News18 India World Cup 2019

ಮುಂದಿನ 48 ಗಂಟೆ ಇಂಟರ್​ನೆಟ್​ ಇರಲ್ಲ; ಫೋನ್​ ಬ್ಯಾಂಕಿಂಗ್​ ವ್ಯವಸ್ಥೆಯೂ ಬಂದ್​!

Sharath Sharma Kalagaru | news18
Updated:October 12, 2018, 1:12 PM IST
ಮುಂದಿನ 48 ಗಂಟೆ ಇಂಟರ್​ನೆಟ್​ ಇರಲ್ಲ; ಫೋನ್​ ಬ್ಯಾಂಕಿಂಗ್​ ವ್ಯವಸ್ಥೆಯೂ ಬಂದ್​!
ಸಾಂದರ್ಭಿಕ ಚಿತ್ರ
Sharath Sharma Kalagaru | news18
Updated: October 12, 2018, 1:12 PM IST
ನ್ಯೂಸ್​ 18 ಕನ್ನಡ

ಬೆಂಗಳೂರು: ಜಾಗತಿಕವಾಗಿ ಮುಂದಿನ 48 ಗಂಟೆಗಳ ಕಾಲ ಇಂಟರ್​ನೆಟ್​ ಸಮಸ್ಯೆ ಎಲ್ಲರನ್ನೂ ಕಾಡಲಿದೆ ಎಂದು ರಷ್ಯಾ ಟುಡೇ ವರದಿ ಮಾಡಿದೆ. ಅಂತರ್ಜಾಲದ ಸರ್ವರ್​, ಡೊಮೇನ್​ ಮತ್ತು ನೆಟ್​ವರ್ಕ್​ ಕನೆಕ್ಷನ್​ ನಿರ್ವಹಣೆ ಕಾರ್ಯ ನಡೆಯಲಿದ್ದು, ಬಹುತೇಕ ನೆಟ್​ವರ್ಕ್​ ಸರಬರಾಜು ಸಂಸ್ಥೆಗಳು ಸ್ಥಗಿತಗೊಳ್ಳುವ ಸಾಧ್ಯತೆಯಿದೆ.

ಅಂತಾಷ್ಟ್ರೀಯ ಅಸೈನ್ಡ್​ ನೇಮ್ಸ್​ ಆ್ಯಂಡ್​ ನಂಬರ್ಸ್​ ಕಾರ್ಪೊರೇಷನ್​ (ಐಸಿಎಎನ್​ಎನ್​) ನಿರ್ವಹಣಾ ಕಾರ್ಯವನ್ನು ಮಾಡುತ್ತಿದ್ದು ಡೊಮೇನ್​ ನೇಮ್​ ಸಿಸ್ಟಮ್​ (ಡಿಎನ್​ಎಸ್​) ಮತ್ತಷ್ಟು ಸುರಕ್ಷಿತವಾಗಲಿದೆ ಎನ್ನಲಾಗಿದೆ. ಸುರಕ್ಷತೆಯ ದೃಷ್ಟಿಯಿಂದ ಈ ಕಾರ್ಯಕ್ಕೆ ಐಸಿಎಎನ್​ಎನ್​ ಕೈ ಹಾಕಿದ್ದು, ಎರಡು ದಿನಗಳ ಕಾಲ ಅಂತರ್ಜಾಲ ಬಳಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಕಮ್ಯುನಿಕೇಷನ್​ ರೆಗ್ಯುಲೇಟರಿ ಅಥಾರಿಟಿ ಹೇಳಿದೆ.

ಇದರ ಜತೆಗೆ ಆನ್​ಲೈನ್​ ವ್ಯವಹಾರಗಳಿಗೂ ಸಮಸ್ಯೆಯಾಗಲಿದೆ. ಡಿಜಿಟಲ್​ ವಾಲೆಟ್​ ಮುಖಾಂತರ ಬ್ಯಾಂಕ್​ ವ್ಯವಹಾರಗಳನ್ನು ಮಾಡಲು ಸಾದ್ಯವಾಗದೇ ಇರಬಹುದು ಎಂದೂ ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಬ್ಯಾಂಕ್​ ವಹಿವಾಟುಗಳಿದ್ದರೆ, ಆದಷ್ಟು ಶೀಘ್ರದಲ್ಲಿ ಮಾಡುವುದು ಒಳ್ಳೆಯದು ಎಂದು ತಿಳಿಸಲಾಗಿದೆ.

ಜಗತ್ತಿನಾದ್ಯಂತ ಹ್ಯಾಕರ್​ಗಳ ಕಾಟ ಇತ್ತೀಚೆಗೆ ಹೆಚ್ಚಾಗುತ್ತಿದೆ. ಅದರಲ್ಲೂ ಮೊಬೈಲ್​ ಮತ್ತಿತರೆ ಗ್ಯಾಜೆಟ್​ ಬಳಕೆದಾರರ ಖಾಸಗೀಯತೆಗೆ ಧಕ್ಕೆಯುಂಟಾಗುತ್ತಿದೆ. ಎರಡು ದಿನಗಳ ಕಾಲ ತಾತ್ಕಾಲಿಕ ಅಂತರ್ಜಾಲ ಸಮಸ್ಯೆ ಎದುರಿಸಬೇಕಾದ ಸಂದರ್ಭ ಬಂದಿರುವುದು ನಿಜವಾದರೂ, ಮುಂದಿನ ದಿನಗಳಲ್ಲಿ ಹ್ಯಾಕರ್​ಗಳಿಗೆ ಕಡಿವಾಣ ಹಾಕಲು ಸಾಧ್ಯವಾಗಬಹುದು.

First published:October 12, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...