Crime News: ಎಂಎಲ್ಎ ಮನೆಯ ಮರದಿಂದ ಮಾವಿನಹಣ್ಣು ಕದ್ದು ಒಂದು ರಾತ್ರಿ ಜೈಲಿನಲ್ಲಿ ಕಳೆದ ಅಮಾಯಕ

ಒಂದು ಮಾವಿನ ಹಣ್ಣು ತಿಂದರೆ ಜೈಲು ಪಾಲಾಗುವುದೆಂದು ಕನಸಿನಲ್ಲಿಯೂ ಯೋಚಿಸಿರಲಿಕ್ಕಿಲ್ಲ ಕೂಡ. ಈ ಬಗ್ಗೆ ಕೇಳಿದರೆ ನಿಮಗೂ ಆಶ್ಚರ್ಯವಾಗಬಹುದು ಇದು ಆಶ್ಚರ್ಯವಾದರೂ ವಾಸ್ತವವಾಗಿ  ಗೌಹಾಟಿ ನಡೆದ ಘಟನೆಯಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಎಂಎಲ್ಎ ಮನೆಯ ಮರದಿಂದ ಮಾವಿನಹಣ್ಣು (Mango) ತೆಗೆದರೆ ಜೈಲು ಪಾಲಾಗಬೇಕು ಎನ್ನುವ ಬಗ್ಗೆ ನಿಮಗೆ ತಿಳಿದಿತ್ತಾ? ಹೌದು ಇನ್ನೊಂದು ಅದೇ ರೀತಿಯ ಘಟನೆ ಗೌಹಾಟಿಯಲ್ಲಿ (Guwahati) ನಡೆದಿದೆ‌. ಸ್ಥಳೀಯ ಶಾಸಕರೊಬ್ಬರ (MLA) ಮನೆಯ ಮರದಿಂದ ಮಾವಿನಹಣ್ಣು ತೆಗೆದ ವ್ಯಕ್ತಿಯು ಒಂದು ದಿನ ಜೈಲಿನಲ್ಲಿ (Jail) ಕಳೆಯಬೇಕಾದ ಪರಿಸ್ಥಿತಿ ಆತನಿಗೆ ಎದುರಾಗಿದೆ. ಒಂದು ಮಾವಿನ ಹಣ್ಣು ತಿಂದರೆ ಜೈಲು ಪಾಲಾಗುವುದೆಂದು ಕನಸಿನಲ್ಲಿಯೂ ಯೋಚಿಸಿರಲಿಕ್ಕಿಲ್ಲ ಕೂಡ. ಈ ಬಗ್ಗೆ ಕೇಳಿದರೆ ನಿಮಗೂ ಆಶ್ಚರ್ಯವಾಗಬಹುದು ಇದು ಆಶ್ಚರ್ಯವಾದರೂ ವಾಸ್ತವವಾಗಿ  ಗೌಹಾಟಿ ನಡೆದ ಘಟನೆಯಾಗಿದೆ. ಅಷ್ಟಕ್ಕೂ ಅಲ್ಲಿ ಆಗಿದ್ದೇನು?

  ಒಂದು ರಾತ್ರಿಯನ್ನು ಮಾಡಿದ ಸಣ್ಣ ತಪ್ಪಿಗಾಗಿ ಜೈಲಿನಲ್ಲಿ ಕಳೆದ ಸುಭಾಷ್ 

  ಹೌದು ಗುಹಾಟಿ ನಿವಾಸಿ ಸುಭಾಷ್ ಬರ್ಮನ್ ಎಂಬಾತ ಸ್ಥಳೀಯ ಶಾಸಕರೊಬ್ಬರ ಮನೆಯ ಮರದಲ್ಲಿರುವ ಒಂದು ಮಾವಿನ ಹಣ್ಣನ್ನು ಕಿತ್ತು ತಿಂದಿದ್ದಾರೆ. ಆದರೆ ಇದ್ದಕ್ಕಿದ್ದಂತೆ ಕೇರ್ ಟೇಕರ್ ಅವನ ಕಡೆಗೆ ಓಡಿ ಬಂದು ಅವನನ್ನು ಓಡಲು ಪ್ರಯತ್ನಿಸಿದ್ದಾನೆ ಕೂಡ. ಈ ಬಗ್ಗೆ ಸುಭಾಷ್ ಹಾಗೂ ಅವರಿಬ್ಬರ ಮಧ್ಯೆ ವಾಗ್ವಾದ ಕೂಡ ನಡೆಯಿತು. ವಾಗ್ವಾದದ ಬಳಿಕ ಬರ್ಮನ್ ತನ್ನ ನಿವಾಸಕ್ಕೆ ತೆರಳಿದ್ದಾನೆ ಆದರೆ ಮಧ್ಯಾಹ್ನದ ನಂತರ ಸ್ಥಳೀಯ ಪೊಲೀಸರು ಬರ್ಮನ್ ಮನೆಗೆ ಆಗಮಿಸಿ ಆತನನ್ನು ಅರೆಸ್ಟ್ ಮಾಡಿ ಒಂದು ರಾತ್ರಿ ಮಾಡಿದ ಸಣ್ಣ ತಪ್ಪಿಗಾಗಿ ಜೈಲಿನಲ್ಲಿ ಕಳೆಯುವಂತಾಗಿದೆ.

  ಇದನ್ನೂ ಓದಿ: Crime News: ಹಲ್ಲುಜ್ಜದೆ ಕಿಸ್ ಮಾಡಲು ಬಂದ ಗಂಡ! ಬೇಡ ಎಂದು ತಡೆದ ಹೆಂಡತಿಯ ಕೊಂದೇಬಿಟ್ಟ

  ಜೈಲಿನಿಂದ ಹೊರಬಂದಿರುವ ಸುಭಾಷ್  ಬರ್ಮನ್ ಘಟನೆ ಬಗ್ಗೆ ಹೇಳಿದ್ದೇನು?

  ಇದೀಗ ಜೈಲಿನಿಂದ ಹೊರಬಂದಿರುವ ಬರ್ಮನ್ ಘಟನೆಯನ್ನು ವಿವರಿಸುತ್ತಾ, ದಿಸ್ಪುರ ಶಾಸಕ ಅತುಲ್ ಬೋರಾ ಅವರ ಅಧಿಕೃತ ನಿವಾಸದಲ್ಲಿರುವ ಮರಗಳಿಂದ ಮಾವು ಕೀಳಲು ಹೋಗಿದ್ದೆ ಎಂದು ಹೇಳಿದ್ದಾರೆ. ಆದರೆ ಈ ಘಟನೆ ಬಗ್ಗೆ  ದಿಸ್ಪುರ ಶಾಸಕ ಅತುಲ್ ಬೋರಾ ಅವರಿಗೆ ಮಾಹಿತಿ ಇರಲಿಲ್ಲ ಬರ್ಮನ್ ಬಂಧನವಾಗಿರುವ ವಿಚಾರ. ಈ ಬಗ್ಗೆ ತಿಳಿದ ತಕ್ಷಣ ಅವರನ್ನು ಬಿಡುಗಡೆ ಕೂಡ ಮಾಡಲಾಗಿದೆ ಎಂದು ಬರ್ಮನ್ ಹೇಳಿಕೊಂಡಿದ್ದಾರೆ. ಹಲವು ವರ್ಷಗಳಿಂದ ಈ ರೀತಿಯ ಘಟನೆಗಳು ನಡೆಯುತ್ತಾ ಬಂದಿವೆ.

  ಇದನ್ನೂ ಓದಿ: Udaipur Murder: ಕೊಲೆಯಾದ ಕನ್ಹಯ್ಯ ಲಾಲ್ ಕುಟುಂಬಕ್ಕೆ 31 ಲಕ್ಷ ಪರಿಹಾರ

  ಅಮಾಯಕರು ತಾವು ಮಾಡದ ತಪ್ಪಿಗೆ ಈ ರೀತಿ ಶಿಕ್ಷೆ ಅನುಭವಿಸುವುದು ಹೊಸದೇನು ಅಲ್ಲ? ಕೆಲವೆಡೆ ಪೊಲೀಸರಿಂದ ಶಿಕ್ಷೆ ಅನುಭವಿಸಿದರೆ ಇನ್ನು ಕೆಲವರು ಮೇಲ್ಜಾತಿಯವರಿಂದ ಶಿಕ್ಷೆ ಅನುಭವಿಸುವ ಸ್ಥಿತಿ ಎದುರಾಗುತ್ತಾ ಇರುತ್ತವೆ

  10 ನೇ ತರಗತಿಯ ವಿದ್ಯಾರ್ಥಿಯಿಂದ ಕಾಲು ನೆಕ್ಕುವಂತೆ ಮಾಡಿದ್ದು ಈ ಘಟನೆಯ ವಿಡಿಯೋ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ. 10 ನೇ ತರಗತಿಯ ದಲಿತ ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಸಿ ಪ್ರತಿಸ್ಪರ್ಧಿಗಳ ಕಾಲು ನೆಕ್ಕುವಂತೆ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಏಳು ಜನರನ್ನು ಬಂಧಿಸಲಾಗಿದೆ. ಸೋಮವಾರ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ವೈರಲ್ ಆದ ತಕ್ಷಣ, ಜಿಲ್ಲಾ ಪೊಲೀಸ್ ಮುಖ್ಯಸ್ಥರು ಕಾರ್ಯಾಚರಣೆಗೆ ಇಳಿದರು. ಸಂತ್ರಸ್ತನನ್ನು ಪತ್ತೆಹಚ್ಚಲು ಮತ್ತು ಕ್ರಮವನ್ನು ಪ್ರಾರಂಭಿಸಲು ಐದು ತಂಡಗಳನ್ನು ರಚಿಸಲಾಗಿದೆ.

  ರಾಯ್ ಬರೇಲಿ ಪೊಲೀಸ್ ವರಿಷ್ಠಾಧಿಕಾರಿ ಶ್ಲೋಕ್ ಕುಮಾರ್ ಮಾತನಾಡಿ, ಪ್ರಕರಣದ ಪ್ರಮುಖ ಆರೋಪಿ ಅಪ್ರಾಪ್ತ ವಯಸ್ಕನಾಗಿದ್ದು, ಆರು ಮಂದಿಯನ್ನು ಅಭಿಷೇಕ್, ವಿಕಾಸ್ ಪಾಸಿ, ಮಹೇಂದ್ರ ಕುಮಾರ್, ಹೃತಿಕ್ ಸಿಂಗ್, ಅಮನ್ ಸಿಂಗ್ ಮತ್ತು ಯಶ್ ಎಂದು ಗುರುತಿಸಲಾಗಿದೆ. ಪ್ರತಾಪ್ ಮೇಜರ್ ಆಗಿದ್ದು, ಅವರನ್ನು ಬಂಧಿಸಲಾಗಿದೆ.

  ಬಾಲಕರಿಗೆ ಚಿತ್ರಹಿಂಸೆ

  ಅದೇ ಶಾಲೆಯಲ್ಲಿ ತೇರ್ಗಡೆಯಾಗಿರುವ ಹಿರಿಯರ ಸುಲಿಗೆ ಕರೆಗೆ ಮಣಿಯಲು ಸಿದ್ಧರಿಲ್ಲದ ಕಾರಣ 10ನೇ ತರಗತಿಯ ದಲಿತ ಬಾಲಕನನ್ನು ಚಿತ್ರಹಿಂಸೆ ಮತ್ತು ಅಮಾನವೀಯ ವರ್ತನೆಗೆ ಒಳಪಡಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
  Published by:Swathi Nayak
  First published: