HOME » NEWS » National-international » A MAN ARRESTED AFTER CREATES INSTAGRAM FAKE ACCOUNTS IN GIRLS NAME AND BLACKMAILING BY NUDE PICS LG

ಹುಡುಗಿಯರೇ ಎಚ್ಚರ..!; ಇನ್​​ಸ್ಟಾಗ್ರಾಂನಲ್ಲಿ ಅಪರಿಚಿತರ ಫ್ರೆಂಡ್​ ರಿಕ್ವೆಸ್ಟ್​ ಸ್ವೀಕರಿಸುವ ಮುನ್ನ ಈ ಸುದ್ದಿ ಓದಿ

ಆರೋಪಿಯು ಹುಡುಗಿಯರು ಕಳುಹಿಸಿದ್ದ ಅರೆಬೆತ್ತಲೆ ಫೋಟೋಗಳನ್ನು ಸೇವ್ ಮಾಡಿಕೊಳ್ಳುತ್ತಿದ್ದ. ತಾನು ಹೇಳಿದ ಹಾಗೆ ಕೇಳದಿದ್ದರೆ ಅವರ ಅರೆಬೆತ್ತಲೆ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕುವುದಾಗಿ ಯುವತಿಯರಿಗೆ ಬ್ಲ್ಯಾಕ್​ ಮೇಲ್ ಮಾಡುತ್ತಿದ್ದ. ಹೀಗೆ ಸುಮಾರು 70 ಹುಡುಗಿಯರನ್ನು ತನ್ನ ಬಲೆಗೆ ಬೀಳಿಸಿಕೊಂಡಿದ್ದ. ಕೊನೆಗೆ ಈ ಮೋಸದ ಜಾಲಕ್ಕೆ ಬಿದ್ದ ಯುವತಿಯೊಬ್ಬಳು ಆತನ ವಂಚನೆ ಅರಿತು, ಪೊಲೀಸರಿಗೆ ದೂರು ನೀಡಿದ್ದಾಳೆ.

news18-kannada
Updated:February 3, 2021, 3:54 PM IST
ಹುಡುಗಿಯರೇ ಎಚ್ಚರ..!; ಇನ್​​ಸ್ಟಾಗ್ರಾಂನಲ್ಲಿ ಅಪರಿಚಿತರ ಫ್ರೆಂಡ್​ ರಿಕ್ವೆಸ್ಟ್​ ಸ್ವೀಕರಿಸುವ ಮುನ್ನ ಈ ಸುದ್ದಿ ಓದಿ
ಆರೋಪಿ ಸುಮಂತ್
  • Share this:
ವಿಜಯವಾಡ(ಫೆ.03): ಇಂದಿನ ಯುವಜನತೆ ಫೇಸ್​ಬುಕ್, ಟ್ವಿಟರ್​ ಹಾಗೂ ಇನ್​​ಸ್ಟಾಗ್ರಾಂನಂತಹ ಸೋಷಿಯಲ್ ಮೀಡಿಯಾಗಳಲ್ಲಿ ಬಹಳಷ್ಟು ಸಕ್ರಿಯರಾಗಿದ್ದಾರೆ. ದಿನದ ಬಹುತೇಕ ಸಮಯವನ್ನು ಅಲ್ಲೇ ಕಳೆಯುತ್ತಾರೆ. ಆದರೆ ಈ ಸಾಮಾಜಿಕ ಜಾಲತಾಣಗಳು ಎಷ್ಟು ಮನರಂಜನೆ ನೀಡುತ್ತವೆಯೋ, ನಾವ ಸ್ವಲ್ವ ಯಾಮಾರಿದರೂ ಕೂಡ ಅಷ್ಟೇ ಅಪಾಯಕಾರಿ. ಸೈಬರ್ ಕ್ರೈಂಗಳು ಇತ್ತೀಚೆಗೆ ಹೆಚ್ಚಾಗುತ್ತಿದ್ದು, ಯುವಜನರು ಜಾಗರೂಕತೆಯಿಂದ ಇರಬೇಕಿದೆ. ನಕಲಿ ಖಾತೆ ಸೃಷ್ಟಿಸಿ, ಹಣ ಕೇಳಿ ಮೋಸ ಮಾಡುವುದು. ಬ್ಲ್ಯಾಕ್​ ಮೇಲ್ ಮಾಡುವುದು... ಇಂತಹ ಪ್ರಕರಣಗಳು ನಡೆಯುತ್ತಿವೆ. ಹೀಗಾಗಿ ಹುಡುಗ-ಹುಡುಗಿಯರು ಎಚ್ಚರಿಕೆ ವಹಿಸಬೇಕಿದೆ. ಅಪರಿಚಿತರಿಂದ ಬಂದ ಫ್ರೆಂಡ್​ ರಿಕ್ವೆಸ್ಟ್​​ಗಳನ್ನು ಸ್ವೀಕರಿಸದಿರುವುದು ಒಳಿತು ಹಾಗೂ ಅಂತಹವರ ಜೊತೆ ಚಾಟ್​ ಮಾಡುವುದರಿಂದ ದೂರ ಉಳಿಯುವುದು ಕೂಡ ಒಳ್ಳೆಯದೇ. ಯಾಕೆಂದರೆ ವಿಜಯವಾಡದಲ್ಲಿ ಹುಡಗಿಯರ ಹೆಸರಿಲ್ಲಿ ಇನ್​ಸ್ಟಾಗ್ರಾಂ ಅಕೌಂಟ್​ ಕ್ರಿಯೇಟ್​ ಮಾಡಿ, ಹುಡುಗಿಯರನ್ನು ತನ್ನ ಜಾಲಕ್ಕೆ ಬೀಳಿಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಇನ್​​ಸ್ಟಾಗ್ರಾಂನಲ್ಲಿ ಹುಡುಗಿಯ ಹೆಸರಿನಲ್ಲಿ ಫೇಕ್​ ಅಕೌಂಟ್​​ಗಳನ್ನು​ ಕ್ರಿಯೇಟ್ ಮಾಡಿ, ಯುವತಿಯರಿಗೆ ಫ್ರೆಂಡ್​ ರಿಕ್ವೆಸ್ಟ್ ಕಳುಹಿಸಿ, ಬಳಿಕ ಬ್ಲ್ಯಾಕ್​ಮೇಲ್ ಮಾಡುತ್ತಿದ್ದ ವಿಜಯವಾಡದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯು ಹುಡುಗಿಯರ ರೀತಿಯಲ್ಲೇ ಯುವತಿಯರೊಂದಿಗೆ ಚಾಟ್ ಮಾಡುತ್ತಾ, ತನ್ನ ಮಾತುಗಳಿಂದ ಮರುಳು ಮಾಡುತ್ತಿದ್ದ. ಅವರ ಜೊತೆ ತುಂಬಾ ಸಲುಗೆಯಿಂದ ಮಾತನಾಡುತ್ತಾ, ಬಳಿಕ ಸೆಕ್ಸ್​​​​​ ಚಾಟ್​​ ಮಾಡಲು ಶುರುಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಯು ಇಂಟರ್​ನೆಟ್​ನಲ್ಲಿ ಕೆಲವು ಅರೆಬೆತ್ತಲೆ ಫೋಟೋಗಳನ್ನು ಡೌನ್​ಲೋಡ್ ಮಾಡಿಕೊಂಡು, ತನ್ನ ಫೇಕ್​ ಇನ್​​ಸ್ಟಾಗ್ರಾಂ ಪ್ರೊಫೈಲ್​​ನಲ್ಲಿ ಅಪ್​ಲೋಡ್ ಮಾಡುತ್ತಿದ್ದ. ಅದೇ ರೀತಿ ಯುವತಿಯರಿಗೆ ಅವರ ಫೋಟೋ ಕಳುಹಿಸುವಂತೆ ಕೇಳುತ್ತಿದ್ದ. ಹಾಗೆ ಕೆಲವು ದಿನ ಚಾಟಿಂಗ್ ಮುಂದುವರೆಸಿ, ಆತ ಹುಡುಗಿಯರ ಖಾಸಗಿ ಫೋಟೋಗಳನ್ನು ಕಳುಹಿಸುವಂತೆ ಕೇಳುತ್ತಿದ್ದ. ಯುವತಿಯರು ಆತನ ಮೋಸದ ಜಾಲಕ್ಕೆ ಸಿಲುಕಿ, ಹುಡುಗಿ ಎಂದುಕೊಂಡು ತಮ್ಮ ಪ್ರೈವೇಟ್ ಫೋಟೋಗಳನ್ನು ಕಳುಹಿಸುತ್ತಿದ್ದರು.

ಕರ್ನಾಟಕಕ್ಕೆ ಸೇರಲು ಮುಂದಾದ ಮಹಾರಾಷ್ಟ್ರದ ಹಳ್ಳಿಗಳು; ಬೆಳಗಾವಿ ನಮ್ಮದು ಎಂದು ಉದ್ದವ್​ ಠಾಕ್ರೆಗೆ ಮಹಾ ಜನರಿಂದಲೇ ತಿರುಗೇಟು

ಬಳಿಕ ಆರೋಪಿಯು ಹುಡುಗಿಯರು ಕಳುಹಿಸಿದ್ದ ಅರೆಬೆತ್ತಲೆ ಫೋಟೋಗಳನ್ನು ಸೇವ್ ಮಾಡಿಕೊಳ್ಳುತ್ತಿದ್ದ. ತಾನು ಹೇಳಿದ ಹಾಗೆ ಕೇಳದಿದ್ದರೆ ಅವರ ಅರೆಬೆತ್ತಲೆ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕುವುದಾಗಿ ಯುವತಿಯರಿಗೆ ಬ್ಲ್ಯಾಕ್​ ಮೇಲ್ ಮಾಡುತ್ತಿದ್ದ. ಹೀಗೆ ಸುಮಾರು 70 ಹುಡುಗಿಯರನ್ನು ತನ್ನ ಬಲೆಗೆ ಬೀಳಿಸಿಕೊಂಡಿದ್ದ. ಕೊನೆಗೆ ಈ ಮೋಸದ ಜಾಲಕ್ಕೆ ಬಿದ್ದ ಯುವತಿಯೊಬ್ಬಳು ಆತನ ವಂಚನೆ ಅರಿತು, ಪೊಲೀಸರಿಗೆ ದೂರು ನೀಡಿದ್ದಾಳೆ.

ಸೈಬರ್​​ ಕ್ರೈಂ ಪೊಲೀಸ್​ ಠಾಣೆಯ ಪೊಲೀಸರು ದೂರು ದಾಖಲಿಸಿಕೊಂಡು, ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸಲು ಶುರು ಮಾಡಿದರು. ತನಿಖೆ ವೇಳೆ, ಆರೋಪಿಯು ಮೂಲತಃ ವಿಜಯವಾಡದ ಸುಮಂತ್ ಎಂಬುದು ತಿಳಿದು ಬಂದಿದೆ. ಈತ ಹೈದರಾಬಾದ್​​ನ ಮನಿಕೊಂಡ ಎಂಬಲ್ಲಿ ವಾಸವಿದ್ದು, ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.

ಬಂಧಿತ ಆರೋಪಿ ಸುಮಂತ್​ ಫೇಕ್​ ಇನ್​ಸ್ಟಾಗ್ರಾಂ ಪ್ರೊಫೈಲ್ ಕ್ರಿಯೇಟ್ ಮಾಡಿ, ಇಂಟರ್​​ನೆಟ್​​ನಿಂದ ಸುಂದರವಾದ ಹುಡುಗಿಯರ ಫೋಟೋಗಳನ್ನು ಡೌನ್​ಲೋಡ್ ಮಾಡಿಕೊಂಡು, ತನ್ನ ಫೇಕ್ ಖಾತೆಯಲ್ಲಿ ಅಪ್​ಲೋಡ್ ಮಾಡುತ್ತಿದ್ದ. ತನ್ನ ಖಾತೆಯ ಪ್ರೊಫೈಲ್​ ಪಿಕ್ಚರ್​​ಗೆ ಒಂದು ಸುಂದರವಾದ ಹುಡುಗಿಯ ಫೋಟೋ ಹಾಕಿದ್ದ. ಹುಡುಗಿಯರಿಗೆ ಫ್ರೆಂಡ್​ ರಿಕ್ವೆಸ್ಟ್ ಕಳುಹಿಸಿ, ಅವರ ಜೊತೆ ಹುಡುಗಿಯ ರೀತಿಯಲ್ಲೇ ಚಾಟ್ ಮಾಡುತ್ತಿದ್ದ.
Youtube Video

ಬಳಿಕ ಸೆಕ್ಸ್​ ಚಾಟ್​ ಮಾಡಿಕೊಂಡು, ಹುಡುಗಿಯರ ಅರೆಬೆತ್ತಲೆ ಫೋಟೋ ಹಾಗೂ ವಿಡಿಯೋಗಳನ್ನು ಕಳುಹಿಸಿಕೊಳ್ಳುತ್ತಿದ್ದ. ತಾನು ಹೇಳಿದ ಹಾಗೆ ಕೇಳದಿದ್ದರೆ, ಹುಡುಗಿಯರ ಅರೆಬೆತ್ತಲೆ ಫೋಟೋ ಹಾಗೂ ವಿಡಿಯೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವುದಾಗಿ ಎದುರಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
Published by: Latha CG
First published: February 3, 2021, 3:54 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories