Noida Twin Towers Demolition: ಯಾರ್ ಗುರು ಅವ್ನು, ಬಿಲ್ಡಿಂಗ್ ಬೀಳಿಸುವಾಗ ಅಲ್ಲೇ ಮಲಗಿದ್ನಂತೆ! ಅಯ್ಯೋ ಮುಂದೇನಾಯ್ತು?

ಈ ದಿನ ಎರಡು ಘಟನೆ ನಡೀತು; ನೋಯ್ಡಾದಲ್ಲಿ ಟ್ವಿನ್ ಟವರ್ಸ್ ಬೀಳಿಸ್ತಾ ಇದ್ರು. ಆದ್ರೆ ಆತ ಅಲ್ಲೇ ಪಕ್ಕದಲ್ಲಿ ಮಲಗಿದ್ದ! ಇಡೀ ದೇಶವೇ ಈ ಕ್ಷಣಗಳನ್ನು ನೋಡೋಕೆ ಕಣ್ಣಲ್ಲಿ ಎಣ್ಣೆ ಬಿಟ್ಕೊಂಡು ಕಾಯುತ್ತಿತ್ತು, ಆದ್ರೆ ಆತ ಮಾತ್ರ ನಿದ್ದೆಯಲ್ಲಿ ಆ ಟವರ್ ಹತ್ತಿಕೊಂಡಂತೆ ಕನಸು ಕಾಣುತ್ತಿದ್ದ! ಮುಂದೇನಾಯ್ತು?

ಸಾಂಕೇತಿಕ ಚಿತ್ರ (ಕೃಪೆ: ಇಂಟರ್‌ನೆಟ್)

ಸಾಂಕೇತಿಕ ಚಿತ್ರ (ಕೃಪೆ: ಇಂಟರ್‌ನೆಟ್)

  • Share this:
ನೋಯ್ಡಾ: ಚಿಂತೆ ಇಲ್ಲದವನಿಗೆ ಸಂತೆಯಲ್ಲೂ ನಿದ್ದೆ ಅಂತಾರೆ ಹಿರಿಯರು! ಹೌದು, ಜೀವನದಲ್ಲಿ ಯಾವುದೇ ಚಿಂತೆ ಇಲ್ಲದವರು, ಜಗತ್ತಿನ ಯಾವ ಮೂಲೆಯಲ್ಲಿ ಆದರೂ ಹಾಯಾಗಿ ಮಲಗಿ, ನಿದ್ರಿಸುತ್ತಾರೆ. ಇದಕ್ಕೆ ಉದಾಹರಣೆ (Example) ಎನ್ನುವಂತೆ ನೋಯ್ಡಾದಲ್ಲಿ (Noida) ಘಟನೆಯೊಂದು ನಡೆದಿದೆ. ಇಂದು ಎರಡು ಘಟನೆ ನಡೀತು; ನೋಯ್ಡಾದಲ್ಲಿ ಟ್ವಿನ್ ಟವರ್ಸ್ (Twin Towers) ಬೀಳಿಸ್ತಾ ಇದ್ರು. ಆದ್ರೆ ಆತ ಅಲ್ಲೇ ಪಕ್ಕದಲ್ಲಿ ಮಲಗಿದ್ದ (Sleeping)! ಇಡೀ ದೇಶವೇ ಈ ಕ್ಷಣಗಳನ್ನು ನೋಡೋಕೆ ಕಣ್ಣಲ್ಲಿ ಎಣ್ಣೆ ಬಿಟ್ಕೊಂಡು ಕಾಯುತ್ತಿತ್ತು, ಆದ್ರೆ ಆತ ಮಾತ್ರ ನಿದ್ದೆಯಲ್ಲಿ ಆ ಟವರ್ ಹತ್ತಿಕೊಂಡಂತೆ ಕನಸು (dreams) ಕಾಣುತ್ತಿದ್ದ! ಮುಂದೇನಾಯ್ತು? ಇಲ್ಲಿದೆ ಓದಿ ಕುತೂಹಲಕಾರಿ ಘಟನೆ…

ಮಧ್ಯಾಹ್ನ ಧರೆಗುರುಳಿತು ಟ್ವಿನ್ಸ್ ಟವರ್

ಇಂದು ಇಡೀ ದೇಶದ ಚಿತ್ತ ನೋಯ್ಡಾದತ್ತಲೇ ನೆಟ್ಟಿತ್ತು. ಅದಕ್ಕೆ ಕಾರಣ ವಿವಾದಾತ್ಮಕ ಬಹುಮಹಡಿ ಅವಳಿ ಕಟ್ಟಡ. ಸುಪ್ರೀಂಕೋರ್ಟ್‌ ಆದೇಶದ ಹಿನ್ನೆಲೆಯಲ್ಲಿ ಅಕ್ರಮವಾಗಿ ಕಟ್ಟಲಾಗಿದ್ದ ಬಹುಮಹಡಿ ಕಟ್ಟಡ ತೆರವು ಮಾಡಲು ಇಂದು ಮುಹೂರ್ತ ಫಿಕ್ಸ್ ಆಗಿತ್ತು.



9 ಸೆಕೆಂಡ್‌ಗಳಲ್ಲಿ ಬಹುಮಹಡಿ ಕಟ್ಟಡ ಧರಾಶಾಹಿ

ದೆಹಲಿಯ ಐತಿಹಾಸಿಕ ಕುತುಬ್ ಮಿನಾರ್ (73 ಮೀಟರ್) ಗಿಂತಲೂ ಎತ್ತರವಾಗಿದ್ದ ಸುಮಾರು 100 ಮೀಟರ್ ಎತ್ತರದ ಕಟ್ಟಡವನ್ನು ಸ್ಫೋಟಕಗಳನ್ನು ಬಳಸಿ 'ಜಲಪಾತದ ಸ್ಫೋಟ' ತಂತ್ರದಿಂದ ಕೇವಲ 9 ಸೆಕೆಂಡ್‌ಗಳಲ್ಲಿ ನೆಲಕ್ಕೆ ಉರುಳಿಸಲಾಯಿತು.

ಇದನ್ನೂ ಓದಿ: Noida Twin Towers Demolition: ನೋಯ್ಡಾದ ಬೃಹತ್ ಅವಳಿ ಕಟ್ಟಡ ನೆಲಸಮ! 9 ಸೆಕೆಂಡ್‌ಗಳಲ್ಲಿ ಡೆಮಾಲಿಷನ್

ಅಪಾರ್ಟ್‌ಮೆಂಟ್‌ನಲ್ಲೇ ಇದ್ದ ವ್ಯಕ್ತಿ

ಭಾನುವಾರ ಬೆಳಿಗ್ಗೆ 7 ಗಂಟೆಗೆ, ಬಹುತೇಕ ಎಲ್ಲಾ ನಿವಾಸಿಗಳು 15 ವಸತಿ ಆವರಣಗಳನ್ನು ಖಾಲಿ ಮಾಡಿದ್ದರು. ಬೆಳಿಗ್ಗೆ 7 ಗಂಟೆಯ ನಂತರ, ಭದ್ರತಾ ಸಿಬ್ಬಂದಿಯೊಬ್ಬರು ಟವರ್‌ನ ಮೇಲಿನ ಮಹಡಿಯ ಅಪಾರ್ಟ್‌ಮೆಂಟ್‌ನಲ್ಲಿ ವ್ಯಕ್ತಿಯೊಬ್ಬರು ಇರುವ ಬಗ್ಗೆ ವಿಶೇಷ ಕಾರ್ಯಪಡೆಗೆ ಸಂದೇಶ ನೀಡಿದ್ದಾರೆ.

ಗಾಢನಿದ್ದೆಯಲ್ಲೇ ಇದ್ದ ಭೂಪ!

ಕಟ್ಟಡ ಉರುಳಿಸುವ ಮುನ್ನ ಇಡೀ  ಅವಳಿ ಬಿಲ್ಡಿಂಗ್‌ನಲ್ಲಿಯೂ ಭದ್ರತಾ ಪಡೆ ಎರಡೆರಡು ಬಾರಿ ಪರಿಶೀಲನೆ ಮಾಡಿತ್ತು. ಆದರೆ ಅಧಿಕಾರಿಗಳ ಕಣ್ಣು ತಪ್ಪಿಸಿ ವ್ಯಕ್ತಿಯೊಬ್ಬ ಅಲ್ಲಿಯೇ ಮಲಗಿದ್ದನಂತೆ. ಈ ನಿವಾಸಿ, ಅಪಾರ್ಟ್ಮೆಂಟ್ ಒಳಗೆ ಗಾಢ ನಿದ್ದೆಯಲ್ಲಿದ್ದ ಎನ್ನಲಾಗಿದೆ.

ವ್ಯಕ್ತಿಯನ್ನು ಎಬ್ಬಿಸಿ ಹೊರಕ್ಕೆ ಕರೆದೊಯ್ದ ಸಿಬ್ಬಂದಿ

ಕೊನೆಗೆ ಭದ್ರತಾ ಪಡೆಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಬಂದು ಆ ವ್ಯಕ್ತಿಯನ್ನು ಎಬ್ಬಿಸಿದ್ದರೆ. ಕನಸು ಕಾಣುತ್ತಿದ್ದ ಆತ ಕಷ್ಟದಿಂದಲೇ ಎದ್ದಿದ್ದಾನೆ. ಬಳಿಕ ಅಧಿಕಾರಿಗಳನ್ನು ಕಂಡು ಹೌಹಾರಿದ್ದಾನೆ. ಕೊನೆಗೆ ಹೇಗೋ ಭದ್ರತಾ ಸಿಬ್ಬಂದಿ ಆತನನ್ನು ಎಬ್ಬಿಸುವಲ್ಲಿ ಯಶಸ್ವಿಯಾದರು. ಬೆಳಿಗ್ಗೆ 7 ಗಂಟೆಯ ಸುಮಾರಿಗೆ ಅವರನ್ನು ಸ್ಥಳಾಂತರಿಸಲಾಯಿತು.

ಇದನ್ನೂ ಓದಿ: Noida Twin Tower Demolition: ಟ್ವಿನ್ ಟವರ್ಸ್ ಧೂಳಲ್ಲಿ ಮಂಕಾಯ್ತಂತೆ Ind-Pak ಮ್ಯಾಚ್! ಸೋಶಿಯಲ್‌ ಮಿಡಿಯಾಗಳಲ್ಲಿ ಸಖತ್ ಟ್ರೋಲ್ಸ್

ಮನೆ ಬಾಗಿಲಿಗೆ ಸ್ಟಿಕ್ಕರ್ ಅಂಟಿಸಿ ಕನ್ಫರ್ಮ್

ಈ ಎರಡು ಬಿಲ್ಡಿಂಗ್‌ನಲ್ಲಿ ಸುಮಾರು 900 ಫ್ಲಾಟ್‌ಗಳಿದ್ದು, ಅಲ್ಲೆಲ್ಲ ಜನರು ವಾಸಿಸಿದ್ದರು. ವಿಶೇಷ ಕಾರ್ಯಪಡೆಯು ಎರಡು ಬಾರಿ ಪರಿಶೀಲನೆ ಪ್ರಕ್ರಿಯೆಗೆ ಮುಂದಾಗಿದೆ. ಪ್ರತಿಯೊಬ್ಬ ಫ್ಲಾಟ್ ನಿವಾಸಿಗಳು ತಮ್ಮ ಮನೆಗಳಿಗೆ ಬೀಗ ಹಾಕಿ ಹೊರಬಂದ ನಂತರ, ಒಂದು ಸ್ಟಿಕ್ಕರ್ ಅಂಟಿಸುವಂತೆ ಸೂಚಿಸಲಾಗಿತ್ತು. ನಂತರ ಟವರ್ ಕ್ಯಾಪ್ಟನ್‌ಗಳ ಬಳಿ ನಿವಾಸಿಗಳ ವಿವರಗಳ ರಿಜಿಸ್ಟರ್ ಕೂಡ ಇತ್ತು, ಅವರು ಎಷ್ಟು ಜನರು ಉಳಿದಿದ್ದಾರೆ ಮತ್ತು ಎಷ್ಟು ಮಂದಿ ಇನ್ನೂ ಸ್ಥಳಾಂತರಿಸಬೇಕಾಗಿದೆ ಎಂಬುದನ್ನು ಪರಿಶೀಲಿಸಲು ಎರಡನೇ ಸುತ್ತಿನ ಪರಿಶೀಲನೆ ನಡೆಸಿದರು. ಆದರೂ ಆ ಒಬ್ಬ ವ್ಯಕ್ತಿ ಮಾತ್ರ ಲೆಕ್ಕಕ್ಕೆ ಸಿಗದೇ, ಮನೆಯೊಳಗೇ ಮಲಗಿದ್ದ ಎನ್ನಲಾಗಿದೆ. ಕೊನೆಗೂ ಆತನನ್ನು ಅಲ್ಲಿಂದ ಸುರಕ್ಷಿತವಾಗಿ ಕರೆದುಕೊಂಡು ಬರಲಾಗಿದೆ.
Published by:Annappa Achari
First published: