Shocking News: ಹೆಂಡತಿ-ಮಗುವನ್ನು ಕೊಂದು, ವಾಟ್ಸಾಪ್‌ನಲ್ಲಿ ಫೋಟೋ ಶೇರ್ ಮಾಡಿದ ಪಾಪಿ! ವಿಕೃತ ಕೃತ್ಯಕ್ಕೆ ಕಾರಣವೇನು ಗೊತ್ತಾ?

ರಾಮ ನವಮಿ ದಿನವೇ ಕಟ್ಟಿಕೊಂಡ ಹೆಂಡತಿ, ಮಗುವಿನ ಕೊಲೆ ಮಾಡಿರುವ ಪಾಪಿ ಗಂಡ ಅವರ ಫೋಟೋ ವಾಟ್ಸಾಪ್ ಗ್ರೂಪ್ನಲ್ಲಿ ಶೇರ್ ಮಾಡಿರುವ ಘಟನೆ ನಡೆದಿದೆ. ಈ ವಿಕೃತ ವ್ಯಕ್ತಿ ಮಾಡಿದ ಪಾಪದ ಕೆಲಸ ನೋಡಿ ಸಂಬಂಧಿಕರು, ಊರಿನ ಜನರೆಲ್ಲ ಬೆಚ್ಚಿ ಬಿದ್ದಿದ್ದಾರೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ಮಹಾರಾಷ್ಟ್ರ: ಮೊನ್ನೆ ಶ್ರೀ ರಾಮ ನವಮಿಯಂದೇ (Sri Rama Navami) ಮಹಾರಾಷ್ಟ್ರದ (Maharashtra) ಅಹಮದ್​ ನಗರದಲ್ಲಿ (Ahmednagar) ಘನಘೋರ ಘಟನೆಯೊಂದು ನಡೆದು ಹೋಗಿದೆ. ಇಲ್ಲಿ ಗಂಡನೊಬ್ಬ (Husband) ತನ್ನ ಹೆಂಡತಿ (Wife) ಹಾಗೂ 5 ವರ್ಷದ ಮಗನನ್ನು (5 Years old Son) ಬರ್ಬರವಾಗಿ ಕೊಂದು (Murder) ಹಾಕಿದ್ದಾನೆ. ಸಾಲದ್ದಕ್ಕೆ ತಾನು ಕೊಲೆ ಮಾಡಿರೋ ಫೋಟೋ (Photo) ತೆಗೆದು, ಅದನ್ನು ವಾಟ್ಸಾಪ್ (WhatsApp) ಮೂಲಕ ತನ್ನ ಸಂಬಂಧಿಕರು (Relatives) ಹಾಗೂ ಹೆಂಡತಿಯ ಸಂಬಂಧಿಕರಿಗೆ ಶೇರ್ (Share) ಮಾಡಿದ್ದಾನೆ. ಈ ವಿಕೃತ ವ್ಯಕ್ತಿ ಮಾಡಿದ ಪಾಪದ ಕೆಲಸ ನೋಡಿ ಸಂಬಂಧಿಕರು, ಊರಿನ ಜನರೆಲ್ಲ ಬೆಚ್ಚಿ ಬಿದ್ದಿದ್ದಾರೆ.

ಶ್ರೀರಾಮ ನವಮಿ ದಿನವೇ ಹೆಂಡತಿ, ಮಗನ ಹತ್ಯೆ

ರಾಮ ನವಮಿ ದಿನವೇ ಕಟ್ಟಿಕೊಂಡ ಹೆಂಡತಿ, ಮಗುವಿನ ಕೊಲೆ ಮಾಡಿರುವ ಪಾಪಿ ಗಂಡ ಅವರ ಫೋಟೋ ವಾಟ್ಸಾಪ್​ ಗ್ರೂಪ್​ನಲ್ಲಿ ಶೇರ್ ಮಾಡಿರುವ ಘಟನೆ ನಡೆದಿದೆ. ಮಹಾರಾಷ್ಟ್ರದ ಅಹಮದ್​ನಗರದ ಶ್ರೀರಾಂಪುರದ ಖೈರಿ ಶಿವಾರದ ವಸ್ತಿ ಎಂಬಲ್ಲಿ ಇಂಥದ್ದೊಂದು ಭರ್ಬರ ಘಟನೆ ನಡೆದಿದೆ. 27 ವರ್ಷದ ಅಕ್ಷರಾ ಹಾಗೂ 5 ವರ್ಷದ ಮಗ ಶಿವತೇಜ್​ ಅವರನ್ನು ಬಲರಾಮ್ ಎಂಬಾತ ಬರ್ಬರವಾಗಿ​ ಕೊಲೆ ಮಾಡಿದ್ದಾನೆ.

ವರದಕ್ಷಿಣೆಗಾಗಿ ನಡೀತಾ ಹೆಂಡತಿ, ಮಗನ ಹತ್ಯೆ?

ಆರೋಪಿ ಬಲರಾಮ್ ಟ್ರಕ್​​ ಚಾಲಕನಾಗಿದ್ದ ಎನ್ನಲಾಗಿದೆ. ಈತನಿಗೆ ಅಕ್ಷರಾ ಜೊತೆ ವಿವಾಹವಾಗಿ, ಮಗ ಶಿವತೇಜ್ ಹುಟ್ಟಿದ್ದ. ಆರೋಪಿ ಬಲರಾಮ್​​, ಆರು ತಿಂಗಳಿಂದಲೂ ವರದಕ್ಷಿಣೆಗಾಗಿ ಹೆಂಡತಿ ಅಕ್ಷರಾಳನ್ನು ಪೀಡಿಸುತ್ತಾ, ನಿತ್ಯ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡುತ್ತಿದ್ದನಂತೆ.

ಇದಕ್ಕೆ ಸಂಬಂಧಿಸಿದಂತೆ ಅಕ್ಷರಾ ಕುಟುಂಬಸ್ಥರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದರು. ಆದರೆ, ಎರಡು ಕುಟುಂಬದ ಮಧ್ಯಸ್ಥಿಕೆಯಿಂದ ಪ್ರಕರಣ ಇತ್ಯರ್ಥಗೊಂಡಿತ್ತು. ಇದರ ಬೆನ್ನಲ್ಲೇ ರಾಮನವಮಿ ದಿನವೇ ಬಲರಾಮ್ ತನ್ನ ಪತ್ನಿ ಹಾಗೂ ಐದು ವರ್ಷದ ಮಗುವಿನ ಕೊಲೆ ಮಾಡಿದ್ದಾನೆ.

ಇದನ್ನೂ ಓದಿ: ಪ್ರೇಯಸಿ ಕೈ ಕೊಟ್ಲು ಅಂತ ಸೇಡಿಗೆ Laptop ಕದಿಯುವ ಚಾಳಿ ಬೆಳಸಿಕೊಂಡ ಭಗ್ನಪ್ರೇಮಿ

 ಪತ್ನಿ, ಮಗನ ಕೊಂದು ಫೋಟೋ ಶೇರ್ ಮಾಡಿದ ಪಾಪಿ

ಬಲರಾಮ್ ಮನೆಯಲ್ಲೇ ಹೆಂಡತಿ ಹಾಗೂ ಮಗನನ್ನು ಬರ್ಬರವಾಗಿ ಸಾಯಿಸಿದ್ದಾನೆ. ಬಳಿಕ ತಾನು ಹತ್ಯೆ ಮಾಡಿರುವ ಹೆಂಡತಿ, ಮಗನ ಮೃತದೇಹದ ಫೋಟೋ ತೆಗೆದಿದ್ದಾನೆ. ಬಳಿಕ ಅದನ್ನು ಸಂಬಂಧಿಕರ ವಾಟ್ಸಾಪ್​ ಗ್ರೂಪ್‌ನಲ್ಲಿ ಶೇರ್ ಮಾಡಿದ್ದಾನೆ. ಇದರ ಬೆನ್ನಲ್ಲೇ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಘಟನಾ ಸ್ಥಳಕ್ಕೆ ತಲುಪಿರುವ ಪೊಲೀಸರು ಆರೋಪಿಯ ಬಂಧನ ಮಾಡಿದ್ದಾರೆ.

ಆರೋಪಿ ವಿರುದ್ಧ ತನಿಖೆ ಕೈಗೊಂಡ ಪೊಲೀಸರು

ಈ ಘಟನೆಯಿಂದ ಸ್ಥಳೀಯ ನಿವಾಸಿಗಳೆಲ್ಲ ಸಂಪೂರ್ಣವಾಗಿ ಬೆಚ್ಚಿ ಬಿದ್ದಿದ್ದಾರೆ. ಮೃತ ಅಕ್ಷರಾ ಕುಟುಂಬಸ್ಥರು ನೀಡಿರುವ ದೂರಿನ ಮೇರೆಗೆ ಪೊಲೀಸ್ ಠಾಣೆಯಲ್ಲಿ ಆರ್ಟಿಕಲ್​ 302, 498ಎ ಅಡಿಯಲ್ಲಿ ದೂರು ದಾಖಲಾಗಿದೆ.

ಉತ್ತರ ಪ್ರದೇಶದಲ್ಲೊಂದು ಅಮಾನವೀಯ ಘಟನೆ

ಅತ್ತ ಉತ್ತರ ಪ್ರದೇಶದಲ್ಲಿ ಮತ್ತೊಂದು ಭಯಾನಕ ಘಟನೆ ನಡೆದಿದೆ.   ವಿದ್ಯುಚ್ಛಕ್ತಿ ಇಲಾಖೆಯಲ್ಲಿ ಗೋಕುಲ್ ಯಾದವ್ ಎಂಬುವರು ಲೈನ್‌ಮನ್ ಆಗಿ ಕೆಲಸ ಮಾಡುತ್ತಿದ್ದರು. ಅವರು ಬೇರೊಂದು ಸ್ಥಳಕ್ಕೆ ವರ್ಗಾವಣೆ ಬಯಸಿ, ತಮ್ಮ ಮೇಲಾಧಿಕಾರಿ ಅಂದರೆ ಜೂನಿಯರ್‌ ಎಂಜಿನಿಯರ್‌ (ಜೆಇ)ಗೆ ಮನವಿ ಸಲ್ಲಿಸಿದ್ದರು. ಆದರೆ ಆತ ಗೋಕುಲ್ ಯಾದವ್ ಹೆಂಡತಿ ಮೇಲೆ ಕಣ್ಣು ಹಾಕಿದ್ದಾನೆ ಎನ್ನಲಾಗಿದೆ.

ಇದನ್ನೂ ಓದಿ: Crime News: ಪತಿ, ಪತ್ನಿ ಮತ್ತು ಕಾಮುಕ ಬಾಸ್! "ನಿನ್ ಹೆಂಡ್ತಿ ಕಳಿಸು" ಎಂದಿದ್ದಕ್ಕೆ ಈತ ಮಾಡಿದ್ದೇನು?

ನಿನಗೆ ನೀನು ಬಯಸಿದ ಸ್ಥಳಕ್ಕೆ ವರ್ಗಾವಣೆ ಮಾಡಿಕೊಡುತ್ತೇನೆ. ಆದರೆ ನಿನ್ನ ಹೆಂಡತಿಯನ್ನು ಒಂದು ದಿನದ ಮಟ್ಟಿಗೆ ನನ್ನ ಜೊತೆ ಹಾಗೂ ನನ್ನ ಸ್ನೇಹಿತರ ಜೊತೆ ಕಳಿಸು ಅಂತ ಹೇಳಿದ್ದಾನೆ. ಬಾಸ್ ಬೇಡಿಕೆಯಿಂದ ನೊಂದ ಗೋಕುಲ್ ಯಾದವ್ ದುಡುಕಿನ ನಿರ್ಧಾರ ಕೈಗೊಂಡಿದ್ದಾನೆ. ಮನೆಗೆ ಬಂದವನೇ  ತನ್ನ ಮೈಮೇಲೆ ಡೀಸೆಲ್‌ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾನೆ.
Published by:Annappa Achari
First published: