• Home
 • »
 • News
 • »
 • national-international
 • »
 • Birthday at Crematorium: ಸ್ಮಶಾನದಲ್ಲಿ 54ನೇ ವರ್ಷದ ಹುಟ್ಟುಹಬ್ಬ! ವೈರಲ್ ಆಯ್ತು ಬರ್ತ್‌ ಡೇ ವಿಡಿಯೋ

Birthday at Crematorium: ಸ್ಮಶಾನದಲ್ಲಿ 54ನೇ ವರ್ಷದ ಹುಟ್ಟುಹಬ್ಬ! ವೈರಲ್ ಆಯ್ತು ಬರ್ತ್‌ ಡೇ ವಿಡಿಯೋ

ಹುಟ್ಟು ಹಬ್ಬವನ್ನು ಸ್ಮಶಾನದಲ್ಲಿ ಆಚರಿಸಿದ ವ್ಯಕ್ತಿ ಗೌತಮ್ ರತ್ನ ಮೋರೆ

ಹುಟ್ಟು ಹಬ್ಬವನ್ನು ಸ್ಮಶಾನದಲ್ಲಿ ಆಚರಿಸಿದ ವ್ಯಕ್ತಿ ಗೌತಮ್ ರತ್ನ ಮೋರೆ

ಇಲ್ಲೊಬ್ಬ ವ್ಯಕ್ತಿ ತಮ್ಮ ಬರ್ತಡೇಯನ್ನು ಸ್ಮಶಾನದಲ್ಲಿ ಆಚರಿಸಿಕೊಳ್ಳುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. ಈ ಮೂಲಕ ಸಮಾಜದಲ್ಲಿ ಚಾಲ್ತಿಯಲ್ಲಿರುವ ಮೂಢನಂಬಿಕೆ ವಿರುದ್ಧ ಸಂದೇಶ ಸಾರಿದ್ದಾರೆ. ಇವರ ಬರ್ತ್‌ ಡೇ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಈಗ ವೈರಲ್ ಆಗಿದೆ.

 • News18 Kannada
 • Last Updated :
 • Maharashtra, India
 • Share this:

  ಜನರು (People) ತಮ್ಮ ಹುಟ್ಟು ಹಬ್ಬವನ್ನ (Birthday) ಸೆಲೆಬ್ರೇಟ್ (Celebrate) ಮಾಡೋಕೆ ವಿವಿಧ ಹಾಗೂ ಸ್ಪೆಶಲ್ ಜಾಗಗಳನ್ನ (Special Place) ಹುಡುಕ್ತಾರೆ. ಜನ್ಮ ದಿನ ಪ್ರತಿಯೊಬ್ಬರ ಪಾಲಿಗೆ ವಿಶೇಷವಾಗಿರುತ್ತದೆ. ಅಂದು ಅವರು ಮಾನವ ಜನ್ಮ ಹಾಗೂ ಭೂಮಿಗೆ ಬಂದ ಸುದಿನ. ಹಾಗಾಗಿ ತಮ್ಮ ಬರ್ತಡೇಯನ್ನು ಚೆನ್ನಾಗಿ ಮತ್ತು ವಿಶಿಷ್ಟವಾಗಿ ಹಾಗೂ ಎಲ್ಲರಿಗೂ ನೆನಪಲ್ಲಿ ಉಳಿಯುವಂತೆ ಆಚರಿಸಿಕೊಳ್ಳಲು ಇಷ್ಟಪಡ್ತಾರೆ. ಜನ್ಮ ದಿನ ಆಚರಣೆಗೆ ಜನರು ಯಾವೆಲ್ಲಾ ಪ್ರದೇಶಗಳನ್ನ ಆಯ್ಕೆ ಮಾಡಿಕೊಳ್ಳಬಹುದು?  ಪಾರ್ಕ್, ರೆಸ್ಟೊರೆಂಟ್, ದೇವಸ್ಥಾನ, ಮನೆ, ಬಂಗಲೆ, ಸಮುದ್ರ ತೀರ, ಪಾರ್ಟಿ ಹಾಲ್ ಹೀಗೆ ಒಳ್ಳೆಯ ಜಾಗಗಳಲ್ಲಿ ತಮ್ಮ ಜನ್ಮದಿನ ಆಚರಿಸಿಕೊಳ್ತಾರೆ.


  ಸ್ಮಶಾನದಲ್ಲಿ ಬರ್ತಡೇ ಆಚರಿಸಿಕೊಂಡ ವ್ಯಕ್ತಿ


  ಆದ್ರೆ ಇಲ್ಲೊಬ್ಬ ವ್ಯಕ್ತಿ ತಮ್ಮ ಬರ್ತಡೇಯನ್ನು ಸ್ಮಶಾನದಲ್ಲಿ ಆಚರಿಸಿಕೊಳ್ಳುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. ಹೌದು.. ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಕಲ್ಯಾಣ್ ಪಟ್ಟಣದ ನಿವಾಸಿ ಒಬ್ಬರು ಸಮಾಜದಲ್ಲಿ ಚಾಲ್ತಿಯಲ್ಲಿರುವ ಮೂಢನಂಬಿಕೆ ವಿರುದ್ಧ ಸಂದೇಶ ಸಾರಿದ್ದಾರೆ. ಸ್ಮಶಾನದಲ್ಲಿ ತಮ್ಮ ಹುಟ್ಟು ಹಬ್ಬ ಆಚರಿಸಿಕೊಳ್ಳುವ ಮೂಲಕ ಮೂಢನಂಬಿಕೆ ವಿರುದ್ಧ ಸಂದೇಶ ಸಾರಿದ್ದಾರೆ.


  54 ನೇ ವರ್ಷದ ಹುಟ್ಟು ಹಬ್ಬವನ್ನು ಸ್ಮಶಾನದಲ್ಲಿ ಆಚರಿಸಿದ ವ್ಯಕ್ತಿ


  ನವೆಂಬರ್ 19 ರಂದು ಗೌತಮ್ ರತ್ನ ಮೋರೆ ಎಂಬ ವ್ಯಕ್ತಿಯು 54 ನೇ ವರ್ಷದ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ. ಗೌತಮ್ ಅವರು ತಮ್ಮ 54ನೇ ವರ್ಷದ ಹುಟ್ಟು ಹಬ್ಬವನ್ನು ವಿಶಿಷ್ಟವಾಗಿ ಆಚರಿಸಿಕೊಂಡಿದ್ದಾರೆ. ಗೌತಮ್ ರತ್ನ ಮೋರೆ ಅವರು ತಮ್ಮ ಜನ್ಮದಿನವನ್ನು ಸ್ಮಶಾನದಲ್ಲಿ ಆಚರಣೆ ಮಾಡಿಕೊಂಡಿದ್ದಾರೆ.


  ಮಹಾನೆ ಚಿತಾಗಾರದಲ್ಲಿ ಜನ್ಮ ದಿನದ ಪಾರ್ಟಿ


  ಗೌತಮ್ ರತ್ನ ಮೋರೆ ಅವರು ಶನಿವಾರ ರಾತ್ರಿ ಮಹಾನೆ ಚಿತಾಗಾರದಲ್ಲಿ ತಮ್ಮ ಜನ್ಮದಿನದ ಪಾರ್ಟಿ ಆಯೋಜನೆ ಮಾಡಿದ್ದರು. ಅಲ್ಲಿ ಅವರು ಅತಿಥಿಗಳಿಗೆ ಬಿರಿಯಾನಿ ಮತ್ತು ಕೇಕ್ ಬಡಿಸಿದ್ದಾರೆ. ಸದ್ಯ ಸ್ಮಶಾನದಲ್ಲಿ ನಡೆದ ಬರ್ತಡೇ ಪಾರ್ಟಿಯ ವಿಡಿಯೋ ಬುಧವಾರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.


  ಗೌತಮ್ ಮೋರೆ ಸ್ಮಶಾನದಲ್ಲಿ ಆಯೋಜಿಸಿದ್ದ ಬರ್ತ ಡೇ ಪಾರ್ಟಿಗೆ ಹಿರಿಯ ನಾಗರಿಕರು ಮತ್ತು ಮಕ್ಕಳು ಸೇರಿದಂತೆ ಸಂಬಂಧಿಕರು ಮತ್ತು ಕುಟುಂಬಸ್ಥರು ಹಾಗೂ ಸ್ನೇಹಿತರು ಸಂಭ್ರಮಾಚರಣೆಯಲ್ಲಿ ಭಾಗಿಯಾಗಿದ್ದರು. ಟ್ರಾವೆಲ್ ವ್ಯವಹಾರ ಮಾಡುವ ಮೋರೆ ಸಮಾಜದಲ್ಲಿ ಚಾಲ್ತಿಯಲ್ಲಿರುವ ಮೂಢನಂಬಿಕೆಗಳ ವಿರುದ್ಧ ಸಂದೇಶ ಸಾರುತ್ತಿದ್ದಾರೆ. ಸ್ಮಶಾನಗಳಿಗೆ ಸಂಬಂಧಿಸಿದ ವಿವಿಧ ಮೂಢನಂಬಿಕೆಗಳನ್ನು ತೊಡೆದು ಹಾಕಲು ಮುಂದಾಗಿದ್ದಾರೆ. ಹಾಗಾಗಿ ತಮ್ಮ ಬರ್ತ ಡೇಯನ್ನು ಸ್ಮಶಾನದಲ್ಲಿ ಆಚರಿಸಿಕೊಂಡಿದ್ದಾರೆ.


  ಕೇಕ್ ಕತ್ತರಿಸಿ, ಬಿರಿಯಾನಿ ತಿಂದರು


  ಸ್ಮಶಾನದಲ್ಲಿ ಹುಟ್ಟು ಹಬ್ಬದ ಕೇಕ್ ಕತ್ತರಿಸಿ, ಸಂಭ್ರಮಾಚರಣೆಯಲ್ಲಿ ಬಿರಿಯಾನಿ ತಿಂದಿದ್ದಾರೆ. ಈ ಬಗ್ಗೆ ಮಾತನಾಡಿರುವ ಮೋರೆ ಅವರು, ನನ್ನ ಹುಟ್ಟು ಹಬ್ಬವನ್ನು ಹೋಟೆಲ್‌ ನಲ್ಲಿ ಆಚರಿಸಲು ನನ್ನ ಕುಟುಂಬ ಸಲಹೆ ನೀಡಿತ್ತು. ಆದರೆ ನಾನು ಸ್ಮಶಾನವನ್ನು ಆಯ್ಕೆ ಮಾಡಿಕೊಂಡೆ. ಸ್ಮಶಾನದಲ್ಲಿ ಯಾವುದೇ ದೆವ್ವ, ಭೂತ ಇಲ್ಲ. ಅಹಿತಕರ ಘಟನೆಗಳು ನಡೆಯಲ್ಲ ಅಂತಾ ಹೇಳಿದ್ದಾರೆ.


  ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದ ಮೋರೆ ಸ್ನೇಹಿತ ಆನಂದ್ ಶಿಂಧೆ ಮಾತನಾಡಿ, ಮೋರೆ ನನ್ನನ್ನು ಪಾರ್ಟಿಗೆ ಆಹ್ವಾನಿಸಿದಾಗ, ರಾತ್ರಿ ದೆವ್ವ ಮತ್ತು ಇತರೆ ದುಷ್ಟ ಶಕ್ತಿಗಳ ಕಲ್ಪನೆಯಿಂದಾಗಿ ಪಾರ್ಟಿಗೆ ಹೋಗಬಾರದೆಂದುಕೊಂಡಿದ್ದೆ. ಆದ್ರೆ ಅಲ್ಲಿಗೆ ಗಟ್ಟಿ ಮನಸ್ಸು ಮಾಡಿ ಹೋದೆ. ದೆವ್ವ, ಭೂತದಂತ ಎಲ್ಲಾ ನಂಬಿಕೆಗಳು ತಪ್ಪು ಮತ್ತು ಕೇವಲ ಮೂಢನಂಬಿಕೆಗಳು ಎಂದು ಗೊತ್ತಾಯ್ತು ಎಂದು ಹೇಳಿದ್ದಾರೆ.


  ಇದನ್ನೂ ಓದಿ: ಕುರಿಗಳು ವೃತ್ತಾಕಾರವಾಗಿ ಸುತ್ತುತ್ತಿರುವುದರ ಹಿಂದಿನ ರಹಸ್ಯ ಬಯಲು ಮಾಡಿದ ವಿಜ್ಞಾನಿಗಳು! ಏನು ಹೇಳಿದ್ದಾರೆ ನೋಡಿ


  ಇನ್ನು ಮೋರೆ ತಮ್ಮ ಜನ್ಮದಿನದ ಆಚರಣೆಯನ್ನು ಮಾಟ, ಮಂತ್ರ ಮತ್ತು ಮೂಢನಂಬಿಕೆಗಳ ವಿರುದ್ಧ ಪ್ರಚಾರ ಮಾಡಿದ ಪ್ರಸಿದ್ಧ ಸಾಮಾಜಿಕ ಕಾರ್ಯಕರ್ತರಾದ ದಿವಂಗತ ಸಿಂಧುತಾಯಿ ಸಪ್ಕಲ್ ಮತ್ತು ದಿವಂಗತ ನರೇಂದ್ರ ದಾಭೋಲ್ಕರ್ ಸ್ಮಶಾನದಲ್ಲಿ ಆಚರಿಸಲು ಪ್ರೇರೇಪಿಸಿದರು ಎಂದು ಹೇಳಿದ್ರು. ಇನ್ನು ಪಾರ್ಟಿಯಲ್ಲಿ 40 ಮಹಿಳೆಯರು ಮತ್ತು ಮಕ್ಕಳು ಸೇರಿ 100 ಕ್ಕೂ ಹೆಚ್ಚು ಅತಿಥಿಗಳು ಭಾಗವಹಿಸಿದ್ದರು.

  Published by:renukadariyannavar
  First published: