ಮುಂಬೈ: ವಿವಾಹ ವಾರ್ಷಿಕೋತ್ಸವದ (Wedding Anniversary) ದಿನ ಶುಭ ಕೋರುವುದನ್ನು ಮರೆತ ಕಾರಣಕ್ಕೆ 27 ವರ್ಷದ ಮಹಿಳೆಯೊಬ್ಬರು ತನ್ನ ಸಹೋದರ ಮತ್ತು ಪೋಷಕರರನ್ನು ಗಂಡನ ಮನೆಗೆ ಕರೆಸಿಕೊಂಡು ಗಂಡ (Husband) ಮತ್ತು ಆತನ ತಾಯಿಯನ್ನು ಥಳಿಸಿರುವ ಘಟನೆ ಮುಂಬೈನಲ್ಲಿ (Mumbai) ನಡೆದಿದೆ. ಮಗಳ ಮನೆಗೆ ಬಂದ ಪೋಷಕರು (Parents) ಬುದ್ದಿ ಹೇಳುವುದನ್ನು ಬಿಟ್ಟು, ತಮ್ಮ ಮಗ ಮತ್ತು ಮಗಳೊಂದಿಗೆ ಸೇರಿ ಅಳಿಯ ಹಾಗೂ ಆತನ ತಾಯಿಯ ಮೇಲೆ ಹಲ್ಲೆ ಮಾಡಿದ್ದಾರೆ. ಜೊತೆಗೆ ಮನೆಯಲ್ಲಿದ್ದ ವಾಹನ, ಕಿಟಕಿ ಗಾಜುಗಳನ್ನು ಹೊಡೆದು ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ಪೊಲೀಸರು (Police) ತಿಳಿಸಿದ್ದಾರೆ.
ನಾಲ್ವರ ವಿರುದ್ಧ ಹಲ್ಲೆ ಪ್ರಕರಣ
ವಿವಾಹ ವಾರ್ಷಿಕೋತ್ಸವದ ಶುಭಾಶಯ ಕೋರಲಿಲ್ಲ ಎಂಬ ಕಾರಣಕ್ಕೆ ಮಹಿಳೆ ತನ್ನ ಕುಟುಂಬಸ್ಥರೊಂದಿಗೆ ಸೇರಿ ಪತಿ ಮತ್ತು ಅತ್ತೆಯ ಮೇಲೆ ಹಲ್ಲೆ ಮಾಡಿದ್ದಾರೆ. ಘಟನೆ ಸಂಬಂಧ ನಾಲ್ವರ ವಿರುದ್ಧ ಹಲ್ಲೆ ಪ್ರಕರಣ ದಾಖಲಿಸಲಾಗಿದೆ. ನಾವು ಅವರಿಗೆ ಈಗಾಗಲೇ ನೋಟಿಸ್ ನೀಡಿದ್ದೇವೆ ಮತ್ತು ಈ ಬಗ್ಗೆ ವಿಚಾರಣೆ ನಡೆಸಿ, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಘಾಟ್ಕೋಪರ್ ಪೊಲೀಸ್ ಠಾಣೆಯ ಹಿರಿಯ ಇನ್ಸ್‌ಪೆಕ್ಟರ್ ಸಂಜಯ್ ದಹಕೆ ಮಾಹಿತಿ ನಿಡಿದ್ದಾರೆ.
ಪೊಲೀಸರ ಪ್ರಕಾರ, ಸಂತ್ರಸ್ತ ವಿಶಾಲ್ ನಾಂಗ್ರೆ (32) ಕೊರಿಯರ್ ಕಂಪನಿಯಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದರೆ, ಆತನ ಪತ್ನಿ ಕಲ್ಪನಾ ಆಹಾರ ಮಳಿಗೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರಿಬ್ಬರು 2018 ರಲ್ಲಿ ವಿವಾಹವಾಗಿದ್ದು, ಗೋವಂಡಿಯ ಬೈಗನವಾಡಿಯಲ್ಲಿ ವಾಸ ಮಾಡುತ್ತಿದ್ದರು.
ಇದನ್ನೂ ಓದಿ: Wedding Night Secrets: ಫಸ್ಟ್ ನೈಟ್ನಲ್ಲಿ ಹಾಸಿಗೆಗೆ ಹೂವಿನ ಅಲಂಕಾರ ಏಕೆ? ಸತ್ಯ ಕೇಳಿದ್ರೆ ನೀವು ಶಾಕ್ ಆಗ್ತೀರಾ!
ಶುಭ ಕೋರದ್ದಕ್ಕೆ ಬೇರೆಯಾಗುವ ನಿರ್ಧಾರ
ಫೆಬ್ರವರಿ 18ರ ಶನಿವಾರದಂದು ಅವರ ವಿವಾಹ ವಾರ್ಷಿಕೋತ್ಸವ ಇತ್ತು. ಆದರೆ ನಾನು ಮರೆತಿದ್ದೆ, ಈ ಕಾರಣಕ್ಕಾಗಿ ಕಲ್ಪನಾ ನನ್ನೊಂದಿಗೆ ಜಗಳವಾಡಿ ಕೋಪಗೊಂಡಿದ್ದರು. ಮರುದಿನ ಸಂಜೆ ನಿವಾಸದ ಬಳಿ ತನ್ನ ವಾಹನವನ್ನು ತೊಳೆಯುತ್ತಿದ್ದಾಗ ಕೆಲಸದಿಂದ ಹಿಂತಿರುಗಿದ ಕಲ್ಪನಾ ಇದೇ ವಿಷಯ ಮತ್ತೆ ಜಗಳ ಶುರು ಮಾಡಿದಳು. ಈ ವೇಳೆ ತಾನೂ ಇನ್ನು ಮುಂದೆ ನನ್ನೊಂದಿಗೆ ಜೀವನ ಮಾಡಲು ಬಯಸಲ್ಲ ಎಂದು ನನ್ನನ್ನು ಮತ್ತು ನನ್ನ ತಾಯಿಯನ್ನು ನಿಂದಿಸಿದಳು ಎಂದು ನಾಂಗ್ರೆ ತಿಳಿಸಿದ್ದಾರೆ.
ವಾಹನ , ಕಿಟಕಿ ಗಾಜುಗಳು ಪುಡಿಗಟ್ಟಿದ ಪತ್ನಿ ಕುಟುಂಬಸ್ಥರು
ಜಗಳವಾದ ನಂತರ ಕಲ್ಪನಾ ತನ್ನ ಸಹೋದರ ಮತ್ತು ಪೋಷಕರಿಗೆ ಕರೆ ಮಾಡಿದಳು. ಮನೆಗೆ ಬಂದಾಗ ಆಕೆಯ ಸಹೋದರ ನಾಂಗ್ರೆಯವರ ವಾಹನವನ್ನು ಧ್ವಂಸಗೊಳಿಸಿದ್ದಾನೆ. ಅಲ್ಲದೆ ಅವರ ಮನೆಯ ಕಿಟಕಿಯ ಗಾಜಗಳನ್ನು ಒಡೆದು ಹಾಕಿದ್ದಾನೆ. ಇಬ್ಬರು ಜಗಳ ಮಾಡಿದ ವಿಚಾರವನ್ನು ಚರ್ಚಿಸಲು ಬಂದಿದ್ದ ಅವರು ಮಾತಿಗೆ ಮಾತು ಬೆಳೆಸಿ ನಾಂಗ್ರೆ ಮತ್ತು ಆತನ ತಾಯಿ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಘಾಟ್ಕೋಪರ್ ಪೊಲೀಸ್ ಠಾಣೆಯಲ್ಲಿ ದೂರು
ರಾತ್ರಿ 9:30ರ ಸುಮಾರಿಗೆ ಜಗಳದ ಆರಂಭವಾಗಿದ್ದು, ಕಲ್ಪನಾ ತನ್ನ ಅತ್ತೆಗೆ ಕಪಾಳಮೋಕ್ಷ ಮಾಡಿದ್ದಾಳೆ. ಇದು ಜಗಳವನ್ನು ಮತ್ತಷ್ಟು ಹೆಚ್ಚಾಗಲು ಕಾರಣವಾಗಿ ನಾಲ್ವರು ಸೇರಿ ನಾಂಗ್ರೆ ಮತ್ತು ತಾಯಿಗೆ ಥಳಿಸಿದ್ದಾರೆ. ಪತ್ನಿ ಕುಟುಂಬದಿಂದ ಹಲ್ಲೆಗೆ ಒಳಗಾದ ನಾಂಗ್ರೆ ಮತ್ತು ಅವರ ತಾಯಿ ರಾಜವಾಡಿ ಆಸ್ಪತ್ರೆಗೆ ಭೇಟಿ ನೀಡಿದರು ಮತ್ತು ವೈದ್ಯಕೀಯ ವರದಿಗಳನ್ನು ಪಡೆದು ನಂತರ ಘಾಟ್ಕೋಪರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನಲ್ಲಿ, ಪತ್ನಿಯ ಸಹೋದರ ಮತ್ತು ಪೋಷಕರು ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ . ತನ್ನ ಪತ್ನಿಯ ಸಹೋದರ ತನ್ನ ಕೈ ಮತ್ತು ಮುಖದ ಮೇಲೆ ಕಚ್ಚಿದ್ದಾನೆ ಎಂದು ನಾಂಗ್ರೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ನಾಂಗ್ರೆ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಆತನ ಪತ್ನಿ, ಸಹೋದರ ಮತ್ತು ಆಕೆಯ ಪೋಷಕರ ವಿರುದ್ಧ ಭಾರತೀಯ ಐಪಿಸಿ ಸೆಕ್ಷನ್ 323, 324, 327, 504 ಮತ್ತು 506 ಮತ್ತು 34 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ