• ಹೋಂ
 • »
 • ನ್ಯೂಸ್
 • »
 • ದೇಶ-ವಿದೇಶ
 • »
 • Shocking News: ಹೆಂಡ್ತಿ ಮುಂದೆ 'ಸತ್ಯವಾನ್ ಸಾವಿತ್ರಪ್ಪ' ಅಂತ ಪ್ರೂವ್ ಮಾಡೋಕೆ ಅಗ್ನಿಪರೀಕ್ಷೆ! ಕಾದ ಕಬ್ಬಿಣ ಕೈಯಲ್ಲಿ ಹಿಡಿದ ಪತಿ!

Shocking News: ಹೆಂಡ್ತಿ ಮುಂದೆ 'ಸತ್ಯವಾನ್ ಸಾವಿತ್ರಪ್ಪ' ಅಂತ ಪ್ರೂವ್ ಮಾಡೋಕೆ ಅಗ್ನಿಪರೀಕ್ಷೆ! ಕಾದ ಕಬ್ಬಿಣ ಕೈಯಲ್ಲಿ ಹಿಡಿದ ಪತಿ!

ಕಬ್ಬಿಣದ ಸಲಾಕೆ ಹಿಡಿದ ವ್ಯಕ್ತಿ

ಕಬ್ಬಿಣದ ಸಲಾಕೆ ಹಿಡಿದ ವ್ಯಕ್ತಿ

ಹಿಂದೆ ಪುರಾಣಗಳಲ್ಲಿ ಮಹಿಳೆಯರು ತಮ್ಮ ಪಾವಿತ್ರ್ಯತೆಯನ್ನು ಸಾಬೀತು ಮಾಡಲು ಅಗ್ನಿಪ್ರವೇಶದಂತಹ ಕಠಿಣ ಸವಾಲುಗಳನ್ನು ಎದುರಿಸಬೇಕಿತ್ತು. ಇದೀಗ ತೆಲಂಗಾಣದಲ್ಲೂ ವ್ಯಕ್ತಿಯೊಬ್ಬ ತನ್ನ ಪಾವಿತ್ರ್ಯತೆ ಕಾಪಾಡಲು ಅಗ್ನಿಪರೀಕ್ಷೆ ಎದುರಿಸಿದ್ದಾನೆ!

 • News18 Kannada
 • 2-MIN READ
 • Last Updated :
 • Telangana, India
 • Share this:

ತೆಲಂಗಾಣ: ಹಿಂದೆ ಪುರಾಣಗಳಲ್ಲಿ (mythology) ಮಹಿಳೆಯರು ತಮ್ಮ ಪಾವಿತ್ರ್ಯತೆಯನ್ನು (chastity) ಸಾಬೀತು ಮಾಡಲು ಅಗ್ನಿಪ್ರವೇಶದಂತಹ ಕಠಿಣ ಸವಾಲುಗಳನ್ನು ಎದುರಿಸಬೇಕಿತ್ತು. ಇದೀಗ ತೆಲಂಗಾಣದಲ್ಲೂ ವ್ಯಕ್ತಿಯೊಬ್ಬ ತನ್ನ ಪಾವಿತ್ರ್ಯತೆ ಕಾಪಾಡಲು ಅಗ್ನಿಪರೀಕ್ಷೆ ಎದುರಿಸಿದ್ದಾನೆ! ತೆಲಂಗಾಣದ (Telangana) ವಿವಾಹಿತ ವ್ಯಕ್ತಿಯೊಬ್ಬ ಕಾಯುತ್ತಿರುವ ಕಬ್ಬಿಣದ ಸಲಾಖೆಯನ್ನು (iron bar) ತನ್ನ ಕೈಯಲ್ಲಿ ಹಿಡಿದು, ತಾನು ಚಾರಿತ್ರ್ಯವಂತ ವ್ಯಕ್ತಿ ಅಂತ ಸಾಬೀತು ಮಾಡಿದ್ದಾನೆ. ಈತ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಅಂತ ಆರೋಪಿಸಲಾಗಿತ್ತು. ಆದರೆ ಆತ ತಾನು ಏಕಪತ್ನಿ ವೃತಸ್ಥ ಅಂತ ಸಾಬೀತು ಮಾಡಲು ಬರೋಬ್ಬರಿ 11 ಲಕ್ಷ ರೂಪಾಯಿ ಖರ್ಚು ಮಾಡಿ, ಕಬ್ಬಿಣದ ಬಿಸಿ ರಾಡನ್ನು ಕೈಯಲ್ಲಿ ಹಿಡಿದಿದ್ದಾನಂತೆ!
ಗಂಡ-ಹೆಂಡತಿ ನಡುವೆ ಜಗಳ


ತೆಲಂಗಾಣದ ಮುಲುಗು ಮಂಡಲದ ಬಂಜಾರಪಲ್ಲಿ ಎಂಬ ಗ್ರಾಮದಲ್ಲಿ ಇಂಥದ್ದೊಂದು ಘಟನೆ ನಡೆದಿದೆ. ಇಲ್ಲಿನ ನಿವಾಸಿ ಜಗನ್ನಾಥ ಗಂಗಾಧರ್ ಎಂಬಾತ ಬೇರೊಬ್ಬ ವಿವಾಹಿತ ಮಹಿಳೆ ಜೊತೆ ಅಕ್ರಮ ಸಂಬಂಧ ಹೊಂದಿದ್ದಾನೆ ಅಂತ ಆ ಮಹಿಳೆಯ ಪತಿ ಆರೋಪಿಸಿದ್ದನಂತೆ. ಇದೇ ವಿಚಾರಕ್ಕೆ ಈತನ ಮನೆಯಲ್ಲಿ ಗಂಡ ಹೆಂಡತಿ ನಡುವೆ ಪ್ರತಿನಿತ್ಯ ಜಗಳ ನಡೆಯುತ್ತಿತ್ತಂತೆ. ಇನ್ನು ಆ ಮಹಿಳೆಯ ಪತಿ, ಗಂಗಾಧರ್ ವಿರುದ್ಧ ತನ್ನ ಜಾತಿಯ ಹಿರಿಯರಿಗೆ ದೂರು ನೀಡಿದ್ದ. ತನಗೆ ನ್ಯಾಯ ದೊರಕಿಸಿಕೊಡು ಅಂತ ಮನವಿ ಮಾಡಿದ್ದನಂತೆ. ಇದರಂತೆ ಆ ಜಾತಿ ಹಿರಿಯರು ಗಂಗಾಧರ್‌ನನ್ನು ಕರೆಸಿ ವಿಚಾರಣೆ ನಡೆದ್ದರು.


ತನ್ನ ಪಾವಿತ್ರ್ಯತೆ ಸಾಬೀತು ಮಾಡೋದಾಗಿ ಸವಾಲು


ಇನ್ನು ವಿಚಾರಣೆ ವೇಳೆ ನಾನು ಆ ಮಹಿಳೆ ಜೊತೆ ಅಕ್ರಮ ಸಂಬಂಧ ಹೊಂದಿಲ್ಲ ಅಂತ ಗಂಗಾಧರ್ ಹೇಳಿದ್ದಾನೆ. ಆದರೆ ಆತನ ಪಾವಿತ್ರ್ಯತೆ ಸಾಬೀತು ಮಾಡಿ ಅಂತ ಹಿರಿಯರು ಹೇಳಿದ್ದಾರಂತೆ. ಇದರಿಂದ ಕಂಗೆಡದ ಆತ ಅಗ್ನಿ ಮುಟ್ಟಿ ಪಾವಿತ್ರ್ಯತೆ ಸಾಬೀತು ಮಾಡೋದಾಗಿ ಸವಾಲು ಹಾಕಿದ್ದಾನೆ.


ಇದನ್ನೂ ಓದಿ: Anant Ambani: ತಮ್ಮ ಖಾಸಗಿ ಜೆಟ್​ನಲ್ಲಿ ಉದ್ಯೋಗಿ ಬರ್ತ್‌ಡೇ ಆಚರಿಸಿದ ಅನಂತ್ ಅಂಬಾನಿ! ನೆಟ್ಟಿಗರಿಂದ ಪ್ರಶಂಸೆ


ಬಿಸಿ ಕಬ್ಬಿಣದ ಸಲಾಕೆ ಹಿಡಿಯುವಂತೆ ಸವಾಲು


ಇದೇ ಫೆಬ್ರುವರಿ 25 ರಂದು ತಮ್ಮ ನಿರ್ಧಾರವನ್ನು ಅನುಸರಿಸಿ ಗಂಗಾಧರ್ ಅವರ ಪರಿಶುದ್ಧತೆಯನ್ನು ಸಾಬೀತುಪಡಿಸಲು ಆದೇಶಿಸಿದರು. ಹಿರಿಯರ ಸಹಾಯಕರು ಉರುವಲುಗಳನ್ನು ಸುಟ್ಟು ಬೆಂಕಿಯಲ್ಲಿ ಉದ್ದವಾದ ಕಬ್ಬಿಣದ ರಾಡ್ ಅನ್ನು ಇಟ್ಟುಕೊಂಡರು. ಬಿಸಿ ಬಿಸಿ ಕಬ್ಬಿಣದ ರಾಡ್ ಅನ್ನು ಕೈಯಿಂದ ಹಿಡಿಯುವಂತೆ ಹೇಳಲಾಯ್ತು.


ಕಾದ ಕಬ್ಬಿಣದ ಸಲಾಕೆ ಹಿಡಿದರೂ ಆಗಿಲ್ಲ ಗಾಯ


ಸ್ನಾನ ಮುಗಿಸಿ ಒದ್ದೆ ಬಟ್ಟೆಯೊಂದಿಗೆ ಬಂದ ಗಂಗಾಧರ್ ಬೆಂಕಿಯ ಸುತ್ತ ಮೂರು ಬಾರಿ ತೆರಳಿ ಗ್ರಾಮಸ್ಥರ ಸಮ್ಮುಖದಲ್ಲಿ ಕಬ್ಬಿಣದ ರಾಡ್ ಅನ್ನು ಕೈಯಿಂದ ತೆಗೆದುಕೊಂಡು ಹೋದರು. ವಿಚಿತ್ರ ಎನ್ನುವಂತೆ ಕಬ್ಬಿಣದ ಸಲಾಕೆ ಹಿಡಿದರೂ ಕೈಗೆ ಕಬ್ಬಿಣದ ರಾಡ್ ಸುಟ್ಟ ಗಾಯಗಳ ಗುರುತು ಇಲ್ಲ. ಜಾತಿ ಪದ್ಧತಿಗಳ ಪ್ರಕಾರ ಸುಟ್ಟ ಕಬ್ಬಿಣದ ರಾಡ್‌ನಿಂದ ಕೈಗಳಿಗೆ ಗಾಯವಾಗದಿದ್ದರೆ ಅವರು 'ಅಗ್ನಿ ಪರೀಕ್ಷೆ'ಯಲ್ಲಿ ನಿರಪರಾಧಿ ಎಂದು ಸಾಬೀತುಪಡಿಸಿದಂತೆ.
ಮಹಿಳೆ ಪತಿ, ಜಾತಿ ಮುಖಂಡರ ವಿರುದ್ಧ ದೂರು


ಇಷ್ಟಾದರೂ ಮಹಿಳೆಯ ಪತಿ ಹಾಗೂ ಜಾತಿಯ ಹಿರಿಯರು ಒಪ್ಪಿಕೊಳ್ಳಲಿಲ್ಲ. ವಿವಾಹಿತೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾನೆ ಎಂದು ಒಪ್ಪಿಕೊಳ್ಳುವಂತೆ ಒತ್ತಾಯಿಸಿದರು. ಹಿರಿಯರ ಹಠಮಾರಿ ಧೋರಣೆಯಿಂದ ನೊಂದ ಗಂಗಾಧರ್ ಅವರ ಪತ್ನಿ ಹತ್ತಿರದ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮುಳುಗು ಠಾಣೆ ಪೊಲೀಸರು ದೂರು ಸ್ವೀಕರಿಸಿದ್ದು ತನಿಖೆ ಆರಂಭಿಸಿದ್ದಾರೆ. ಆಕೆ ಜಾತಿಯ ಹಿರಿಯರು ಕಿರುಕುಳ ನೀಡುತ್ತಿದ್ದು, ಈಗಾಗಲೇ ಜಗನ್ನಾಥ ಗಂಗಾಧರ್‌ ಅವರಿಂದ ಠೇವಣಿ ಮೊತ್ತವಾಗಿ 6 ಲಕ್ಷ ರೂಪಾಯಿ ಪೊಲೀಸರು ದೂರು ಸ್ವೀಕರಿಸಿದ್ದು, ತನಿಖೆ ನಡೆಸುತ್ತಿದ್ದಾರೆ.

Published by:Annappa Achari
First published: