ವಧುವಿಲ್ಲದೆ ವರನಿಗೆ ನಡೆಯಿತು ಅದ್ಧೂರಿ ಮದುವೆ; ಗುಜರಾತ್​ನಲ್ಲಿ ನಡೆದ ಈ ವಿವಾಹದ ಹಿಂದಿದೆ ಕರುಣಾಜನಕ ಕತೆ!

ಈ ಮದುವೆ ಸಮಾರಂಭದಲ್ಲಿ 800 ಮಂದಿಗೆ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು. ಮನೆಯ ಸಮೀಪದಲ್ಲೇ ಇರುವ ಸಮುದಾಯ ಭವನದಲ್ಲಿ ಮದುವೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಇದಕ್ಕಾಗಿ ಸುಮಾರು 2 ಲಕ್ಷವನ್ನು ಕುಟುಂಬ ವ್ಯಯ ಮಾಡಿತ್ತು.

HR Ramesh | news18
Updated:May 15, 2019, 6:10 PM IST
ವಧುವಿಲ್ಲದೆ ವರನಿಗೆ ನಡೆಯಿತು ಅದ್ಧೂರಿ ಮದುವೆ; ಗುಜರಾತ್​ನಲ್ಲಿ ನಡೆದ ಈ ವಿವಾಹದ ಹಿಂದಿದೆ ಕರುಣಾಜನಕ ಕತೆ!
ವಿಶೇಷಚೇತನ ಮದುವೆ ಗಂಡು ಅಜಯ್​ ಬರೋಟಾ
  • News18
  • Last Updated: May 15, 2019, 6:10 PM IST
  • Share this:
ಅಹಮದಬಾದ್: ಅದು ಗುಜರಾತ್​ನಲ್ಲಿ ನಡೆದ ಮದುವೆ ಸಮಾರಂಭ. ಮದುವೆ ಗಂಡು ಶೆರ್ವಾನಿ ಉಡುಗೆ ತೊಟ್ಟು, ಕೇಸರಿ ರುಮಾಲು ಧರಿಸಿ, ಸಿಂಗಾರಗೊಂಡ ಕುದುರೆ ಮೇಲೆ ಕುಳಿತು, ಕುಟುಂಬಸ್ಥರು, ಸಂಬಂಧಿಕರು ಹಾಗೂ ಸ್ನೇಹಿತರ ಸಮ್ಮುಖದಲ್ಲಿ ಊರಿನಲ್ಲಿ ಮೆರವಣಿಗೆ ಮಾಡಿದ್ದರು. ಆ ದಿನಕ್ಕೂ ಮುನ್ನ ಮೇಹಂತಿ ಸಂಗೀತ ಕಾರ್ಯಕ್ರಮವೂ ಆಯೋಜನೆಗೊಂಡಿತ್ತು. ಸಂಪ್ರದಾಯದ ಪ್ರಕಾರ ಮದುವೆಯ ಎಲ್ಲ ಶಾಸ್ತ್ರಗಳು ನಡೆದಿದ್ದವು. ಆದರೆ, ಅಲ್ಲಿ ಒಂದು ಮಾತ್ರ ಕೊರತೆಯಾಗಿತ್ತು. ಅದು ಮದುವೆ ಹುಡುಗಿ!

ಅಜಯ್​ ಬರೋಟಾ ಎಂಬ 27 ವರ್ಷದ ವಿಶೇಷ ಚೇತನ ಯುವಕನ ಮದುವೆ ಸಮಾರಂಭ ಗುಜರಾತ್ ರಾಜಧಾನಿ ಗಾಂಧಿನಗರದಿಂದ 90 ಕಿ.ಮೀ. ದೂರದಲ್ಲಿರುವ ಉತ್ತರ ಗುಜರಾತ್​ನ ಸಬರ್​ಕಾಂತ್​ ಜಿಲ್ಲೆಯ ಹಿಮ್ಮಾತ್​ನಗರ ಪಟ್ಟಣದಲ್ಲಿ ಆಯೋಜನೆಗೊಂಡಿತ್ತು. ಎಲ್ಲವೂ ಮದುವೆಯ ಸಂಪ್ರದಾಯದಂತೆ ನಡೆದರೂ ಇದು ನಿಜವಾದ ಮದುವೆಯಾಗಿರಲಿಲ್ಲ. ಬದಲಿಗೆ ವಿಶೇಷಚೇತನ ಮಗನ ಮನದಾಸೆಯನ್ನು ಈಡೇರಿಸಲು ತಂದೆ ಆಯೋಜನೆ ಮಾಡಿದ್ದ ಕೃತಕ ಮದುವೆ ಇದಾಗಿತ್ತು.

ಅಜಯ್ ಸಾಂಪ್ರದಾಯಿಕ ಶಿಕ್ಷಣ ಪಡೆದವರಲ್ಲ. ಏಕೆಂದರೆ ಅವರು ಹುಟ್ಟುತ್ತಲೇ ಕಲಿತಾ ಅಸಾಮರ್ಥ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅಜಯ್​ಗೆ ಮದುವೆಯಾಗಬೇಕು ಎಂಬ ಆಸೆ ಇತ್ತು. ಪ್ರತಿಯೊಂದು ಮದುವೆಗೂ ಹೋದಾಗಲೂ ತನ್ನ ಮದುವೆ ಯಾವಾಗ ಎಂದು ಮನೆಯವರ ಬಳಿ ಕೇಳುತ್ತಿದ್ದರು. ಆದರೆ, ಅವರ ಮದುವೆ ಆಗುವುದು ಅಷ್ಟು ಸುಲಭದ ಕೆಲಸವಾಗಿರಲಿಲ್ಲ ಎಂಬುದು ಅವರ ಕುಟುಂಬಸ್ಥರಿಗೆ ಗೊತ್ತಿತ್ತು. ಅಜಯ್​ಗೆ  ಹೊಂದುವಂತಹ ಹೆಣ್ಣನ್ನು ಕುಟುಂಬದವರು ಹುಡುಕಿದರೂ ಹೆಣ್ಣು ಸಿಗಲಿಲ್ಲ. ಅವರ ತಂದೆ ವಿಷ್ಣುಭಾಯಿ ಬರೋಟಾ ಗುಜರಾತ್​ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ಕಂಡಕ್ಟರ್​ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಎಎನ್​ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ವಿಷ್ಣುಬಾಯಿ ಬರೋಟಾ, "ನನ್ನ ಮಗ ಕಲಿಕೆ ಅಸಾಮರ್ಥ್ಯದ ಸಮಸ್ಯೆಯನ್ನು ಹೊಂದಿದ್ದಾನೆ. ಮತ್ತು ಚಿಕ್ಕವಯಸ್ಸಿನಲ್ಲಿಯೇ ತಾಯಿಯನ್ನು ಕಳೆದುಕೊಂಡ. ಬೇರೆಯವರ ಮದುವೆ ಸಮಾರಂಭದ ಮೆರವಣಿಗೆಗಳನ್ನು ಕಂಡು ಖುಷಿ ಪಡುತ್ತಿದ್ದ. ಮತ್ತು ತನ್ನ ಮದುವೆ ಬಗ್ಗೆ ನಮ್ಮ ಬಳಿ ಕೇಳುತ್ತಿದ್ದ. ಈ ಪ್ರಶ್ನೆಗೆ ನಮ್ಮ ಬಳಿ ಉತ್ತರವಿರಲಿಲ್ಲ. ಮತ್ತು ಅವನಿಗೆ ಮದುವೆ ಆಗುವ ಸಂಭವ ತೀರಾ ಕಡಿಮೆ ಎಂಬುದು ನಮಗೆ ಗೊತ್ತಿತ್ತು," ಎಂದು ಹೇಳುತ್ತಾರೆ.

"ನನ್ನ ಕುಟುಂಬ ಸದಸ್ಯರೊಂದಿಗೆ ಮಾತನಾಡಿದ ಬಳಿಕ, ನನ್ನ ಮಗನ ಖುಷಿಗಾಗಿ, ಅವನ ಕನಸ್ಸನ್ನು ಪರಿಪೂರ್ಣಗೊಳಿಸುವ ಸಲುವಾಗಿ ಅವನ ಮದುವೆ ಮೆರವಣಿಗೆ ಆಯೋಜನೆ ಮಾಡುವ ನಿರ್ಧಾರ ತೆಗೆದುಕೊಂಡೆ. ಈ ಸಮಾಜ ಏನಾದರೂ ಮಾತನಾಡಿಕೊಳ್ಳಲಿ. ಆದರೆ, ನಾನು ನನ್ನ ಮಗನ ಕನಸ್ಸನ್ನು ಪೂರ್ತಿಗೊಳಿಸಿ ಎಂಬ ತೃಪ್ತಿ, ಸಂತೋಷ ನನಗಿದೆ," ಎಂದು ನೋವಿನಲ್ಲೇ ನೆಮ್ಮದಿಯ ನಿಟ್ಟುಸಿರುವ ಬಿಟ್ಟರು.
ಈ ಮದುವೆ ಸಮಾರಂಭದಲ್ಲಿ 800 ಮಂದಿಗೆ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು. ಮನೆಯ ಸಮೀಪದಲ್ಲೇ ಇರುವ ಸಮುದಾಯ ಭವನದಲ್ಲಿ ಮದುವೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಇದಕ್ಕಾಗಿ ಸುಮಾರು 2 ಲಕ್ಷವನ್ನು ಕುಟುಂಬ ವ್ಯಯ ಮಾಡಿತ್ತು.ಅಜಯ್​ ಸಂಗೀತ ಮತ್ತು ಡ್ಯಾನ್ಸ್​ಅನ್ನು ತುಂಬಾ ಇಷ್ಟಪಟ್ಟರು. "ಅವನು ಊರಿನಲ್ಲಿ ನಡೆಯುವ ಯಾವ ಮದುವೆಗಳನ್ನು ತಪ್ಪಿಸಿಕೊಳ್ಳುತ್ತಿರಲಿಲ್ಲ. ಫೆಬ್ರವರಿಯಲ್ಲಿ ನಡೆದ ನನ್ನ ಮಗನ ಮದುವೆ ನೋಡಿ, ತನಗೆ ಯಾವಾಗ ಮದುವೆ ಮಾಡುವುದಾಗಿ ಕೇಳಿದ್ದ. ನನ್ನ ಅಣ್ಣ ಈ ಉಪಾಯದೊಂದಿಗೆ ನನ್ನ ಬಳಿ ಬಂದು ಚರ್ಚೆ ಮಾಡಿದರು. ನಾವೆಲ್ಲ ಅವರ ಪರವಾಗಿ ನಿಂತೆವು" ಎಂದು ಅಜಯ್​ ಚಿಕ್ಕಪ್ಪ ಕಮಲೇಶ್​ ಹೇಳುತ್ತಾರೆ.
First published:May 15, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading