ಕಳ್ಳತನ ಮಾಡಲು 10 ಕೆಜಿ ತೂಕ ಇಳಿಸಿಕೊಂಡ Gujarat Thief

2 ವರ್ಷಗಳ ಹಿಂದೆ ತಾನು ಕೆಲಸ ಮಾಡುತ್ತಿದ್ದ ಮನೆಯೊಂದನ್ನು ಚೆನ್ನಾಗಿ ಗಮನಿಸಿದ 34 ವರ್ಷದ ಮನೆ ಕೆಲಸ ಮಾಡುವ ಮೋತಿ ಸಿಂಗ್ ಚೌಹಾಣ್ ಅದೇ ಮನೆಯಲ್ಲಿಯೇ ಕಳ್ಳತನ ಮಾಡಲು ತನ್ನ ದೇಹದ ತೂಕ ಇಳಿಸಿಕೊಳ್ಳಲು 3 ತಿಂಗಳ ಕಾಲ ಕಟ್ಟುನಿಟ್ಟಾದ ಆಹಾರ ಕ್ರಮ ಪಾಲಿಸಿದ್ದಾನೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನಾವು ಸಿನಿಮಾಗಳಲ್ಲಿ ಎಂತಹ ದರೋಡೆಗಳನ್ನು, ಮನೆ ಕಳ್ಳತನ (Theft) ನೋಡಿದ್ದೇವೆ. ವಿಭಿನ್ನವಾಗಿ ಯಾವುದೇ ಸುಳಿವು ಬಿಡದೇ ಕಳ್ಳತನ ಮಾಡಲು ಅನೇಕ ಕಾರ್ಯತಂತ್ರಗಳನ್ನು ರೂಪಿಸುತ್ತಾರೆ. ಕಳ್ಳರು  (Thief) ಒಂದು ಮನೆಯನ್ನು ಕಳ್ಳತನ ಮಾಡಲು ವಾರಗಟ್ಟಲೆ ರೂಪರೇಷಗಳನ್ನು ತಯಾರಿಸಿಕೊಂಡು ಆನಂತರ ಕಳ್ಳತನಕ್ಕೆ ಕೈ ಹಾಕುತ್ತಾರೆ.ಜನರು ಚಲನಚಿತ್ರಗಳಲ್ಲಿ ತೋರಿಸುವಂತಹ ಈ ಕಾಲ್ಪನಿಕ ಅಪರಾಧಗಳಿಂದ ಪ್ರೇರಿತರಾಗುತ್ತಾರೆ ಮತ್ತು ನಿಜ ಜೀವನದಲ್ಲೂ ಅದರಂತೆ ಮಾಡಲು ಪ್ರಯತ್ನಿಸಿ ಸಿಕ್ಕಿ ಹಾಕಿಕೊಳ್ಳುತ್ತಾರೆ. ಇಲ್ಲಿಯೂ ಅದೇ ರೀತಿಯ ಘಟನೆ ನಡೆದಿದೆ. ಗುಜರಾತಿನಲ್ಲಿ ಮನೆ ಕೆಲಸಗಾರನೊಬ್ಬ ಕಳ್ಳತನ ಮಾಡಲು ಹೊಂಚು ಹಾಕಿ ಆ ಕಳ್ಳತನ ಮಾಡುವ ಮುಂಚೆ ಏನೆಲ್ಲಾ ಕಸರತ್ತು ಮಾಡಿದ್ದಾನೆ ನೀವೇ ನೋಡಿ.

2 ವರ್ಷಗಳ ಹಿಂದೆ ತಾನು ಕೆಲಸ ಮಾಡುತ್ತಿದ್ದ ಮನೆಯೊಂದನ್ನು ಚೆನ್ನಾಗಿ ಗಮನಿಸಿದ 34 ವರ್ಷದ ಮನೆ ಕೆಲಸ ಮಾಡುವ ಮೋತಿ ಸಿಂಗ್ ಚೌಹಾಣ್ ಅದೇ ಮನೆಯಲ್ಲಿಯೇ ಕಳ್ಳತನ ಮಾಡಲು ತನ್ನ ದೇಹದ ತೂಕ ಇಳಿಸಿಕೊಳ್ಳಲು 3 ತಿಂಗಳ ಕಾಲ ಕಟ್ಟುನಿಟ್ಟಾದ ಆಹಾರ ಕ್ರಮ ಪಾಲಿಸಿದ್ದಾನೆ.

drinking these juice in the empty stomach helps to reduce weight loss
ಸಾಂದರ್ಭಿಕ ಚಿತ್ರ


2 ವರ್ಷಗಳ ಹಿಂದೆ ಅವನು ತಾನು ಕೆಲಸ ಮಾಡುತ್ತಿದ್ದ ಮನೆಯನ್ನು ಬಿಟ್ಟ ನಂತರವೂ ಭೋಪಾಲ್‌ನಲ್ಲಿರುವ ಆ ಮನೆಯಲ್ಲಿರುವ ಅತ್ಯಂತ ದುರ್ಬಲ ಸ್ಥಳ ನೆನಪಿಸಿಕೊಂಡನು. ಆಗ ಅವನ ಕಣ್ಣು ಮುಂದೆ ಬಂದಿದ್ದು ಆ ಮನೆಯ ಒಂದು ಗಾಜಿನ ಕಿಟಕಿ. ಆದರೆ, ಈ ಗಾಜಿನ ಕಿಟಕಿಯ ಮೂಲಕ ಮನೆಯೊಳಗೆ ಹೋಗಲು ಇನ್ನೂ ತೆಳ್ಳಗಿರಬೇಕು ಮತ್ತು ತನ್ನ ಪ್ರಸ್ತುತ ದೇಹದ ತೂಕದಿಂದ ಇದು ಸಾಧ್ಯವಿಲ್ಲ ಎಂದು ಅವನಿಗೆ ತಿಳಿದಿತ್ತು. ಇದನ್ನು ಅರಿತ ಮೋತಿ ಸಿಂಗ್ ಆ ಆಕಾರಕ್ಕೆ ಬರಲು 3 ತಿಂಗಳುಗಳ ಕಾಲ ಬರೀ ಒಂದು ಬಾರಿ ಅಷ್ಟೇ ಊಟ ಮಾಡಿದರು ಮತ್ತು 10 ಕೆಜಿ ತೂಕ ಇಳಿಸಿಕೊಂಡಿದ್ದರು ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: Weight Loss: 15 ಕೆಜಿ ತೂಕ ಇಳಿಸಿದ Bharti Singh: ವೇಗವಾಗಿ ತೂಕ ಇಳಿಸಲು ಈ ನಾಲ್ಕು ಕ್ರಮಗಳನ್ನು ಅನುಸರಿಸಿ..!

ಸುದ್ದಿ ಮಾಧ್ಯಮದ ಪ್ರಕಾರ, ಮೂಲತಃ ರಾಜಸ್ಥಾನದ ಉದಯಪುರ ಮೂಲದ ಚೌಹಾಣ್, ಮೋಹಿತ್ ಮರಡಿಯಾ ಅವರ ಬಸಂತ್ ಬಹಾರ್ ಸೊಸೈಟಿ ನಿವಾಸದಲ್ಲಿ ಮನೆಯಲ್ಲಿ ಕೆಲಸ ಮಾಡುತ್ತಿದ್ದರು. ಎಲ್ಲಾ ಸಿಸಿಟಿವಿ ಕ್ಯಾಮೆರಾಗಳನ್ನು ಎಲ್ಲಿ ಹಾಕಲಾಗಿದೆ ಮತ್ತು ಯಾರಿಗೂ ಕಾಣಿಸದ ಸ್ಥಳಗಳು ಯಾವುದು ಎಂದು ತಿಳಿದಿದ್ದರು. ಬೆಲೆಬಾಳುವ ವಸ್ತುಗಳನ್ನು ಮರಡಿಯಾ ನಿವಾಸದಲ್ಲಿ ಎಲ್ಲಿ ಇಡಲಾಗಿದೆ ಎಂದು ಸಹ ಅವನಿಗೆ ತಿಳಿದಿತ್ತು.

ಕೆಲವು ತಿಂಗಳ ಹಿಂದೆ, ಮರಡಿಯಾ ಕುಟುಂಬವು ಕೆಲವು ದಿನಗಳ ಕಾಲ ರಜೆಗೆ ಹೋಗುತ್ತಿದ್ದಾರೆ ಎಂದು ಚೌಹಾಣ್‌ಗೆ ತಿಳಿಯಿತು. ಎಲ್ಲಾ ಸಿಸಿಟಿವಿ ಕ್ಯಾಮೆರಾಗಳು ಎಲ್ಲಿವೆ ಎಂದು ಅವನಿಗೆ ತಿಳಿದಿದ್ದರಿಂದ, ಅವನು ಕ್ಯಾಮೆರಾಗಳನ್ನು ತಪ್ಪಿಸಿಕೊಂಡು ತನ್ನ ಸೈಕಲ್ ಮೇಲೆ ಮರಡಿಯಾ ನಿವಾಸವನ್ನು ತಲುಪಿದನು.

ಕಿಟಕಿಯ ಗಾಜನ್ನು ಕತ್ತರಿಸಲು ಅವನು ತನ್ನ ಉಪಕರಣಗಳನ್ನು ಬಳಸಿ ಅದರ ಮೂಲಕ ಒಳಗೆ ಹೋದನು. ನಂತರ ಮನೆಯಲ್ಲಿದ್ದ 37.14 ಲಕ್ಷ ರೂಪಾಯಿ ಮೊತ್ತದ ನಗದು ಮತ್ತು ಚಿನ್ನಾಭರಣಗಳನ್ನು ಕಳವು ಮಾಡಿದನು.

ಇದನ್ನೂ ಓದಿ: ತೂಕ ಇಳಿಸಿಕೊಂಡ ಸ್ಮೃತಿ ಇರಾನಿ: ಇದೆಲ್ಲ ಹೇಗೆ ಸಾಧ್ಯವಾಯ್ತು ಎಂದ ನೆಟ್ಟಿಗರು..!

ಕಳ್ಳತನದ ನಂತರ ಪೊಲೀಸರಿಗೆ ಸಿಸಿಟಿವಿಯಲ್ಲಿ ಏನೂ ಸುಳಿವು ಸಿಗಲಿಲ್ಲ, ಆದರೆ ಅಪರಾಧ ನಡೆದ ಸ್ಥಳದಲ್ಲಿ ಹೊಚ್ಚ ಹೊಸ ಕತ್ತರಿಸುವ ಸಾಧನವನ್ನು ಕಂಡುಕೊಂಡರು. ಈ ಸುಳಿವನ್ನು ಹಿಡಿದುಕೊಂಡು ಪೊಲೀಸರು ಭೋಪಾಲ್ ಮತ್ತು ಥಾಲ್ತೇಜ್‌ನ ಹಾರ್ಡ್‌ವೇರ್ ಅಂಗಡಿಗಳಲ್ಲಿ ವಿಚಾರಣೆ ನಡೆಸಿದರು. ಅಂಗಡಿ ಮಾಲೀಕರು ತಮ್ಮ ಅಂಗಡಿಯ ಬಾರ್ ಕೋಡ್ ಸ್ಟಿಕ್ಕರ್ ಮೂಲಕ ಉಪಕರಣ ಗುರುತಿಸಿದರು. ನಂತರ ಪೊಲೀಸರು ಹಾರ್ಡ್‌ವೇರ್ ಅಂಗಡಿಯ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಚೌಹಾಣ್‌ನನ್ನು ಪತ್ತೆ ಮಾಡಿದರು ಮತ್ತು ನಂತರ ಅವನನ್ನು ಬಂಧಿಸಿದರು.
Published by:Anitha E
First published: