Halwa: ಹಲ್ವಾ ತಿನ್ನುವಾಗ ಹುಷಾರ್! ಆಸೆಯಿಂದ ತಿಂದ ಸ್ವೀಟ್ ಪ್ರಾಣವನ್ನೇ ತೆಗೆಯಿತು!

ಬೆಳಗ್ಗೆ ಆತ ತನ್ನ ಕಂಪನಿ ಬಳಿ ಇದ್ದ ಬೇಕರಿಗೆ ಹೋಗಿದ್ದ. ಈ ವೇಳೆ ಅಲ್ಲಿದ್ದ ಹಲ್ವಾ ಖರೀದಿಸಿ  ತಿಂದಿದ್ದಾನೆ. ಕೂಡಲೇ ಹಲ್ವಾ ಗಂಟಲಿಗೆ ಸಿಲುಕಿ ಉಸಿರು ಕಟ್ಟಿದಂತೆ ಆಗಿದೆ. ಕೂಡಲೇ ಅಸ್ವಸ್ಥಗೊಂಡ ನಿಜಾಕರ್ ಅಲ್ಲೇ ಕುಸಿದು ಬಿದ್ದಿದ್ದಾನೆ.

ಹಲ್ವಾ ತಿಂದು ಮೃತಪಟ್ಟ ನಿಜಾರ್

ಹಲ್ವಾ ತಿಂದು ಮೃತಪಟ್ಟ ನಿಜಾರ್

  • Share this:
ಕೇರಳ: ಹಲ್ವಾ (Halwa) ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಸಿಹಿಯಾಗಿರುವ (Sweet) ಹಲ್ವಾ ಹೆಸರು ಕೇಳಿದ್ರೆ ಬಾಯಲ್ಲಿ ನೀರೂರುತ್ತದೆ. ಅಂಥದ್ರಲ್ಲಿ ಸಿಹಿ ಸಿಹಿಯಾಗಿರುವ, ಘಮ ಘಮ ಪರಿಮಳ ಸೂಸುವ ಹಲ್ವಾ ತಂದು ಕಣ್ಣ ಮುಂದೆ ಇಟ್ರೆ ಹೇಗಿರುತ್ತೆ ಹೇಳಿ! ಆದ್ರೆ ಈ ಹಲ್ವಾನೇ ವ್ಯಕ್ತಿಯೊಬ್ಬನ ಸಾವಿಗೆ ಕಾರಣವಾಗುತ್ತೆ ಅಂದ್ರೆ ನೀವು ನಂಬುತ್ತೀರಾ? ಕೇರಳದಲ್ಲಿ (Kerala) ನಡೆದ ಘಟನೆ ಬಗ್ಗೆ ಕೇಳಿದ್ರೆ ನೀವು ನಿಜಕ್ಕೂ ಶಾಕ್ ಆಗ್ತೀರಿ! ಯಾಕೆಂದ್ರೆ ಆಸೆಯಿಂದ ತಿಂದ ಹಲ್ವಾ ಗಂಟಲಲ್ಲಿ ಸಿಲುಕಿ ಕೇರಳದಲ್ಲಿ ವ್ಯಕ್ತಿಯೊಬ್ಬರು ಪ್ರಾಣ (Died) ಬಿಟ್ಟಿದ್ದಾರೆ. ಈ ಘಟನೆ ಬಗ್ಗೆ ತಿಳಿದು ಸಾರ್ವಜನಿಕರು ಶಾಕ್‌ಗೆ ಒಳಗಾಗಿದ್ದಾರೆ.  

 ಹಲ್ವಾ ಗಂಟಲಲ್ಲಿ ಸಿಲುಕಿ ವ್ಯಕ್ತಿ ಸಾವು

ಹಲ್ವಾ ತಿನ್ನುವಾಗ ಶ್ವಾಸನಾಳದಲ್ಲಿ ಸಿಲುಕಿ ವ್ಯಕ್ತಿಯೊಬ್ಬ ಮೃತಪಟ್ಟಿರುವ ಆಘಾತಕಾರಿ ಘಟನೆ ಕೇರಳದಲ್ಲಿ ನಡೆದಿದೆ. ಕೇರಳದ ಥಾಮರಾ ಮುಕ್ಕುವಿನ ಚೆರುಪುಲ್ಲಿ ಪರಂಬುವಿನ ನಿವಾಸಿ, 49 ವರ್ಷದ ನಿಜಾರ್ ಎಂಬುವರೇ ಹಲ್ವಾ ಗಂಟಲಲ್ಲಿ ಸಿಲುಕಿ ಮೃತಪಟ್ಟ ವ್ಯಕ್ತಿ.

ಬೇಕರಿಯಿಂದ ಹಲ್ವಾ ಖರೀದಿಸಿ ತಿಂದ ನಿಜಾರ್

ಸ್ಥಳೀಯ ಕಾರ್ಖಾನೆಯೊಂದರಲ್ಲಿ ನಿಜಾರ್ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ. ಬೆಳಗ್ಗೆ ಆತ ತನ್ನ ಕಂಪನಿ ಬಳಿ ಇದ್ದ ಬೇಕರಿಗೆ ಹೋಗಿದ್ದ. ಈ ವೇಳೆ ಅಲ್ಲಿದ್ದ ಹಲ್ವಾ ಖರೀದಿಸಿ  ತಿಂದಿದ್ದಾನೆ. ಕೂಡಲೇ ಹಲ್ವಾ ಗಂಟಲಿಗೆ ಸಿಲುಕಿ ಉಸಿರು ಕಟ್ಟಿದಂತೆ ಆಗಿದೆ. ಕೂಡಲೇ ಅಸ್ವಸ್ಥಗೊಂಡ ನಿಜಾಕರ್ ಅಲ್ಲೇ ಕುಸಿದು ಬಿದ್ದಿದ್ದಾನೆ.

ಇದನ್ನೂ ಓದಿ: Sonali Phogat: ಡ್ರಗ್ಸ್​ ಬೆರೆಸಿದ ನೀರು, 2 ತಾಸು ಟಾಯ್ಲೆಟ್​ನಲ್ಲಿ ಬಂದ್: ಸಿಸಿಟಿವಿಯಲ್ಲಿ ಬಯಲಾಯ್ತು ಸೋನಾಲಿ ಸಾವಿನ ರಹಸ್ಯ!

ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೇ ಸಾವು

ಕುಸಿದು ಬಿದ್ದು, ಒದ್ದಾಡುತ್ತಿದ್ದ ನಿಜಾರ್‌ನನ್ನು ತಕ್ಷಣ ಸ್ಥಳೀಯರು ಮೆಡಿಕಲ್​ ಕಾಲೇಜು ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿ ಆತನಿಗೆ ಚಿಕಿತ್ಸೆ ನೀಡಿದರೂ ಪ್ರಯೋಜನವಾಗಿಲ್ಲ. ದಾದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ​

ಮರಣೋತ್ತರ ವರದಿಯಲ್ಲಿ ಏನಿತ್ತು?

ನಿಜಾರ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಯ ನಂತರ ಮಂಜಾಳಿ ಜುಮಾ ಮಸೀದಿಯಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಲಾಯಿತು. ಶ್ವಾಸನಾಳದಲ್ಲಿ ಹಲ್ವಾ ಸಿಲುಕಿ ಮೃತಪಟ್ಟಿದ್ದಾರೆಂದು ಮರಣೋತ್ತರ ವರದಿಯಲ್ಲಿ ತಿಳಿದುಬಂದಿದೆ.

ಚಾಕ್ಲೆಟ್ ತಿಂದು ಸಾವನ್ನಪ್ಪಿದ್ದ ಬಾಲಕಿ

ಇನ್ನು ಕಳೆದ ಜುಲೈ 20ರಂದು ಉಡುಪಿಯ ಉಪ್ಪುಂದದಲ್ಲಿ ಚಾಕಲೇಟ್ ಗಂಟಲಲ್ಲಿ ಸಿಲುಕಿ ಬಾಲಕಿಯೊಬ್ಬಳು ಸಾವನ್ನಪ್ಪಿದ್ದಳು. ಬೈಂದೂರು ತಾಲೂಕು ಬವಳಾಡಿ ಮೂಲದ 6 ವರ್ಷ ವಯಸ್ಸಿನ ಸಮನ್ವಿ ಮೃತ ಬಾಲಕಿ. ಉಪ್ಪುಂದ ಸ್ಥಳೀಯ ಆಂಗ್ಲ ಮಾಧ್ಯಮ ಸ್ಕೂಲ್ ವಿದ್ಯಾರ್ಥಿನಿಯಾಗಿದ್ದ ಸಮನ್ವಿ, ಶಾಲೆಯ ಬಸ್ಸಿಗೆ ಕಾಯುತ್ತಿರುವ ಸಂದರ್ಭ ಪ್ಲಾಸ್ಟಿಕ್ ಕವರ್ ಸಮೇತ ಚಾಕ್ಲೆಟ್ ತಿಂದಿದ್ದಾಳೆ. ಹೀಗೆ ತಿಂದ ಚಾಕ್ಲೆಟ್ ಗಂಟಲಲ್ಲಿ ಸಿಲುಕಿಕೊಂಡು ಬಾಲಕಿ ಉಸಿರುಗಟ್ಟಿ ಶಾಲಾ ವಾಹನದಲ್ಲೇ ಬಾಲಕಿ ಸಾವನ್ನಪ್ಪಿದ್ದಳು.

ಹೆಂಡ್ತಿ ಜೊತೆ ಫೈಟ್ ಮಾಡೋ ಗಂಡ, ಠಾಣೆ ಮುಂದೆ ಥಂಡಾ!

 ಪತ್ನಿ ಜೊತೆ ಜಗಳ ಮಾಡಿಕೊಂಡ ಪತಿಯೊಬ್ಬ ಕೊನೆಗೆ ಠಾಣೆ ಎದುರೇ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಪತ್ನಿ ಕವಿತಾ ದೂರು ಕೊಡಲು ಠಾಣೆಗೆ ಬಂದಿದ್ದಾರೆ. ಈ ವೇಳೆ ಪತಿಗೆ ಜ್ಞಾನೋದಯ ಆಗಿದೆ ಅನ್ಸತ್ತೆ. ತಕ್ಷಣ ಹೈಡ್ರಾಮಾ ಮಾಡಿ ಹೆಂಡತಿಯನ್ನು ತಡೆಯಲು ನೋಡಿದ್ದಾನೆ. ಹೆಂಡತಿ ಕೇಳದಿದ್ದಾಗ ಠಾಣೆ ಎದುರೇ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಇಂಥದ್ದೊಂದು ಘಟನೆ ಬೆಂಗಳೂರು ಹೊರವಲಯವಾದ ಆನೇಕಲ್ ಬಳಿಯ ಜಿಗಣಿ ಪೊಲೀಸ್ ಠಾಣೆ ಮುಂಭಾಗವೇ ನಡೆದಿದೆ.

ಇದನ್ನೂ ಓದಿ: Sonali Phogat: ಬಿಗ್ ಬಾಸ್ ಸ್ಪರ್ಧಿ, ಬಿಜೆಪಿ ನಾಯಕಿಯದ್ದು ಸಾವಲ್ಲ, ಕೊಲೆ! ಕೇಸ್​ನಲ್ಲಿ ಟ್ವಿಸ್ಟ್

ನಿನ್ನೆ ಕೂಡ ಇಬ್ಬರ ನಡುವೆ ಜಗಳವಾಗಿದೆ. ಆಗ ಗಂಡನ ವಿರುದ್ಧ ದೂರು ನೀಡಲು ಪತ್ನಿ ಕವಿತಾ ಜಿಗಣಿ ಠಾಣೆ ಬಳಿ ಆಗಮಿಸಿದ್ದಾರೆ. ಈ ವೇಳೆ ಠಾಣೆ ಬಳಿ ಹೆಂಡತಿ ಜೊತೆ ಗಂಡ ವಾಗ್ವಾದ ನಡೆಸಿದ್ದಾನೆ. ಪೊಲೀಸ್ ಠಾಣೆಗೆ ದೂರು ನೀಡದಂತೆ ಪತ್ನಿಗೆ ಒತ್ತಾಯ ಮಾಡಿದ್ದಾನೆ. ಒಪ್ಪದಿದ್ದಾಗ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಬಳಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.
Published by:Annappa Achari
First published: