ಟೆಂಪೋ ಚಾಲಕನನ್ನು ನಡುರಸ್ತೆಯಲ್ಲೇ ಹಿಗ್ಗಾ ಮುಗ್ಗಾ ಥಳಿಸಿದ ಪೊಲೀಸರು; ಮೂವರು ಸಿಬ್ಬಂದಿ ಅಮಾನತು

ದಾಳಿ ಮಾಡಿದ ಪೊಲೀಸರನ್ನು ಗುರುತಿಸಲಾಗಿದ್ದು, ಸಬ್​ಇನ್ಸ್​ಪೆಕ್ಟರ್ ಸಂಜಯ್​ ಮಲ್ಲಿಕ್​ ಮತ್ತು ದೇವೇಂದ್ರ ಹಾಗೂ ಕಾನ್​ಸ್ಟೇಬಲ್ ಪುಷ್ಪೇಂದ್ರ ಎಂಬುವವರನ್ನು ಅಮಾನತು ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

HR Ramesh | news18
Updated:June 17, 2019, 2:53 PM IST
ಟೆಂಪೋ ಚಾಲಕನನ್ನು ನಡುರಸ್ತೆಯಲ್ಲೇ ಹಿಗ್ಗಾ ಮುಗ್ಗಾ ಥಳಿಸಿದ ಪೊಲೀಸರು; ಮೂವರು ಸಿಬ್ಬಂದಿ ಅಮಾನತು
ಚಾಲಕನನ್ನು ಥಳಿಸುತ್ತಿರುವ ದೆಹಲಿ ಪೊಲೀಸರು
  • News18
  • Last Updated: June 17, 2019, 2:53 PM IST
  • Share this:
 ನವದೆಹಲಿ: ದೆಹಲಿಯ ಮುಖರ್ಜಿ ನಗರದಲ್ಲಿ ಪೊಲೀಸರು ಟೆಂಪೋ ಚಾಲಕನನ್ನು ನಡುರಸ್ತೆಯಲ್ಲೇ ಅಮಾನವೀಯವಾಗಿ ಥಳಿಸಿರುವ ವಿಡಿಯೋ ವೈರಲ್​ ಆಗಿದೆ. ಟೆಂಪೋ ಮತ್ತು ಪೊಲೀಸ್​ ವಾಹನದ ನಡುವೆ ಡಿಕ್ಕಿ ಸಂಭವಿಸಿದ ಕಾರಣಕ್ಕೆ ಈ ಘಟನೆ ನಡೆದಿದೆ.

ಪೊಲೀಸ್​ ಸಹೋದ್ಯೋಗಿ ಕಾಲಿನ ಮೇಲೆ ವಾಹನವನ್ನು ಚಾಲಕ ಹತ್ತಿಸಿದ್ದಾನೆ. ನಂತರ ಆತ ಖಡ್ಗ ತೆಗೆದು ಹೆದರಿಸಿದ್ದಾನೆ. ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಆದರೆ ಚಾಲಕನನ್ನು ಪೊಲೀಸರು ಲಾಠಿಯಿಂದ ಹೊಡೆದು, ರಸ್ತೆಯಲ್ಲಿ ಎಳೆದಾಡಿರುವುದು ವಿಡಿಯೋದಲ್ಲಿ ದಾಖಲಾಗಿದೆ.

ದಾಳಿ ಮಾಡಿದ ಪೊಲೀಸರನ್ನು ಗುರುತಿಸಲಾಗಿದ್ದು, ಸಬ್​ಇನ್ಸ್​ಪೆಕ್ಟರ್ ಸಂಜಯ್​ ಮಲ್ಲಿಕ್​ ಮತ್ತು ದೇವೇಂದ್ರ ಹಾಗೂ ಕಾನ್​ಸ್ಟೇಬಲ್ ಪುಷ್ಪೇಂದ್ರ ಎಂಬುವವರನ್ನು ಅಮಾನತು ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ದೆಹಲಿ ಪೊಲೀಸ್​ ವಕ್ತಾರ ಅನಿಲ್ ಮಿತ್ತಲ್​ ಮಾತನಾಡಿ, ಪೊಲೀಸರು ವ್ಯಕ್ತಿಯೊಂದಿಗೆ ವೃತ್ತಿಪರವಲ್ಲದ ರೀತಿ ವರ್ತಿಸಿದ್ದಾರೆ ಎಂದು ಘಟನೆಗೆ ವಿಷಾದ ವ್ಯಕ್ತಪಡಿಸಿದ್ದಾರೆ.

ಇದನ್ನು ಓದಿ: ಬಾಲಕನ ಮರ್ಮಾಂಗಕ್ಕೆ ಪೆಟ್ರೋಲ್ ಸುರಿದ ಪೊಲೀಸರು : ವಿಜಯಪುರದಲ್ಲಿ ಅಮಾನುಷ ಘಟನೆ
ದೆಹಲಿ ಪೊಲೀಸ್ ಇಲಾಖೆ ಕೇಂದ್ರ ಗೃಹ ಸಚಿವಾಲಯದ ಅಡಿಯಲ್ಲಿ ಬರುತ್ತದೆ. ರಾಜ್ಯ ಸರ್ಕಾರಕ್ಕೆ ಇದರ ಮೇಲೆ ಯಾವುದೇ ಅಧಿಕಾರ ಇಲ್ಲ.

First published:June 17, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ