ಬೇವಿನ ಮರ ಕಡಿದ ವ್ಯಕ್ತಿಗೆ ಬಿತ್ತು 62 ಸಾವಿರ ರೂ.ದಂಡ..!; ವಿಷಯ ತಿಳಿಸಿದ ಬಾಲಕನಿಗೆ ಅಭಿನಂದನೆಯ ಸುರಿಮಳೆ

ಮರವನ್ನು ಕತ್ತರಿಸಿದ್ದನ್ನು ಗಮನಿಸಿದ ವಿದ್ಯಾರ್ಥಿ ಸೋಮವಾರ ಬೆಳಗ್ಗೆ ಮರವನ್ನು ಕತ್ತರಿಸಲಾಗಿದೆಯೆಂದು ಅರಣ್ಯ ಇಲಾಖೆಯ ಟೋಲ್ ಫ್ರೀ ಸಂಖ್ಯೆ 1800 425 5364 ಗೆ ಕರೆ ಮಾಡಿದನು. ತನ್ನನ್ನು 'ಗ್ರೀನ್ ಬ್ರಿಗೇಡಿಯರ್' ಎಂದು ಗುರುತಿಸಿಕೊಂಡ ಬಾಲಕ ಮರವನ್ನು ಕಡಿಯಲು ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ವಿನಂತಿಸಿದನು.

ಮರ ಕಡಿದಿರುವ ದೃಶ್ಯ

ಮರ ಕಡಿದಿರುವ ದೃಶ್ಯ

 • Share this:
  ಹೈದರಾಬಾದ್​(ಫೆ.10): ತೆಲಂಗಾಣದ ಹೈದರಾಬಾದ್‌ನಲ್ಲಿ ತನ್ನ ಮನೆಯ ಬಳಿ 40 ವರ್ಷದ ಹಳೆಯ ಬೇವಿನ ಮರವನ್ನು ಕಡಿದಿರುವ ಬಗ್ಗೆ 8 ನೇ ತರಗತಿಯ ಬಾಲಕ ತೆಲಂಗಾಣ ಅರಣ್ಯ ಇಲಾಖೆಯನ್ನು ಎಚ್ಚರಿಸಲು ಸಹಾಯ ಮಾಡಿದ. ನಂತರ ಮರವನ್ನು ಕತ್ತರಿಸಿದ ವ್ಯಕ್ತಿಗೆ ಅರಣ್ಯ ಇಲಾಖೆ 62,075 ರೂ. ದಂಡ ವಿಧಿಸಿದೆ.

  ಹೊಸ ಮನೆ ನಿರ್ಮಾಣಕ್ಕೆ ಅಡ್ಡಿಯಾಗುತ್ತಿದೆ ಎಂಬ ಕಾರಣಕ್ಕೆ ಮರ ಕತ್ತರಿಸಿದ್ದಾಗಿ ಹೈದರಾಬಾದ್‌ನ ಸೈದಾಬಾದ್‌ನ ಜಿ. ಸಂತೋಷ್‌ ರೆಡ್ಡಿ ಎಂಬ ವ್ಯಕ್ತಿ ಹೇಳಿದ ಬಗ್ಗೆ ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮರವನ್ನು ಕತ್ತರಿಸಿದ್ದನ್ನು ಗಮನಿಸಿದ ವಿದ್ಯಾರ್ಥಿ ಸೋಮವಾರ ಬೆಳಗ್ಗೆ ಮರವನ್ನು ಕತ್ತರಿಸಲಾಗಿದೆಯೆಂದು ಅರಣ್ಯ ಇಲಾಖೆಯ ಟೋಲ್ ಫ್ರೀ ಸಂಖ್ಯೆ 1800 425 5364 ಗೆ ಕರೆ ಮಾಡಿದನು. ತನ್ನನ್ನು 'ಗ್ರೀನ್ ಬ್ರಿಗೇಡಿಯರ್' ಎಂದು ಗುರುತಿಸಿಕೊಂಡ ಬಾಲಕ ಮರವನ್ನು ಕಡಿಯಲು ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ವಿನಂತಿಸಿದನು. ಅಧಿಕಾರಿಗಳು ಕ್ರಮ ಕೈಗೊಂಡರು ಮತ್ತು ಅವರ ವಿಚಾರಣೆಯಲ್ಲಿ ಆ ವ್ಯಕ್ತಿ ಮರ ಕಡಿಯಲು ಪೂರ್ವ ಅನುಮತಿ ಪಡೆದಿಲ್ಲ ಎಂದು ತಿಳಿದುಬಂದಿದೆ.

  ನಂತರ ಆ ವ್ಯಕ್ತಿಗೆ 62,075 ರೂ.ಗಳ ದಂಡ ವಿಧಿಸಿದ್ದು, ಅಂತಿಮವಾಗಿ ಆ ವ್ಯಕ್ತಿ ದಂಡ ಪಾವತಿಸಿದರು ಎಂದು ತಿಳಿದುಬಂದಿದೆ. ಆದರೆ, ಮರ ಕಡಿದ ಆರೋಪ ತಪ್ಪಿಸಿಕೊಳ್ಳಲು ಆತ ಮರದ ಕೊಂಬೆಗಳನ್ನು ಹಾಗೂ ಮರದ ಬುಡಕ್ಕೆ ಬೆಂಕಿ ಹಚ್ಚಲು ಯತ್ನಿಸಿದ್ದ ಎಂದೂ ತಿಳಿದುಬಂದಿದೆ. ಇನ್ನು, ಮರ ಕಡಿದಿದ್ದರ ಬಗ್ಗೆ ದೂರು ನೀಡುವ ಮೂಲಕ ಬಾಲಕ ಜವಾಬ್ದಾರಿಯುತವಾಗಿ ವರ್ತಿಸಿದ್ದಕ್ಕಾಗಿ ಅರಣ್ಯ ಇಲಾಖೆ ಅಧಿಕಾರಿಗಳು ವಿದ್ಯಾರ್ಥಿಯನ್ನು ಅಭಿನಂದಿಸಿದ್ದಾರೆ.

  Petrol Diesel Price: ಮತ್ತೆ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ; ವಿವಿಧ ನಗರಗಳಲ್ಲಿ ಇಂದಿನ ದರವೆಷ್ಟು?

  2020 ರಲ್ಲೂ ಹೈದರಾಬಾದ್‌ನಲ್ಲಿ ದಂಡ ಕಟ್ಟಿಸಿಕೊಂಡಿದ್ದ ಅರಣ್ಯಾಧಿಕಾರಿಗಳು
  2020 ರಲ್ಲಿ ತನ್ನ ಆವರಣದಲ್ಲಿ 40 ಕ್ಕೂ ಹೆಚ್ಚು ಮರಗಳನ್ನು ಅಕ್ರಮವಾಗಿ ಕಡಿದಿದ್ದಕ್ಕಾಗಿ ಹೈದರಾಬಾದ್‌ನ ಗೇಟೆಡ್ ಸಮುದಾಯಕ್ಕೆ ಅರಣ್ಯ ಇಲಾಖೆ ದಂಡ ವಿಧಿಸಿತ್ತು. ಕುಕಾಟ್ಪಲ್ಲಿ ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿ (ಕೆಪಿಹೆಚ್‌ಪಿ) ನೆಲೆಗೊಂಡಿರುವ ಇಂಡೂ ಫಾರ್ಚೂನ್ ಫೀಲ್ಡ್ಸ್ ಗಾರ್ಡೇನಿಯಾದ ನಿರ್ವಹಣೆಯನ್ನು ವಾಲ್ಟಾ (ವಾಟರ್ ಲ್ಯಾಂಡ್ ಅಂಡ್ ಟ್ರೀಸ್ ಆಕ್ಟ್, 2002) ಅಡಿಯಲ್ಲಿ ಮರಗಳನ್ನು ಕಡಿಯಲು ಪೂರ್ವ ಅನುಮತಿ ಪಡೆಯಲು ವಿಫಲವಾದ ಕಾರಣಕ್ಕಾಗಿ ದಂಡ ಕಟ್ಟಿಸಿಕೊಳ್ಳಲಾಗಿತ್ತು.

  ಮಾರ್ಚ್ 15 ರೊಳಗೆ ಪ್ರಧಾನ ಮಂತ್ರಿ ಗ್ರಾಮ ಸದಕ್ ಯೋಜನೆ (ಪಿಎಂಜಿಎಸ್‌ವೈ) ಯೋಜನೆಯಡಿ ಮಂಜೂರಾದ ರಸ್ತೆಗಳಿಗೆ ಅರಣ್ಯ ತೆರವು ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅರಣ್ಯ ಇಲಾಖೆ ಸೋಮವಾರ ಪ್ರಕಟಿಸಿದೆ. ಇದನ್ನು ಮುಖ್ಯ ಕಾರ್ಯದರ್ಶಿ ಸೋಮೇಶ್ ಕುಮಾರ್ ಅವರು ಕೇಂದ್ರ ಗ್ರಾಮೀಣ ಅಭಿವೃದ್ಧಿ ಕಾರ್ಯದರ್ಶಿಗೆ ಹಲವಾರು ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ ವಿಡಿಯೋ ಸಮ್ಮೇಳನದಲ್ಲಿ ತಿಳಿಸಿದ್ದಾರೆ.

  ಇಲ್ಲಿ ನಾಶವಾದ ಅರಣ್ಯ ನಾಶಕ್ಕೆ ಬೇರೆ ಕಡೆ ಗಿಡಗಳನ್ನು ಬೆಳೆಸುವ ಹಿನ್ನೆಲೆ ಜಮೀನುಗಳನ್ನು ಗುರುತಿಸುವ ಪ್ರಕ್ರಿಯೆ ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ ಎಂದು ಸೋಮೇಶ್ ಕುಮಾರ್ ಹೇಳಿದರು. ಅರಣ್ಯ ಪರವಾನಗಿಗಳ ಸಾಪ್ತಾಹಿಕ ಪರಿಶೀಲನೆ ನಡೆಸಿ ನಿಗದಿತ ಸಮಯದೊಳಗೆ ಪೂರ್ಣಗೊಳಿಸಲಾಗುವುದು ಎಂದು ಅಧಿಕಾರಿಗೆ ಮಾಹಿತಿ ನೀಡಿದರು.
  Published by:Latha CG
  First published: