ದೆಹಲಿ: ಬಹುತೇಕ ಜನರು ರೈಲಿನಲ್ಲಿ ಪ್ರಯಾಣ (train) ಮಾಡುವುದು ಇಷ್ಟಪಡ್ತಾರೆ. ರೈಲು ಪ್ರಯಾಣ (train travel) ಸುಖಕರ, ಅಗ್ಗ ಎನ್ನುವುದು ಒಂದು ಕಾರಣವಾದರೆ, ವಾಹನ ಪ್ರಯಾಣಕ್ಕಿಂತ ರೈಲು ಪ್ರಯಾಣ ಸುರಕ್ಷಿತ (Safe) ಎನ್ನುವುದು ಮತ್ತೊಂದು ಕಾರಣ. ಆದರೆ ರೈಲಿನ ಒಳಗೆ ಇಂದು ದುರಂತವೊಂದು ನಡೆದು ಹೋಗಿದೆ. ಇಂದು ಸಂಭವಿಸಿದ ಅಪಘಾತದಲ್ಲಿ (Accident) ಕೋಚ್ನ ಕಿಟಕಿಗೆ ಕಬ್ಬಿಣದ ರಾಡ್ (iron rod) ಅಪ್ಪಳಿಸಿ ಕುತ್ತಿಗೆಗೆ ಚುಚ್ಚಿಕೊಂಡು ವ್ಯಕ್ತಿಯೊಬ್ಬ ರೈಲಿನಲ್ಲಿ ಸಾವನ್ನಪ್ಪಿದ್ದಾನೆ. ದೆಹಲಿಯಿಂದ ಕಾನ್ಪುರಕ್ಕೆ (Delhi to Kanpur) ತೆರಳುತ್ತಿದ್ದ ನೀಲಾನಾಚಲ ಎಕ್ಸ್ಪ್ರೆಸ್ ರೈಲಿನಲ್ಲಿ (Neelanachal Express train) ಈ ದುರಂತ ನಡೆದಿದೆ.
ರೈಲಿನ ಸೀಟಲ್ಲಿ ಕುಳಿತಲ್ಲೇ ಸಾವನ್ನಪ್ಪಿದ ಪ್ರಯಾಣಿಕ
ದೆಹಲಿಯಿಂದ ಕಾನ್ಪುರಕ್ಕೆ ತೆರಳುತ್ತಿದ್ದ ನೀಲಾನಾಚಲ ಎಕ್ಸ್ಪ್ರೆಸ್ ರೈಲಿನಲ್ಲಿ ಉತ್ತರ ಮಧ್ಯ ರೈಲ್ವೆಯ ಪ್ರಯಾಗ್ರಾಜ್ ವಿಭಾಗದ ದನ್ವಾರ್ ಮತ್ತು ಸೋಮ್ನಾ ನಡುವೆ ಬೆಳಿಗ್ಗೆ 8:45 ಕ್ಕೆ ಈ ಘಟನೆ ನಡೆದಿದೆ. ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಹರಿಕೇಶ್ ಕುಮಾರ್ ದುಬೆ ಎಂಬ ಪ್ರಯಾಣಿಕ ತನ್ನ ಸೀಟಿನ ಮೇಲೆ ರಕ್ತದ ಮಡುವಿನಲ್ಲಿ ಕಣ್ಣು ಮುಚ್ಚಿ ಕುಳಿತಿರುವಂತೆ ಸಾವನ್ನಪ್ಪಿದ್ದಾರೆ.
ಪ್ರಯಾಣಿಕರ ಕುತ್ತಿಗೆಗೆ ಚುಚ್ಚಿತು ಕಬ್ಬಿಣದ ರಾಡ್!
ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಹರಿಕೇಶ್ ಕುಮಾರ್ ದುಬೆ ಎಂಬ ಪ್ರಯಾಣಿಕ ಕಬ್ಬಿಣದ ರಾಡ್ ಕುತ್ತಿಗೆಗೆ ಸಿಲುಕಿ, ರೈಲಿನ ಒಳಗೇ ಮೃತಪಟ್ಟಿದ್ದಾನೆ. ರೈಲ್ವೆ ಹಳಿ ಕೆಲಸದಲ್ಲಿ ಬಳಸಲಾಗುತ್ತಿದ್ದ ಕಬ್ಬಿಣದ ರಾಡ್ ಕಿಟಕಿಗೆ ಹಾನಿ ಮಾಡುವ ಮೂಲಕ ರೈಲಿನೊಳಗೆ ಪ್ರವೇಶಿಸಿದೆ. ಈ ಕ್ಷಣದಲ್ಲಿ ಅಲ್ಲೇ ಕಿಟಕಿ ಪಕ್ಕ ಕುಳಿತು ಪ್ರಯಾಣ ಮಾಡುತ್ತಿದ್ದ ಹರಿಕೇಶ್ ಕುಮಾರ್ ದುಬೆ ಅವರ ಕುತ್ತಿಗೆಯೊಳಕ್ಕೆ ಸೇರಿದೆ. ಕ್ಷಣ ಮಾತ್ರದಲ್ಲೇ ಎಲ್ಲವೂ ನಡೆದು ಹೋಗಿದೆ.
ಇದನ್ನೂ ಓದಿ: Vande Bharat Express Train: ಶುರುವಾಗಲಿದೆ ಹೊಸ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು!
ಕುಳಿತ ಸ್ಥಿತಿಯಲ್ಲೇ ಸಾವನ್ನಪ್ಪಿದ ಪ್ರಯಾಣಿಕ
ಈ ಘಟನೆಯನ್ನು ಕಣ್ಣಾರೆ ಕಂಡು ಸಹ ಪ್ರಯಾಣಿಕರು ಆಘಾತ, ಆತಂಕಕ್ಕೆ ಒಳಗಾದರು. ಬಳಿಕ ರೈಲನ್ನು ಅಲಿಘರ್ ಜಂಕ್ಷನ್ನಲ್ಲಿ ನಿಲ್ಲಿಸಲಾಯಿತು. ಹರಿಕೇಶ್ ಕುಮಾರ್ ದುಬೆ ಕುಳಿತ ಸ್ಥಳದಲ್ಲಿ, ಕುಳಿತ ಸ್ಥಿತಿಯಲ್ಲೇ ಸಾವನ್ನಪ್ಪಿದ್ದರು. ಅವರ ಮೃತದೇಹವನ್ನು ಸರ್ಕಾರಿ ರೈಲ್ವೆ ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ತನಿಖೆ ನಡೆಯುತ್ತಿದೆ ಎಂದು ಭಾರತೀಯ ರೈಲ್ವೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ನೀವು ರೈಲಿನಲ್ಲಿ ಪ್ರಯಾಣಿಸುತ್ತೀರಾ? ಹಾಗಿದ್ರೆ ಈ ವಿಚಾರಗಳು ನಿಮಗೆ ತಿಳಿದಿರಲಿ
ಸಾಮಾನ್ಯವಾಗಿ ಜನರು ಯಾವುದಾದರೂ ದೂರದ ಊರಿಗೆ ಹೋಗಬೇಕಾದರೆ ರೈಲಿನಲ್ಲಿ (Train) ಪ್ರಯಾಣಿಸಲು (Travel) ಹೆಚ್ಚು ಇಷ್ಟ ಪಡುತ್ತಾರೆ. ಏಕೆಂದರೆ ಅವರು ರಾತ್ರಿ ಪ್ರಯಾಣದಲ್ಲಿ (Night journey) ಚೆನ್ನಾಗಿ ನಿದ್ರಿಸುವುದರಿಂದ ಕಡಿಮೆ ಆಯಾಸವಾಗುತ್ತದೆ ಮತ್ತು ಅವರಿಗೆ ಮನೆಯ ರೀತಿಯ ಬಹುತೇಕ ಸೌಲಭ್ಯಗಳು ರೈಲಿನಲ್ಲಿ ದೊರೆಯುತ್ತವೆ ಎಂಬ ಕಾರಣಕ್ಕೆ (Reason) ಅಂತ ಹೇಳಿದರೆ ತಪ್ಪಾಗುವುದಿಲ್ಲ. ಹಾಗೆಯೇ ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರ ಸೌಲಭ್ಯಗಳನ್ನು (Facility) ಭಾರತೀಯ ರೈಲ್ವೆ ನಿರಂತರವಾಗಿ ಸುಧಾರಿಸುತ್ತಿದೆ ಅಂತಾನೆ ಹೇಳಬಹುದು.
ಮುಂದಿನ ಎರಡು ವರ್ಷಗಳಲ್ಲಿ 400 ಸೆಂ.ಮೀ ಹೈಸ್ಪೀಡ್ ರೈಲುಗಳನ್ನು ಓಡಿಸುವುದು ಭಾರತೀಯ ರೈಲ್ವೆಯ ಯೋಜನೆಯಾಗಿದೆ. ಆಗಸ್ಟ್ 15, 2023 ರ ವೇಳೆಗೆ, 75 ನಗರಗಳನ್ನು ವಂದೇ ಭಾರತ್ ರೈಲುಗಳೊಂದಿಗೆ ಸಂಪರ್ಕಿಸಲು ಸಿದ್ಧತೆಗಳು ನಡೆಯುತ್ತಿವೆ.
ಇದನ್ನೂ ಓದಿ: Jan Shatabdi Express: ವಂದೇ ಭಾರತ್ ಎಕ್ಸ್ಪ್ರೆಸ್ ಪರಿಣಾಮ; ಈ ಪ್ರಮುಖ ರೈಲು ರದ್ದು?
ರಾತ್ರಿ ಮಲಗಿದ್ದಾಗ ಇಳಿಯಬೇಕಾದ ನಿಲ್ದಾಣ ತಪ್ಪಿಹೋಗುವ ಭಯವಿಲ್ಲ
ಈಗಾಗಲೇ ರೈಲ್ವೆ ತನ್ನ ಪ್ರಯಾಣಿಕರ ಅನುಕೂಲಕ್ಕಾಗಿ ಅನೇಕ ರೈಲ್ವೆ ನಿಲ್ದಾಣಗಳಲ್ಲಿ ವೈ-ಫೈ ವ್ಯವಸ್ಥೆ, ಎಸ್ಕಲೇಟರ್ ಗಳು ಸೇರಿದಂತೆ ಅನೇಕ ಸೌಲಭ್ಯಗಳನ್ನು ಪ್ರಾರಂಭಿಸಿದೆ. ರೈಲ್ವೆಯ ಮತ್ತೊಂದು ಹೊಸ ಸೇವೆಯಿಂದ, ನೀವು ರಾತ್ರಿಯಲ್ಲಿ ಶಾಂತಿಯುತವಾಗಿ ಮಲಗಲು ಸಾಧ್ಯವಾಗುತ್ತದೆ ನೋಡಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ