Flood: ಪ್ರವಾಹದಲ್ಲಿ ಸಿಲುಕಿದ ಸಾಕು ನಾಯಿಯನ್ನು ರಕ್ಷಿಸಿ ಛಾವಣಿಯ ಮೇಲೆ ಕುಳಿತ ಹುಡುಗಿ!

ಅಮೆರಿಕದಲ್ಲಿರುವ ಕೆಂಟುಕಿಯಲ್ಲಿ ಭಾರಿ ಮಳೆಯಿಂದಾಗಿ ಬಹುತೇಕವಾಗಿ ಎಲ್ಲವೂ ಮುಳುಗಿರುವಾಗ ಇತ್ತೀಚೆಗೆ ಒಂದು ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ತುಂಬಾನೇ ವೈರಲ್ ಆಗಿದ್ದು ಆ ಅದರಲ್ಲಿ 17 ವರ್ಷದ ಹುಡುಗಿಯೊಬ್ಬಳು ತನ್ನ ಸಾಕುನಾಯಿಯನ್ನು ಪ್ರವಾಹದ ರಭಸದ ಮಧ್ಯೆಯೂ ತನ್ನ ಪ್ರಾಣದ ಹಂಗು ಬಿಟ್ಟು ಹೋಗಿ ಕಾಪಾಡಿರುವುದನ್ನು ನೋಡಬಹುದಾಗಿದೆ.

ಪ್ರವಾಹದಲ್ಲಿ ಸಿಲುಕಿದ ಕ್ಲೋಯ್ ಮತ್ತು ಆಕೆಯ ಸಾಕು ನಾಯಿ

ಪ್ರವಾಹದಲ್ಲಿ ಸಿಲುಕಿದ ಕ್ಲೋಯ್ ಮತ್ತು ಆಕೆಯ ಸಾಕು ನಾಯಿ

  • Share this:
ಈ ಪ್ರವಾಹ (Flood) ಪೀಡಿತ ಪ್ರದೇಶಗಳಲ್ಲಿ ಕೆಲವೊಮ್ಮೆ ಸಾಕು ಪ್ರಾಣಿಗಳು (Pet Animals) ಮತ್ತು ಮನುಷ್ಯರು ಸಹ ನಮ್ಮ ಕಣ್ಮುಂದೆಯೇ ಹರಿದು ಕೊಚ್ಚಿಕೊಂಡು ಹೋಗುತ್ತಿದ್ದರೂ ಸಹ ನಮ್ಮ ಕೈಯಲ್ಲಿ ಏನೂ ಮಾಡಲು ಸಾಧ್ಯವಾಗದ ಸಂದರ್ಭ ಅದಾಗಿರುತ್ತದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಆದರೆ ಕೆಲವೊಬ್ಬರು ಇಂತಹ ಕಠಿಣ ಪರಿಸ್ಥಿತಿಗಳಲ್ಲಿಯೂ ಸಹ ತಮ್ಮನ್ನು ತಾವು ಕಾಪಾಡಿಕೊಂಡು ಮತ್ತು ಬೇರೆಯವರನ್ನು ಸಹ ಹೇಗೆ ರಕ್ಷಿಸಬೇಕು (Protect) ಅಂತ ತುಂಬಾನೇ ಬುದ್ದಿವಂತಿಕೆಯಿಂದ ಉಪಾಯಮಾಡಿ ಆ ರೀತಿ ಸಾಹಸ ಮಾಡಲು ಹಿಂಜರಿಯುವುದೇ ಇಲ್ಲ ಮತ್ತು ಅದೇ ರೀತಿ ಧೈರ್ಯದಿಂದ ಮುನ್ನುಗ್ಗಿ ಅವರು ಕಾಪಾಡಬೇಕೆಂದು ಅಂದುಕೊಂಡಿರುವುದನ್ನು ಸುರಕ್ಷಿತವಾಗಿ (Safely) ಕಾಪಾಡಿಕೊಂಡಿರುತ್ತಾರೆ.

ತನ್ನ ಸಾಕುನಾಯಿಯನ್ನು ರಕ್ಷಿಸಿದ ಹುಡುಗಿ
ಇಲ್ಲಿಯೂ ಸಹ ಅಂತಹದೇ ಒಂದು ಘಟನೆ ನಡೆದಿದೆ ನೋಡಿ. ಅಮೆರಿಕದಲ್ಲಿರುವ ಕೆಂಟುಕಿಯಲ್ಲಿ ಭಾರಿ ಮಳೆಯಿಂದಾಗಿ ಬಹುತೇಕವಾಗಿ ಎಲ್ಲವೂ ಮುಳುಗಿರುವಾಗ ಇತ್ತೀಚೆಗೆ ಒಂದು ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ತುಂಬಾನೇ ವೈರಲ್ ಆಗಿದ್ದು ಆ ಅದರಲ್ಲಿ 17 ವರ್ಷದ ಹುಡುಗಿಯೊಬ್ಬಳು ತನ್ನ ಸಾಕುನಾಯಿಯನ್ನು ಪ್ರವಾಹದ ರಭಸದ ಮಧ್ಯೆಯೂ ತನ್ನ ಪ್ರಾಣದ ಹಂಗು ಬಿಟ್ಟು ಹೋಗಿ ಕಾಪಾಡಿರುವುದನ್ನು ನೋಡಬಹುದಾಗಿದೆ.

ಈ ಫೋಟೋದಲ್ಲಿ ಹದಿಹರೆಯದ ಹುಡುಗಿಯೊಬ್ಬಳು ತನ್ನನ್ನು ತಾನು ಮತ್ತು ತನ್ನ ಮುದ್ದಿನ ನಾಯಿಯನ್ನು ಪ್ರವಾಹದಲ್ಲಿ ಮುಳುಗುವುದರಿಂದ ರಕ್ಷಿಸಿದ ದೃಶ್ಯವಿದೆ. 17 ವರ್ಷದ ಕ್ಲೋಯ್ ಆಡಮ್ಸ್, ಯುಎಸ್ ರಾಜ್ಯದ ವಿವಿಧ ಭಾಗಗಳಲ್ಲಿ ಹಠಾತ್ ಪ್ರವಾಹವು ಸಂಭವಿಸಿದಾಗ ಮನೆಯಲ್ಲಿ ಒಬ್ಬಳೇ ಇದ್ದಳು. ಗುರುವಾರ ಬೆಳಿಗ್ಗೆ, ವೈಟ್ಸ್‌ಬರ್ಗ್ ನಲ್ಲಿ ತನ್ನ ಅಜ್ಜನೊಂದಿಗೆ ವಾಸಿಸುತ್ತಿದ್ದ ಕ್ಲೋಯ್, ಮನೆಯಲ್ಲಿ ನೀರು ಹರಿಯುತ್ತಿರುವುದನ್ನು ಕಂಡು ಎಚ್ಚರಗೊಂಡಳು

ಈ ಕುರಿತು ಕ್ಲೋಯ್ ಏನು ಹೇಳಿದ್ದಾರೆ ನೋಡಿ 
ಆ ಸಮಯದಲ್ಲಿ, ಅವಳು ತನ್ನ ಮುದ್ದಿನ ನಾಯಿ ಸ್ಯಾಂಡಿಯೊಂದಿಗೆ ಇದ್ದಳು ಮತ್ತು ಅದು ಅವಳ ಬಾಲ್ಯದಿಂದಲೂ ಅವಳೊಂದಿಗೆ ಇತ್ತು. "ನಾನು ನೋಡಿದಷ್ಟು ದೂರ ನೀರು ಇತ್ತು. ನಾನು ಸಂಪೂರ್ಣವಾಗಿ ಆಘಾತಗೊಂಡಿದ್ದೆ" ಎಂದು ಕ್ಲೋಯ್ ಸುದ್ದಿ ಮಾಧ್ಯಮಕ್ಕೆ ತಿಳಿಸಿದರು. ಹೊರಗಿನ ಜನರ ಸಹಾಯವನ್ನು ನಿರೀಕ್ಷಿಸದೇ ಕ್ಲೋಯ್, ತನ್ನನ್ನು ಮತ್ತು ತನ್ನ ನಾಯಿಯನ್ನು ಸ್ವತಃ ಪರಿಸ್ಥಿತಿಯಿಂದ ಹೊರ ತರಲು ನಿರ್ಧರಿಸಿದಳು. "ನನ್ನ ಮುಂದಿನ ಆಲೋಚನೆಯೆಂದರೆ ನಾವು ನನ್ನ ಚಿಕ್ಕಪ್ಪನ ಮನೆಗೆ ಈಜಿಕೊಂಡು ಹೋಗುವುದು" ಎಂದು ಅವಳು ಹೇಳಿದಳು.

ಇದನ್ನೂ ಓದಿ:  Viral Video: ವಧು-ವರನ ಸಖತ್ ಡ್ಯಾನ್ಸ್! ನೆಟ್ಟಿಗರು ಫಿದಾ, ಗೆದ್ದಿದ್ಯಾರು ಅಂತ ತಿಳಿಯೋಕೆ ಈ ವಿಡಿಯೋ ನೋಡಿ

ಅವಳು ನಾಯಿಯ ಜೊತೆಗೆ, ಒಂದು ಕ್ಷಣ ನೀರಿನಲ್ಲಿ ಈಜಲು ಸಾಧ್ಯವೇ ಎಂದು ನೋಡಿದಳು, ಆದರೆ ಅವಳಿಗೆ ಸಾಧ್ಯವಾಗಲಿಲ್ಲ. "ನಾನು ನಾಯಿಯನ್ನು ಎತ್ತಿಕೊಂಡು ನೀರಿನಲ್ಲಿ ನಡೆಯಲು ಆರಂಭಿಸಿದೆ, ಸೊಂಟದ ಆಳದ ನೀರಿನ ಮೂಲಕ ನಡೆದು ಹೋಗಿ ನಾಯಿಯನ್ನು ಮಲಗಿಸಲು ಏನಾದರೊಂದು ತೇಲುತ್ತಿರುವ ವಸ್ತುವನ್ನು ಹುಡುಕಲು ಪ್ರಯತ್ನಿಸಿದೆ" ಎಂದು ಕ್ಲೋಯ್ ಹೇಳಿದಳು. ಸ್ಯಾಂಡಿಯನ್ನು ಶುಷ್ಕವಾಗಿಡಲು ಅವಳು ಪ್ಲಾಸ್ಟಿಕ್ ಡ್ರಾಯರ್ ಅನ್ನು ಕಂಡುಕೊಂಡಳು. ನಂತರ ಅವಳು ತನ್ನನ್ನು ತೇಲುವಂತೆ ಮಾಡಲು ಡ್ರಾಯರ್ ಅನ್ನು ದಿಂಬಿನ ಮೇಲೆ ಇರಿಸಿದಳು.

"ನಾನು ಅಂತಿಮವಾಗಿ ಒಂದು ಪ್ಲ್ಯಾನ್ ಮಾಡಿದೆ ಮತ್ತು ತಣ್ಣೀರಿನಲ್ಲಿ ಈಜುತ್ತಾ, ಸ್ಯಾಂಡಿ ಮೇಲಿದ್ದ ಕುಶನ್ ಅನ್ನು ತಳ್ಳುತ್ತಲೇ ಇದ್ದೆ ಮತ್ತು ಹತ್ತಿರದ ಶೇಖರಣಾ ಕಟ್ಟಡದ ಛಾವಣಿಯನ್ನು ತಲುಪಿದೆವು, ಆ ಛಾವಣಿ ಮುಳುಗಿರಲಿಲ್ಲ” ಎಂದು ಹೇಳಿದಳು.

ಕ್ಲೋಯ್ ಅವರ ಸಾಹಸಕ್ಕೆ ಆಕೆಯ ತಂದೆ ಹೇಳಿದ್ದು ಹೀಗೆ
ಅವಳು ಮತ್ತು ಸ್ಯಾಂಡಿ ಛಾವಣಿಯ ಮೇಲೆ ಹತ್ತಿದರು ಮತ್ತು ನಾಲ್ಕು ಗಂಟೆಗಳಿಗೂ ಹೆಚ್ಚು ಕಾಲ ಅಲ್ಲಿಯೇ ತಮ್ಮ ಪ್ರಾಣವನ್ನು ಕೈಯಲ್ಲಿ ಹಿಡಿದುಕೊಂಡು ಕುಳಿತರು, ನಂತರ ಅವಳ ಕುಟುಂಬವು ಕಯಾಕ್ ಸಹಾಯದಿಂದ ರಕ್ಷಿಸಲ್ಪಟ್ಟಿತು. ಸ್ಯಾಂಡಿಯನ್ನು ರಕ್ಷಿಸಿದ ನಂತರ, ಕ್ಲೋಯ್ ಅವರು ಪ್ರವಾಹದಿಂದ ಬದುಕುಳಿದಿದ್ದಾರೆ ಎಂದು ಅರಿತುಕೊಂಡರು.

ಇದನ್ನೂ ಓದಿ:  Elephant Viral Video: ಪ್ರಾಣ ಉಳಿಸಿಕೊಳ್ಳಲು ಪರದಾಡಿದ ಮೂಕಪ್ರಾಣಿ, ರಭಸದ ನೀರಿನ ವಿರುದ್ಧ ಕೊನೆಗೂ ಗೆದ್ದ ಬೀಗಿದ ಆನೆ!

ಕ್ಲೋಯ್ ಅವರ ತಂದೆ ಟೆರ್ರಿ ಆಡಮ್ಸ್, ಪ್ರವಾಹದ ಮಧ್ಯೆ ತೇಲುತ್ತಿರುವ ಒಂದು ಛಾವಣಿಯ ಮೇಲೆ ತಮ್ಮ ಮಗಳು ತನ್ನ ನಾಯಿಯನ್ನು ಎತ್ತಿಕೊಂಡು ಕೂತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಪೋಸ್ಟ್ ನಲ್ಲಿ "ನಿಜಕ್ಕೂ ನನ್ನ ಮಗಳು ಸಾಹಸಿ, ನಾನು ನಿನ್ನನ್ನು ತುಂಬಾನೇ ಪ್ರೀತಿಸುತ್ತೇನೆ, ಕ್ಲೋಯ್" ಎಂದು ಶೀರ್ಷಿಕೆಯೊಂದನ್ನು ಬರೆದಿದ್ದಾರೆ.

ಇಂತಹ ಕಠಿಣವಾದ ಪರಿಸ್ಥಿತಿಯಲ್ಲಿಯೂ ಸಹ ತುಂಬಾನೇ ಧೈರ್ಯಶಾಲಿಯಾಗಿದ್ದಕ್ಕಾಗಿ ನೆಟ್ಟಿಗರು ಆಕೆಯನ್ನು ತುಂಬಾನೇ ಶ್ಲಾಘಿಸಿದ್ದಾರೆ. ಕೆಂಟುಕಿಯಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಮಳೆ-ಪ್ರೇರಿತ ಹಠಾತ್ ಪ್ರವಾಹವು ಇಲ್ಲಿಯವರೆಗೆ 25 ಜನರನ್ನು ಬಲಿ ತೆಗೆದುಕೊಂಡಿದೆ.
Published by:Ashwini Prabhu
First published: