Viral Video: ಕೆಲಸ ಮಾಡಿಸಿ ದುಡ್ಡು ಕೊಟ್ಟಿಲ್ಲ ಅಂತ ಕಾರಿಗೆ ಬೆಂಕಿ ಇಟ್ಟ ವ್ಯಕ್ತಿ!

ಕೆಲವೊಮ್ಮೆ ಕೆಲಸ ಮಾಡಿಸಿಕೊಂಡವರು ‘ನಾವು ದುಡ್ಡು ಕೊಟ್ಟಿದ್ದೇವೆ’ ಅಂತ ಹೇಳಿದರೆ, ಕೆಲಸ ಮಾಡಿದವರು ‘ನನಗೆ ದುಡ್ಡೇ ಕೊಟ್ಟಿಲ್ಲ’ ಅಂತ ಹೇಳುವುದನ್ನು ಸಹ ನಾವು ಅನೇಕ ಸಂದರ್ಭಗಳಲ್ಲಿ ನೋಡಿರುತ್ತೇವೆ ಮತ್ತು ಇದೇ ವಿಷಯವಾಗಿ ಜಗಳಗಳು ನಡೆಯುತ್ತವೆ. ಇಲ್ಲಿಯೂ ಸಹ ಅಂತಹದೇ ಒಂದು ಘಟನೆ ನಡೆದಿದೆ ನೋಡಿ.

ಮರ್ಸಿಡಿಸ್ ಕಾರಿಗೆ ಬೆಂಕಿ ಹಚ್ಚಿದ ವ್ಯಕ್ತಿ

ಮರ್ಸಿಡಿಸ್ ಕಾರಿಗೆ ಬೆಂಕಿ ಹಚ್ಚಿದ ವ್ಯಕ್ತಿ

  • Share this:
ಕೆಲವೊಬ್ಬರು ತಮ್ಮ ಮನೆಯಲ್ಲಿ ಯಾವುದೇ ಚಿಕ್ಕ ಕೆಲಸ (Work) ಮಾಡಿಸಿಕೊಂಡರೂ ಆ ಕೆಲಸ ಮಾಡಿದ ವ್ಯಕ್ತಿಗೆ ಬೇಗನೆ ದುಡ್ಡು ಕೊಟ್ಟು ಕಳುಹಿಸುತ್ತಾರೆ. ಆದರೆ ಇನ್ನೂ ಕೆಲವರು ತಮ್ಮ ಬಳಿ ದುಡ್ಡಿದ್ದರೂ (Money) ಸಹ ಕೆಲಸ ಮಾಡಿಸಿಕೊಂಡು ‘ನಾಳೆ ಬಾ.. ನಾಡಿದ್ದು ಬಾ.. ಕೊಡ್ತೀನಿ’ ಅಂತೆಲ್ಲಾ ಹೇಳುತ್ತಾ ಆ ಬಡ ಕೆಲಸಗಾರರ (Worker) ಹಣವನ್ನು ಬಾಕಿ ಇರಿಸಿಕೊಂಡಿರುತ್ತಾರೆ. ಆದರೆ, ಕೆಲವೊಮ್ಮೆ ಕೆಲಸ ಮಾಡಿಸಿಕೊಂಡವರು ‘ನಾವು ದುಡ್ಡು ಕೊಟ್ಟಿದ್ದೇವೆ’ ಅಂತ ಹೇಳಿದರೆ, ಕೆಲಸ ಮಾಡಿದವರು ‘ನನಗೆ ದುಡ್ಡೇ ಕೊಟ್ಟಿಲ್ಲ’ ಅಂತ ಹೇಳುವುದನ್ನು ಸಹ ನಾವು ಅನೇಕ ಸಂದರ್ಭಗಳಲ್ಲಿ ನೋಡಿರುತ್ತೇವೆ ಮತ್ತು ಇದೇ ವಿಷಯವಾಗಿ ಜಗಳಗಳು (Fighting) ನಡೆಯುತ್ತವೆ. ಇಲ್ಲಿಯೂ ಸಹ ಅಂತಹದೇ ಒಂದು ಘಟನೆ ನಡೆದಿದೆ ನೋಡಿ.

ಸಿಟ್ಟಿನಲ್ಲಿ ದುಬಾರಿ ಕಾರಿಗೆ ಬೆಂಕಿ ಇಟ್ಟ ವ್ಯಕ್ತಿ 
ಮನೆಯಲ್ಲಿ ಕೆಲಸ ಮಾಡಿಸಿಕೊಂಡು ದುಡ್ಡು ಕೊಡದೆ ಸತಾಯಿಸುತ್ತಿದ್ದಾರೆ ಅಂತ ಹೇಳಿ ಕೆಲಸ ಮಾಡಿದ ವ್ಯಕ್ತಿ ಆ ಮನೆಯ ಮಾಲೀಕನ ಕೋಟಿ ರೂಪಾಯಿಯ ಕಾರಿಗೆ ಬೆಂಕಿ ಹಚ್ಚಿದ್ದಾನೆ. ನೋಯ್ಡಾದ ಬಂಗಲೆಯೊಂದರ ಹೊರಗೆ ನಿಲ್ಲಿಸಿದಂತಹ ಕೋಟಿ ಮೌಲ್ಯದ ಮರ್ಸಿಡಿಸ್ ಕಾರಿಗೆ ಬೆಂಕಿ ಹಚ್ಚಿದ್ದಕ್ಕಾಗಿ ಆ ಗಾರೆ ಕೆಲಸಗಾರನನ್ನು ಪೊಲೀಸರು ಕೂಡಲೇ ಬಂಧಿಸಿದ್ದಾರೆ. ನೋಯ್ಡಾದ ಸೆಕ್ಟರ್ 45 ರಲ್ಲಿ ಈ ಘಟನೆ ನಡೆದಿದ್ದು, ಮನೆಯ ಮಾಲೀಕರು ಅಳವಡಿಸಿದ ಸಿಸಿಟಿವಿಯ ಕ್ಯಾಮೆರಾದಲ್ಲಿ ಈ ಘಟನೆಯು ಸೆರೆಯಾಗಿದೆ.

ಕೆಲಸಗಾರ ಸಿಟ್ಟಾಗಿದ್ದು ಏಕೆ?
ಮರ್ಸಿಡಿಸ್ ಕಾರಿನ ಮಾಲೀಕ ತನ್ನ ಮನೆಯಲ್ಲಿ ಟೈಲ್ಸ್ ಅಳವಡಿಸಿದ ನಂತರ ತನಗೆ ಇನ್ನೂ ಬಾಕಿ ಇರುವಂತಹ 2 ಲಕ್ಷ ರೂಪಾಯಿಯನ್ನು ಇನ್ನೂ ಕೊಟ್ಟಿಲ್ಲ ಅಂತ ಗಾರೆ ಕೆಲಸಗಾರನಾದ ರಣವೀರ್ ಆರೋಪಿಸಿದ್ದಾರೆ.

ಇದನ್ನೂ ಓದಿ: Weird Laws: ಈ ದೇಶದಲ್ಲಿ ಹೆಂಡತಿ ಬರ್ತ್‌ ಡೇ ಮರೆಯುವಂತಿಲ್ಲ; ಮಹಿಳೆಯರು, ಪುರುಷರ ಒಳ ಉಡುಪು ಒಟ್ಟಿಗೆ ಒಣಗಿಸುವಂತಿಲ್ಲ!

ಗಾರೆ ಕೆಲಸಗಾರ ಅರೆಸ್ಟ್
ಆದಾಗ್ಯೂ, ಮನೆಯ ಮಾಲೀಕ ಈ ಗಾರೆ ಕೆಲಸಗಾರನ ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದಾರೆ. ಮರ್ಸಿಡಿಸ್ ಮಾಲೀಕ ನೀಡಿದ ದೂರಿನ ಆಧಾರದ ಮೇಲೆ ರಣವೀರ್ ನನ್ನು ಈಗಾಗಲೇ ಬಂಧಿಸಲಾಗಿದೆ ಎಂದು ನೋಯ್ಡಾ ಪೊಲೀಸರು ತಿಳಿಸಿದ್ದಾರೆ. ವಿಡಿಯೋದಲ್ಲಿ ರಣವೀರ್ ತನ್ನ ಮುಖವನ್ನು ಯಾರು ನೋಡಬಾರದು ಅಂತ ತಲೆಗೆ ಹೆಲ್ಮೆಟ್ ಧರಿಸಿ ಅಲ್ಲೇ ಒಂದು ಬೈಕ್ ಪಕ್ಕದಲ್ಲಿ ನಿಂತಿರುವುದನ್ನು ನೋಡಬಹುದು. ಅವನು ಆ ಪ್ರದೇಶದಲ್ಲಿದ್ದ ಸುತ್ತಮುತ್ತಲಿನ ಜನರು ಮನೆಯ ಒಳಗೆ ಹೋಗುವುದಕ್ಕೆ ಸ್ವಲ್ಪ ಸಮಯ ಕಾದು, ನಂತರ ಕಾರಿನ ಕಡೆಗೆ ಹೋಗಿ ಈ ಕೃತ್ಯ ಎಸೆಗಿರುವುದನ್ನು ನಾವು ಈ ವಿಡಿಯೋದಲ್ಲಿ ನೋಡಬಹುದಾಗಿದೆ.

[embed]https://youtu.be/wJfnTC3Qp_M[/embed]

ಪೊಲೀಸರ ಪ್ರಕಾರ, ಈ ಘಟನೆಯು ಭಾನುವಾರ ದಿನದಂದು ನಡೆದಿದೆ. ಆ ಪ್ರದೇಶದಲ್ಲಿದ್ದ ಕೆಲವರು ಕೂಡಲೇ ಆ ಕಾರಿನ ಮಾಲೀಕರನ್ನು ಎಚ್ಚರಿಸಿದರು, ಆದರೆ ಅಷ್ಟೊತ್ತಿಗೆ ಆ ಕಾರಿಗೆ ಗಮನಾರ್ಹ ಹಾನಿ ಸಂಭವಿಸಿತ್ತು. ಈ ಜಗಳ ಶುರುವಾಗಿದ್ದು 2019 ಮತ್ತು 2020 ರಲ್ಲಿ. ರಣವೀರ್ ನೋಯ್ಡಾದ ಮನೆಯೊಳಗೆ ಕೆಲವು ಕೆಲಸಗಳನ್ನು ಮಾಡಿದ್ದನು. ಅಂದಿನಿಂದ ಹಣ ಬಾಕಿ ಉಳಿದಿದೆ ಎಂದು ರಣವೀರ್ ಆರೋಪಿಸುತ್ತ ಬಂದಿದ್ದಾನೆನ್ನಲಾಗಿದೆ.

ಈ ಬಗ್ಗೆ ಆಯುಷ್ ಚೌಹಾಣ್ ಏನು ಹೇಳಿದ್ದಾರೆ
"ಕಳೆದ 10-12 ವರ್ಷಗಳಿಂದ ರಣವೀರ್ ನನ್ನು ನಾವು ಬಲ್ಲೆವು, ಅವನು ನಮ್ಮ ಕುಟುಂಬದ ಸದಸ್ಯನಂತೆ ಇದ್ದ. ಕೋವಿಡ್-19 ಲಾಕ್ಡೌನ್ ಸಮಯದಲ್ಲಿ ಅವನು ಮನೆಗೆ ಹೋದಾಗ ನಾವು ಅವನ ಎಲ್ಲಾ ಬಾಕಿಗಳನ್ನು ಪಾವತಿಸಿದ್ದೇವೆ. ನಾವು ಯಾವಾಗಲೂ ಕೆಲಸ ಮುಗಿದ ದಿನದಂದೆ ಹಣವನ್ನು ಪಾವತಿಸುತ್ತೇವೆ. 2 ಲಕ್ಷ ರೂಪಾಯಿ ಬಾಕಿ ಉಳಿದಿದೆ ಎಂಬ ಅವನ ಹೇಳಿಕೆ ಹಾಸ್ಯಾಸ್ಪದವಾಗಿದೆ” ಎಂದು ಕುಟುಂಬದ ಸದಸ್ಯರಲ್ಲಿ ಒಬ್ಬರಾದ ಆಯುಷ್ ಚೌಹಾಣ್ ಸುದ್ದಿ ಮಾಧ್ಯಮಕ್ಕೆ ತಿಳಿಸಿದರು.

ಇದನ್ನೂ ಓದಿ: Ladies Fight Video: ಟೋಲ್‌ನಲ್ಲಿ ಮಹಿಳೆಯರ ಡಿಶ್ಯುಂ ಡಿಶ್ಯುಂ! ಕೆರಳಿದ ನಾರಿಯರ ಜಡೆಜಗಳದಿಂದ ಟ್ರಾಫಿಕ್ ಜಾಮ್!

"ನಮ್ಮ ಕುಟುಂಬದಲ್ಲಿ ಮದುವೆ ಇತ್ತು ಮತ್ತು ಕೋವಿಡ್-19 ಸಮಯದಲ್ಲಿ ರಣವೀರ್ ತನ್ನ ಮನೆಗೆ ಹೋಗಿದ್ದ. ಆದ್ದರಿಂದ, ನಾವು ಬೇರೆ ಕೆಲಸಗಾರರನ್ನು ನೇಮಿಸಿಕೊಂಡೆವು. ಇದು ರಣವೀರ್ ನನ್ನು ಕೆರಳಿಸಿತು ಮತ್ತು ಅವನು ನಮ್ಮ ಮನೆಯಲ್ಲಿರುವ ಹೊಸ ಕೆಲಸಗಾರನನ್ನು ಬೆದರಿಸಿದ್ದನಂತೆ. ಆದರೆ ಅವನ ನಿಜವಾದ ಉದ್ದೇಶ ನಮಗೆ ತಿಳಿದಿರಲಿಲ್ಲ" ಎಂದು ಚೌಹಾಣ್ ಹೇಳಿದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Published by:Ashwini Prabhu
First published: