Shocking News: ಪ್ರಿಯಕರನ ಜೊತೆ ಓಡಿ ಹೋಗೋಕೆ ಅಪ್ಪ-ಅಮ್ಮಂಗೆ ವಿಷ ಉಣಿಸಿದ ಪಾಪಿ ಮಗಳು; ಇಂಥಾ ಮಕ್ಕಳೂ ಇರ್ತಾರೆ

ಎರಡು ವರ್ಷಗಳ ಹಿಂದೆಯೂ ಖುಷ್ಬು ಸಚಿನ್ ಜೊತೆ ಓಡಿ ಹೋಗಿದ್ದಳು. ಆದರೆ ಆಗ ಖುಷ್ಬು ಕುಟುಂಬಸ್ಥರು ಆಕೆಯನ್ನು ಹುಡುಕಿ ಕರೆತಂದು ದಿಂಡೋಲಿ ಬಿಟ್ಟು ಬೇರೆ ಕಡೆ ಹೋಗಿ ವಾಸಿಸುತ್ತಿದ್ದರು.

ಸಾಂದರ್ಭಿಕ ಚಿತ್ರ.

ಸಾಂದರ್ಭಿಕ ಚಿತ್ರ.

  • Share this:
    ಸೂರತ್(ಸೆ.20): ಪ್ರಪಂಚದಲ್ಲಿ ಕೆಟ್ಟ ಮಕ್ಕಳಿರುತ್ತಾರೆ, ಆದ್ರೆ ಕೆಟ್ಟ ತಂದೆ-ತಾಯಿ ಇರುವುದಿಲ್ಲ ಎಂಬ ಮಾತನ್ನು ಕೇಳಿದ್ದೇವೆ. ಇದಕ್ಕೆ ಸಾಕ್ಷಿ ಎಂಬಂತೆ ಸೂರತ್​ನಲ್ಲಿ ಒಂದು ಘಟನೆ ನಡೆದಿದೆ. ಹೆತ್ತ ಮಗಳೇ ತಂದೆ-ತಾಯಿಗೆ ವಿಷ(Girl Poisoned her parents) ಉಣಿಸಿ ತನ್ನ ಪ್ರಿಯಕರನ ಜೊತೆ ಓಡಿ(eloped) ಹೋಗಿ ಮದುವೆಯಾಗಿದ್ದಾಳೆ. ಇತ್ತೀಚೆಗೆ ಹುಡುಗ-ಹುಡುಗಿಯರು ಪ್ರೀತಿ ಪ್ರೇಮದ(Love) ಬಲೆಗೆ ಬಿದ್ದು, ಹೆತ್ತವರನ್ನೇ ಕಡೆಗಣಿಸುತ್ತಿದ್ದಾರೆ. ಈಕೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಅವರನ್ನು ಕೊಲ್ಲುವ ಯತ್ನ ಮಾಡಿದ್ದಾಳೆ. ಸದ್ಯ ಹೆತ್ತವರಿಗೆ ವಿಷ ಉಣಿಸಿದ ಮಗಳ ವಿರುದ್ಧ ಪೊಲೀಸರು(police case) ಪ್ರಕರಣ ದಾಖಲಿಸಿದ್ದಾರೆ.

    ಆರೋಪಿತೆಯನ್ನು ಖುಷ್ಬೂ ಎಂದು ಗುರುತಿಸಲಾಗಿದ್ದು, 10ನೇ ತರಗತಿವರೆಗೆ ಓದಿದ್ದಾಳೆ ಎನ್ನಲಾಗಿದೆ. ಇನ್ನು, ಈಕೆಯ ಗಂಡ ಸಚಿನ್ ಕೈಯಲ್ಲಿ ಕೆಲಸವಿಲ್ಲದೇ ಖಾಲಿ ಕೂತಿದ್ದಾನೆ. ಪೊಲೀಸರು ಯುವಕನ ತಂದೆ ಅಶೋಕ್​ ವಿರುದ್ಧವೂ ಎಫ್​ಐಆರ್ ದಾಖಲಿಸಿದ್ದಾರೆ. ಜೊತೆಗೆ ಶನಿವಾರ ಪೊಲೀಸರು ಪ್ರಾಪರ್ಟಿ ಬ್ರೋಕರ್​ ಆದ ಅಶೋಕ್​​ನನ್ನು ಬಂಧಿಸಿದ್ದಾರೆ. ಆದರೆ ಖುಷ್ಬು ಮತ್ತು ಸಚಿನ್ ತಲೆ ಮರೆಸಿಕೊಂಡಿದ್ದಾರೆ ಎನ್ನಲಾಗಿದೆ.

    ಖುಷ್ಬು ಹಾಗೂ ಸಚಿನ್ ಕುಟುಂಬಗಳ ಸೂರತ್​​ನ ದಿಂಡೋಲಿ ಪ್ರದೇಶದಲ್ಲಿ ಒಂದೇ ಕಡೆ ವಾಸಿಸುತ್ತಿದ್ದರು. ಈ ಮಧ್ಯೆ ಇವರಿಬ್ಬರಿಗೂ ಪರಿಚಯವಾಗಿ ಸ್ನೇಹ ಬೆಳೆದಿದೆ. ಬಳಿಕ ಗೆಳೆತನ ಪ್ರೀತಿಯ ರೂಪ ಪಡೆದುಕೊಂಡಿದೆ. ಆದರೆ ಇಬರಿಬ್ಬರ ಪ್ರೀತಿಗೆ ಖುಷ್ಬು ಮನೆಯಲ್ಲಿ ವಿರೋಧ ವ್ಯಕ್ತವಾಗಿತ್ತು. ಆಗ ಆಕೆ ಇನ್ನೂ ಅಪ್ರಾಪ್ತೆಯಾಗಿದ್ದಳು. ಎರಡು ವರ್ಷಗಳ ಹಿಂದೆಯೂ ಖುಷ್ಬು ಸಚಿನ್ ಜೊತೆ ಓಡಿ ಹೋಗಿದ್ದಳು. ಆದರೆ ಆಗ ಖುಷ್ಬು ಕುಟುಂಬಸ್ಥರು ಆಕೆಯನ್ನು ಹುಡುಕಿ ಕರೆತಂದು ದಿಂಡೋಲಿ ಬಿಟ್ಟು ಬೇರೆ ಕಡೆ ಹೋಗಿ ವಾಸಿಸುತ್ತಿದ್ದರು.

    ಇದನ್ನೂ ಓದಿ:Respect your Wife: ಹೆಂಡತಿಯನ್ನು ಲೇ..ಹೋಗೇ, ಬಾರೇ ಎಂದರೆ ಕೇಸ್ ಬೀಳುತ್ತೆ ಹುಷಾರ್, ಈ ಕಾನೂನಿನ ಬಗ್ಗೆ ಎಲ್ಲಾ ಗಂಡಂದಿರು ತಿಳಿದಿರಲೇಬೇಕು!

    ಆದರೆ ಖುಷ್ಬು ಇಷ್ಟಾದರೂ ಸಹ ಸಚಿನ್ ಜೊತೆ ತನ್ನ ಪ್ರಣಯವನ್ನು ಮುಂದುವರೆಸಿದ್ದಳು. ಆಕೆ ಸಚಿನ್​ನ್ನು ಮದುವೆಯಾಗಲು ಪ್ರಾಪ್ತ ವಯಸ್ಸಿಗೆ ಬರುವುದನ್ನು ಕಾಯುತ್ತಿದ್ದಳು. ಖುಷ್ಬುಗೆ 18 ವರ್ಷ ತುಂಬಿದ್ದೇ ತಡ ಸಚಿನ್ ಜೊತೆ ಎಸ್ಕೇಪ್ ಆಗಲು ಪ್ಲಾನ್ ಮಾಡಿದ್ದಳು. ಅಂದು ಆಕೆಯ ಬರ್ತ್​ಡೇ ಆಗಿ 2 ದಿನ ಕಳೆದಿತ್ತು ಅಷ್ಟೇ. ಆಗಲೇ ಸಚಿನ್ ಜೊತೆ ಓಡಿ ಹೋಗಲು ಪೂರ್ವ ತಯಾರಿ ಮಾಡಿಕೊಂಡಿದ್ದಳು. ಅದಕ್ಕೆ ತಾನು ಮನೆ ಬಿಟ್ಟು ಹೋಗುವ ಸಂದರ್ಭದಲ್ಲಿ ತನ್ನ ತಂದೆ-ತಾಯಿಗೆ ಪ್ರಜ್ಞೆ ತಪ್ಪುವಂತೆ ಮಾಡಲು ನಿರ್ಧರಿಸಿದ್ದಳು. ಅದರಂತೆ ಸೆ.12ರಂದು ಮೆಡಿಕಲ್ ಸ್ಟೋರ್​ನಿಂದ ಕೆಲವು ಮಾತ್ರೆಗಳನ್ನು ತಂದು, ಆಲೂ ಪರೋಟ ಜೊತೆ ಬೆರೆಸಿ ತನ್ನ ಪೋಷಕರಿಗೆ ಹಾಗೂ ಸಹೋದರನಿಗೆ ತಿನ್ನಿಸಿದ್ದಾಳೆ.

    ಊಟ ತಿಂದ ಖುಷ್ಬು ತಂದೆ-ತಾಯಿ ಹಾಗೂ ಸಹೋದರ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಆಗ ಅವರ ಮನೆಗೆ ಖುಷ್ಬುವನ್ನು ಕರೆದುಕೊಂಡು ಹೋಗಲು ಸಚಿನ್ ತಂದೆ ಅಶೋಕ್​ ಬಂದಿದ್ದಾರೆ. ಬಳಿಕ ಆಕೆ ಸಚಿನ್ ಜೊತೆ ಓಡಿ ಹೋಗಿದ್ದಾಳೆ. ಖುಷ್ಬು ತಂದೆ ವಂಜಾರಾ ಮಾರನೇ ದಿನ ಎಚ್ಚರಗೊಂಡಿದ್ದಾರೆ. ಅವರ ಆರೋಗ್ಯ ಹದಗೆಟ್ಟಂತೆ ಭಾಸವಾಗಿದೆ. ಬಳಿಕ ಮಗಳು ಮನೆಯಲ್ಲಿ ಇಲ್ಲ ಎಂಬುದು ಅವರಿಗೆ ಗೊತ್ತಾಗಿದೆ. ಕೂಡಲೇ ತನ್ನ ಹೆಂಡತಿ ಹಾಗೂ ಮಗನನ್ನು ಎಬ್ಬಿಸಿದ್ದಾರೆ. ಅಷ್ಟೊತ್ತಿಗೆ ಪೊಲೀಸರು ವಂಜಾರಾಗೆ ಕರೆ ಮಾಡಿ, ‘‘ನಿಮ್ಮ ಮಗಳು ಆಕೆಯ ಗಂಡನ ಜೊತೆ ಪೊಲೀಸ್​ ಸ್ಟೇಷನ್​ಗೆ ಬಂದಿದ್ದಾಳೆ‘‘ ಎಂದು ಹೇಳಿದ್ದಾರೆ.

    ಇದನ್ನೂ ಓದಿ:Love, Sex, Dhoka: ಪೊಲೀಸ್ ಠಾಣೆ ಎದುರೇ ಪ್ರಿಯಕರನಿಗೆ ಗೂಸಾ ಕೊಟ್ಟ ಯುವತಿ

    ರಿಜಿಸ್ಟರ್​ ಮ್ಯಾರೇಜ್ ಆದ ಬಳಿಕ ಖುಷ್ಬು ಹಾಗೂ ಸಚಿನ್ ಪೊಲೀಸ್ ಸ್ಟೇಷನ್​ಗೆ ಬಂದಿದ್ದಾರೆ. ಇದಾದ ಬಳಿಕ ಅವರ ಆರೋಗ್ಯ ಸ್ಥಿತಿ ಮತ್ತಷ್ಟು ಹದಗೆಟ್ಟಿದ್ದರಿಂದ ವಂಜಾರಾ ಹಾಗೂ ಆತನ ಹೆಂಡತಿ ಮಗನನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಚೇತರಿಸಿಕೊಂಡ ಬಳಿಕ ವಂಜಾರಾ ತನ್ನ ಮಗಳು ಖುಷ್ಬು, ಸಚಿನ್ ಹಾಗೂ ಆತನ ತಂದೆ ಅಶೋಕ್ ವಿರುದ್ಧ ದೂರು ದಾಖಲಿಸಿದ್ದಾರೆ.
    Published by:Latha CG
    First published: