ತನ್ನ ಹತ್ಯೆಗೆ ತಾನೇ ಸುಫಾರಿ ಕೊಟ್ಟ ವ್ಯಕ್ತಿ, ಕೊಲೆಯ ಬಳಿಕ ಬಯಲಾಯ್ತು ಪ್ರಕರಣ; ದುರಂತ ನಿರ್ಧಾರಕ್ಕೆ ಕಾರಣವಾದರೂ ಏನು?

ತನ್ನ ಹತ್ಯೆಗೆ ಇಬ್ಬರು ಹಂತಕರ ಬಳಿ 80 ಸಾವಿರ ಸುಪಾರಿ ಕೊಟ್ಟ ಬಲ್ವೀರ್ ಸಿಂಗ್ ಸೆಪ್ಟೆಂಬರ್ 3 ರಂದು ತಾನು ಕೊಲೆಯಾಗಬೇಕಾದ ಜಾಗವನ್ನು ಖುದ್ದು ತಾನೆ ಆಯ್ಕೆ ಮಾಡಿದ್ದಾರೆ. ಅಲ್ಲದೆ, ಸುಪಾರಿ ಹಂತಕರನ್ನು ತನ್ನ ಬೈಕಿನಲ್ಲಿಯೇ ಕರೆದುಕೊಂಡು ಹೋಗಿ ತಾನು ಹೀಗೆ ಕೊಲೆಯಾಗಬೇಕು ಎಂದು ತಿಳಿಸಿದ್ದಾರೆ.

MAshok Kumar | news18-kannada
Updated:September 10, 2019, 1:07 PM IST
ತನ್ನ ಹತ್ಯೆಗೆ ತಾನೇ ಸುಫಾರಿ ಕೊಟ್ಟ ವ್ಯಕ್ತಿ, ಕೊಲೆಯ ಬಳಿಕ ಬಯಲಾಯ್ತು ಪ್ರಕರಣ; ದುರಂತ ನಿರ್ಧಾರಕ್ಕೆ ಕಾರಣವಾದರೂ ಏನು?
ಸುಪಾರಿ ಹಂತಕರು.
  • Share this:
ರಾಜಸ್ತಾನ (ಸೆಪ್ಟೆಂಬರ್.10); ಯಾರಾದರೂ ಒಬ್ಬ ವ್ಯಕ್ತಿ ತನ್ನ ಹತ್ಯೆಗೆ ತಾನೇ ಸುಪಾರಿ ಕೊಟ್ಟು ಕೊಲೆಗೀಡಾದ ಸುದ್ದಿಯನ್ನು ಎಲ್ಲಾದರೂ ಕೇಳಿದ್ದೀರ. ತೀರಾ ಅಸಂಭವ ಎನ್ನುವಂತಹ ಈ ಘಟನೆಗೆ ಇದೀಗ ರಾಜಸ್ತಾನದ ಬಿಲ್ವಾಡಾ ಜಿಲ್ಲೆ ಸಾಕ್ಷಿಯಾಗಿದೆ. ಇದಕ್ಕೆಲ್ಲ ಕಾರಣ 50 ಲಕ್ಷ ಮೌಲ್ಯದ ಜೀವವಿಮಾ ಹಣ.

ಇಲ್ಲಿನ ಸ್ಥಳೀಯ ವ್ಯವಹಾರಸ್ಥ ಬಲ್ವೀರ್ ಸಿಂಗ್ ತನ್ನ ಹೆಸರಿನಲ್ಲಿ 50 ಲಕ್ಷ ಜೀವವಿಮೆ ಮಾಡಿಸಿದ್ದರು. ಆದರೆ, ವ್ಯವಹಾರದಲ್ಲಿ ನಷ್ಟ ಉಂಟಾದ ಕಾರಣ ತನ್ನ ಜೀವವಿಮಾ ಹಣ ಕುಟುಂಬಸ್ಥರಿಗಾದರೂ ಉಪಯೋಗವಾಗಲಿ ಎಂಬ ಉದ್ದೇಶದಿಂದ ತನ್ನ ಹತ್ಯೆಗೆ ತಾನೇ ಸುಪಾರಿ ಕೊಟ್ಟು ಹತ್ಯೆಗೆ ರೂಪುರೇಷೆ ಸಿದ್ದಪಡಿಸಿದ್ದಾರೆ.

ತನ್ನ ಹತ್ಯೆಗೆ ಇಬ್ಬರು ಹಂತಕರ ಬಳಿ 80 ಸಾವಿರ ಸುಪಾರಿ ಕೊಟ್ಟ ಬಲ್ವೀರ್ ಸಿಂಗ್ ಸೆಪ್ಟೆಂಬರ್ 3 ರಂದು ತಾನು ಕೊಲೆಯಾಗಬೇಕಾದ ಜಾಗವನ್ನು ಖುದ್ದು ತಾನೆ ಆಯ್ಕೆ ಮಾಡಿದ್ದಾರೆ. ಅಲ್ಲದೆ, ಸುಪಾರಿ ಹಂತಕರನ್ನು ತನ್ನ ಬೈಕಿನಲ್ಲಿಯೇ ಕರೆದುಕೊಂಡು ಹೋಗಿ ತಾನು ಹೀಗೆ ಕೊಲೆಯಾಗಬೇಕು ಎಂದು ತಿಳಿಸಿದ್ದಾರೆ.

ಬಲ್ವೀರ್ ಸಿಂಗ್ ಕೊಲೆಯಾದ ಅದೇ ದಿನ ಅವರ ಮೃತದೇಹವನ್ನು ಪೊಲೀಸರು ಪತ್ತೆ ಹಚ್ಚಿದ್ದರು. ಅಲ್ಲದೆ, ಪ್ರಕರಣದ ತನಿಖೆಯನ್ನೂ ಆರಂಭಿಸಿದ್ದರು. ಕೇವಲ ಒಂದು ವಾರದಲ್ಲಿ ಪೊಲೀಸರು ಆರೋಪಿಗಳನ್ನು ಪತ್ತೆಹಚ್ಚಿ ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ಮೃತ ಬಲ್ವೀರ್ ಸಿಂಗ್ ತನ್ನ ಹತ್ಯೆಗೆ ಆತನೇ ಸುಪಾರಿ ನೀಡಿರುವ ವಿಚಾರ ಬೆಳಕಿಗೆ ಬಂದಿದೆ. ಇಬ್ಬರು ಕೊಲೆಪಾತಕಿಗಳ ಪೈಕಿ ಓರ್ವ ಬಲ್ವೀರ್ ಸಿಂಗ್ ಜೊತೆ ಸಣ್ಣ ಪ್ರಮಾಣದ ಹೋಟೆಲ್ ಉದ್ಯಮದಲ್ಲಿ ಹಣ ತೊಡಗಿಸಿದ್ದರು ಎಂಬುದು ಸಹ ವಿಚಾರಣೆಯ ವೇಳೆ ತಿಳಿದುಬಂದಿದೆ.

ಇದನ್ನೂ ಓದಿ : ವಿಶ್ವಸಂಸ್ಥೆ ಮಾನವ ಹಕ್ಕು ಮಂಡಳಿ ಎದುರು ಕಾಶ್ಮೀರ ವಿಚಾರ ಪ್ರಸ್ತಾಪಕ್ಕೆ ಮುಂದಾದ ಪಾಕ್​; ತಿರುಗೇಟು ನೀಡಲು ಭಾರತ ಸಿದ್ಧತೆ

First published:September 10, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ