Murder for Pizza: ಪಿಜ್ಜಾ ವಿಚಾರಕ್ಕೆ ಮಗುವನ್ನೇ ಹೊಡೆದು ಕೊಂದ ಕ್ರೂರಿ ತಂದೆ

Man killed his son: ವ್ಯಕ್ತಿ ಪಿಜ್ಜಾವನ್ನು ಮತ್ತು ಅದರೊಂದಿಗೆ ಪಾನೀಯವನ್ನು ಆರ್ಡರ್​ ಮಾಡಿದ್ದನು. ಆದರೆ ಪಿಜ್ಜಾ ವಿತರಕನು ತಪ್ಪಾದ ಪಿಜ್ಜಾವನ್ನು ಆತನಿಗೆ ನೀಡಿದ್ದು, ಅದರಲ್ಲಿ ಪಾನೀಯ ಬಾಟಲಿ ಬಂದಿರಲಿಲ್ಲ. ಇದರಿಂದ ಸಿಟ್ಟಿಗೆದ್ದ ಆತ ಹೆಂಡತಿಗೆ ಹೊಡೆಯುತ್ತಾನೆ. ನಂತರ ಮಗುವಿನ ಮೇಲೂ ದರ್ಪ ತೋರಿಸುತ್ತಾನೆ. 

ಪಿಜ್ಜಾ / pizza

ಪಿಜ್ಜಾ / pizza

  • Share this:
    ಪಿಜ್ಜಾ (Pizza) ವಿಚಾರವಾಗಿ ತಂದೆಯೊಬ್ಬ ತನ್ನ ಮಗುವನ್ನು ಕೊಂದ ಘಟನೆಯೊಂದು ಬೆಳಕಿಗೆಬಂದಿದೆ. ಸಿಟ್ಟಿನಿಂದಾಗಿ ತಂದೆ ಈ ರೀತಿಯ ಕೃತ್ಯವೆಸಗಿದ್ದು, ಮುದ್ದಾದ ಮಗು (Baby) ತಂದೆಯ ಹೊಡೆತಕ್ಕೆ ಇಹಲೋಕ ತ್ಯಜಿಸಿದೆ. ಕೊಲೆಗಡುಕ ತಂದೆ ಇದೀಗ ಮಾಡಿದ ತಪ್ಪಿಗೆ ಜೈಲು ಸೇರಿದ್ದಾನೆ.

    ಆಸ್ಟ್ರೇಲಿಯಾದಲ್ಲಿ (Australia) ಈ ಘಟನೆ ನಡೆದಿದ್ದು, ವ್ಯಕ್ತಿ ಪಿಜ್ಜಾವನ್ನು ಮತ್ತು ಅದರೊಂದಿಗೆ ಪಾನೀಯವನ್ನು ಆರ್ಡರ್​ ಮಾಡಿದ್ದನು. ಆದರೆ ಪಿಜ್ಜಾ ವಿತರಕನು ತಪ್ಪಾದ ಪಿಜ್ಜಾವನ್ನು ಆತನಿಗೆ ನೀಡಿದ್ದು, ಅದರಲ್ಲಿ ಪಾನೀಯ ಬಾಟಲಿ ಬಂದಿರಲಿಲ್ಲ. ಇದರಿಂದ ಸಿಟ್ಟಿಗೆದ್ದ ಆತ ಹೆಂಡತಿಗೆ ಹೊಡೆಯುತ್ತಾನೆ. ನಂತರ ಮಗುವಿನ ಮೇಲೂ ದರ್ಪ ತೋರಿಸುತ್ತಾನೆ.

    ಹೆಂಡತಿಯೊಂದಿಗೆ ಜಗಳ

    'ಡೈಲಿ ಸ್ಟಾರ್' ವರದಿಯ ಪ್ರಕಾರ, ವಿಕ್ಟೋರಿಯಾದಲ್ಲಿ ವಾಸಿಸುವ ಇವಾಂಡರ್ ವಿಲ್ಸನ್ ಪಿಜ್ಜಾ ಆರ್ಡರ್ ಮಾಡಿದ್ದಾನೆ. ಪಿಜ್ಜಾ ಬಂದಾಗ ತಪ್ಪಾದ ಪಿಜ್ಜಾ ಡೆಲಿವರಿ ಮಾಡಿದ್ದು, ಅದರಲ್ಲಿ ತಂಪು ಪಾನೀಯ ಬಾಟಲಿ ಇಲ್ಲದಿರುವುದನ್ನು ಕಂಡು ಕೋಪಗೊಂಡಿದ್ದಾನೆ. ಇವಾಂಡರ್​ ತನ್ನ ಕೋಪವನ್ನು ಹೆಂಡತಿ ಚೆಲ್ಸಿಯಾ ಸ್ಮಿತ್ ಬಳಿ ತೋರಿಸಿಕೊಂಡಿದ್ದು, ಆಕೆಗೆ ಸರಿಯಾಗಿ ಹೊಡೆದಿದ್ದಾನೆ. ಮಕ್ಕಳ ಮುಂದೆಯೇ ಆಕೆಯನ್ನು ಎಳೆದಾಡಿಕೊಂಡು ಹೊಡೆದಿದ್ದಾನೆ

     ಮಗುವನ್ನು ಸಿಟ್ಟಿನಿಂದ ಎಸೆದ ತಂದೆ!

    ಇವಾಂಡರ್ ವಿಲ್ಸನ್ ಸರಿಯಾದ ಪಿಜ್ಜಾ ನೀಡಿಲ್ಲವೆಂದು ಹೆಂಡತಿ ಚೆಲ್ಸಿಯಾ ಸ್ಮಿತ್ ಮೇಲೆ ಕೋಪ ತೋರಿಸಿದ್ದಲ್ಲದೆ, ಆಕೆಯ ತಲೆ ಕೂದಲು ಹಿಡಿದುಕೊಂಡು ಎಳೆದಾಡಿದ್ದಾನೆ, ನಂತರ ಮುಖಕ್ಕೆ ಗುದ್ದಿದ್ದಾನೆ. ಇಷ್ಟಕ್ಕೆ ಸುಮ್ಮನಾಗದ ಆತ ತನ್ನ ಆರು ತಿಂಗಳ ಮಗನನ್ನು ಎತ್ತಿ ಬೀಸಾಡಿದ್ದಾನೆ.

    ಅನೇಕ ಬಾರಿ ಮಗುವನ್ನು ಸಿಟ್ಟಿನಿಂದ ಬಿಸಾಡಿದ್ದಾನೆ. ಈ ವೇಳೆ ಮಗು ನೋವಿನಿಂದ ಅಳುತ್ತಿರುತ್ತದೆ. ಆದರೂ ಸುಮ್ಮನಾಗದ ಇವಾಂಡರ್ ವಿಲ್ಸನ್ ಮಗುವಿನ ತಲೆಯನ್ನು ನೆಲಕ್ಕೆ ಬಡಿಯುತ್ತಾನೆ. ಕೊನೆಗೆ ಮಗು ಉಸಿರು ನಿಲ್ಲಿಸುತ್ತದೆ.

    ಇದನ್ನು ಓದಿ: Sexual Harassment: ನಟಿಗೆ ಲೈಂಗಿಕ ಕಿರುಕುಳ ನೀಡಿದ ಯುವಕರ ಗುಂಪು! ಬಟ್ಟೆ ಹರಿದು ವಿಡಿಯೋ ಚಿತ್ರಿಸಿದ ಕಿರಾತಕರು

    ಮಗು ಜಾಕೋಬಿ ತನ್ನ ತಂದೆಯ ಕ್ರೂರ ರೂಪವನ್ನು ನೋಡಿ ಅಳಲು ಪ್ರಾರಂಭಿಸಿತ್ತು. ಅದೇ ವಿಷಯವು ತಂದೆಯನ್ನು ಕೆರಳಿಸಿತು. ಮಗನಿಗೆ ಸುಮ್ಮನಿರಲು ಹೇಳಿದನು, ಆದರೆ ಅವನು ಅಳು ನಿಲ್ಲಿಸದಿದ್ದಾಗ, ಮಗವನ್ನು ಎಳೆದು ಬೀಸಾಡಿ, ತಲೆಯನ್ನು ನೆಲಕ್ಕೆ ಬಡಿಯುತ್ತಾನೆ.

    ಮಗುವಿನ ಸ್ಥಿತಿಯನ್ನು ಕಂಡ ತಾಯಿ ಇವಾಂಡರ್ ವಿಲ್ಸನ್ ತಕ್ಷಣ ಆಸ್ಪತ್ರೆಗೆ ಕರೆದೊಯ್ದರು. ಆದರೆ ಆಸ್ಪತ್ರೆಗೆ ಕರೆದೊಯ್ಯುವ ಮೊದಲೇ ಮಗು ಸಾವನ್ನಪ್ಪಿತ್ತು. ತಲೆಗೆ ಪೆಟ್ಟು ಬಿದ್ದಿದ್ದರಿಂದ ಮಗು ಆಘಾತಕ್ಕೊಳಗಾಗಿ ಸಾವನ್ನಪ್ಪಿದೆ ಎಂದು ವೈದ್ಯರು ತಿಳಿಸಿದ್ದಾರೆ.

    ಇದನ್ನು ಓದಿ: Relationship Tips: ಮದುವೆಗೆ ಮುನ್ನ ಸಂಗಾತಿ ಜೊತೆ ಮರೆಯದೇ ಈ ವಿಚಾರಗಳನ್ನು ಚರ್ಚಿಸಿ

    ಮಗುವಿನ ತಾಯಿ, ಚೆಲ್ಸಿಯಾ ಸ್ಮಿತ್, ಈ ಅಪಘಾತದ ಹೊರಬರಲು ಎರಡು ವಾರಗಳನ್ನು ತೆಗೆದುಕೊಂಡರು. ನಂತರ ಧೈರ್ಯವನ್ನು ಒಟ್ಟುಗೂಡಿಸಿ ಪೊಲೀಸರಿಗೆ ಸಂಪೂರ್ಣ ಕಥೆಯನ್ನು ಹೇಳಿದಳು. ಗಂಡ ಇವಾಂಡರ್ ವಿಲ್ಸನ್ ನಿಂದಾಗಿ ಮಗು ಸಾವನ್ನಪ್ಪಿರುವ ಬಗ್ಗೆ ದೂರು ನೀಡಿದಳು. ಕೊನೆಗೆ ಆಕೆಯ ದೂರಿನ ಅನ್ವಯ ಇವಾಂಡರ್ ವಿಲ್ಸನ್ನನ್ನು ಕೋರ್ಟ್​ ತಪ್ಪತಸ್ಥನೆಂದು ಹೇಳುವ ಮೂಲಕ ಜೈಲು ಶಿಕ್ಷೆ ವಿಧಿಸಿದೆ.
    Published by:Harshith AS
    First published: