• Home
 • »
 • News
 • »
 • national-international
 • »
 • New Delhi: ಯುಎಇ ಅಧಿಕಾರಿ ಅಂತ ಹೇಳ್ಕೊಂಡು ಲಕ್ಷಾಂತರ ರೂಪಾಯಿ ವಂಚಿಸಿದ್ದ ವ್ಯಕ್ತಿ ಬಂಧನ!

New Delhi: ಯುಎಇ ಅಧಿಕಾರಿ ಅಂತ ಹೇಳ್ಕೊಂಡು ಲಕ್ಷಾಂತರ ರೂಪಾಯಿ ವಂಚಿಸಿದ್ದ ವ್ಯಕ್ತಿ ಬಂಧನ!

ಮಹಮದ್ ಶರೀಫಾ ಮತ್ತು ಪೊಲೀಸರು

ಮಹಮದ್ ಶರೀಫಾ ಮತ್ತು ಪೊಲೀಸರು

ದೆಹಲಿಯ ಒಂದು ಹೊಟೇಲ್ ನವರಿಗೆ ತಾನು ಯುಎಇ ರಾಜಮನೆತನದ ಅಧಿಕಾರಿ ಎಂದು ಹೇಳಿಕೊಂಡು ಬಂದು ಒಂದಲ್ಲ, ಎರಡಲ್ಲ, ಬರೋಬ್ಬರಿ 23.46 ಲಕ್ಷ ರೂಪಾಯಿಗಳನ್ನು ಪಾವತಿಸದೆ ದೆಹಲಿಯ ಹೋಟೆಲ್ ನಿಂದ ಪರಾರಿಯಾಗಿದ್ದ ವ್ಯಕ್ತಿಯನ್ನು ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಅವರ ಮನೆಯಿಂದ ಬಂಧಿಸಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.

ಮುಂದೆ ಓದಿ ...
 • Share this:

  ಈಗಂತೂ ಯಾರು? ಯಾವಾಗ? ಹೇಗೆ? ಮೋಸ ಮಾಡುತ್ತಾರೆ ಅಂತ ಊಹೆ ಮಾಡುವುದಕ್ಕೂ ಸಹ ಸಾಧ್ಯವಾಗುವುದಿಲ್ಲ ಅಂತ ಹೇಳಬಹುದು. ಪೊಲೀಸರು (Police), ಹೀಗೆ ಸುಳ್ಳು ಹೇಳಿಕೊಂಡು ಬಂದು ಮೋಸ ಮಾಡುವ ಜನರ ಬಗ್ಗೆ ಅನೇಕ ರೀತಿಯಲ್ಲಿ ಎಚ್ಚರಿಕೆಯ ಸಂದೇಶಗಳನ್ನು ನೀಡಿದರೂ ಸಹ ಜನರು ಇಂತಹ ವಂಚಕರಿಂದ ಪ್ರತಿದಿನ ಮೋಸ ಹೋಗುತ್ತಲೇ ಇದ್ದಾರೆ ಅಂತ ಹೇಳಬಹುದು. ಇಲ್ಲಿಯೂ ಸಹ ಒಬ್ಬ ವಂಚಕ ತಾನು ಉಳಿದುಕೊಂಡ ಐಷಾರಾಮಿ ಹೊಟೇಲ್ (Hotel) ನವರಿಗೆ ಲಕ್ಷಾಂತರ ರೂಪಾಯಿಯ ವಂಚನೆ (Money Fraud) ಮಾಡಿ ಓಡಿ ಹೋಗಿದ್ದಾರಂತೆ ನೋಡಿ.


  ಇತ್ತೀಚೆಗಂತೂ ಏನೂ ಗೊತ್ತಿಲ್ಲದ ಅಮಾಯಕರನ್ನು ಮೋಸ ಮಾಡಲೆಂದೇ ಕೆಲವಂಚಕರು ತಯಾರಾಗಿದ್ದಾರೆ. ಇದೀಗ ಇಲ್ಲೊಬ್ಬ ಯುಎಇ ಅಧಿಕಾರಿ ಎಂದು ಹೇಳಿಕೊಂಡು ಬರೋಬ್ಬರಿ 23.46 ಲಕ್ಷ ರೂಪಾಯಿಯನ್ನು ವಂಚನೆ ಮಾಡಿದ್ದಾರೆ.


  ಯುಎಇ ರಾಜಮನೆತನದ ಅಧಿಕಾರಿ ಅಂತ ಹೇಳಿಕೊಂಡು ಲಕ್ಷಾಂತರ ರೂಪಾಯಿ ವಂಚಿಸಿದ ವ್ಯಕ್ತಿ


  ಹೌದು.. ದೆಹಲಿಯ ಒಂದು ಹೊಟೇಲ್ ನವರಿಗೆ ತಾನು ಯುಎಇ ರಾಜಮನೆತನದ ಅಧಿಕಾರಿ ಎಂದು ಹೇಳಿಕೊಂಡು ಬಂದು ಒಂದಲ್ಲ, ಎರಡಲ್ಲ, ಬರೋಬ್ಬರಿ 23.46 ಲಕ್ಷ ರೂಪಾಯಿಗಳನ್ನು ಪಾವತಿಸದೆ ದೆಹಲಿಯ ಹೋಟೆಲ್ ನಿಂದ ಪರಾರಿಯಾಗಿದ್ದ ವ್ಯಕ್ತಿಯನ್ನು ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಅವರ ಮನೆಯಿಂದ ಬಂಧಿಸಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
  41 ವರ್ಷದ ಪದವೀಧರ ಮಹಮದ್ ಶರೀಫಾ, ತಾನು ಯುಎಇ ಸರ್ಕಾರದ 'ಘನತೆವೆತ್ತ ಶೇಖ್ ಫಲಾಹ್ ಬಿನ್ ಜಾಯೆದ್ ಅಲ್ ನಹ್ಯಾನ್' ಕಚೇರಿಯಲ್ಲಿ ಹಿರಿಯ ಕಾರ್ಯಕರ್ತನೆಂದು ಹೇಳಿ ಕೊಂಡಿದ್ದಾನೆ ಮತ್ತು ಕಳೆದ ವರ್ಷ ಆಗಸ್ಟ್ 1 ರಂದು ರಾಷ್ಟ್ರ ರಾಜಧಾನಿಯ ಲೀಲಾ ಪ್ಯಾಲೇಸ್ ನಲ್ಲಿರುವ ಐಷಾರಾಮಿ ಹೊಟೇಲ್ ನಲ್ಲಿ ತಂಗಲು ಪರಿಶೀಲನೆಗೆ ಅಂತ ಅವರಿಗೆ ನಕಲಿ ಬಿಸಿನೆಸ್ ಕಾರ್ಡ್ ಮತ್ತು ಯುಎಇ ನಿವಾಸಿ ಕಾರ್ಡ್ ಅನ್ನು ನೀಡಿದ್ದಾನೆ.


  23.46 ಲಕ್ಷ ರೂಪಾಯಿಯ ಬಿಲ್ ಪಾವತಿಸದೆ ಹೋಟೆಲ್ ನಿಂದ ಎಸ್ಕೇಪ್​


  ಕಳೆದ ವರ್ಷ ನವೆಂಬರ್ 20 ರವರೆಗೆ ಈ ಐಷಾರಾಮಿ ಹೊಟೇಲ್ ನ ರೂಂ ನಂಬರ್ 427 ರಲ್ಲಿ ವಾಸಿಸುತ್ತಿದ್ದ ಅವರು 23.46 ಲಕ್ಷ ರೂಪಾಯಿಗಳ ದೊಡ್ಡ ಮೊತ್ತದ ಬಿಲ್ ಪಾವತಿಸದೆ ಮತ್ತು ಹೊಟೇಲ್ ನಿಂದ ಬೆಲೆಬಾಳುವ ವಸ್ತುಗಳನ್ನು ಸಹ ಕದ್ದು ಪರಾರಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ.


  ಮಹಮದ್ ಶರೀಫಾ ಮತ್ತು ಪೊಲೀಸರು


  ಈ ವಿಚಾರವಾಗಿ ಹೋಟೆಲ್ ನವರು ಪೊಲೀಸರನ್ನು ಸಂಪರ್ಕಿಸಿದ ನಂತರ ತನಿಖಾಧಿಕಾರಿಗಳು ಶರೀಫಾ ಅವರನ್ನು ಕರ್ನಾಟಕದ ದಕ್ಷಿಣ ಕನ್ನಡದಲ್ಲಿರುವ ಅವರ ನಿವಾಸಕ್ಕೆ ಹೋಗಿ ಜನವರಿ 19 ರಂದು ಬಂಧಿಸಿದರು.


  ತನಿಖೆಯ ಭಾಗವಾಗಿ, ಪೊಲೀಸರು ಹೋಟೆಲ್ ಆವರಣದ ಒಳಗೆ ಮತ್ತು ಹೊರಗೆ ಇರುವ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದರು, ಜೊತೆಗೆ ಆತನನ್ನು ಪತ್ತೆಹಚ್ಚಲು ಅನೇಕ ತಂಡಗಳನ್ನು ಸಹ ರಚಿಸಿದ್ದರು.


  ಲೀಲಾ ಪ್ಯಾಲೇಸ್ ಅಧಿಕಾರಿಗಳು ಪೊಲೀಸರಿಗೆ ನೀಡಿದ ದೂರಿನಲ್ಲಿ ಏನಿದೆ?


  "ಅತಿಥಿಯು ಉದ್ದೇಶಪೂರ್ವಕವಾಗಿ ಈ ಕಾರ್ಡ್ ಗಳನ್ನು ಸುಳ್ಳು ಚಿತ್ರಣವನ್ನು ಸೃಷ್ಟಿಸಲು ಮತ್ತು ನಂತರದ ಹಂತದಲ್ಲಿ ಹೋಟೆಲ್ ಗೆ ಮೋಸ ಮಾಡುವ ಉದ್ದೇಶದಿಂದ ವಿಶ್ವಾಸವನ್ನು ಗಳಿಸಲು ನೀಡಿದ್ದಾನೆ ಎಂದು ತೋರುತ್ತದೆ" ಎಂದು ಲೀಲಾ ಪ್ಯಾಲೇಸ್ ಅಧಿಕಾರಿಗಳು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.


  ಕಳೆದ ವರ್ಷ ಆಗಸ್ಟ್ ಮತ್ತು ಸೆಪ್ಟೆಂಬರ್ ನಲ್ಲಿ ಶರೀಫಾ 11.5 ಲಕ್ಷ ರೂಪಾಯಿಗಳ ಬಿಲ್ ಗಳನ್ನು ಪಾವತಿಸಿದ್ದಾರೆ ಎಂದು ಹೋಟೆಲ್ ತಿಳಿಸಿದೆ. ಬಾಕಿ ಮೊತ್ತ 23,48,413 ರೂಪಾಯಿ ಇನ್ನೂ ಹಾಗೆಯೇ ಇದೆ ಅಂತ ಹೇಳಿದ್ದಾರೆ. ಅದರಲ್ಲಿ ಶರೀಫಾ 20 ಲಕ್ಷ ರೂಪಾಯಿಗಳ ಪೋಸ್ಟ್ ಡೇಟೆಡ್ ಚೆಕ್ ಅನ್ನು ನೀಡಿದ್ದಾರೆ ಎಂದು ಆರೋಪಿಸಲಾಗಿದೆ.


  ಈ ಚೆಕ್ ಅನ್ನು ಸೆಪ್ಟೆಂಬರ್ 22 ರಂದು ಬ್ಯಾಂಕಿಗೆ ಸಲ್ಲಿಸಲಾಗಿದೆ ಆದರೆ ಶರೀಫಾ ಅವರ ಖಾತೆಯಲ್ಲಿ ಅಷ್ಟೊಂದು ಹಣವಿಲ್ಲದ ಕಾರಣ ಅದು ಬೌನ್ಸ್ ಆಗಿದೆ ಎಂದು ಹೋಟೆಲ್ ತನ್ನ ದೂರಿನಲ್ಲಿ ತಿಳಿಸಿದೆ.


  ಬೆಲೆಬಾಳುವ ವಸ್ತುಗಳೊಂದಿಗೆ ಪರಾರಿ


  ಕಳೆದ ವರ್ಷ ನವೆಂಬರ್ 20 ರಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಶರೀಫಾ ಬೆಲೆಬಾಳುವ ವಸ್ತುಗಳೊಂದಿಗೆ ಹೋಟೆಲ್ ನಿಂದ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. "ಇದು ಸಂಪೂರ್ಣವಾಗಿ ಪೂರ್ವಯೋಜಿತವಾಗಿದೆ ಎಂದು ತೋರುತ್ತದೆ, ಏಕೆಂದರೆ 22 ನವೆಂಬರ್ 2022 ರ ವೇಳೆಯ ಚೆಕ್ ಅನ್ನು ಹೋಟೆಲ್ ಗೆ ನೀಡಿದ್ದು, ಅದು ಬಾಕಿ ಹಣವನ್ನು ಪಾವತಿಸುತ್ತದೆ ಅಂತ ನಾವು ಭಾವಿಸಿದ್ದೆವು.


  ಇದನ್ನೂ ಓದಿ: ಹಿಜಾಬ್ ವಿವಾದದ ಕುರಿತು ಮಹತ್ವದ ಅಪ್​ಡೇಟ್ ನೀಡಿದ ಸುಪ್ರೀಂ


  ಶರೀಫಾ ಹೋಟೆಲ್ ಅಧಿಕಾರಿಗಳನ್ನು ಮೋಸಗೊಳಿಸುವ ಸ್ಪಷ್ಟ ಉದ್ದೇಶವನ್ನು ಹೊಂದಿದ್ದರು ಎಂದು ಇದರಿಂದ ತಿಳಿಯುತ್ತದೆ" ಎಂದು ಹೋಟೆಲ್ ತನ್ನ ದೂರಿನಲ್ಲಿ ತಿಳಿಸಿದೆ. ಇದು ಕಳ್ಳತನ ಮತ್ತು ವಂಚನೆಯ ಪ್ರಕರಣವಾಗಿದೆ ಎಂದು ಹೋಟೆಲ್ ಆರೋಪಿಸಿದೆ.

  Published by:Prajwal B
  First published: