ಲಂಡನ್: ಲಂಡನ್ ಮೂಲದ ಜೇಸನ್ ಅರ್ಡೆ (Jason Arday) ಎಂಬುವವರು ಯುಕೆಯ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ (Cambridge University) ಕಪ್ಪುವರ್ಣೀಯ ಸಮುದಾಯದ ಅತ್ಯಂತ ಕಿರಿಯ ಪ್ರೊಫೆಸರ್ (Professor) ಆಗುವ ಮೂಲಕ ಇತಿಹಾಸವನ್ನು ಸೃಷ್ಟಿಸಿದ್ದಾರೆ. ಅದಕ್ಕೂ ಮುಖ್ಯವಾದ ಸಂಗತಿ ಎಂದರೆ ಜೇಸನ್ ಆರ್ಡೆ ಅವರು ವಯಸ್ಕರಾಗುವ ತನಕ ಅನಕ್ಷರಸ್ಥರಾಗಿದ್ದರು ಅಂದ್ರೆ ನೀವು ನಂಬಲೇಬೇಕು. ಯಾಕೆಂದರೆ ಸದ್ಯ 37 ವರ್ಷ ವಯಸ್ಸಿನ ಅರ್ಡೆ ಅವರಿಗೆ 18ನೇ ವರ್ಷದ ತನಕ ಓದಲು ಅಥವಾ ಬರೆಯಲು ಬರುತ್ತಿರಲಿಲ್ಲ. ಸಣ್ಣ ಪ್ರಾಯದಲ್ಲೇ ದೈಹಿಕ ಬೆಳವಣಿಗೆಯಲ್ಲಿ ನಿಧಾನಗತಿ ಮತ್ತು ಮೆದುಳಿನ ಬೆಳವಣಿಗೆಯಲ್ಲಿ ವ್ಯತ್ಯಾಸ ಕಂಡುಬಂದ ಪರಿಣಾಮ 11 ವರ್ಷ ವಯಸ್ಸಿನವರೆಗೆ ಮಾತನಾಡಲು ಸಹ ಬರುತ್ತಿರಲಿಲ್ಲ ಎಂದು ಬಿಬಿಸಿ ವರದಿ ಮಾಡಿದೆ.
ಮುಂದಿನ ತಿಂಗಳಿಂದ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಜೇಸನ್ ಆರ್ಡೆ ಅವರು ಸಮಾಜ ಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಲಿದ್ದು, ಲಂಡನ್‌ನ ಕ್ಲಾಫಮ್ ನಗರದಲ್ಲಿ ಹುಟ್ಟಿ ಬೆಳೆದ ಜೇಸನ್ ಆರ್ಡೆ ಅವರು ಜೀವನ ಪರ್ಯಂತ ಇನ್ನೊಬ್ಬರ ಆಸರೆಯಲ್ಲೇ ಬದುಕಬೇಕಾಗಬಹುದು ಎಂದು ವೈದ್ಯರು ಭವಿಷ್ಯ ನುಡಿದಿದ್ದರು. ಆದರೆ ಅದನ್ನೇ ಸವಾಲಾಗಿ ತೆಗೆದುಕೊಂಡ ಆರ್ಡೆ ಅವರು ‘ಮುಂದೊಂದು ದಿನ ನಾನು ಕೇಂಬ್ರಿಡ್ಜ್ ಅಥವಾ ಆಕ್ಸ್‌ಫರ್ಡ್ ಯೂನಿವರ್ಸಿಟಿಯಲ್ಲಿ ಕೆಲಸ ಮಾಡುವುದು ನನ್ನ ಗುರಿ’ ಎಂದು ತನ್ನ ಜೀವನದ ಕನಸನ್ನು ತಾನು ಮಲಗುವ ತಾಯಿಯ ಕೋಣೆಯ ಗೋಡೆಯಲ್ಲಿ ಬರೆಯುತ್ತಿದ್ದರು. ತಾನು ಅಂದುಕೊಂಡಿದ್ದನ್ನು ಸಾಧಿಸಿರುವ ಆರ್ಡೆ ಅವರು, ಈಗ ಎಲ್ಲಾ ಭವಿಷ್ಯವನ್ನು ಸುಳ್ಳು ಮಾಡಿ ತೋರಿಸಿದ್ದಾರೆ.
ಇದನ್ನೂ ಓದಿ: Education: ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ತಾರತಮ್ಯ ಇನ್ನೂ ಜೀವಂತ; ಶಿಕ್ಷಣದ ಸ್ಥಿತಿಯ ಬಗ್ಗೆ ಹೆಚ್ಚಿದ ಕಳವಳ
ಜೇಸನ್ ತಿರಸ್ಕಾರವನ್ನೂ ಅನುಭವಿಸಿದ್ದರು!
ವರದಿಗಳ ಪ್ರಕಾರ ಯುನೈಟೆಡ್ ಕಿಂಗ್‌ಡಮ್‌ನಲ್ಲಿ 23000 ಸಾವಿರ ಪ್ರಾಧ್ಯಾಪಕರ ಪೈಕಿ ಕೇವಲ 155 ಕಪ್ಪುವರ್ಣ ಸಮುದಾಯದ ಪ್ರಾಧ್ಯಾಪಕರಿದ್ದಾರೆ. ಇದೀಗ ಆ ಸಾಲಿಗೆ ಅತ್ಯಂತ ಕಿರಿಯ ಪ್ರಾಧ್ಯಾಪಕರಾಗಿ ಜೇಸನ್ ಆರ್ಡೆ ಅವರ ಸೇರ್ಪಡೆ ಆಗಿದ್ದಾರೆ. ತನ್ನ ಹದಿಹರೆಯದ ವಯಸ್ಸಿನಲ್ಲಿ ಓದಲು ಮತ್ತು ಬರೆಯುವುದು ಹೇಗೆಂದು ಕಲಿತ ಜೇಸನ್ ಆರ್ಡೆ ಅವರು ನಂತರ ಸರ್ರೆ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಿ ಪಿಇ ಶಿಕ್ಷಕರಾದರು. ವಿಪರ್ಯಾಸ ಅಂದ್ರೆ ಉನ್ನತ ಶಿಕ್ಷಣವನ್ನು ಕಲಿಯುವ ಸಂದರ್ಭದಲ್ಲಿ ಅವರನ್ನು ಹಿಂಸಾತ್ಮಕವಾಗಿ ತಿರಸ್ಕಾರವೂ ಮಾಡಲಾಗಿತ್ತು. ಆದರೂ ಕಲಿಯುವ ಛಲ ಬಿಡದ ಆರ್ಡೆ, ಈಗ ಕಠಿಣ ಪರಿಶ್ರಮದ ಫಲವಾಗಿ ವಿಶ್ವದ ಎರಡನೇ ಅತೀದೊಡ್ಡ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಆಯ್ಕೆಯಾಗಿದ್ದಾರೆ.
ಸ್ನೇಹಿತನ ಸಹಾಯ ಮರೆಯದ ಆರ್ಡೆ
ಜೇಸನ್ ಆರ್ಡೆ ಅವರಿಗೆ ಇನ್ನೂ ಮಾತು ಬಾರದ ಸಮಯದಲ್ಲಿ ಸಂವಹನಕ್ಕಾಗಿ ಕೈ ಭಾಷೆಯಲ್ಲಿ ಮಾತನಾಡಿ ವಿಷಯಗಳನ್ನು ತಿಳಿದುಕೊಳ್ಳುತ್ತಿದ್ದರು. ಬರೀ ಸೈನ್ ಲ್ಯಾಂಗ್ವೇಜ್‌ನಲ್ಲಿ ಮಾತನಾಡುತ್ತಲೇ ಎರಡು ಸ್ನಾತಕೋತ್ತರ ಪದವಿ ಪಡೆ ಆರ್ಡೆ, ಶೈಕ್ಷಣಿಕ ಕ್ಷೇತ್ರದಲ್ಲಿ ವೃತ್ತಿ ಜೀವನವನ್ನು ಮುಂದುವರಿಸಲು ಅಗತ್ಯವಿರುವ ಸಹಾಯ ಮತ್ತು ಪ್ರೋತ್ಸಾಹವನ್ನು ಸ್ನೇಹಿತ ಹಾಗೂ ಮಾರ್ಗದರ್ಶಕ ಸ್ಯಾಂಡ್ರೋ ಸ್ಯಾಂಡಿ ಅವರು ಮಾಡಿದ್ದಾರೆ. 2018ರಲ್ಲಿ ತಮ್ಮ ಮೊದಲ ಪತ್ರಿಕೆಯನ್ನು ಪ್ರಕಟಿಸಿದ ಆರ್ಡೆ, ಗ್ಲಾಸ್ಗೋ ಸ್ಕೂಲ್ ಆಫ್ ಎಜ್ಯುಕೇಶನ್ ವಿವಿಯಲ್ಲಿ ಕೆಲಸಕ್ಕೆ ಸೇರಿ ನಂತರ ಯುಕೆನಲ್ಲಿ ಪ್ರಾಧ್ಯಾಪಕರಾದರು.
ಇದನ್ನೂ ಓದಿ: Education System: ವಾಷಿಂಗ್ಟನ್‌ನ ವಿಶೇಷ ಶಿಕ್ಷಣ ವ್ಯವಸ್ಥೆಯೊಂದಿಗೆ ಹೋರಾಡಿ ಜಯಶಾಲಿಯಾದ ತಾಯಿಯ ಕಥೆ!
ಈ ಬಗ್ಗೆ ಮಾತನಾಡಿರುವ ಜೇಸನ್ ಆರ್ಡೆ, ನಾನು ನಡೆದು ಬಂದ ದಾರಿ ಹಿಂದುಳಿದ ಹಿನ್ನೆಲೆಯಿಂದ ಬಂದಿರುವ ಅನೇಕ ಜನರಿಗೆ ಮುಂದೆ ಸಾಗಲು ಹಾದಿ ಆಗಬೇಕು. ಉನ್ನತ ಶಿಕ್ಷಣವನ್ನು ಜನಪರವಾಗಿ ಮಾಡುವತ್ತ ನನ್ನ ಗುರಿ ಮುಂದುವರಿಯುತ್ತದೆ. ಕೇಂಬ್ರಿಡ್ಜ್‌ನಂತಹ ಸ್ಥಳದಲ್ಲಿರುವುದು ನನಗೆ ಕೆಲಸ ಮಾಡಲು ಉತ್ತಮ ವಾತಾವರಣವನ್ನು ನೀಡುತ್ತದೆ. ಕೇಂಬ್ರಿಡ್ಜ್‌ನ ಸುದೀರ್ಘ ಇತಿಹಾಸವನ್ನು ಅನ್‌ಪಿಕ್ ಮಾಡುವುದು ಕಷ್ಟ, ಅಥವಾ ತುಂಬಾ ವಿಶಿಷ್ಟವಾಗಿದೆ ಎಂದು ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ