Attack: ನಾಯಿ ಬೊಗಳಿದ್ದಕ್ಕೆ ಅದರ ಮಾಲೀಕರ ಮೇಲೆ ಹಲ್ಲೆ! ಕಬ್ಬಿಣದ ರಾಡ್‌ನಿಂದ ಥಳಿಸಿದ ಪಕ್ಕದ ಮನೆ ಪಾಪಿ

ಕಬ್ಬಿಣದ ರಾಡ್‌ನಿಂದ ಪಕ್ಕದ ಮನೆಯ ವ್ಯಕ್ತಿ ನಾಯಿಗೆ ಥಳಿಸಿದ್ದಲ್ಲದೇ, ಅದರ ಮಾಲೀಕರ ಮನೆಯ ಮೂವರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ. ಘಟನೆಯಲ್ಲಿ ನಾಯಿ ಶ್ವಾನದ ತಲೆಗೆ ಬಲವಾದ ಏಟು ಬಿದ್ದಿದ್ದು, ಅದರ ತಲೆಯಲ್ಲಿ ರಕ್ತ ಹೆಪ್ಪುಗಟ್ಟಿದೆ ಎನ್ನಲಾಗಿದೆ.

ನಾಯಿ ಮಾಲೀಕರ ಮೇಲೆ ದಾಳಿ (ಚಿತ್ರ ಕೃಪೆ: ANI)

ನಾಯಿ ಮಾಲೀಕರ ಮೇಲೆ ದಾಳಿ (ಚಿತ್ರ ಕೃಪೆ: ANI)

  • Share this:
ನವದೆಹಲಿ: ನಾಯಿ (Dog) ಜೋರಾಗಿ ಕೂಗಿತು (Barking) ಅಂತ ನಾಯಿ ಹಾಗೂ ಅದನ್ನು ಸಾಕಿದ ಮನೆ ಮಾಲೀಕರ (House Owner) ಮೇಲೆ ಪಕ್ಕದ ಮನೆಯವನೊಬ್ಬ (Neighbor) ಮಾರಣಾಂತಿಕವಾಗಿ ಹಲ್ಲೆ (Deadly Attack) ನಡೆಸಿದ್ದಾನೆ. ಇಂಥದ್ದೊಂದು ಆಘಾತಕಾರಿ ಘಟನೆ ರಾಷ್ಟ್ರ ರಾಜಧಾನಿ ನವದೆಹಲಿಯ (New Delhi) ಪಶ್ಚಿಮ ವಿಹಾರ್‌ನಲ್ಲಿ (Paschim Vihar) ನಡೆದಿದೆ. ಕಬ್ಬಿಣದ ರಾಡ್‌ನಿಂದ (Iron Rod) ಪಕ್ಕದ ಮನೆಯ ವ್ಯಕ್ತಿ ನಾಯಿಗೆ ಥಳಿಸಿದ್ದಲ್ಲದೇ, ಅದರ ಮಾಲೀಕರ ಮನೆಯ ಮೂವರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ. ಧರ್ಮವೀರ್ ದಹಿಯಾ ಎಂಬಾತನೇ ಈ ರೀತಿ ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿದ ವ್ಯಕ್ತಿ. ವ್ಯಕ್ತಿ ದಾಳಿಯಿಂದ ಮೂವರೂ ಗಂಭೀರವಾಗಿ ಗಾಯಗೊಂಡು, ಆಸ್ಪತ್ರೆ (Hospital) ಸೇರಿದ್ದಾರೆ. ಈ ಹಲ್ಲೆಯ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ (CCTV Camera) ಸೆರೆಯಾಗಿದೆ.

ನಾಯಿ ಬೊಗಳಿದ್ದಕ್ಕೆ ಕಬ್ಬಿಣದ ರಾಡ್‌ನಿಂದ ಹಲ್ಲೆ

ನಾಯಿ ಬೊಗಳಿತು ಎಂಬಾತ ಧರ್ಮವೀರ್ ದಹಿಯಾ ಎಂಬಾತ ನಾಯಿ ಹಾಗೂ ಅದರ ಮನೆ ಮಾಲೀಕರು ಸೇರಿದಂತೆ ಮೂವರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ. ರಕ್ಷಿತ್ ಎಂಬುವರು ಸಾಕಿದ್ದ ನಾಯಿ ಜೋರಾಗಿ ಬೊಗಳಿತು ಅಂತ ಧರ್ಮವೀರ್ ದಹಿಯಾ ಎಂಬಾತ ಹಲ್ಲೆ ಮಾಡಿದ್ದಾನೆ. ಈ ದೃಶ್ಯಗಳು ಸಿಸಿಟಿವಿಯ್ಲಲಿ ಸೆರೆಯಾಗಿದೆ. ವ್ಯಕ್ತಿಯು ರಾಡ್‌ನಿಂದ ನಾಯಿಗೆ ಹೊಡೆಯುವುದನ್ನು ವಿಡಿಯೋದಲ್ಲಿ ನೋಡಬಹುದು. ನಂತರ ಆತ ನಾಯಿಯ ಮಾಲೀಕರಿಗೂ ಹೊಡೆದಿದ್ದಾನೆ. ಕುಟುಂಬದ ಮತ್ತೊಬ್ಬರು ಆತನನ್ನು ತಡೆಯಲು ಮುಂದಾದಾಗ ಅವರಿಗೂ ತಲೆಗೆ ಹೊಡೆದಿದ್ದಾನೆ.ನಿಜಕ್ಕೂ ಅಲ್ಲಿ ನಡೆದಿದ್ದು ಏನು?

ಪಶ್ಚಿಮ ವಿಹಾರ್ ನ ಎ ಬ್ಲಾಕ್ ನಿವಾಸಿ ರಕ್ಷಿತ್ ಮಾಲೀಕತ್ವದ ನಾಯಿಯು ಆರೋಪಿ ದಹಿಯಾ ಧರ್ಮವೀರ್‌ ಪುತ್ರ ನನ್ನು ನೋಡಿ ಬೊಗಳಲು ಪ್ರಾರಂಭಿಸಿದೆ. ಇದರಿಂದ ಕೋಪಗೊಂಡ ದಹಿಯಾ ನಾಯಿಯ ಮೇಲೆ ದಾಳಿ ಮಾಡಿದ್ದಾರೆ. ಈ ಮಧ್ಯೆ ಕೋಪಗೊಂಡ ನಾಯಿಯು ಧರ್ಮವೀರ್‌ಗೆ ಕಚ್ಚಿದೆ. ಈ ವೇಳೆ ದಹಿಯಾ ಮತ್ತು ರಕ್ಷಿತ್ ನಡುವೆ ಜಗಳ ನಡೆದಿದೆ. ಆ ವೇಳೆ ಮನೆಗೆ ವಾಪಸ್ಸಾದ ಆತ, ಸ್ವಲ್ಪ ಸಮಯದ ನಂತರ ದಹಿಯಾ ಕಬ್ಬಿಣದ ಪೈಪ್‌ನೊಂದಿಗೆ ಹಿಂತಿರುಗಿ ಬಂದು, ನಾಯಿ ತಲೆಗೆ ಹೊಡೆದಿದ್ದಾನೆ. ಈ ವೇಳೆ ಅದನ್ನು ತಡೆಯಲು ಬಂದ ನಾಯಿ ಮಾಲೀಕ ರಕ್ಷಿತ್ ಮತ್ತು ಇನ್ನೊಬ್ಬ ವ್ಯಕ್ತಿ ಹೇಮಂತ್‌ಗೂ ದಹಿಯಾ ಪೈಪ್‌ನಿಂದ ಹೊಡೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: Shocking Video: ಮಹಿಳೆಗೆ ಬೆಂಕಿ ಹಚ್ಚಿದ ಪಾಪಿಗಳು, ಆಕೆ ನೋವಿನಿಂದ ನರಳುವುದನ್ನು ವಿಡಿಯೋ ಮಾಡಿಕೊಂಡರು!

ನಾಯಿ ತಲೆಗೆ ಬಲವಾದ ಏಟು

ಘಟನೆಯಲ್ಲಿ ನಾಯಿ ಶ್ವಾನದ ತಲೆಗೆ ಬಲವಾದ ಏಟು ಬಿದ್ದಿದ್ದು, ಅದರ ತಲೆಯಲ್ಲಿ ರಕ್ತ ಹೆಪ್ಪುಗಟ್ಟಿದೆ ಎನ್ನಲಾಗಿದೆ. ಇನ್ನು ಚಿಕಿತ್ಸೆಗಾಗಿ ನಾಯಿಯನ್ನು ಪಶುವೈದ್ಯರ ಬಳಿ ಕರೆದೊಯ್ಯಲಾಗಿದೆ ಅಂತ ಶ್ವಾನದ ಮಾಲೀಕರು ತಿಳಿಸಿದ್ದಾರೆ. ಇವರು ಕೂಗಲು ತೊಡಗಿದಾಗ ಕೂಡಲೇ ನೆರೆಹೊರೆಯರು, ಸುತ್ತಮುತ್ತಲ ಜನರು ಸ್ಥಳಕ್ಕೆ ಓಡಿ ಬಂದಿದ್ದಾರೆ. ಬಳಿಕ ಮೂವರ ರಕ್ಷಣೆಗೆ ಬಂದ ನೆರೆಹೊರೆಯರು ಆತನಿಂದ ಕಬ್ಬಿಣದ ರಾಡ್ ಅನ್ನು ಕಿತ್ತುಕೊಂಡಿದ್ದಾರೆ.

ದಾಳಿ ಮಾಡಿದವನ ವಿರುದ್ಧ ದೂರು ದಾಖಲು

ಈ ಸಂಬಂಧ ಪಶ್ಚಿಮ ವಿಹಾರ್ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಾಯಿಯ ಮಾಲೀಕ ರಕ್ಷಿತ್ ಹೇಳಿಕೆಯ ಮೇರೆಗೆ ಪಶ್ಚಿಮ ವಿಹಾರ್ ಪೂರ್ವ ಪೊಲೀಸ್ ಠಾಣೆಯಲ್ಲಿ ಐಪಿಸಿ ಮತ್ತು ಪ್ರಾಣಿಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Viral Video: ಮೊಸಳೆ ಜೊತೆ ಮೇಯರ್ ಮದುವೆ! ಅದ್ಧೂರಿ ಕಲ್ಯಾಣೋತ್ಸವಕ್ಕೆ ಸಾಕ್ಷಿಯಾದ ಜನ

ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 308 (ಅಪರಾಧಿಯ ನರಹತ್ಯೆಗೆ ಯತ್ನ), 323 (ಸ್ವಯಂಪ್ರೇರಿತ ಗಾಯ), 341  ಮತ್ತು 451 (ಅಪರಾಧ ಮಾಡಲು ಮನೆಯೊಳಗೆ ಅತಿಕ್ರಮಣ) ಮತ್ತು ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ (ಪ್ರಾಣಿಗಳ ಮೇಲೆ ಕ್ರೂ ವರ್ತನೆ) ಸೆಕ್ಷನ್ 11 ಅನ್ನು ನೋಂದಾಯಿಸಲಾಗಿದೆ. ಈ ಸಂಬಂಧ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದು, ಸತ್ಯಾಂಶವನ್ನು ಪರಿಶೀಲಿಸುತ್ತಿದ್ದಾರೆ. ಸದ್ಯ ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದಾರೆ.
Published by:Annappa Achari
First published: