Crime News: ಕೆಲಸ ಕೊಡಿಸ್ತೀನಿ ಅಂತ ಕರೆಸಿದ್ರು, ರೇಪ್ ಮಾಡಿ ಹೋಟೆಲ್‌ನಿಂದ ತಳ್ಳಿದ್ರು!

ಸುಮ್ಮನೆ ಕರೆದರೆ ನೀವು ಬರುವುದಿಲ್ಲ ಅಂತ ಕಾಮುಕರು ಬೇರೆ ಬೇರೆ ರೀತಿಯಲ್ಲಿ ಗಾಳ ಹಾಕಬಹುದು. "ಸಂದರ್ಶನ ಇಲ್ಲ, ಏನಿಲ್ಲ, ಬನ್ನಿ ಕೆಲ್ಸ ಪಡೆಯಿರಿ" ಅಂತ ಪುಸಲಾಯಿಸಬಹುದು. ಹೀಗೆ ಕೆಲಸ ಕೊಡಿಸುತ್ತೇವೆ ಅಂತ ಯುವಕ ಹೇಳಿದ್ದ ಮಾತು ಕೇಳಿ ಆಕೆ ಅಲ್ಲಿಗೆ ಹೋಗಿದ್ದಳು. ಆದ್ರೆ ಅಲ್ಲಿ ಮುಂದಾಗಿದ್ದೇ ಬೇರೆ...

ಅಂತರ್ಜಾಲ ಚಿತ್ರ

ಅಂತರ್ಜಾಲ ಚಿತ್ರ

  • Share this:
ರಾಜಸ್ಥಾನ: “ನೀವು ಕೆಲಸ (Job) ಹುಡುಕುತ್ತಾ ಇದ್ದೀರಾ? ಸಂದರ್ಶನಕ್ಕೆ (Interviews) ಅಲೆದು ಅಲೆದು ಸುಸ್ತಾಗಿದ್ದೀರಾ? ಹಾಗಿದ್ರೆ ಚಿಂತೆ ಮಾಡ್ಬೇಡಿ, ನಾವು ನಿಮಗೆ ಕೆಲಸ ಕೊಡಿಸುತ್ತೇವೆ. ಸಂದರ್ಶನ ಎದುರಿಸೋದು ಬೇಡ, ಸೀದಾ ಬಂದು ಕೆಲಸಕ್ಕೆ ಜಾಯಿನ್ (Join) ಆಗಿ”. ಹೀಗಂತ ಯಾರಾದ್ರೂ ನಿಮ್ಮನ್ನು ಕರೆದರೆ ಸ್ವಲ್ಪ ಎಚ್ಚೆತ್ತುಕೊಳ್ಳಿ ಯಾಕೆಂದ್ರೆ ಹೀಗೆ ಕೆಲಸ ಕೊಡಿಸ್ತೀವಿ ಅಂತ ಕರೆಯುವ ಎಲ್ಲರೂ ಒಳ್ಳೆಯವರಾಗಿರೋದಿಲ್ಲ, ಕೆಲವರು ಕೆಲಸದ ನೆಪದಲ್ಲಿ ನಿಮ್ಮನ್ನು ಹುರಿದು ಮುಕ್ಕಲು ಸಂಚು ರೂಪಿಸಿರ ಬಹುದು ಹುಷಾರ್. ಇದ್ಯಾಕಪ್ಪ ಹೀಗೆ ಹೇಳ್ತಿದ್ದಾರೆ ಅಂದುಕೊಂಡ್ರಾ? ಈ ಸುದ್ದಿ (News) ಓದಿದರೆ ನಿಮಗೇ ಎಲ್ಲವೂ ತಿಳಿಯುತ್ತೆ.  ಇಲ್ಲಿ ಉದ್ಯೋಗ ಕೊಡಿಸ್ತೀವಿ ಅಂತ ಆಕೆಯನ್ನು ಕರೆಸಿಕೊಂಡ ಕಾಮುಕರು, ಮಾಡಬಾರದ್ದು ಮಾಡಿ ಬಿಟ್ಟಿದ್ದರು. ಈಗ ಆಕೆ ಕೆಲಸವೂ ಇಲ್ಲದೇ, ಆಸ್ಪತ್ರೆ (Hospital) ಪಾಲಾಗಿದ್ದಾಳೆ.

 ಅಸಲಿಗೆ ಅಲ್ಲಿ ನಡೆದಿದ್ದಾರೂ ಏನು?

ಆಕೆ ಡಿಗ್ರಿ ಮುಗಿಸಿಕೊಂಡು ಕೆಲಸಕ್ಕಾಗಿ ಹುಡುಕುತ್ತಾ ಇದ್ದಳು. ಅನೇಕ ಇಂಟರ್‌ವ್ಯೂಗಳಲ್ಲಿ ಭಾಗಿಯಾಗಿದ್ದಳು. ಆದರೆ ಎಷ್ಟು ಟೈಮ್ ಆದರೂ ಕೆಲಸ ಸಿಗದೇ ಕಂಗಾಲಾಗಿದ್ದಳು. ಹೀಗಾಗಿ ಸಿಕ್ಕ ಸಿಕ್ಕ ಸೈಟ್‌ಗಳಲ್ಲೆಲ್ಲಾ ಕೆಲಸಕ್ಕಾಗಿ ಹುಡುಕುತ್ತಾ, ಅರ್ಜಿ ಹಾಕುತ್ತಿದ್ದಳು. ಹೀಗಿದ್ದ ದಿನಗಳಲ್ಲೇ ಆತನ ಪರಿಚಯವಾಗಿತ್ತು.

ಕೆಲಸ ಕೊಡಿಸುತ್ತೇನೆ ಬಾ ಅಂತ ಕರೆದ

ಹೀಗೆ ಸಾಮಾಜಿಕ ಮಾಧ್ಯಮಗಳಲ್ಲಿ ಪರಿಚಿತನಾದ ಆದ, ಮೊದ ಮೊದಲು ಚೆನ್ನಾಗಿ ಮಾತನಾಡಿದ. ತಾನು ಒಳ್ಳೆಯವರು ಅಂತ ಪೋಸ್ ಕೊಟ್ಟ. ಆಕೆಯ ಸ್ನೇಹ, ವಿಶ್ವಾಸ ಗಳಿಸಿದ. ಕೊನೆಗೊಂದು ದಿನ ಆಕೆ ತಮ್ಮ ಮನೆಯ ಕಷ್ಟ, ತನಗೆ ಕೆಲಸ ಇಲ್ಲದೇ ಇರುವುದು ಹೀಗೆ ಎಲ್ಲಾ ಸಂಗತಿಗಳನ್ನು ಅವನಲ್ಲಿ ಹೇಳಿಕೊಂಡಳು. ಅದಕ್ಕೆ ಸಮಾಧಾನ ಮಾಡಿದ ಆತ, ನಾನಿದ್ದೀನಿ ಎನ್ನುವಂತೆ ಆಕೆಯನ್ನು ನಂಬಿಸಿದ. ನಾನಿದ್ದ ಊರಿಗೆ ಬಂದ್ರೆ ನಿನಗೆ ಕೆಲಸ ಕೊಡಿಸುತ್ತೇನೆ ಅಂತ ಭರವಸೆ ನೀಡಿದ.

 ಇದನ್ನೂ ಓದಿ: Shocking News: ಬೀದಿ ನಾಯಿಯನ್ನೂ ಬಿಡೋದಿಲ್ಲ ಕಾಮುಕರು! ಶ್ವಾನದ ಮೇಲೂ ರೇಪ್ ನಡೆದಿದ್ದು ಎಲ್ಲಿ ಗೊತ್ತಾ?

ಹೋಟೆಲ್‌ಗೆ ಕರೆಸಿ ಕಾಮುಕರಿಂದ ಸಾಮೂಹಿಕ ಅತ್ಯಾಚಾರ

ಹೀಗೆ ಆ ವ್ಯಕ್ತಿಯ ಮಾತನ್ನು ನಂಬಿದ ಆಕೆ, ಆತ ಹೇಳಿದ್ದಕ್ಕೆಲ್ಲ ತಲೆ ಅಲ್ಲಾಡಿಸಿದಳು. ಒಂದು ದಿನ ತನ್ನೂರಿನಿಂದ ಹೊರಟು, ಆತ ಹೇಳಿದ ಊರಿಗೆ ಬಂದು, ಆತನಿಗೆ ಫೋನ್ ಮಾಡಿದಳು. ಒಳ್ಳೆಯವನಂತೆ ನಗುತ್ತಾ ಬಂದ ಆತ, ಒಂದು ಹೋಟೆಲ್‌ಗೆ ಆಕೆಯನ್ನು ಕರೆದೊಯ್ದು. ಅಲ್ಲಾಗಲೇ ಮೂವರು ಆತನ ಸ್ನೇಹಿತರು ಇದ್ದರು. ಇಲ್ಲೇನಾಗುತ್ತಿದೆ ಅಂತ ಆಕೆಗೆ ತಿಳಿಯುವಷ್ಟರಲ್ಲಿ ಅನಾಹುತವೇ ನಡೆದು ಹೋಗಿತ್ತು.

 ಕೈಕಾಲು ಕಟ್ಟಿ, ಹೋಟೆಲ್ ಮಹಡಿಯಿಂದ ತಳ್ಳಿದ ಪಾಪಿಗಳು

ಹೌದು, ಈತ ಹಾಗೂ ಇನ್ನೂ ಮೂವರು ಸೇರಿಕೊಂಡು ಯುವತಿ ಮೇಲೆ ಮುಗಿ ಬಿದ್ದರು. ನಾಲ್ವರು ಸೇರಿ ಆಕೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ರು. ಆಕೆ ಅಸ್ವಸ್ಥಗೊಂಡು ಬಿದ್ದಿದ್ರೆ, ಆಕೆಯನ್ನು ಮುಗಿಸಲು ಸಂಚು ರೂಪಿಸಿದ್ರು. ಆಕೆಯ ಕೈಕಾಲು ಕಟ್ಟಿ, ಹೋಟೆಲ್‌ನ 2ನೇ ಮಹಡಿಯಿಂದ ತಳ್ಳಿ ಎಸ್ಕೇಪ್ ಆಗಿದ್ರು.

ಈ ಘಟನೆ ನಡೆದಿದ್ದು ಎಲ್ಲಿ?

ರಾಜಸ್ಥಾನಗ ಚುರು ಎಂಬಲ್ಲಿ ಇಂಥದ್ದೊಂದು ಘಟನೆ ನಡೆದಿದೆ. ಉದ್ಯೋಗ ಕೊಡಿಸ್ತೀನಿ ಅಂತ ದೆಹಲಿಯಿಂದ 26 ವರ್ಷದ ಯುವತಿಯನ್ನು ಆರೋಪಿ ದೇವೇಂದ್ರ ಸಿಂಗ್ ಎಂದು ಗುರುತಿಸಲಾಗಿದೆ. ಉಳಿದಂತೆ ಆತನ ಸ್ನೇಹಿತರಾದ ವಿಕ್ರಮ್ ಸಿಂಗ್,  ಭವಾನಿ ಸಿಂಗ್ ಮತ್ತು ಸುನಿಲ್ ರಜಪೂತ್ ಎಂದು ಗುರುತಿಸಲಾಗಿದೆ.

ಇದನ್ನೂ ಓದಿ: Cyber Crime: ಅವಳು ಬೇಕಾ, ಇವಳು ಬೇಕಾ? ಹೀಗಂತ ಫೋಟೋ ಜೊತೆ ರೇಟ್ ಹಾಕ್ತಿದ್ದ ವಿಕೃತ ಯುವಕ!

ಹೋಟೆಲ್ ಸಿಬ್ಬಂದಿಯಿಂದ ಯುವತಿ ರಕ್ಷಣೆ

ಆಕೆ ಹೋಟೆಲ್‌ನಿಂದ ಬಿದ್ದ ಬಳಿಕ ಹೋಟೆಲ್ ಸಿಬ್ಬಂದಿ ಆಕೆಯನ್ನು ರಕ್ಷಿಸಿದ್ದಾರೆ. ಬಳಿಕ ಆಸ್ಪತ್ರೆಗೆ ದಾಖಲಿಸಿದ್ದು, ಆಕೆಗೆ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಈ ಬಗ್ಗೆ ಅತ್ಯಾಚಾರ ಪ್ರಕರಣ ದಾಖಲಿಸಿಕೊಂಡಿರುವ ಸ್ಥಳೀಯ ಪೊಲೀಸರು, ನಾಲ್ವರು ಕಾಮುಕರನ್ನೂ ಬಂಧಿಸಿದ್ದಾರೆ.
Published by:Annappa Achari
First published: