Shocking News: ಬೀದಿ ನಾಯಿಯನ್ನೂ ಬಿಡೋದಿಲ್ಲ ಕಾಮುಕರು! ಶ್ವಾನದ ಮೇಲೂ ರೇಪ್ ನಡೆದಿದ್ದು ಎಲ್ಲಿ ಗೊತ್ತಾ?

ಪ್ರಾಣಿಗಳಿಗೂ ನಮ್ಮಂತೆ ಬದುಕುವ ಹಕ್ಕಿದೆ. ಅದರ ಮೇಲೆ ನಡೆಯುವ ಯಾವುದೇ ದೌರ್ಜನ್ಯ ಶಿಕ್ಷಾರ್ಹ ಅಪರಾಧ. ಇಲ್ಲಿ ಈ ಕಾಮುಕ ಬೀದಿ ನಾಯಿಗಳ ಮೇಲೆ ತನ್ನ ವಿಕೃತಿ ತೋರಿದ್ದಾನೆ. ಈ ಮೂಲಕ ಇಡೀ ಮಾನವ ಕುಲವೇ ತಲೆ ತಗ್ಗುವಂತೆ ಮಾಡಿದ್ದಾನೆ. ಹಾಗಿದ್ರೆ ಆ ಪಾಪಿ ಯಾರು ಗೊತ್ತಾ?

ಅಂತರ್ಜಾಲ ಚಿತ್ರ

ಅಂತರ್ಜಾಲ ಚಿತ್ರ

  • Share this:
ಹೈದರಾಬಾದ್: ಕಾಲ ಕೆಟ್ಟು ಹೋಯ್ತು ಅಂತ ಇದಕ್ಕೆ ಹೇಳೋದು. ಜಗತ್ತು ಆಧುನಿಕವಾದಂತೆಲ್ಲ (Modernity) ಮನುಷ್ಯ ಬದಲಾಗುತ್ತಲೇ (Change) ಹೋಗುತ್ತಿದ್ದಾನೆ. ಪ್ರತಿಕ್ಷಣ ತನ್ನಲ್ಲಿರುವ ಮಾನವೀಯತೆ, ಮನುಷ್ಯತ್ವದ ಗುಣವನ್ನು ಕಳೆದುಕೊಳ್ಳುತ್ತಲೇ ಬೆಳೆಯುತ್ತಿದ್ದಾನೆ. ಪ್ರತಿನಿತ್ಯ ದೇಶ, ವಿದೇಶಗಳಲ್ಲಿ ನಡೆಯುತ್ತಿರುವ ಅಪರಾಧ (Crime) ಸುದ್ದಿಗಳನ್ನು (News) ನೋಡಿದರೆ, ಓದಿದರೆ ಇದು ಸ್ಫಷ್ಟವಾಗುತ್ತದೆ. ಅಪರಾಧಕ್ಕೆ ಒಳಗಾಗಬೇಕು ಅಂದರೆ ಮನೆ ಹೊರಗೆ ಹೋಗಬೇಕಿಲ್ಲ, ಮನೆ ಒಳಗೆಯೇ ಅಪಾಯ ಧುತ್ತನೆ ಎದುರಾಗುತ್ತದೆ. ಅಪರಾಧ ಎಸಗಲು ಬರೀ ಮನುಷ್ಯನೇ ಆಗಬೇಕು ಅಂತೇನಿಲ್ಲ, ಪ್ರಾಣಿಗಳ (Animals) ಮೇಲೆ ಮನುಷ್ಯ ರಾಕ್ಷಸೀ ಕೃತ್ಯ ನಡೆಸಿ ಬಿಡುತ್ತಾನೆ. ಇದಕ್ಕೊಂದು ಉದಾಹರಣೆ ಎನ್ನುವಂತೆ ಹೈದರಾಬಾದ್‌ನಲ್ಲೊಂದು (Hyderabad) ಘಟನೆ ನಡೆದಿದೆ. ಅದನ್ನು ತಿಳಿದರೆ ನೀವು ಆತನ ಮುಖಕ್ಕೆ ಛೀ, ಥೂ ಅಂತ ಉಗಿಯುತ್ತೀರಿ, ಮನುಷ್ಯ ಕುಲದ ಬಗ್ಗೆಯೇ ಅಸಹ್ಯ ಪಟ್ಟುಕೊಳ್ಳುತ್ತೀರಿ. ಹಾಗಿದ್ರೆ ಅಲ್ಲಿ ನಡೆದ್ದಾದರೂ ಏನು ಅಂತೀರಾ? ತಿಳಿದುಕೊಳ್ಳಲು ಮುಂದೆ ಓದಿ…

ಬೀದಿ ನಾಯಿಯನ್ನೂ ಬಿಡಲಿಲ್ಲ ಕಾಮುಕ

ಇಂಥ ಘಟನೆಗಳು ಕೆಲವೊಮ್ಮೆ ವರದಿಯಾಗಿವೆ. ಈಗ ತೆಲಂಗಾಣ ರಾಜ್ಯದ ಹೈದರಾಬಾದ್‌ನಲ್ಲಿಯೂ ಇಂಥದ್ದೇ ಅಮಾನವೀಯ ಕೃತ್ಯ ನಡೆದಿದೆ. ಇಲ್ಲಿ 58 ವರ್ಷದ ವ್ಯಕ್ತಿಯೊಬ್ಬ ಬೀದಿ ನಾಯಿಗಳ ಮೇಲೆ ಅತ್ಯಾಚಾರ ನಡೆಸಿದ್ದಾನೆ. ಈ ಪಾಪಿಯ ಪಾಪಕೃತ್ಯ ರಸ್ತೆಯಲ್ಲಿ ಅಳವಡಿಸಲಾಗಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ ಅಂತ ಸ್ಥಳೀಯ ಪತ್ರಿಕೆಗಳು ವರದಿ ಮಾಡಿವೆ.

ಘಟನೆ ನಡೆದಿದ್ದು ಎಲ್ಲಿ?

ಹೈದರಾಬಾದ್ ಸಮೀಪದ ನಲ್ಲಗುಂಟಾ ಎಂಬಲ್ಲಿ ಕೃತ್ಯ ನಡೆದಿದೆ. ಇಲ್ಲಿನ ನರಸಿಂಹಲು ಬಸ್ತಿ ಎಂಬಲ್ಲಿನ ರಸ್ತೆಯಲ್ಲಿ ಬೀದಿ ನಾಯಿಯ ಮೇಲೆ ಅಟ್ಯಾಕ್ ಮಾಡುವ ಆ ವ್ಯಕ್ತಿ, ಅದರ ಮೇಲೆ ಅತ್ಯಾಚಾರ ನಡೆಸಿದ್ದಾನೆ. ಸಿಸಿಟಿವಿಯಲ್ಲಿ ಈ ಎಲ್ಲಾ ಘಟನೆ ರೆಕಾರ್ಡ್ ಆಗಿದೆ.

ಇದನ್ನೂ ಓದಿ: Cyber Crime: ಅವಳು ಬೇಕಾ, ಇವಳು ಬೇಕಾ? ಹೀಗಂತ ಫೋಟೋ ಜೊತೆ ರೇಟ್ ಹಾಕ್ತಿದ್ದ ವಿಕೃತ ಯುವಕ!

ಈ ಕಾಮುಕ ಯಾರು ಗೊತ್ತಾ?

ನಲ್ಲಗುಂಟಾ ಪ್ರದೇಶದಲ್ಲಿ ಈ ವ್ಯಕ್ತಿ ವಾಸಿಸುತ್ತಾನೆ ಎನ್ನಲಾಗಿದೆ. ಆತನ ಹೆಸರು ಮಲ್ಲೇಶ್ ಅಂತ ಸ್ಥಳೀಯರು ಹೇಳುತ್ತಿದ್ದಾರೆ. ಆತನ ಪತ್ನಿ ಕೆಲಸಕ್ಕೆ ಹೋಗುತ್ತಿದ್ದು, ಆತ ಅನಾರೋಗ್ಯದಿಂದ ಮನೆಯಲ್ಲೇ ಇರುತ್ತಿದ್ದ ಎನ್ನಲಾಗಿದೆ. ಕಳೆದ ಮೂರು ದಿನಗಳ ಹಿಂದೆ ಈ ಕೃತ್ಯ ನಡೆದಿದೆ ಎನ್ನಲಾಗಿದೆ.  ಹೆಂಡತಿ ಕೆಲಸಕ್ಕೆ ಹೋಗಿದ್ದ ಸಮಯದಲ್ಲಿ ಬೀದಿಯಲ್ಲಿ ಬಂದು, ಈ ಕೃತ್ಯ ಎಸಗಿದ್ದಾನೆ.

ಕ್ರೂರ ಘಟನೆಗೆ ಪ್ರಾಣಿ ಪ್ರೇಮಿಗಳ ಆಕ್ರೋಶ

ಕಾಮುಕನ ಕೃತ್ಯವನ್ನು ಪ್ರಾಣಿ ಪ್ರೇಮಿಗಳು ಖುದ್ದು ಸಿಸಿಟಿವಿಯಲ್ಲಿನೋಡಿದ್ದಾರೆ,. ಬಳಿಕ ಆಘಾತಗೊಂಡು ಪೊಲೀಸರಿಗೆ ಈ ವಿಚಾರ ತಿಳಿಸಿದ್ದಾರೆ. ಈ ಕಾಮುಕ ವ್ಯಕ್ತಿಯನ್ನು ಈ ಕೂಡಲೇ ಬಂಧಿಸಬೇಕು ಅಂತ ಆಗ್ರಹಿಸಿದ್ದಾರೆ. ಅಲ್ಲದೇ ಆತನಿಗೆ ಉಗ್ರ ಶಿಕ್ಷೆ ನೀಡಿ, ಇಂಥವರಿಗೆ ಎಚ್ಚರಿಕೆಯ ಪಾಠ ಹೇಳಬೇಕು. ಇದು ಮುಂದೆ ಅಪರಾಧ ಮಾಡುವವಿರಗೆ ಎಚ್ಚರಿಕೆಯ ಗಂಟೆ ಆಗಬೇಕು ಅಂತ ಆಗ್ರಹಿಸಿದ್ದಾರೆ.

ಪ್ರಾಣಿಗಳನ್ನೇ ಕಾಮುಕರು ಬಿಡುತ್ತಿಲ್ಲ. ಇನ್ನು ಮನುಷ್ಯರ ಕಥೆಯೇನು? ಅದರಲ್ಲೂ ಒಂಟಿ ಹೆಣ್ಣು ಮಕ್ಕಳು, ಮಹಿಳೆಯರ ಪರಿಸ್ಥಿತಿ ಏನಾಗಬೇಕು ಅಂತ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Fraud Case: ಪರಿಚಿತನ ಸೋಗಲ್ಲಿ ಮೋಸ ಮಾಡಿದ ಖದೀಮ, ಹೋಟೆಲ್ ಹುಡುಗನ ಚಿನ್ನ, ಹಣ ಪಡೆದು ಎಸ್ಕೇಪ್

ಶಿಕ್ಷೆ ನೀಡುವ ಭರವಸೆ ನೀಡಿದ ಪೊಲೀಸರು

ಅಪರಾಧ ಮಾಡಿದರೆ ತಪ್ಪಿಸಿಕೊಳ್ಳಳು ಸಾಧ್ಯವೇ ಇಲ್ಲ ಅಂತ ಸ್ಥಳೀಯ ಪೊಲೀಸರು ಹೇಳಿದ್ದಾರೆ. ಸದ್ಯಕ್ಕೆ ಸಿಸಿಟಿವಿಯಲ್ಲಿ ಕಾಮುಕನ ಕೃತ್ಯ ಸೆರೆಯಾಗಿದೆ. ಅದರ ಆಧಾರದ ಮೇಲೆ ಪ್ರಾಣಿ ಪ್ರಿಯರು ದೂರು ನೀಡಿದ್ದಾರೆ.

ಈ ದೂರನ್ನು ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿ ವಿರುದ್ಧ ಅಸ್ವಾಭಾವಿಕ ಲೈಂಗಿಕ ಕ್ರಿಯೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಜೊತೆಗೆ ಪ್ರಾಣಿಗಳ ಮೇಲಿನ ದೌರ್ಜನ್ಯ ವಿರೋಧಿ ಕಾಯ್ದೆ ಅಡಿಯಲ್ಲಿಯೂ ದೂರು ದಾಖಲಿಸಿಕೊಂಡಿದ್ದಾರೆ.
Published by:Annappa Achari
First published: