• ಹೋಂ
 • »
 • ನ್ಯೂಸ್
 • »
 • ದೇಶ-ವಿದೇಶ
 • »
 • Mann Ki Baat ನೂರನೇ ಸಂಚಿಕೆ ಕೇಳಲು ಮದುವೆ ಮುಂದೂಡಿದ ಮದುಮಗ! ಮದುವೆ ಮನೆಯಲ್ಲಿ ಮೊಳಗಿದ ಮೋದಿ ಮಾತು

Mann Ki Baat ನೂರನೇ ಸಂಚಿಕೆ ಕೇಳಲು ಮದುವೆ ಮುಂದೂಡಿದ ಮದುಮಗ! ಮದುವೆ ಮನೆಯಲ್ಲಿ ಮೊಳಗಿದ ಮೋದಿ ಮಾತು

ಮದುವೆ ಮುಂದೂಡಿದ ವರ!

ಮದುವೆ ಮುಂದೂಡಿದ ವರ!

ನಿನ್ನೆಯಷ್ಟೇ ಪ್ರಧಾನಿಯವರ ಮನ್‌ಕೀ ಬಾತ್‌ನ 100ನೇ ಎಪಿಸೋಡ್‌ ಪ್ರಸಾರವಾಗಿತ್ತು. ಅಸಂಖ್ಯಾತ ಭಾರತೀಯರಲ್ಲದೇ, ವಿದೇಶದಲ್ಲೂ ಮನ್ ಕಿ ಬಾತ್ ಆಲಿಸಲಾಯ್ತು. ಇದೇ ವೇಳೆ ವರನೊಬ್ಬ ಮನ್ ಕಿ ಬಾತ್ ಕೇಳಲು ಮದುವೆಯನ್ನೇ ಮುಂದೂಡಿದ್ದಾನೆ!

 • Trending Desk
 • 4-MIN READ
 • Last Updated :
 • Rajasthan, India
 • Share this:

  ರಾಜಸ್ಥಾನ: ಪ್ರಧಾನಿ ನರೇಂದ್ರ ಮೋದಿಯವರು (PM Narendra Modi) ನಡೆಸಿಕೊಡುವ ಮನ್ ಕಿ ಬಾತ್‌ (Mann Ki Baat) ಲಕ್ಷಾಂತರ ಭಾರತೀಯರ (Indians) ಮನದ ಮಾತಾಗಿದೆ ಹಾಗೂ ಅವರ ಭಾವನೆಗಳ ಅಭಿವ್ಯಕ್ತಿಯಾಗಿದೆ. ಜನರ ಸಮಸ್ಯೆಗಳನ್ನು ಆಲಿಸಲು, ಅವರಿಗೆ ಪರಿಹಾರವನ್ನೊದಗಿಸಲು ಮನ್ ಕಿ ಬಾತ್ ಕಾರ್ಯಕ್ರಮ ಸೂಕ್ತ ವೇದಿಕೆ ಎಂದೆನ್ನಿಸಿದೆ. ನಿನ್ನೆಯಷ್ಟೇ ಪ್ರಧಾನಿಯವರ ಮನ್‌ಕೀ ಬಾತ್‌ನ 100ನೇ ಎಪಿಸೋಡ್‌ ಪ್ರಸಾರವಾಗಿತ್ತು. ಅಸಂಖ್ಯಾತ ಭಾರತೀಯರಲ್ಲದೇ, ವಿದೇಶದಲ್ಲೂ ಮನ್ ಕಿ ಬಾತ್ ಆಲಿಸಲಾಯ್ತು. ಇದೀಗ ರಾಜಸ್ಥಾನದ ಭಿಲ್ವಾರಾದಲ್ಲಿ (Rajasthan's Bhilwara) ವರನೊಬ್ಬ (groom) ತನ್ನ ವಿವಾಹ ಸಂಪ್ರದಾಯಗಳನ್ನು ಕೊಂಚ ಕಾಲ ಸ್ಥಗಿತಗೊಳಿಸಿ ಅತಿಥಿಗಳೊಂದಿಗೆ ಮನ್ ಕಿ ಬಾತ್ ಕಾರ್ಯಕ್ರಮವನ್ನು ಆಲಿಸಿರುವ ಘಟನೆ ವರದಿಯಾಗಿದೆ.


  ಮನ್ ಕಿ ಬಾತ್ ಆಲಿಸಿದ ವರ ಹಾಗೂ ಕುಟುಂಬಸ್ಥರು


  ಭಾನುವಾರ ಮೋದಿಯರ ಮನ್ ಕಿ ಬಾತ್‌ನ 100 ನೇ ಸಂಚಿಕೆ ಪ್ರಸಾರವಾಗಿತ್ತು. ಹಿಂದಿನ ಎಲ್ಲಾ ಸಂಚಿಕೆಗಳನ್ನು ತಪ್ಪದೇ ಆಲಿಸಿದ್ದ ಭಿಲ್ವಾರಾದ ರಿಷಭ್‌ ಅವರ ವಿವಾಹ ಹಾಗೂ ಮೋದಿಯವರ 100 ನೇ ಸಂಚಿಕೆ ಒಂದೇ ದಿನ ನಿಶ್ಚಯವಾಗಿತ್ತು.
  ಮನ್ ಕಿ ಬಾತ್ ಆಲಿಸಿದ ವರ


  ಪ್ರಧಾನಿಯವರು ನಡೆಸಿಕೊಡುವ ಮನ್ ಕಿ ಬಾತ್‌ನ ಪ್ರತಿಯೊಂದು ಸಂಚಿಕೆಗಳನ್ನು ಮಿಸ್ ಮಾಡದೇ ಆಲಿಸಿದ್ದ ರಿಷಭ್ 100 ನೇ ಸಂಚಿಕೆಯನ್ನು ಆಲಿಸಲೇಬೇಕು, ಮಿಸ್ ಮಾಡಬಾರದು ಎಂಬ ಆಗ್ರಹದಲ್ಲಿದ್ದರು. ಇದಕ್ಕಾಗಿ ತನ್ನ ಕುಟುಂಬದವರು ಹಾಗೂ ಅತಿಥಿಗಳ ಮನವೊಲಿಸಿದ ರಿಷಭ್ ಅಂತೂ ಇಂತೂ ಕುಟುಂಬಸ್ಥರು ಹಾಗೂ ಅತಿಥಿಗಳೊಂದಿಗೆಯೇ ಮನ್ ಕಿ ಬಾತ್‌ನ ನೂರನೇ ಸಂಚಿಕೆಯನ್ನು ಆಲಿಸುವಲ್ಲಿ ಸಫಲರಾಗಿದ್ದಾರೆ.


  ಇದನ್ನೂ ಓದಿ: Mann Ki Baat: ಪ್ರಧಾನಿ ನರೇಂದ್ರ ಮೋದಿ ಅವರ ‘ಮನ್ ಕಿ ಬಾತ್‌’ನ 100ನೇ ಸಂಚಿಕೆಯ ಹೈಲೈಟ್ಸ್ ಇಲ್ಲಿದೆ


  ಕಾರ್ಯಕ್ರಮ ಆಲಿಸಬೇಕೆಂಬ ಇಂಗಿತ ಹೊರಹಾಕಿದ ವರ ರಿಷಭ್


  ವಿವಾಹದ ವಿಧಿ ವಿಧಾನಗಳು ನಡೆಯುತ್ತಿರುವ ಸಂದರ್ಭದಲ್ಲಿಯೇ ಷರತ್ತು ಹಾಕಿದ ವರ ರಿಷಭ್ ವಿವಾಹದ ಇನ್ನಷ್ಟು ವಿಧಿ ವಿಧಾನಗಳನ್ನು ಮುಂದುವರಿಸುವ ಮೊದಲು ನರೇಂದ್ರ ಮೋದಿಯವರ ಮನ್ ಕಿ ಬಾತ್ ಕಾರ್ಯಕ್ರಮವನ್ನು ಆಲಿಸಬೇಕೆಂಬ ಇಂಗಿತವನ್ನು ಮುಂದಿಟ್ಟಿದ್ದಾರೆ. ಭಿಲ್ವಾರದ ಖಾಸಗಿ ರೆಸಾರ್ಟ್‌ನಲ್ಲಿ ವಿವಾಹ ನಡೆಯುತ್ತಿದ್ದು ಮದುವೆ ವಿಧಿ ವಿಧಾನಗಳ ಮಧ್ಯೆಯೇ ರಿಷಬ್ ಮನ್ ಕಿ ಬಾತ್ ಆಲಿಸುವುದಕ್ಕಾಗಿ ಬೇಡಿಕೆ ಇಟ್ಟಿದ್ದಾರೆ.


  ಎಲ್‌ಇಡಿ ಪರದೆ ವ್ಯವಸ್ಥೆ ಮಾಡಿದ ಕುಟುಂಬಸ್ಥರು


  ವರ ರಿಷಭ್ ಕೋರಿಕೆಯನ್ನು ಒಪ್ಪಿದ ವಧು ಹಾಗೂ ಕುಟುಂಬಸ್ಥರು ಎಲ್‌ಇಡಿ ಪರದೆಯ ವ್ಯವಸ್ಥೆಯನ್ನು ಮಾಡಿದರು ಹಾಗೂ ವಿವಾಹ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಎಲ್ಲಾ ಅತಿಥಿಗಳಿಗೆ ಮನ್ ಕಿ ಬಾತ್ ಸಂಚಿಕೆಯನ್ನು ಪ್ಲೇ ಮಾಡಲಾಯಿತು.


  ಪ್ರಧಾನಿ ಮಾತುಗಳೇ ಸ್ಫೂರ್ತಿದಾಯಕ


  ಪ್ರಧಾನಿ ಮೋದಿ ಹಾಗೂ ಅವರ ಮಾತುಗಳೆಂದರೆ ನನಗೆ ಎಂದಿಗೂ ಸ್ಫೂರ್ತಿದಾಯಕ ಎಂದು ಹೇಳಿರುವ ರಿಷಭ್, ಮನ್ ಕಿ ಬಾತ್‌ನ 100 ನೇ ಸಂಚಿಕೆಯನ್ನು ಮಿಸ್ ಮಾಡಿಕೊಳ್ಳಲೇಬಾರದು ಎಂದೇ ನಿರ್ಧರಿಸಿದ್ದೆ.


  ಒಂದೇ ಒಂದು ಸಂಚಿಕೆ ಮಿಸ್ ಮಾಡಿಲ್ಲ


  ಇಲ್ಲಿಯವರೆಗೆ ತಾವೆಂದೂ ಒಂದೇ ಒಂದು ಸಂಚಿಕೆಯನ್ನು ಮಿಸ್ ಮಾಡಿಕೊಂಡಿಲ್ಲ ಎಂದು ತಿಳಿಸಿರುವ ರಿಷಭ್ ಪ್ರತೀ ಬಾರಿ ಅವರ ಮಾತುಗಳನ್ನು ಕೇಳಿದಾಗ ನನಗೆ ಗೊತ್ತಿಲ್ಲದೆಯೇ ಒಂದು ಮಾರ್ಗದರ್ಶನ ದೊರೆಯುತ್ತಿತ್ತು ಅಂತೆಯೇ ಹೊಸದನ್ನು ಕಲಿತುಕೊಂಡಿದ್ದೇನೆ ಎಂದು ವರ ರಿಷಭ್ ತಿಳಿಸಿದ್ದಾರೆ.


  ವರನ ಆಗ್ರಹಕ್ಕೆ ಸಂತಸಪಟ್ಟ ವಧು ಅಂಜಲಿ ಹಾಗೂ ಕುಟುಂಬಸ್ಥರು


  ಅಕಸ್ಮಾತ್ ಆಗಿ ತಮ್ಮ ಮದುವೆಯ ದಿನದಂದೇ ಮನ್ ಕಿ ಬಾತ್‌ನ 100 ನೇ ಸಂಚಿಕೆ ಕೂಡ ಪ್ರಸಾರವಾಗುತ್ತಿರುವ ಸುದ್ದಿ ತಿಳಿದು ಬಂದಿತು. 100 ನೇ ಸಂಚಿಕೆ ಎಷ್ಟು ಮಹತ್ವಪೂರ್ಣವಾದುದು ಎಂಬುದು ಸಂಪೂರ್ಣ ಜನತೆಗೆ ತಿಳಿದಿದೆ.


  ಇದನ್ನೂ ಓದಿ: Mann Ki Baat: ನ್ಯೂಜಿಲ್ಯಾಂಡ್‌ನಲ್ಲಿ ಮನ್ ಕಿ ಬಾತ್ ಆಲಿಸಿದ ಅಜ್ಜಿ! ಶತಾಯುಷಿಯಿಂದ ಮೋದಿಗೆ ಆಶೀರ್ವಾದ


  ಹಾಗಾಗಿಯೇ ನಾನು ವಿವಾಹದ ನಡುವೆಯೇ ಈ ಕಾರ್ಯಕ್ರಮವನ್ನು ಆಲಿಸಬೇಕೆಂಬ ಷರತ್ತನ್ನು ಕುಟುಂಬದ ಮುಂದಿಟ್ಟೆ ಎಂದು ತಿಳಿಸಿದ್ದಾರೆ. ಅವರ ಕುಟುಂಬ ಸದಸ್ಯರು ಹಾಗೂ ವಧು ಅಂಜಲಿ ಕೂಡ ರಿಷಭ್ ನಿರ್ಧಾರ ಕೇಳಿ ಸಂತೋಷಗೊಂಡಿದ್ದರು ಎಂದು ತಿಳಿಸಿದ್ದಾರೆ. ಪ್ರಧಾನಿಯವರ ಭಾಷಣ ಮುಗಿದ ಬಳಿಕ ಮದುವೆ ಸಮಾರಂಭವನ್ನು ಪುನರಾರಂಭಿಸಲಾಯಿತು.

  top videos
   First published: