ಕೋಲ್ಕತ್ತಾ: ಕೋಲ್ಕಾತ್ತಾದಿಂದ ಬ್ಯಾಂಕಾಕ್ಗೆ ಪ್ರಾಯಾಣಿಸುತ್ತಿದ್ದ ಪ್ರಯಾಣಿಕನೊಬ್ಬ 32,000 ರೂ ಮೌಲ್ಯದ ಯುಎಸ್ ಡಾಲರ್ಗಳನ್ನು ನೂರಾರು ಸೀಲ್ ಮಾಡಿದ ಗುಟ್ಕಾ ಪ್ಯಾಕೇಟ್ಗಳಲ್ಲಿ ಕೊಂಡೊಯ್ಯಲು ಪ್ರಯತ್ನಿಸಿ ಸಿಕ್ಕಿಬಿದ್ದಿದ್ದಾನೆ. ವಾಯು ಗುಪ್ತಚರ ಘಟಕ(Air Intelligence Unit) ಇಮಿಗ್ರೇಸನ್ ವೇಳೆ ಸ್ಮಗ್ಲರ್ನನ್ನು ತಡೆದು, ಕೋಲ್ಕತ್ತಾ ಕಸ್ಟಮ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ; Coal Smuggling: ಪಶ್ಚಿಮ ಬಂಗಾಳದ 8 ಐಪಿಎಸ್ ಅಧಿಕಾರಿಗಳಿಗೆ ಇಡಿ ಸಮನ್ಸ್, ದೆಹಲಿಗೆ ಬುಲಾವ್!
ತಪಾಸಣೆ ವೇಳೆ ಅಧಿಕಾರಿಗಳು ಪಾನ್ ಮಸಾಲ ಪ್ಯಾಕೇಟ್ ಒಳಗೆ ಮಡಿಚಿಟ್ಟಿದ್ದ 40,000 ಯುಎಸ್ ಡಾಲರ್ (32,78,000 ಲಕ್ಷ ರೂ) ಮೊತ್ತವನ್ನು ವಶಪಡಿಸಿಕೊಂಡಿದ್ದಾರೆ. ಪ್ರತಿಯೊಂದು ಪ್ಯಾಕೇಟ್ನಲ್ಲೂ 10 ಡಾಲರ್ ಮೌಲ್ಯದ ಎರಡು ನೋಟುಗಳನ್ನು ಇಡಲಾಗಿತ್ತು. ಈ ಪ್ಯಾಕೇಟ್ಗಳನ್ನು ಆ ಪ್ರಯಾಣಿಕ ತನ್ನ ದೊಡ್ಡದಾದ ಬ್ಯಾಗ್ವೊಂದರ ಅಂಚಿನಲ್ಲಿ ಇಟ್ಟಿದ್ದ ಎಂದು ತಿಳಿದುಬಂದಿದೆ.
ಪಾನ್ ಮಸಾಲದ ಪೌಡರ್ ಪತ್ತೆ
ಎಎನ್ಐ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದು, ಅದರಲ್ಲಿ ಅಧಿಕಾರಿ ಪಾನ್ ಮಸಾಲ(Pan Masala) ಎಂದು ಬರೆದಿರುವ ದೊಡ್ಡ ಪ್ಯಾಕೆಟ್ಗಳನ್ನು ಹರಿದು ಡಾಲರ್ಗಳನ್ನು ಹೊರ ತೆಗೆಯುತ್ತಿರುವುದನ್ನು ಕಾಣಬಹುದಾಗಿದೆ. ಆ ಪ್ಯಾಕೆಟ್ಗಳಲ್ಲಿ ಕೆಲವು ಸಣ್ಣ ಪ್ಯಾಕೆಟ್ಗಳಿದ್ದು ಅದರಲ್ಲಿ ಸ್ವಲ್ಪ ಪಾನ್ ಮಸಾಲದ ಪೌಡರ್ ಕೂಡ ಕಂಡುಬಂದಿದೆ. ಸ್ಮಗ್ಲರ್ 10 ಡಾಲರ್ಗಳ 2 ನೋಟುಗಳನ್ನು ಪಾಲಿಥಿನ್ ಕವರ್ನಲ್ಲಿ ಮಡಚಿ, ಅವುಗಳನ್ನು ಗುಟ್ಕಾ ಪ್ಯಾಕೆಟ್ನೊಳಗೆ ಸೇರಿಸಿ ಸೀಲ್ ಮಾಡಿ ಸ್ಮಗ್ಲಿಂಗ್ ಮಾಡಲಾಗುತ್ತಿತ್ತು ಎಂದು ತಿಳಿದುಬಂದಿದೆ.
ಬೆಂಗಳೂರಿನಲ್ಲಿ ಅರ್ಧ ಕೆಜಿ ಚಿನ್ನ ವಶ
ಇದಕ್ಕೂ ಮುನ್ನ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾಲ್ಡೀವ್ಸ್ನಿಂದ ಬಂದಿದ್ದ ಪ್ರಯಾಣಿಕನೊಬ್ಬ ಗುದನಾಳದಲ್ಲಿ ಅರ್ಧ ಕೆಜಿಗೂ ಹೆಚ್ಚು ಚಿನ್ನದ ಪೇಸ್ಟ್ಅನ್ನು ಬಚ್ಚಿಟ್ಟುಕೊಂಡು ಬಂದು ಕಸ್ಟಮ್ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದ. ಆ ಪ್ರಯಾಣಿಕ ಡಿಸೆಂಬರ್ 30ರಂದು ಗೋ ಫಸ್ಟ್ ಫ್ಲೈಟ್ನಲ್ಲಿ ಬಂದಿಳಿದಿದ್ದ.
ಪ್ರಯಾಣಿಕನು ಡಿಸೆಂಬರ್ 30,2022 ರಂದು ಗೋ ಫಸ್ಟ್ ಫ್ಲೈಟ್ನಲ್ಲಿ ಬಂದಿಳಿದನು, ಅವನ ಪ್ರಯಾಣದ ಮಾದರಿ ಮತ್ತು ವಿಚಿತ್ರವಾದ ನಡಿಗೆಯು ಕಸ್ಟಮ್ಸ್ ಅಧಿಕಾರಿಗಳಿಗೆ ಅನುಮಾನವನ್ನುಂಟುಮಾಡಿತು. ಆತನನ್ನು ತಡೆದು ಸ್ಕ್ಯಾನ್ಗೆ ಒಳಪಡಿಸಿದಾಗ, ಆತನ ದೇಹದಲ್ಲಿ ಬಚ್ಚಿಟ್ಟ ಚಿನ್ನವನ್ನು ಅಧಿಕಾರಿಗಳು ಪತ್ತೆ ಮಾಡಿದ್ದರು.
28.72 ಲಕ್ಷ ಮೌಲ್ಯದ ಚಿನ್ನ
ಅಧಿಕಾರಿಗಳು ಪ್ರಯಾಣಿಕನನ್ನು ಪರಿಶೀಲನಗೆ ಒಳಪಡಿಸಿದ ನಂತರ ಆತನ ಗುದನಾಳದಲ್ಲಿ ಮೂರು ಕ್ಯೂಬ್ ಚಿನ್ನದ ಪೇಸ್ಟ್ ಸಿಕ್ಕಿದ್ದು, ಚಿನ್ನದ ಪೇಸ್ಟ್ನಿಂದ 532.21 ಗ್ರಾಂ ತೂಕದ ಚಿನ್ನದ ಬಾರ್ ಅನ್ನು ಹೊರತೆಗೆದಿದ್ದಾರೆ. ಕಸ್ಟಮ್ ಅಧಿಕಾರಿಗಳ ಪ್ರಕಾರ ಅದು 28.72 ಲಕ್ಷ ರೂ ಮೌಲ್ಯದ್ದಾಗಿದೆ. ಇನ್ನು ಕೇವಲ ಡಿಸೆಂಬರ್ ತಿಂಗಳಲ್ಲೇ ಬೆಂಗಳೂರು ಮತ್ತು ಮಂಗಳೂರು ವಿಮಾನ ನಿಲ್ದಾಣಗಳಲ್ಲಿ ಕಸ್ಟಮ್ಸ್ ಅಧಿಕಾರಿಗಳು ಒಟ್ಟು ಆರು ಪ್ರಕರಣಗಳಲ್ಲಿ ನಾಲ್ಕು ಕಿಲೋಗ್ರಾಂಗಳಷ್ಟು ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ