• ಹೋಂ
 • »
 • ನ್ಯೂಸ್
 • »
 • ದೇಶ-ವಿದೇಶ
 • »
 • Weight Loss: 7 ತಿಂಗಳಲ್ಲಿ ಬರೋಬ್ಬರಿ 62 ಕೆಜಿ ಇಳಿಸಿಕೊಂಡ! ತೂಕ ಕಳೆದುಕೊಳ್ಳುವವರಿಗೆ ಇಲ್ಲಿದೆ ಬೆಸ್ಟ್ ಪಾಠ

Weight Loss: 7 ತಿಂಗಳಲ್ಲಿ ಬರೋಬ್ಬರಿ 62 ಕೆಜಿ ಇಳಿಸಿಕೊಂಡ! ತೂಕ ಕಳೆದುಕೊಳ್ಳುವವರಿಗೆ ಇಲ್ಲಿದೆ ಬೆಸ್ಟ್ ಪಾಠ

Bryan O'Keeffe

Bryan O'Keeffe

ಬ್ರಯಾನ್ ಒ ಕೆಫೆ ಮೊದಲಿಗೆ ಹಲವು ಬಾರಿ ತಮ್ಮ ತೂಕ ಇಳಿಸುವಿಕೆಗಾಗಿ ಪ್ರಯತ್ನಿಸಿದರೂ ಅದರಲ್ಲಿ ಸಫಲರಾಗಲಿಲ್ಲ. ಆದರೆ ಕೊನೆಗೆ ಕೇವಲ ಏಳು ತಿಂಗಳುಗಳ ಕಾಲ ಮತ್ತೊಮ್ಮೆ ತೂಕ ಇಳಿಕೆಗೆ ಪ್ರಯತ್ನಿಸಿ ಅದರಲ್ಲಿ ಗೆದ್ದು ತೋರಿದ್ದಾರೆ.

 • Share this:

  ಬೊಜ್ಜು ಕರಗಿಸುವುದಾಗಲಿ ಅಥವಾ ತೂಕ ಇಳಿಸುವಿಕೆ (Weight Loss) ಎಂಬುದು ಇಂದು ಸಾಕಷ್ಟು ಜನರ ಪ್ರಮುಖ ಚಟುವಟಿಕೆಯಾಗಿದೆ. ಜಡವಾದ ಜೀವನಶೈಲಿ ಹಾಗೂ ಜಂಕ್ ಫುಡ್‌ಗಳಿಂದಾಗಿ (Junk Food) ಬಹಳಷ್ಟು ಜನರಲ್ಲಿ ಇಂದು ಹೊಟ್ಟೆಯ ಬೊಜ್ಜು ಸಾಕಷ್ಟು ಏರುತ್ತಿರುವುದನ್ನು ಕಾಣಬಹುದು. ಆದರೆ, ತೂಕ ಇಳಿಸುವಿಕೆ ಎಂಬುದು ಅಂದುಕೊಂಡಷ್ಟು ಸುಲಭವಾದ ಚಟುವಟಿಕೆಯಲ್ಲ. ಕೆಲ ಜನರು ಪ್ರಾರಂಭದಲ್ಲಿ ಶ್ರದ್ಧೆಯಿಂದ ಪ್ರಯತ್ನಿಸುತ್ತಾರಾದರೂ ನಂತರದಲ್ಲಿ ಆ ಬಗ್ಗೆ ಉತ್ಸಾಹ ಕಡಿಮೆಯಾಗ ತೊಡಗುತ್ತದೆ.


  ಬ್ರಯಾನ್ ಒ ಕೆಫೆ ಎಂಬುವವರ ಕಥೆಯೂ ಹೆಚ್ಚು ಕಡಿಮೆ ಇದೇ ರೀತಿಯಾಗಿದೆ. ಮೊದಲಿಗೆ ಹಲವು ಬಾರಿ ತಮ್ಮ ತೂಕ ಇಳಿಸುವಿಕೆಗಾಗಿ ಪ್ರಯತ್ನಿಸಿದರೂ ಅದರಲ್ಲಿ ಸಫಲರಾಗಲಿಲ್ಲ. ಆದರೆ ಕೊನೆಗೆ ಕೇವಲ ಏಳು ತಿಂಗಳುಗಳ ಕಾಲ ಮತ್ತೊಮ್ಮೆ ತೂಕ ಇಳಿಕೆಗೆ ಪ್ರಯತ್ನಿಸಿ ಅದರಲ್ಲಿ ಗೆದ್ದು ತೋರಿದ್ದಾರೆ.


  ಹೌದು, ಬ್ರಯಾನ್ ಒ ಕೆಫೆ ಅವರು ತಾವು ಮಾಡಿದ ವಿಭಿನ್ನ ಪ್ರಯತ್ನದಿಂದಾಗಿ ಹಲವು ವರ್ಷಗಳಲ್ಲಿ ಸಾಧ್ಯವಾಗದಿದ್ದನ್ನು ಏಳು ತಿಂಗಳಲ್ಲೇ ಸಾಧಿಸಿ ಒಟ್ಟು 62 ಕೆಜಿಗಿಂತಲೂ ಹೆಚ್ಚು ತೂಕವನ್ನು ಇಳಿಸಿಕೊಂಡಿದ್ದಾರೆ. ಅವರು ತೂಕ ಇಳಿಸಲು ಏನೆಲ್ಲ ಪ್ರಯತ್ನಪಟ್ಟರು ಎಂಬುದರ ಬಗ್ಗೆ ಮೂರು ಅಂಶಗಳನ್ನು ಹಂಚಿಕೊಂಡಿದ್ದಾರೆ. ಅದು ಇಲ್ಲಿ ಕೊಡಲಾಗಿದೆ.


  ಇದನ್ನೂ ಓದಿ: Garlic: ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತೆ ಬೆಳ್ಳುಳ್ಳಿ, ಇದರ ಆರೋಗ್ಯ ಗುಣಗಳ ಬಗ್ಗೆ ತಿಳ್ಕೊಳ್ಳಿ


  ನಿಮ್ಮ ಹಳೆಯ ಪ್ರಯತ್ನಗಳನ್ನು ಅವಲೋಕಿಸಿ


  ಬ್ರಯಾನ್ ಅವರು ಹೇಳುವಂತೆ ಪ್ರಾರಂಭದಲ್ಲಿ ನೀವು ಯಾವ ರೀತಿ ತೂಕ ಇಳಿಸುವಿಕೆಯಲ್ಲಿ ತೊಡಗಿಸಿಕೊಂಡಿದ್ದೀರಿ ಎಂಬುದನ್ನು ಅವಲೋಕಿಸಬೇಕು. ಏಕೆಂದರೆ ಬ್ರಯಾನ್ ಒ ಕೆಫೆ ತೂಕ ಇಳಿಸಲು ಮುಂದಾದಾಗ ಆರಂಭದಲ್ಲಿ ಒಂದು ಹೆಜ್ಜೆ ಮುಂದಿಟ್ಟಿರೆ 2 ಹೆಜ್ಜೆ ಹಿಂದಕ್ಕೆ ಸರಿಯುತ್ತಿತ್ತು. ಇದರಿಂದ ಗುರಿ ತಲುಪಲು ಸಾಧ್ಯವಾಗಿರಲಿಲ್ಲ.


  ನಾನು ಆಹಾರದಲ್ಲೂ ಶಿಸ್ತನ್ನು ಕಾಪಾಡಿಕೊಂಡಿರಲಿಲ್ಲ, ಎಲ್ಲರಂತೆ ನನಗೂ ರಾತ್ರಿ ಪಾರ್ಟಿಗಳನ್ನು ಮಾಡಬೇಕು, ಸ್ನೇಹಿತರು, ಕುಟುಂಬದೊಂದಿಗೆ ಹೊರಗಡೆ ಸುತ್ತಾಡಲು ಹೋಗಬೇಕು ಹೀಗೆಲ್ಲ ಕನಸುಗಳಿತ್ತು. ಆದರೆ ನನ್ನ ವಿಪರೀತ ದೇಹದ ತೂಕದಿಂದ ಅದು ಸಾಧ್ಯವಾಗಿರಲಿಲ್ಲ. ಇದರಿಂದ ನಾನು ತುಂಬಾನೇ ಮಾನಸಿಕ ಹಿಂದೆ ಅನುಭವಿಸುತ್ತಿದ್ದೆ. ಹೀಗಾಗಿ ಏಳು ತಿಂಗಳು ಎಲ್ಲೂ ಹೋಗದೆ ಆಜ್ಞಾತವಾಗಿ ಇದ್ದು ಕಠಿಣ ಪರಿಶ್ರಮಪಟ್ಟೆ ಎಂದು ಅವರು ಹೇಳುತ್ತಾರೆ.


  ಮುಂದುವರಿದು ತೂಕ ಇಳಿಸಿಕೊಳ್ಳುವವರಿಗೆ ಸಲಹೆ ನೀಡುವ ಬ್ರಯಾನ್, ಮೊದಲು ನಿಮ್ಮ ಮೊಬೈಲ್ ನಲ್ಲಿರುವ ಆ ಎಲ್ಲ ತಿನಿಸುಗಳನ್ನು ಆರ್ಡರ್ ಮಾಡುವ ಆಪ್ ಗಳನ್ನು ತೆಗೆದುಹಾಕಿ. ಏಕೆಂದರೆ ಅದು ತಿನಿಸುಗಳನ್ನು ಆರ್ಡರ್ ಮಾಡಲು ನಮ್ಮನ್ನು ಪ್ರಚೋದಿಸುತ್ತದೆ ಎಂದು ಹೇಳುತ್ತಾರೆ.


  ಅಸ್ವಸ್ಥತೆಯನ್ನು ಆನಂದಿಸಿ


  ಬ್ರಯಾನ್ ಅವರ ಪ್ರಕಾರ, ಹಲವರಿಗೆ ವ್ಯಾಯಾಮ ಮಾಡುವುದು ಕಷ್ಟಕರ ಎನಿಸುತ್ತದೆ. ಆದರೆ, ಅದನ್ನು ತೂಕ ಇಳಿಸುವ ವಿಧಾನ ಎಂದು ತಿಳಿಯುವುದಕ್ಕಿಂತಲೂ ಇದರಿಂದ ನಾನು ಶಿಸ್ತನ್ನು ಗಳಿಸಬೇಕು, ಉತ್ತಮವಾದ ಮಾನಸಿಕ ಸ್ಥಿತಿ ಗಳಿಸಬೇಕೆಂದು ನಿಮಗೆ ನೀವೇ ಸವಾಲು ಹಾಕಿಕೊಂಡು ಅದನ್ನು ನಿಯಮಿತವಾಗಿ ವ್ಯಾಯಾಮ ಮಾಡಿ.


  ನಿಮಗಾಗುವ ಕಷ್ಟಗಳಲ್ಲೇ ಒಂದು ರೀತಿಯ ಆನಂದ ಕಾಣುವಂತೆ ಪ್ರಯತ್ನಿಸಿ. ಬ್ರಯಾನ್ ಅವರಿಗೂ ಮೊದ ಮೊದಲು ವ್ಯಾಯಾಮ ಪ್ರಾರಂಭಿಸಿದ್ದಾಗ ಅದು ಸಾಕೆನೆಸಿತ್ತು. ಆದರೂ ಅವರು ಆ ಕಷ್ಟದಲ್ಲೂ ತಮಗೆ ತಾವು ಸವಾಲು ಹಾಕಿಕೊಂಡು ವ್ಯಾಯಾಮ ಮಾಡುವುದನ್ನು ನಿಲ್ಲಿಸಲಿಲ್ಲ.


  ತೂಕ ಇಳಿಸುವಿಕೆ ಪಠ್ಯದಲ್ಲಿ ಬಲು ಸರಳವಾಗಿದೆ ಎಂದಾಗಿದೆ. ಕ್ಯಾಲೊರಿ ಕೊರತೆ ಉಂಟು ಮಾಡಿಕೊಳ್ಳುವುದೇ ತೂಕ ಇಳಿಕೆಯ ಪ್ರಮುಖ ಭಾಗವಾಗಿದೆ. ಹಾಗಾಗಿ ನಿಮ್ಮ ಕ್ಯಾಲೊರಿ ಸೇವನೆಯಲ್ಲಿ ಸದಾ ಆ ಕೊರತೆ ಇರುವುದನ್ನು ಖಚಿತಪಡಿಸಿಕೊಳ್ಳಿ. ಕ್ರಮೇಣ ನಿಮಗೆ ತಿನ್ನುವ ಚಪಲದ ಮೇಲೆ ನಿಯಂತ್ರಣ ಸಿಗುತ್ತದೆ ಎನ್ನುತ್ತಾರೆ ಬ್ರಯಾನ್.


  ಇದನ್ನೂ ಓದಿ: Heat Wave: ರಾಜ್ಯದಲ್ಲಿ ಹೆಚ್ಚಿದ ಬಿಸಿಗಾಳಿ ಎಫೆಕ್ಟ್‌! ಮುನ್ನೆಚ್ಚರಿಕೆ ವಹಿಸುವಂತೆ ಆರೋಗ್ಯ ಇಲಾಖೆ ಗೈಡ್‌ಲೈನ್ಸ್‌


  ನಿಮಗೆ ಇಷ್ಟವಾದ ತಿನಿಸು ತಿನ್ನಿ


  ಬ್ರಯಾನ್ ಅವರ ಪ್ರಕಾರ, ನಿಮಗೆ ಇಷ್ಟವಾಗುವ ಎಲ್ಲ ತಿಂಡಿಗಳನ್ನು ಡಯಟ್ ಹೆಸರಿನಲ್ಲಿ ನೀವು ನಿಲ್ಲಿಸಿಬಿಟ್ಟರೆ ಬಹು ಕಾಲದವರೆಗೆ ನೀವು ಆ ಡಯಟ್ ಅನ್ನು ಪಾಲಿಸಲು ಆಗುವುದಿಲ್ಲ. ಇದನ್ನು ಡಯಟಿಷಿಯನ್‌ಗಳು ಸಹ ಒಪ್ಪುತ್ತಾರೆ.


  'ನಿಮಗೆ ಚಾಕೋಲೆಟ್‌ ಬಾರ್ ತಿನ್ನಲು ಮನಸ್ಸಾದರೆ ತಿಂದು ಬಿಡಿ. ಅದರ ಬಗ್ಗೆ ಪಶ್ಚತ್ತಾಪ ಬೇಡ. ಎಂದಿಗೂ ಒಳ್ಳೆಯ ಹಾಗೂ ಕೆಟ್ಟ ಊಟ ಎಂದಿಲ್ಲ, ಆದರೆ ಅವುಗಳನ್ನು ತೆಗೆದುಕೊಳ್ಳುವ ಪ್ರಮಾಣದಲ್ಲಿರುತ್ತದೆ ಎನ್ನುತ್ತಾರೆ ಬ್ರಯಾನ್.


  ಬ್ರಯಾನ್ ಅವರಿಗೆ ತಿನ್ನುವುದೆಂದರೆ ಬಲು ಇಷ್ಟ. ಹಾಗಾಗಿ ಅವರು ಸಾಕಷ್ಟು ಕುಕ್ಕಿಂಗ್‌ ಕಾರ್ಯಕ್ರಮಗಳನ್ನು ನೋಡುತ್ತಾರೆ. ಅದರಂತೆ ಅವರು ತಮ್ಮ ದೇಹದಲ್ಲಿ ಸದಾ ಸ್ವಲ್ಪ ಮಟ್ಟಿಗೆ ಕ್ಯಾಲೊರಿ ಕೊರತೆ ಇರುವಂತೆ ಕ್ಯಾಲೊರಿ ಮುಕ್ತ ತಿನಿಸುಗಳೆಲ್ಲವನ್ನು ಸ್ವತಃ ತಾವೇ ತಯಾರಿಸಿ ತಿಂದು ಆನಂದಿಸುತ್ತಾರೆ.


  ಒಟ್ಟಿನಲ್ಲಿ ಶಿಸ್ತಿನಿಂದ ಕೂಡಿರುವ ವ್ಯಾಯಾಮ ಚಟುವಟಿಕೆ ಹಾಗೂ ದೇಹಕ್ಕೆ ಸ್ವಲ್ಪ ಮಟ್ಟಿಗೆ ಕ್ಯಾಲೊರಿ ಕೊರತೆ ಇರುವಂತೆ ತಿನಿಸುಗಳನ್ನು ತಿನ್ನುವುದರ ಮೂಲಕ ತೂಕವನ್ನು ಸುಲಭವಾಗಿ ತಗ್ಗಿಸಿಕೊಳ್ಳಬಹುದಾಗಿದೆ ಎಂದು ಬ್ರಯಾನ್ ಹೇಳುತ್ತಾರೆ.

  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು