• Home
  • »
  • News
  • »
  • national-international
  • »
  • Dogs Attack: ರೇಬಿಸ್ ವ್ಯಾಕ್ಸಿನೇಷನ್ ಶಿಬಿರದಲ್ಲೇ ಹುಚ್ಚು ನಾಯಿ ಆರ್ಭಟ, ಶ್ವಾನಗಳ ಜೊತೆ ಜನರಿಗೂ ಕಚ್ಚಿ ಹುಚ್ಚಾಟ!

Dogs Attack: ರೇಬಿಸ್ ವ್ಯಾಕ್ಸಿನೇಷನ್ ಶಿಬಿರದಲ್ಲೇ ಹುಚ್ಚು ನಾಯಿ ಆರ್ಭಟ, ಶ್ವಾನಗಳ ಜೊತೆ ಜನರಿಗೂ ಕಚ್ಚಿ ಹುಚ್ಚಾಟ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಲಸಿಕೆ ಹಾಕಲು ತಂದಿದ್ದ ನಾಯಿಯೊಂದು ಹುಚ್ಚೆದ್ದು ರಂಪಾಟ ಮಾಡಿದೆ. ಅಲ್ಲದೇ ಸ್ಥಳದಲ್ಲಿದ್ದ ಇತರೆ ನಾಯಿಗಳನ್ನು ಹಾಗೂ ಜನರಿಗೆ ಕಚ್ಚಿದೆ.  ಶಿಬಿರದಲ್ಲಿ ಹುಚ್ಚು ಹಿಡಿದಂತೆ ದಾಂಧಲೆ ನಡೆಸಿದ ನಾಯಿಯನ್ನು ಬಿಡಿಸಲು ಅಲ್ಲಿದ್ದವರು ಮುಂದಾದಾಗ ಅವರ ಮೇಲೂ ನಾಯಿ ದಾಳಿ ನಡೆಸಿದೆ.

  • News18 Kannada
  • Last Updated :
  • Tamil Nadu, India
  • Share this:

ತಮಿಳುನಾಡು: ರೇಬೀಸ್ ಕಾಯಿಲೆಯು (Rabies vaccine) ಒಂದು ವೈರಸ್ ಜೀವಿಯಿಂದ ಬರುತ್ತದೆ. ಬರಿಗಣ್ಣಿಗೆ ಕಾಣಿಸದಷ್ಟು ಸೂಕ್ಷ್ಮವಾಗಿರುತ್ತದೆ. ಇದರ ಹೆಸರು ‘ಲಿಸ್ಸಾ’ (Lyssavirus). ರೋಗಪೀಡಿತ ಪ್ರಾಣಿಯ ಅಥವಾ ಮಾನವರ ಜೊಲ್ಲಿನಿಂದ ಲಿಸ್ಸಾ ವೈರಸ್ ವಿಸರ್ಜಿಸಲ್ಪಡುತ್ತದೆ. ಅಂದರೆ, ರೋಗ ಹರಡಬೇಕೆಂದರೆ ರೋಗಗ್ರಸ್ಥ ಪ್ರಾಣಿಯು ಕಚ್ಚಬೇಕು. ಕಚ್ಚಿದಾಗ ಆ ಪ್ರಾಣಿಯ (Animal) ಅಥವಾ ಮನುಷ್ಯನ ದೇಹವನ್ನು (Human Body) ವೈರಸ್ ಸೇರುತ್ತದೆ. ನಂತರ ರಕ್ತಮಾರ್ಗದಲ್ಲಿ ಹೋಗದೇ, ನರಗಳ (Nurve) ಮೂಲಕ ದಿನಕ್ಕೆ ಸುಮಾರು 6 ಸೆಂ.ಮೀ. ವೇಗದಲ್ಲಿ 1-2 ದಿನಗಳಲ್ಲಿ ಕೇಂದ್ರ ನರಮಂಡಲದತ್ತ ಪ್ರಯಾಣ ಬೆಳೆಸುತ್ತದೆ. ಒಮ್ಮೆ ಮಿದುಳನ್ನು (Brain) ಸೇರಿ ಅಲ್ಲಿನ ನರಕೋಶಗಳ ಮೇಲೆ ನಿಯಂತ್ರಣವನ್ನು ಸಾಧಿಸಿತೆಂದರೆ ಕಚ್ಚಿಸಿಕೊಂಡ ಪ್ರಾಣಿಯು ವೈರಸ್‌ನ ಆಜ್ಞಾಧಾರಕ ಸೇವಕ ಮಾತ್ರ. ಇದರ ನಂತರ ಯಾವುದೇ ಚಿಕಿತ್ಸೆಯು ಫಲಕಾರಿಯಾಗದು. ಸದ್ಯ ತಮಿಳುನಾಡಿನಲ್ಲಿ (TamilNadu) ರೀಬೀಸ್​ ಶಿಬಿರದ (Rabies Camp) ವೇಳೆ ಹುಚ್ಚು ನಾಯಿಯೊಂದು ಜನರ ಮೇಲೆ ಹಾಗೂ ಇತರ ನಾಯಿಗಳ ಮೇಲೆ ದಾಳಿ ನಡೆಸಿದೆ. ತಮಿಳುನಾಡಿನ ಕೃಷ್ಣಗಿರಿಯ (KrishnaGiri) ಪಿಆರ್​ಸಿ ಶಾಲಾ ಆವರಣದಲ್ಲಿ ಘಟನೆ ವರದಿಯಾಗಿದೆ.


ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದ ಕೃಷ್ಣಗಿರಿ ಜಿಲ್ಲಾಧಿಕಾರಿ ಜಯಚಂದ್ರ ಬಾನುರೆಡ್ಡಿ


ಪಶುಸಂಗೋಪನೆ ಇಲಾಖೆಯು  ರಾಷ್ಟ್ರೀಯ ಕೃಷಿ ವಿಕಾಸ ಕಾರ್ಯಕ್ರಮವನ್ನು ಆಯೋಜಿಸಿತ್ತು. ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಯಾಗಿ ಕೃಷ್ಣಗಿರಿ ಜಿಲ್ಲಾಧಿಕಾರಿ ಜಯಚಂದ್ರ ಬಾನುರೆಡ್ಡಿ ಆಗಮಿಸಿ, ಚಾಲನೆ ನೀಡಿದ್ದರು.


the noida authority has ordered that the owner of the dog has to pay 10 thousand rupees for the treatment of a dog bite ach
ಸಾಂದರ್ಭಿಕ ಚಿತ್ರ


ಬೇರೆ ನಾಯಿಗಳು ಮತ್ತು ಜನರ ಮೇಲೂ ಹುಚ್ಚು ನಾಯಿ ದಾಳಿ


ಶಿಬಿರಕ್ಕೆ ಸಾಕಷ್ಟು ಸಾಕು ನಾಯಿಗಳನ್ನು ಕರೆತರಲಾಗಿತ್ತು. ಈ ವೇಳೆ ಲಸಿಕೆ ಹಾಕಲು ತಂದಿದ್ದ ನಾಯಿಯೊಂದು ಹುಚ್ಚೆದ್ದು ರಂಪಾಟ ಮಾಡಿದೆ. ಅಲ್ಲದೇ ಸ್ಥಳದಲ್ಲಿದ್ದ ಇತರೆ ನಾಯಿಗಳನ್ನು ಹಾಗೂ ಜನರಿಗೆ ಕಚ್ಚಿದೆ.  ಶಿಬಿರದಲ್ಲಿ ಹುಚ್ಚು ಹಿಡಿದಂತೆ ದಾಂಧಲೆ ನಡೆಸಿದ ನಾಯಿಯನ್ನು ಬಿಡಿಸಲು ಅಲ್ಲಿದ್ದವರು ಮುಂದಾದಾಗ ಅವರ ಮೇಲೂ ನಾಯಿ ದಾಳಿ ನಡೆಸಿದೆ.


ನಾಲ್ಕು ನಾಯಿಗಳು ಸೇರಿದಂತೆ ಮೂರ್ನಾಲ್ಕು ದಾಳಿ ನಡೆಸಿದ ನಾಯಿಯನ್ನು ಬಿಡಿಸಲು ಸಾರ್ವಜನಿಕರು ಹರಸಾಹಸವನ್ನೇ ಪಟ್ಟಿದ್ದಾರೆ.


stray dog attacking video viral in kerala
ಸಾಂದರ್ಭಿಕ ಚಿತ್ರ


ಭಾನುವಾರ ಬೆಂಗಳೂರಿನಲ್ಲಿ ಬಾಲಕಿ ಮೇಲೆ ನಾಯಿ ದಾಳಿ


ಮತ್ತೊಂದೆಡೆ ಭಾನುವಾರ ನಗರದ ಬಿಬಿಎಂಪಿ ವ್ಯಾಪ್ತಿಯ ಲಕ್ಷ್ಮಿದೇವಿ ನಗರದಲ್ಲಿ ಎಂಟು ವರ್ಷದ ಬಾಲಕಿ ಮೇಲೆ ಬೀದಿ ನಾಯಿ ದಾಳಿ ನಡೆಸಿದೆ. ಭಾನುವಾರ ರಾತ್ರಿ ತಂದೆ ಜೊತೆ ತೆರಳುತ್ತಿದ್ದ ವೇಳೆ ನಾಯಿ ಬಾಲಕಿ ಮೇಲೆ ದಾಳಿ ನಡೆಸಿದೆ. ಅಲ್ಲದೇ ಮಗಳ ರಕ್ಷಣೆಗೆ ಮುಂದಾದ ತಂದೆಗೂ ನಾಯಿ ಕಚ್ಚಿದೆ. ಇದರಿಂದ ಮಗುವಿನ ಕತ್ತು ಮತ್ತು ಮುಖದ ಭಾಗಕ್ಕೆ ಗಾಯಗಳಾಗಿದ್ದು, ಇದೀಗ ಆಕೆಗೆ ಹೊಲಿಗಳನ್ನು ಹಾಕಿಸಲಾಗಿದೆ.


ಇದನ್ನೂ ಓದಿ: Street Dog Attack: ಎಂಟು ವರ್ಷದ ಬಾಲಕಿ ಮೇಲೆ ಬೀದಿ ನಾಯಿ ದಾಳಿ; ಮುಖ, ಕುತ್ತಿಗೆ ಭಾಗದಲ್ಲಿ ಹೊಲಿಗೆಗಳು


street dog attack on eight year old girl in bengaluru mrq
ಸಾಂದರ್ಭಿಕ ಚಿತ್ರ


ರೇಬೀಸ್​ ಕಾಯಿಯೆ ನಿಯಂತ್ರಿಸುವುದು ಹೇಗೆ?


ಸಾಮಾನ್ಯವಾಗಿ ನಮ್ಮ ದೇಶದಲ್ಲಿ ರೇಬೀಸ್ ಪ್ರಕರಣಗಳು ಹೆಚ್ಚಾಗುವುದೇ ನಾಯಿ ಕಡಿತದಿಂದ ಹೀಗಾಗಿ ಸಾಕು ಪ್ರಾಣಿಗಳಿಗೆ ರೇಬೀಸ್ ನಿರೋಧಕ ಲಸಿಕೆಯನ್ನು ಕಡ್ಡಾಯವಾಗಿ ಹಾಕಿಸಬೇಕು. ಮೊದಲ ಬಾರಿಗೆ ಒಂದು ತಿಂಗಳ ಅಂತರದಲ್ಲಿ ಎರಡು ಲಸಿಕೆಗಳು, ಅನಂತರ ಪ್ರತಿ ವರ್ಷ ಒಂದು ಲಸಿಕೆ ಹಾಕಿಸಿದ್ದಲ್ಲಿ ನಿಮ್ಮ ಸಾಕು ನಾಯಿಗೆ, ನಿಮಗೆ ಹಾಗೂ ಸಮಾಜಕ್ಕೂ ಒಳಿತು.


ಒಂದು ವೇಳೆ ರೇಬೀಸ್ ಸೋಂಕು ತಗುಲಿದ ಅನಂತರವಾದರೆ ಒಟ್ಟು ಆರು ಬಾರಿ (0, 3, 7, 14, 28 ಮತ್ತು 90 ನೇ ದಿನಗಳ ಒಳಗೆ) ಲಸಿಕೆಯನ್ನು ಹಾಕಿಸಬೇಕು. ಇಲ್ಲಿ ‘0’ ದಿನವೆಂದರೆ ಮೊದಲ ಲಸಿಕೆ ನೀಡಿದ ದಿನ ಮತ್ತು ಮೊದಲ ದಿನವನ್ನು ಸೋಂಕು ತಗುಲಿದ 24ಗಂಟೆಗಳಲ್ಲಿ ಹಾಕಿಸಿದ್ದಲ್ಲಿ ಉತ್ತಮ. ತಡವಾದಷ್ಟೂ ರಕ್ಷಣೆಯ ಖಾತರಿ ಕಡಿಮೆಯಾಗುತ್ತದೆ.

Published by:Monika N
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು