ವೀಡಿಯೋ ಕಾಲ್​ನಲ್ಲಿ ಮಾತನಾಡುತ್ತಾ ನೇಣಿಗೆ ಶರಣಾದಳು!

news18
Updated:August 21, 2018, 6:08 PM IST
ವೀಡಿಯೋ ಕಾಲ್​ನಲ್ಲಿ ಮಾತನಾಡುತ್ತಾ ನೇಣಿಗೆ ಶರಣಾದಳು!
news18
Updated: August 21, 2018, 6:08 PM IST
-ನ್ಯೂಸ್​ 18 ಕನ್ನಡ

ನವದೆಹಲಿ,(ಆ.21): ಇತ್ತೀಚಿನ ದಿನಗಳಲ್ಲಿ ಯುವಜನತೆ ಕ್ಷುಲ್ಲಕ ಕಾರಣಕ್ಕೆ ತಮ್ಮ ಅಮೂಲ್ಯವಾದ ಜೀವವನ್ನೇ ಕಳೆದುಕೊಳ್ಳುತ್ತಿದ್ದಾರೆ. ಅಂತಹದೇ ಒಂದು ದುರ್ಘಟನೆ ನವದೆಹಲಿಯಲ್ಲಿ ನಡೆದಿದೆ. ವಿದ್ಯಾರ್ಥಿನಿಯೋರ್ವಳು ತನ್ನ ಗೆಳೆಯನ ಜೊತೆ ಜಗಳವಾಡಿಕೊಂಡು ವೀಡಿಯೋ ಕಾಲ್​ ಮಾಡುತ್ತಲೇ  ನೇಣಿಗೆ ಶರಣಾಗಿದ್ದಾಳೆ.

ಶಿವಾನಿ(21) ಮೃತ ದುರ್ದೈವಿ. ಸಿಎಸ್​ ವ್ಯಾಸಂಗ ಮಾಡುತ್ತಿದ್ದಳು. ಶಿವಾನಿ ಘೋಂಡಗಾಂವ್​ನಲ್ಲಿ ತನ್ನ ಕುಟುಂಬದ ಜೊತೆ ವಾಸವಾಗಿದ್ದಳು ಎನ್ನಲಾಗಿದೆ. ಈಕೆ ತನ್ನ ಗೆಳೆಯನಿಗೆ ವೀಡಿಯೋ ಕಾಲ್​​ ಮಾಡಿ ಜಗಳವಾಡುತ್ತಲೇ ಫ್ಯಾನಿಗೆ ನೇಣು ಹಾಕಿಕೊಂಡಿದ್ದಾಳೆ.

ಶಿವಾನಿಯ ಸಾವಿನ ವಿಷಯವನ್ನು ಆಕೆಯ ಗೆಳೆಯನೇ ಅವಳ ತಂದೆಗೆ ಕಾಲ್​ ಮಾಡಿ ತಿಳಿಸಿದ್ದಾನೆ ಎನ್ನಲಾಗಿದೆ. ವಿಷಯ ತಿಳಿದ ಕೂಡಲೇ ಆಕೆಯ ತಂದೆ  ಕೋಣೆಗೆ ತೆರಳಿ ನೋಡಿದರೆ ಶಿವಾನಿಯ ಮೃತದೇಹ ಅವರ ಕಣ್ಣ ಮುಂದೆ ಇತ್ತು. ತಕ್ಷಣ ಶಿವಾನಿಯನ್ನು ಆಸ್ಪತ್ರೆಗೆ ಕರೆದೊಯ್ಯಿತಾದರೂ ಮಾರ್ಗ ಮಧ್ಯೆಯೇ ಆಕೆಯ ಪ್ರಾಣ ಪಕ್ಷಿ ಹಾರಿಹೋಗಿತ್ತು.
First published:August 21, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ