PM Modi: ಜೈಲಿಗೆ ಹೋಗೋ ಆಸೆಯಿಂದ ‘ಮೋದಿಯನ್ನ ಸಾಯಿಸ್ತೀನಿ’ ಎಂತ ಪೋಲೀಸರಿಗೆ ಕರೆ ಮಾಡಿದ ಆಸಾಮಿ !

ಅದೇನನ್ನಿಸಿತೋ ಏನೋ ಹೊರಗಡೆ ಜಗತ್ತಿಗಿಂತ ಜೈಲೇ ವಾಸಿ ಎನಿಸಿ ಈ ವ್ಯಕ್ತಿ ಜೈಲಿಗೆ ಮರಳೋ ಪ್ಲಾನ್ ಮಾಡೋಕೆ ಶುರುಮಾಡಿದ್ದಾನೆ. ಅಂತಿಂಥಾ ಪ್ಲಾನ್ ಅಲ್ಲ, ನೇರವಾಗಿ ದೇಶದ ಪ್ರಧಾನಿಯನ್ನೇ ಗುರಿ ಮಾಡಿಕೊಂಡಿದ್ದಾನೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನವದೆಹಲಿ: ಇಂಥಾ ತಲೆ ಕೆಟ್ಟ ಜನ ಎಲ್ಲಾ ಕಡೆಯೂ ಇರ್ತಾರೆ ಅನ್ಸುತ್ತೆ. ಆಸೆ ಪಡೋಕೂ ಒಂದು ಮಿತಿ ಇರ್ಬೇಕು ಅಂತ ಹಿರಿಯರು ಅದಕ್ಕೇ ಹೇಳೋದು. ದೆಹಲಿಯಲ್ಲೊಬ್ಬ ವ್ಯಕ್ತಿ ನಾನಾ ಅಪರಾಧಗಳಿಗಾಗಿ ಶಿಕ್ಷೆ ಅನುಭವಿಸಿ ಜೈಲಿನಲ್ಲೇ ಇದ್ದ. ಜಾಮೀನು ಸಿಕ್ಕು ಜೈಲಿನಿಂದ ಹೊರಬಂದ. ಜಾಮೀನು ಸಿಕ್ತು ಅಂತ ಖುಷಿಯಾಗಿ ಇರ್ಬೇಕು ತಾನೇ? ಅದೇನನ್ನಿಸಿತೋ ಏನೋ ಹೊರಗಡೆ ಜಗತ್ತಿಗಿಂತ ಜೈಲೇ ವಾಸಿ ಎನಿಸಿ ಈ ವ್ಯಕ್ತಿ ಜೈಲಿಗೆ ಮರಳೋ ಪ್ಲಾನ್ ಮಾಡೋಕೆ ಶುರುಮಾಡಿದ್ದಾನೆ. ಅಂತಿಂಥಾ ಪ್ಲಾನ್ ಅಲ್ಲ, ನೇರವಾಗಿ ದೇಶದ ಪ್ರಧಾನಿಯನ್ನೇ ಗುರಿ ಮಾಡಿಕೊಂಡಿದ್ದಾನೆ.

ಸೀದಾ ಪೋಲೀಸರಿಗೇ ಕರೆ ಮಾಡಿ ನಾನು ಪ್ರಧಾನಿ ಮೋದಿಯನ್ನು ಸಾಯಿಸ್ತೀನಿ ಎಂದುಬಿಟ್ಟಿದ್ದಾನೆ. ಎಲಾ ಇವ್ನ ! ಎಂದುಕೊಂಡ ಪೋಲೀಸರು ನಿಮಿಷಗಳಲ್ಲೇ ಆತನನ್ನು ಅರೆಸ್ಟ್ ಮಾಡಿದ್ದಾರೆ. ನಂತರ ವಿವರಗಳ್ನನೆಲ್ಲಾ ಕೆದಕಿದಾಗ ತನಗೆ ಜೈಲಿಗೆ ವಾಪಸ್ ಹೋಗಬೇಕು ಎನಿಸಿದೆ. ಅದಕ್ಕಾಗಿ ಏನು ಮಾಡಬೇಕು ಎಂದು ಗೊತ್ತಾಗಲಿಲ್ಲ. ಹಾಗಾಗಿ ಈ ದಾರಿ ಬಳಸಿದೆ ಎಂದಿದ್ದಾನೆ.

ಈಗ ಪೋಲೀಸರ ಅತಿಥಿಯಾಗಿದ್ದಾನೆ. ಆದರೆ ಪ್ರಧಾನಿಯ ಹೆಸರು ಪ್ರಕರಣದಲ್ಲಿ ಬಂದಿರೋದ್ರಿಂದ ಗುಪ್ತಚರ ದಳದವರೂ ಈತನನ್ನು ಪ್ರಶ್ನಿಸಲಿದ್ದಾರೆ. ಜೈಲಿನಲ್ಲಿ ನೆಮ್ಮದಿಯಾಗಿದ್ದೆ ಎಂದಿರುವ ಈತ ಮರಳಿ ಜೈಲಿಗೆ ಹೋಗೋದಂತೂ ಸದ್ಯ ಪಕ್ಕಾ ಆಗಿದೆ. 22 ವರ್ಷ ವಯಸ್ಸಿನ ಈ ವ್ಯಕ್ತಿಯ ಹೆಸರು ಸಲ್ಮಾನ್, ಈತ ದೆಹಲಿಯ ನಿವಾಸಿ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
Published by:Soumya KN
First published: