ನವದೆಹಲಿ: ಕೊಲೆ ಪ್ರಕರಣಕ್ಕೆ (Murder Case) ಸಂಬಂಧಪಟ್ಟಂತೆ ಪ್ರತ್ಯಕ್ಷ ವರದಿ ಮಾಡಲು ಹೋಗಿದ್ದ ವೇಳೆ ಟಿವಿ ಪತ್ರಕರ್ತ (Tv Television) ಮತ್ತು ಬಾಲಕಿಯೊಬ್ಬಳನ್ನು ಗುಂಡಿಟ್ಟು ಕೊಲೆ ಮಾಡಿರುವ (Shoot out) ಆಘಾತಕಾರಿ ಘಟನೆ ಫ್ಲೋರಿಡಾದಲ್ಲಿ (Florida) ನಡೆದಿದೆ. ಸೆಂಟ್ರಲ್ ಫ್ಲೋರಿಡಾ ಟೆಲಿವಿಷನ್ ಪತ್ರಕರ್ತ ಮತ್ತು ಪುಟ್ಟ ಬಾಲಕಿಯೊಬ್ಬಳನ್ನು ಕಿಡಿಗೇಡಿಯೊಬ್ಬ ಗುಂಡು ಹಾರಿಸಿ ಕೊಲೆ (Murder Case) ಮಾಡಿದ್ದಾಗಿ ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.
19 ವರ್ಷದ ಕಿಡಿಗೇಡಿಯಿಂದ ಶೂಟೌಟ್!
ಬುಧವಾರ ಸಂಜೆ ಈ ಪ್ರಕರಣ ನಡೆದಿದ್ದು, ಒರ್ಲ್ಯಾಂಡೊ-ಪ್ರದೇಶದ ನೆರೆಹೊರೆಯಲ್ಲಿ ನಡೆದ ಎರಡೂ ಗುಂಡಿನ ದಾಳಿಗೆ ಕಾರಣ ಕೀತ್ ಮೆಲ್ವಿನ್ ಮೋಸೆಸ್ ಎಂಬಾತ ಎಂದು ಹೇಳಲಾಗಿದ್ದು, 19 ವರ್ಷದ ಕೀತ್ ಮೆಲ್ವಿನ್ ಮೋಸೆಸ್ ಎಂಬಾತನನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ ಎಂದು ಆರೆಂಜ್ ಕೌಂಟಿ ಶೆರಿಫ್ ಅಧಿಕಾರಿ ಜಾನ್ ಮಿನಾ ಹೇಳಿದ್ದಾರೆ.
ಅನ್ಯಾಯವಾಗಿ ಅಸುನೀಗಿದ 9 ವರ್ಷದ ಮಗು!
ಆರೋಪಿ ನಡೆಸಿದ ಗುಂಡಿನ ದಾಳಿಗೆ ಕಾರಣ ತಿಳಿದುಬಂದಿಲ್ಲ, ಆತ ಮೊದಲು ಮಾಧ್ಯಮದ ವಾಹನದ ಮೇಲೆ ಗುಂಡಿನ ದಾಳಿ ನಡೆಸಿ ಇಬ್ಬರು ಪತ್ರಕರ್ತರ ಮೇಲೆ ಗುಂಡು ಹಾರಿಸಿದ್ದ, ನಂತರ ಅಲ್ಲೇ ಇದ್ದ ಮನೆಯೊಂದಕ್ಕೆ ನುಗ್ಗಿ ತಾಯಿ ಹಾಗೂ 9 ವರ್ಷದ ಮಗುವಿನ ಮೇಲೆ ಗುಂಡು ಹಾರಿಸಿದ್ದ. ಗುಂಡಿನ ದಾಳಿಯಲ್ಲಿ ಓರ್ವ ಪತ್ರಕರ್ತ ಮೃತಪಟ್ಟಿದ್ದು, ಮತ್ತೊಬ್ಬರಿಗೆ ತೀವ್ರ ಗಾಯಗಳಾಗಿವೆ ಎಂದು ಆರೆಂಜ್ ಕೌಂಟಿ ಶೆರಿಫ್ ಅಧಿಕಾರಿ ಜಾನ್ ಮಿನಾ ತಿಳಿಸಿದ್ದಾರೆ.
ಪೊಲೀಸರಿಗೆ ಸಹಕಾರ ನೀಡದ ಆರೋಪಿ
ಮುಂದುವರಿದು ಮಾತನಾಡಿರುವ ಅವರು, ಆರೋಪಿಯು ಈ ರೀತಿಯ ಕೃತ್ಯವನ್ನು ಎಸಗಲು ನಿರ್ದಿಷ್ಟ ಕಾರಣ ಏನು ಅನ್ನೋದು ಇನ್ನೂ ತಿಳಿದು ಬಂದಿಲ್ಲ. ಆ ಆರೋಪಿ ಹಾಗೂ ಪತ್ರಕರ್ತ, ಆ ಮಗುವಿಗೆ ಯಾವುದೇ ಸಂಬಂಧವಿಲ್ಲ, ಆದರೂ ಯಾಕೆ ಗುಂಡಿನ ದಾಳಿ ನಡೆಸಿದ್ದಾನೆ ಎನ್ನುವ ಕುರಿತು ಮಾಹಿತಿ ತಿಳಿದಿಲ್ಲ, ವರದಿ ಬರಬೇಕಿದೆ, ಅಲ್ಲದೇ ಪೊಲೀಸರೊಂದಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ತಿಳಿದು ಬಂದಿದೆ.
ಕಠಿಣ ಕ್ರಮ ಕೈಗೊಳ್ಳಲು ಆಗ್ರಹ
ಈ ಗುಂಡಿನ ದಾಳಿಗಳ ಕುರಿತು ಹೆಚ್ಚಿನ ವಿವರಗಳಿಗಾಗಿ ನಾವು ಕಾರ್ಯಾಚರಣೆ ನಡೆಸುತ್ತಿದ್ದು, ಜೊತೆಗೆ ಅಮೆರಿಕಾದ್ಯಂತ ಬಂದೂಕು ಹಿಂಸಾಚಾರಕ್ಕೆ ಕಠಿಣವಾದ ಕ್ರಮ ಜರುಗಿಸಬೇಕೆಂದು ಒತ್ತಾಯಿಸಲಾಗಿದೆ. ನಮ್ಮ ಸಮುದಾಯದಲ್ಲಿ ಬಂದೂಕಿನ ದಾಳಿಗೆ ಯಾರೂ ಬಲಿಯಾಗಬಾರದು ಎಂದು ಆರೆಂಜ್ ಕೌಂಟಿ ಶೆರಿಫ್ ಅಧಿಕಾರಿ ಜಾನ್ ಮಿನಾ ಬೇಸರ ವ್ಯಕ್ತಪಡಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ