಡೆ ಸಿಬ್ಬಂದಿ ಪ್ರವಾಸಿಗರ ರಕ್ಷಣೆಗೆ ಕೇಬಲ್ ಕಾರ್‌ಗಳನ್ನು ಬಳಸಿ, 14 ಸಾವಿರ ಅಡಿ ಎತ್ತರದ ಪರ್ವತ ಪ್ರದೇಶದಿಂದ ಸುರಕ್ಷಿತ ಸ್ಥಳಕ್ಕೆ ಪ್ರವಾಸಿಗರನ್ನು ರವಾನೆ ಮಾಡಿದ್ದಾರೆ. ಹಿಮಪಾತ ಬೀಳುವ ಭಯಾನಕ ದೃಶ್ಯವನ್ನು ಯಾರೋ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದು, ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Published by:Avinash K
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು