• Home
  • »
  • News
  • »
  • national-international
  • »
  • ಡ್ರೆಸ್​ ಕೋಡ್​ ವಿರೋಧಿಸಿ ಶಾರ್ಟ್ ಸ್ಕರ್ಟ್ ತೊಟ್ಟು ಪ್ರತಿಭಟನೆ ಮಾಡಿದ ವಿದ್ಯಾರ್ಥಿಗಳು

ಡ್ರೆಸ್​ ಕೋಡ್​ ವಿರೋಧಿಸಿ ಶಾರ್ಟ್ ಸ್ಕರ್ಟ್ ತೊಟ್ಟು ಪ್ರತಿಭಟನೆ ಮಾಡಿದ ವಿದ್ಯಾರ್ಥಿಗಳು

ಪ್ರತಿಭಟಿಸಿದ ವಿದ್ಯಾರ್ಥಿಗಳು

ಪ್ರತಿಭಟಿಸಿದ ವಿದ್ಯಾರ್ಥಿಗಳು

ಶಾಲೆಯ ನೀತಿ-ನಿಯಮಗಳನ್ನು ವಿರೋಧಿಸಿ ವಿದ್ಯಾರ್ಥಿಗಳು ತರಗತಿಗೆ ಸ್ಕರ್ಟ್ ಧರಿಸಿ ಹೋಗುವುದರ ಜೊತೆಗೆ ಶಾಲಾ ನಿಯಮಗಳನ್ನು ವಿರೋಧಿಸಿದ್ದಾರೆ.

  • Share this:

ಶಾಲಾ ಸಮವಸ್ತ್ರದ ವಿಷಯ ಈ ಹಿಂದೆಯೂ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಮತ್ತೆ ಯುಕೆಯಲ್ಲಿ ಶಾಲೆಯ ಡ್ರೆಸ್‍ ಕೋಡ್ ವಿಷಯ ಮತ್ತೆ ಸುದ್ದಿಯಲ್ಲಿದೆ. ಶಾಲೆಯ ಡ್ರೆಸ್ ಕೋಡ್ ಬದಲಿಸುವಂತೆ 10ನೇ ತರಗತಿ ಓದುತ್ತಿರುವ ಮೂವರು ವಿದ್ಯಾರ್ಥಿಗಳು ವಿದ್ಯಾರ್ಥಿನಿಯರ ಶಾರ್ಟ್ ಸ್ಕರ್ಟ್ ತೊಟ್ಟು ಪ್ರತಿಭಟನೆ ಕೈಗೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹೆಚ್ಚಿನ ತಾಪಮಾನ ಹಿನ್ನೆಲೆ ವಿದ್ಯಾರ್ಥಿಗಳ ಶಾಲಾ ಸಮವಸ್ತ್ರ ಬದಲಾಯಿಸುವಂತೆ ಆಗ್ರಹಿಸಿ ಶಾರ್ಟ್ ಸ್ಕರ್ಟ್ ತೊಟ್ಟು ಪ್ರತಿಭಟನೆ ನಡೆಸಿದ್ದರು. ಕಾರ್ನ್‍ವಾಲ್‍ನಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಶಾಖ ಹೆಚ್ಚಳಗೊಂಡಿತ್ತು. ಶಾಲೆಯು ಹುಡುಗರು (ವಿದ್ಯಾರ್ಥಿಗಳು) ತುಂಡುಡುಗೆ ಧರಿಸುವುದನ್ನು ನಿಷೇಧಿಸಿತ್ತು. ಇದರ ಕುರಿತು ವಿದ್ಯಾರ್ಥಿಗಳು ಪ್ರತಿಭಟನೆ ಕೈಗೊಂಡಿದ್ದರು. ನಂತರ ಶಾಲಾ ಆಡಳಿತ ಮಂಡಳಿ ಒಪ್ಪಿಗೆ ನೀಡಿದ ನಂತರ ವಿದ್ಯಾರ್ಥಿಗಳು ಶಾಲೆಗೆ ಶಾರ್ಟ್ ಸ್ಕರ್ಟ್ ತೊಟ್ಟು ಬಂದಿದ್ದರು.


ಕೆಲವು ದಿನಗಳ ಹಿಂದೆ ಹವಾಮಾನ ಇಲಾಖೆಯು ಹೆಚ್ಚಳಗೊಳ್ಳುತ್ತಿರುವ ತಾಪಮಾನದ ಬಗ್ಗೆ ಎಚ್ಚರಿಕೆ ನೀಡಿತ್ತು. ಈ ಹಿನ್ನೆಲೆ ವಿದ್ಯಾರ್ಥಿಗಳು ಪ್ಯಾಂಟ್ ಧರಿಸುವುದು ಅಸಾಧ್ಯವಾಗಿದೆ. ಹಾಗಾಗಿ ತಾಪಮಾನ ಎದುರಿಸುವ ಸಲುವಾಗಿ ವಿದ್ಯಾರ್ಥಿಗಳಿಗೆ ಪ್ಯಾಂಟ್ ಬದಲು ಶಾರ್ಟ್ ಸ್ಕರ್ಟ್ ಧರಿಸಲು ಅನುವು ಮಾಡಿಕೊಡಬೇಕೆಂದು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರು.


SSLC Exam from tomorrow what are the arrangements how to prepare students in Karnataka all details about rules
ಸಾಂದರ್ಭಿಕ ಚಿತ್ರ


ಶಾಲೆಯ ನಿಯಮಗಳಲ್ಲಿ ವಿದ್ಯಾರ್ಥಿಗಳು ಶಾರ್ಟ್ ಧರಿಸುವುದನ್ನು ನಿಷೇಧಿಸಲಾಗಿತ್ತು. ಇದನ್ನು ಮನಗಂಡ ವೋಲ್ಟೇರ್ ಶಾಲೆಯ ಮಾಧ್ಯಮಿಕ ಶಾಲಾ ವಿದ್ಯಾರ್ಥಿ ಆ್ಯಡ್ರಿಯನ್ ಕಾಪ್ ಮತ್ತು ಆತನ ಕೆಲವು ಸಹಪಾಠಿಗಳು ಈ ಕುರಿತು ಪ್ರತಿಭಟನೆ ಕೈಗೊಂಡು ಶಾಲಾ ನಿಯಮದಲ್ಲಿನ ಲೋಪದೋಷ ಸರಿಪಡಿಸಲು ಪ್ರಯತ್ನಿಸಿದರು. ನಾವು ಶಾರ್ಟ್ ಧರಿಸಲು ಅನುಮತಿ ನೀಡಿ, ಬಟ್ಟೆಯಿಂದ ಯಾವುದೇ ಲಿಂಗವನ್ನು ಅಳೆಯಲಾಗದು ಎಂದು ಹೇಳಿದ್ದರು. ಶಾಲೆಯ ನೀತಿ-ನಿಯಮಗಳನ್ನು ವಿರೋಧಿಸಿ ವಿದ್ಯಾರ್ಥಿಗಳು ತರಗತಿಗೆ ಸ್ಕರ್ಟ್ ಧರಿಸಿ ಹೋಗುವುದರ ಜೊತೆಗೆ ಶಾಲಾ ನಿಯಮಗಳನ್ನು ವಿರೋಧಿಸಿದ್ದಾರೆ.


ಇದನ್ನೂ ಓದಿ: Bigg Boss Kannada Season 8: ಅರವಿಂದ್​-ದಿವ್ಯಾ ಉರುಡುಗ ಸ್ನೇಹದಲ್ಲಿ ಬಿರುಕು: ಕಾರಣವಾಯ್ತಾ ಆ ಒಂದು ಮಾತು..!


ಆ್ಯಡ್ರಿಯನ್ ಕಾಪ್ ಬಳಿ ಸ್ಕರ್ಟ್ ಇರಲಿಲ್ಲ. ಈ ಬಗ್ಗೆ ತನ್ನ ತಾಯಿ ಡೊನ್ನಾರನ್ನು ಕೇಳಿದನು. ಇದಕ್ಕೆ ತಾಯಿ ಯಾವುದೇ ಆಕ್ಷೇಪ ವ್ಯಕ್ತಪಡಿಸದೇ ಅಸ್ಡಾ ಸ್ಕರ್ಟ್ ಕೊಡಿಸುವುದರ ಮೂಲಕ ಮಗನ ಪ್ರತಿಭಟನೆಗೆ ಪರೋಕ್ಷವಾಗಿ ಬೆಂಬಲ ನೀಡಿ, ಶಾಲೆಯ ವಸ್ತ್ರ ಸಂಹಿತೆ ತುಂಬಾ ದೀರ್ಘಕಾಲದ ಸಮಸ್ಯೆ ಎಂದು ಮನವರಿಕೆ ಮಾಡಿಕೊಟ್ಟರು.


ತಾಪಮಾನ ಹೆಚ್ಚಳದ ವೇಳೆ ಶಾರ್ಟ್ ಸ್ಕರ್ಟ್‌ಗಳು ತುಂಬಾ ಆರಾಮ ಎನಿಸುತ್ತದೆ. ತಾಪಮಾನ ಏರಿಕೆ ಸಂದರ್ಭದಲ್ಲಿ ಪ್ಯಾಂಟ್ ಧರಿಸುವುದು ಅಸಾಧ್ಯ. ಈ ನಿರ್ಧಾರದ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದರು. ಕೆಲವು ಶಿಕ್ಷಕರು ವಿದ್ಯಾರ್ಥಿಗಳ ಈ ನಿರ್ಧಾರವನ್ನು ಬೆಂಬಲಿಸುವ ಬಗ್ಗೆ ಗೊಂದಲಕ್ಕೀಡಾಗಿದ್ದರೆ. ಇನ್ನು ಕೆಲವರು ಬೆಂಬಲ ನೀಡಿದರು ಎಂದು ವಿದ್ಯಾರ್ಥಿ ಆ್ಯಡ್ರಿಯನ್ ಯುನಿಲಾಡ್ ಹೇಳಿದ್ದಾರೆ.


ನಾವು ಶಾಲೆಯ ಯಾವುದೇ ನೀತಿ-ನಿಯಮಗಳನ್ನು ಮುರಿದಿಲ್ಲ. ಪ್ರತಿಯೊಬ್ಬರು ಈ ಶಾಖದ ಸಮದರ್ಭದಲ್ಲಿ ಶಾರ್ಟ್ ಧರಿಸುವ ಬಗ್ಗೆ ಹುಡುಗಿಯರು ಸೇರಿದಂತೆ ಆಯ್ಕೆ ನೀಡಿದ್ದೇವೆ ಎಂದು ಹೇಳಿದರು.


ಇದನ್ನೂ ಓದಿ: ಎ.ಆರ್​. ರೆಹಮಾನ್​ ಬಗ್ಗೆ ವಿವಾದಾತ್ಮಕ ಹೇಳಿಕೆ ಕೊಟ್ಟ ನಟ ಬಾಲಕೃಷ್ಣ


ಸ್ಕರ್ಟ್ ಧರಿಸಿದ್ದಕ್ಕಾಗಿ 2020ರಲ್ಲಿ ಹುಡುಗನನ್ನು ಶಾಲೆಯಿಂದ ಹೊರಹಾಕಲಾಯಿತು. ಜೂನ್‍ನಲ್ಲಿ ಸ್ಪೇನ್‍ನಲ್ಲಿ  ಹಲವಾರು ಪುರುಷ ಶಿಕ್ಷಕರು ಲಿಂಗ ಮಾನದಂಡಗಳ ವಿರುದ್ಧ ಹೋರಾಡಲು ಮತ್ತು ದೇಶದಲ್ಲಿ ಸಹಿಷ್ಣುತೆಯನ್ನು ಉತ್ತೇಜಿಸಲು ಆಂದೋಲನ ಕೈಗೊಂಡಿದ್ದರು.


ಇದನ್ನು ವಿರೋಧಿಸಿ ಮೂವರು ಶಿಕ್ಷಕರು ತರಗತಿಗೆ ಸ್ಕರ್ಟ್ ಧರಿಸುವ ಮೂಲಕ ವಿದ್ಯಾರ್ಥಿ ವಿರುದ್ಧ ತೆಗೆದುಕೊಂಡ ನಿರ್ಧಾರವನ್ನು ವಿರೋಧಿಸಿದ್ದರು. ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಬಟ್ಟೆಗೆ ಯಾವುದೇ ಲಿಂಗಭೇದವಿಲ್ಲ ಎಂಬ ಪ್ರತಿಭಟನೆ 2020ರಿಂದಲೂ ಮುಂದುವರೆಯುತ್ತಿದೆ.


Published by:Anitha E
First published: