Kite Manjha: ಗಾಳಿಪಟ ಮಾಂಜಾದಿಂದ ಪ್ರಾಣಕ್ಕೆ ಕುತ್ತು; ಬೈಕ್ ಸವಾರ ಜಸ್ಟ್ ಮಿಸ್, ಕುತ್ತಿಗೆ-ಬೆರಳಿಗೆ ಗಾಯ

ಇದೇ ರೀತಿಯ ದುರ್ಘಟನೆ ಬೆಂಗಳೂರಿನಲ್ಲೂ ಸಂಭವಿಸಿತ್ತು. ಗಾಳಿಪಟದ ಮಾಂಜಾ ದಾರಕ್ಕೆ ಸಿಲುಕಿ ಬೈಕ್ ಸವಾರನ ಕುತ್ತಿಗೆ ಹಾಗೂ ಕೈ ಬೆರಳುಗಳು ಕಟ್ ಆಗಿತ್ತು. ಅದೃಷ್ಟವಶಾತ್ ಮಲ್ಲಿಕ್ ಅರ್ಜುನ್ ಎಂಬುವವರು ಪ್ರಾಣಾಪಾಯದಿಂದ ಪಾರಾಗಿದ್ದರು.

ಗಾಳಿಪಟದ ದಾರ

ಗಾಳಿಪಟದ ದಾರ

 • Share this:
  ರಸ್ತೆಯಲ್ಲಿ(Road) ಎಷ್ಟೇ ನಿಗಾ ಇಟ್ಟು ಗಾಡಿ ಓಡಿಸುತ್ತಿದ್ದರೂ, ಒಂದಲ್ಲ ಒಂದು ಅಪಘಾತಗಳು(Accidents) ನಡೆಯುತ್ತಲೇ ಇರುತ್ತವೆ. ವಾಹನ ಸವಾರರಿಂದಲೂ ಅಥವಾ ರಸ್ತೆಯಲ್ಲಿ ನಡೆದುಕೊಂಡು ಹೋಗುವವರಿಂದಲೂ ಎಡವಟ್ಟುಗಳು ಆಗುತ್ತಲೇ ಇರುತ್ತವೆ. ಕೆಲವೊಮ್ಮೆ ಕಣ್ಣಲ್ಲಿ ಕಣ್ಣಿಟ್ಟು ವಾಹನ ಚಲಾಯಿಸುತ್ತಿದ್ದರೂ, ತಮಗೆ ಅರಿವಿಲ್ಲದೆ ಆಕಸ್ಮಿಕವಾಗಿ ಆಕ್ಸಿಡೆಂಟ್ ಗಳು ನಡೆದುಹೋಗುತ್ತದೆ. ಇದರ ಮಧ್ಯೆ ಗಾಳಿಪಟದ ಮಾಂಜಾ( KiteManjha) ದಾರಗಳು ಬೈಕ್ ಸವಾರರಿಗೆ ದುಸ್ವಪ್ನವಾಗಿ ಕಾಡುತ್ತಿದೆ. ಗಾಳಿಪಟಕ್ಕೂ, ಈ ಸ್ಟೋರಿಗೂ ಏನು ಸಂಬಂಧ ಅಂತ ಯೋಚಿಸ್ತಿದ್ದೀರಾ? ಸಂಬಂಧ ಖಂಡಿತವಾಗಲೂ ಇದೆ. ಗಾಳಿಪಟ ಆಕಾಶದಲ್ಲಿ ಹಾರುವುದನ್ನು ನೋಡುತ್ತಿದ್ದರೆ ಒಂಥರಾ ಖುಷಿ..ಆದರೆ ಇದೇ ಗಾಳಿಪಟ ಮನುಷ್ಯರ ಪ್ರಾಣ ತೆಗೆಯಬಹುದು ಅನ್ನೋದು ನಂಬಲು ಅಸಾಧ್ಯ. ಹೌದು, ಬೈಕ್ ಸವಾರನೊಬ್ಬನಿಗೆ ಗಾಳಿಪಟದ ಮಾಂಜಾ ದಾರ ಸಿಲುಕಿ, ಕುತ್ತಿಗೆ, ಹಾಗೂ ಕೈ ಬೆರಳಿಗೆ ಗಾಯವಾಗಿದೆ.

  ಬೋಪೋಡಿಯ ಪುಣೆ - ಮುಂಬೈ ಹೈವ ಬಳಿಯ ಸಿಎಂಇ ಗೇಟ್ ಬಳಿ ಈ ದುರ್ಘಟನೆ ಸಂಭವಿಸಿದೆ. 32ವರ್ಷದ ಆಶಿಶ್ ಸುರೇಶ್ ಪವಾರ್ ಎಂಬಾತ ತನ್ನ ಕೆಲಸ ಮುಗಿಸಿಕೊಂಡು ಈ ರಸ್ತೆಯಲ್ಲಿ ಸಂಜೆ 5.30ರ ವೇಳೆಗೆ ಮನೆ ಕಡೆ ಹೊರಟಿದ್ದ. ಪವಾರ್ ಅತಿವೇಗವಾಗಿ ಏನು ಗಾಡಿ ಓಡಿಸುತ್ತಿರಲಿಲ್ಲ. ಇದೇ ವೇಳೆ ಏಕಾಏಕಿ ಗಾಳಿಪಟದ ಮಾಂಜಾ ದಾರ ಪವಾರ್ ಕುತ್ತಿಗೆಗೆ ಬಂದು ಸಿಕ್ಕಿಹಾಕಿಕೊಂಡಿದೆ. ಗಾಡಿಯಿಂದ ಕೆಳಗೆ ಬಿದ್ದ ಪವಾರ್, ಕುತ್ತಿಗೆಗೆ ಸಿಲುಕಿದ್ದ ಮಂಜಾ ದಾರ ಬಿಡಿಸಲು ಹೋಗಿ ತನ್ನ ಕೈ ಬೆರಳಿಗೂ ಗಾಯವಾಗಿದೆ. ಕೂಡಲೇ ಆತನ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ.

  ಬೋಪೋಡಿಯ ಸಾಲ್ವೆ ನಗರದ ನಿವಾಸಿಯಾಗಿದ್ದ ಪವಾರ್, ಯಾರೋ ಮಾಡಿದ ತಪ್ಪಿಗೆ, ಆತ ಶಿಕ್ಷೆ ಅನುಭವಿಸುತ್ತಿದ್ದಾನೆ. ಯಾರೋ ತಮ್ಮ ಖುಷಿಗಾಗಿ ಹಾರಿಸಿದ ಗಾಳಿಪಟದಿಂದ, ಈತನ ಪ್ರಾಣಕ್ಕೆ ಕುತ್ತು ತಂದಿದೆ. ತನ್ನ ಪಾಡಿಗೆ ಕೆಲಸ ಮುಗಿಸಿಕೊಂಡು ಮನೆಯತ್ತ ಹೊರಟಿದ್ದ ಪವಾರ್, ಕುತ್ತಿಗೆ ಹಾಗೂ ಕೈಬೆರಳುಗಳಿಗೆ ತೀವ್ರ ಗಾಯಗಳಾಗಿವೆ. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಪವಾರ್ ಪೊಲೀಸ್ ಠಾಣೆಗೆ ದೂರು ಕೂಡ ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಈ ರಸ್ತೆಯ ಸುತ್ತಮುತ್ತ ಗಾಳಿಪಟ ಹಾರಿಸುವವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

  ಇದನ್ನೂ ಓದಿ:Citizenship: ಮಗು ಆಕಾಶದಲ್ಲಿ ಹುಟ್ಟಿದ್ರೆ ಯಾವ ದೇಶದ ಪ್ರಜೆ ಅಂತ ಹೇಗೆ ಡಿಸೈಡ್ ಮಾಡೋದು? ಇಲ್ಲಿದೆ ಉತ್ತರ

  ಇದೇ ರೀತಿಯ ದುರ್ಘಟನೆ ಬೆಂಗಳೂರಿನಲ್ಲೂ ಸಂಭವಿಸಿತ್ತು. ಗಾಳಿಪಟದ ಮಾಂಜಾ ದಾರಕ್ಕೆ ಸಿಲುಕಿ ಬೈಕ್ ಸವಾರನ ಕುತ್ತಿಗೆ ಹಾಗೂ ಕೈ ಬೆರಳುಗಳು ಕಟ್ ಆಗಿತ್ತು. ಅದೃಷ್ಟವಶಾತ್ ಮಲ್ಲಿಕ್ ಅರ್ಜುನ್ ಎಂಬುವವರು ಪ್ರಾಣಾಪಾಯದಿಂದ ಪಾರಾಗಿದ್ದರು. ಅಂದು ಸಾವು ಗೆದ್ದು ಬಂದಿದ್ದ ಮಲ್ಲಿಕ್ ಅರ್ಜುನ್ ಗಾಳಿಪಟ ಹಾರಾಟ ನಿಷೇಧಿಸುವಂತೆ ಮನವಿ ಮಾಡಿಕೊಂಡಿದ್ದರು.

  ಗಾಳಿಪಟ ಹಾರಿಸುವುದು ಯಾಕೆ?

  ಸಂಕ್ರಾಂತಿ ಸಮಯದಲ್ಲಿ ಗಾಳಿಪಟ ಹಾರಿಸುವುದು ರೂಢಿಯಾಗಿದೆ. ಈ ದಿನದಂದು ಗಾಳಿಪಟ ಹಾರಿಸುವುದು ಅನಾದಿಕಾಲದಿಂದಲೂ ನಡೆದು ಬಂದ ಸಂಪ್ರದಾಯವಾಗಿದೆ. ಆದರೆ ಇದರ ಹಿಂದೆ ವೈಜ್ಞಾನಿಕ ಕಾರಣವೂ ಇದೆ. ಬಿಸಿಲಿನಲ್ಲಿ ಗಾಳಿಪಟ ಹರಿಸುವುದರಿಂದ ದೇಹಕ್ಕೆ ವಿಟಮಿನ್ ಡಿ ಶಕ್ತಿ ಸಿಗುತ್ತದೆ. ಅಷ್ಟೇ ಅಲ್ಲದೆ ಚಳಿಗಾಲದಲ್ಲಿ ಕಾಡುವ ಅನೇಕ ಚರ್ಮ ಸಮಸ್ಯೆಗಳು ದೂರವಾಗುತ್ತೆ. ಆದರೆ ಇದೇ ಗಾಳಿಪಟ ಮಾರಣಾಂತಿಕ ಅನ್ನುವುದನ್ನ ಮರೆಯುವಂತಿಲ್ಲ. ಯಾಕಂದ್ರೆ ಗಾಳಿಪಟ ಹಾರಿಸಲು ಬಳಸುವ ಮಾಂಜಾ ದಾರ ಬಲು ಅಪಾಯಕಾರಿ.

  ಮಾಂಜಾ ದಾರ ತಯಾರಿಸುವುದು ಹೇಗೆ?

  ಮಾಂಜಾ ದಾರ ತಯಾರಿಸುವುದೂ ಒಂದು ಕಲೆ. ಬಲ್ಪ್, ಟ್ಯೂಬ್ ಲೈಟ್ ಮುಂತಾದ ಗಾಜಿನ ತುಂಡುಗಳನ್ನು ಪುಡಿಪುಡಿ ಮಾಡಿ, ಅದಕ್ಕೆ ರಬ್ಬರ್ ಹಾಗೂ ಕೆಮಿಕಲ್ಸ್ ಗಳನ್ನು ಹಾಕಿ ಮಿಕ್ಸ್ ಮಾಡಲಾಗುತ್ತದೆ. ಬಳಿಕ ಕುದಿಯುವ ನೀರಿಗೆ ಎರಡನ್ನು ಹಾಕಲಾಗುತ್ತೆ. ಅದು ಗಂಜಿಯ ರೀತಿಯಾದಾಗ ಅದಕ್ಕೆ ಬಣ್ಣ ಸೇರಿಸಲಾಗುತ್ತದೆ. ಬಳಿಕ ಇದನ್ನು ಹತ್ತಿರಕ್ಕೆ ಸೇರಿಸಿ ಒಣಗಿಸುತ್ತಾರೆ. ಮಾಂಜಾ ದಾರ ಕೈಗಳನ್ನ ಕಟ್ ಮಾಡುವಷ್ಟು ಚೂಪಾಗಿರುತ್ತವೆ. ಇದೇ ಮಾಂಜಾ ದಾರ ಪಕ್ಷಿಗಳ ರೆಕ್ಕಿಗೆ ಸಿಲುಕಿ, ಅದೆಷ್ಟೋ ಪಕ್ಷಿಗಳು ಪ್ರಾಣ ಕಳೆದುಕೊಂಡಿವೆ.

  ವರದಿ - ವಾಸುದೇವ್. ಎಂ
  Published by:Latha CG
  First published: