ವೀಪಪುರಂ: ಆಂಧ್ರಪ್ರದೇಶದ ವೀಪಪುರಂನ ಪಕ್ಷಿ ಪ್ರೇಮಿ ವೇಣುಗೋಪಾಲ್ ರೆಡ್ಡಿ ಅವರು ತಮ್ಮ ಗ್ರಾಮಕ್ಕೆ ವಲಸೆ ಬರುವ ಬಣ್ಣ ಬಣ್ಣದ ಕೊಕ್ಕರೆಗಳನ್ನು ಆರೈಕೆ ಮಾಡುವ ಮೂಲಕ ಸುದ್ದಿಯಾಗಿದ್ದಾರೆ. ನೋಡಿಕೊಳ್ಳುತ್ತಾರೆ. ಯಾವುದೋ ಗಾಯವಾಗಿಯೋ ಅಥವಾ ಅನಾರೋಗ್ಯದಿಂದಲೋ ಬಳಲುತ್ತಿರುವ ಕೊಕ್ಕರೆಗಳನ್ನು ಆರೈಕೆ ಮಾಡುವ ಇವರು ಗೂಡಿನಿಂದ ಕೆಳಗೆ ಬಿದ್ದ ಪುಟ್ಟ ಮರಿಗಳನ್ನೂ ಕೇರ್ ಮಾಡುವ ಮೂಲಕ ಪಕ್ಷಿ ಪ್ರೇಮಿ ಎನಿಸಿಕೊಂಡಿದ್ದಾರೆ.
ಅಂದ ಹಾಗೆ, ಆಂಧ್ರಪ್ರದೇಶದ ವೀಪಪುರಂ ಮತ್ತು ವೆಂಕಟಾಪುರಂ ಗ್ರಾಮಗಳು ಪಕ್ಷಿಪ್ರಿಯ ಪ್ರವಾಸಿಗರಿಗೆ ಹೇಳಿ ಮಾಡಿಸಿದ ತಾಣವಾಗಿದೆ. ಇಲ್ಲಿ ಬಣ್ಣಬಣ್ಣದ ಕೊಕ್ಕರೆಗಳು ಸಂತಾನೋತ್ಪತ್ತಿಗೆಂದೇ ಪ್ರತೀ ವರ್ಷ ಬರುತ್ತವೆ. ಸುಮಾರು 4000 ಬಣ್ಣದ ಕೊಕ್ಕರೆಗಳ ದೊಡ್ಡ ಹಿಂಡು ಈ ಎರಡು ಗ್ರಾಮಗಳಿಗೆ ವಲಸೆ ಬಂದಿವೆ. ಹೀಗಾಗಿ ಆ ಕೊಕ್ಕರೆಗಳ ಸಂತಾನೋತ್ಪತ್ತಿಗೆ ಉಪಯೋಗವಾಗಲಿ ಎಂದು ವೇಣುಗೋಪಾಲ್ ರೆಡ್ಡಿ ಅವರು ಗೂಡುಗಳನ್ನು ನಿರ್ಮಿಸಿದ್ದಾರೆ. ವಿಶೇಷ ಅಂದ್ರೆ ಆ ಗೂಡುಗಳಲ್ಲಿ ಪಕ್ಷಿಗಳು ಮೊಟ್ಟೆಯನ್ನೂ ಇಟ್ಟಿವೆ.
ಇದನ್ನೂ ಓದಿ: Revenue Collect: ಹಿಟ್ಟಿನ ಗಿರಣಿಯಲ್ಲಿ ತೆರಿಗೆ ದುಪ್ಪಟ್ಟು ಮಾಡಿದ ಗ್ರಾಮ ಪಂಚಾಯ್ತಿ! ಕರ ವಸೂಲಿಯ ಐಡಿಯಾಗೆ ಎಲ್ಲರೂ ಫಿದಾ!
ಈ ವರ್ಷದ ಋತುವಿನಲ್ಲಿ ಪಕ್ಷಿಗಳು ಸುಮಾರು ಒಟ್ಟು 6000 ಮೊಟ್ಟೆಗಳಿಗೆ ಕಾವು ಕೊಟ್ಟು ಮರಿ ಜನಿಸಿವೆ. ಜೂನ್ ಅಂತ್ಯದ ವೇಳೆಗೆ ಮರಿಗಳಿಗೆ ಸುಮಾರು 3 ತಿಂಗಳು ಭರ್ತಿಯಾಗಲಿದ್ದು, ಆನಂತ ಅವುಗಳು ವಿದಾಯ ಹೇಳಿ ತಮ್ಮ ತಾಯಿಯೊಂದಿಗೆ ವಲಸೆಗೆ ಹೋಗಲು ಸಜ್ಜಾಗುತ್ತದೆ. ಸಾಮಾನ್ಯವಾಗಿ ಈ ಪಕ್ಷಿಗಳು ಹೆಚ್ಚಾಗಿ ಬಯಲು ಪ್ರದೇಶಗಳಲ್ಲಿ, ಜೌಗು ಪ್ರದೇಶಗಳಲ್ಲಿ ವಾಸಿಸುತ್ತವೆ ಮತ್ತು ತೊಂದರೆಗೊಳಗಾಗದ/ ಸುರಕ್ಷಿತ ಮರಗಳಿಗೆ ಹತ್ತಿರವಾಗಿ ಸಂತಾನೋತ್ಪತ್ತಿ ಮಾಡುತ್ತವೆ.
ಸಂತಾನೋತ್ಪತ್ತಿಗೆ ಅನುಕೂಲಕರ ವಾತಾವರಣ
ಇನ್ನು ಈ ಬಣ್ಣಬಣ್ಣದ ಕೊಕ್ಕರೆಗಳು ಸಣ್ಣ ಮೀನುಗಳನ್ನು ತಿನ್ನುವ ಮೂಲಕ ತಮ್ಮ ಹೊಟ್ಟೆ ತುಂಬಿಸಿಕೊಳ್ಳುತ್ತವೆ. ಕಳೆದ ಮಾನ್ಸೂನ್ ಸಮಯದಲ್ಲಿ ಈ ಪ್ರದೇಶದಲ್ಲಿ ಉತ್ತಮ ಪ್ರಮಾಣದಲ್ಲಿ ಮಳೆಯಾದ ಕಾರಣ ಪಕ್ಷಿಗಳ ಸಂತಾನೋತ್ಪತ್ತಿಗೆ ಅನುಕೂಲಕರ ವಾತಾವರಣ ಸೃಷ್ಟಿಯಾಗಿತ್ತು. ಸದ್ಯ ಈ ಗ್ರಾಮದ ನಿವಾಸಿ ಹಾಗೂ ಪಕ್ಷಿ ಪ್ರೇಮಿ ವೆಣುಗೋಪಾಲ್ ರೆಡ್ಡಿ ಈ ಪಕ್ಷಿಗಳ ಆರೈಕೆ ಮಾಡುತ್ತಿದ್ದಾರೆ.
ವೆಣುಗೋಪಾಲ್ ಅವರನ್ನು ಈ ಬಗ್ಗೆ ಮಾತನಾಡಿಸಿದಾಗ, ‘ಈ ಪಕ್ಷಿಗಳು 25 ವರ್ಷಗಳಿಂದ ಇಲ್ಲಿಗೆ ಬರುತ್ತಿವೆ. ಹೇರಳವಾದ ಮಳೆಯಿಂದಾಗಿ ಈ ಋತುವಿನಲ್ಲಿ ಪಕ್ಷಿಗಳ ಸಂಖ್ಯೆ ಹೆಚ್ಚಾಗಿದೆ. ಪ್ರತೀ ವರ್ಷ ಸಣ್ಣ ಮರಿಗಳು ಗೂಡಿನಿಂದ ಹೊರಕ್ಕೆ ಬೀಳುತ್ತವೆ ಮತ್ತು ಅವುಗಳಿಗೆ ಭಯಂಕರವಾದ ಹದ್ದುಗಳು ಮತ್ತು ನಾಯಿಗಳಿಂದ ರಕ್ಷಣೆ ಬೇಕು. ಹೀಗಾಗಿ ಕೆಳಕ್ಕೆ ಬಿದ್ದ ಮರಿಗಳನ್ನು ನಾನು ಎತ್ತಿ ತಂದು ಅವುಗಳಿಗೆ ಔಷಧಿ ಹಚ್ಚಿ ಆರೈಕೆ ಮಾಡುತ್ತೇನೆ. ಅರಣ್ಯ ಇಲಾಖೆಯ ಬೆಂಬಲದೊಂದಿಗೆ ಅವುಗಳಿಗೆ ಆಹಾರವನ್ನು ನೀಡುತ್ತೇನೆ. ಆದರೆ ಅದೃಷ್ಟವಶಾತ್ ಈ ವರ್ಷ ಇಲ್ಲಿಯವರೆಗೆ ಯಾವುದೇ ಮರಿಗಳು ಗೂಡಿನಿಂದ ಬಿದ್ದಿಲ್ಲ’ ಎಂದು ಹೇಳಿದರು.
ಇದನ್ನೂ ಓದಿ: House in Graveyard: ಸ್ಮಶಾನದಲ್ಲೇ ಮನೆ ಕಟ್ಟಿ ಮಹಿಳೆಯರ ವಾಸ, ಇವ್ರನ್ನ ನೋಡಿ ಅಧಿಕಾರಿಗಳೇ ಶಾಕ್!
ಒಂದು ಮರಿ ದಿನಕ್ಕೆ ಸುಮಾರು 500-600 ಗ್ರಾಂ ಮೀನು ತಿನ್ನುತ್ತದೆ. ದೊಡ್ಡ ಪಕ್ಷಿಗಳು ಮರಗಳ ಮೇಲಿನ ಗೂಡುಗಳ ಮೇಲೆ ಕುಳಿತು ಸೂರ್ಯನ ಬಿಸಿಲು ಮತ್ತು ಹದ್ದುಗಳ ಬೇಟೆಯ ವಿರುದ್ಧ ಕಾವಲು ಕಾಯುತ್ತದೆ. ಸರಾಸರಿ ಮೂರು ಮರಿಗಳಿಗೆ ಆಹಾರಕ್ಕಾಗಿ ತಾಯಿ ಪಕ್ಷಿಗಳು ದಿನಕ್ಕೆ ಹಲವಾರು ವಿಹರಿಸುತ್ತದೆ. ವಯಸ್ಸಾದ ಪಕ್ಷಿಗಳು ಕೆಲವೊಮ್ಮೆ ನಿಶ್ಯಕ್ತಿಯಿಂದ ನೆಲಕ್ಕೆ ಬೀಳುತ್ತದೆ. ಆಗ ಅಂತಹ ದೊಡ್ಡ ಹಕ್ಕಿಗಳಿಗೆ ಗ್ಲೂಕೋಸ್ ನೀರು ನೀಡಿ ಬಿಡಬೇಕು ಎಂದು ಅವರು ಹೇಳುತ್ತಾರೆ.
ವೀರಾಪುರಂ ಗ್ರಾಮವು ಕರ್ನಾಟಕದ ಬಾಗೇಪಲ್ಲಿಯ ಗಡಿಯಲ್ಲಿದೆ. ಹೆಚ್ಚಿನ ಸಂಖ್ಯೆಯ ಪಕ್ಷಿಗಳನ್ನು ಹೊಂದಿರುವ ಈ ಗ್ರಾಮವು ಆಂಧ್ರಪ್ರದೇಶದ ಬೃಹತ್ ಲೇಪಾಕ್ಷಿ ನಂದಿ ಮತ್ತು ವೀರಭದ್ರ ಸ್ವಾಮಿ ದೇವಾಲಯಕ್ಕೆ ಸಮೀಪದಲ್ಲಿರುವುದರಿಂದ ಈ ಗ್ರಾಮವು ಅತ್ಯುತ್ತಮ ಪ್ರವಾಸಿ ಆಕರ್ಷಣೆಯಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ