• Home
  • »
  • News
  • »
  • national-international
  • »
  • English Teaching: ಎ ಫಾರ್ ಅರ್ಜುನ್, ಬಿ ಫಾರ್ ಬಲರಾಮ್! ಇಂಗ್ಲೀಷ್ ಕಲಿಸುವ ರೀತಿಯೇ ಬದಲು!

English Teaching: ಎ ಫಾರ್ ಅರ್ಜುನ್, ಬಿ ಫಾರ್ ಬಲರಾಮ್! ಇಂಗ್ಲೀಷ್ ಕಲಿಸುವ ರೀತಿಯೇ ಬದಲು!

ಎ ಫಾರ್ ಅರ್ಜುನ್!

ಎ ಫಾರ್ ಅರ್ಜುನ್!

ಈ ಕಾಲೇಜಿನಲ್ಲಿ ಮಾಡಲಾದ ಇಂಗ್ಲೀಷ್ ಕಾಗುಣಿತದ ಬದಲಾವಣೆಯ ಪ್ರಕಾರ D ಧ್ರು, E ಏಕಲವ್ಯ, H ಅಕ್ಷರಕ್ಕೆ ಹನುಮಂತ ಎಂದು ಹೇಳಿಕೊಡಲಾಗುತ್ತಿದೆ!

  • News18 Kannada
  • Last Updated :
  • Karnataka, India
  • Share this:

ಎ ಫಾರ್ ಆ್ಯಪಲ್, ಬಿ ಫಾರ್ ಬಾಲ್ ಅಂತ ಇಂಗ್ಲೀಷ್ ಭಾಷೆಯ ಕಾಗುಣಿತ ಕಲಿಸುವುದು ಸಾಮಾನ್ಯ. ಆದರೆ ಉತ್ತರ ಪ್ರದೇಶದ ಶಾಲೆಯೊಂದರಲ್ಲಿ (Uttar Pradesh School) ಈ ಕಾಗುಣಿತ ಕಲಿಸುವ ರೀತಿಯನ್ನೇ ಬದಲಿಸಲಾಗಿದೆ. ಮಕ್ಕಳಿಗೆ ಇಂಗ್ಲಿಷ್ ಅಕ್ಷರಗಳನ್ನು ಕಲಿಸುವ ಶಾಲೆಯ ಪುಸ್ತಕದಲ್ಲಿ 'ಎ ಫಾರ್ ಆ್ಯಪಲ್' (A For Apple)  ಬದಲಿಗೆ 'ಅರ್ಜುನ್' (A For Arjun) ಎಂದು ಬರೆಯಲಾಗಿದೆ. ಬಿ ಫಾರ್ ಬಾಲ್ ಬದಲಿಗೆ ಬಿ ಫಾರ್ ಬಲರಾಮ ಎಂದು ಕಲಿಸಲಾಗುತ್ತಿದೆ! C ಫಾರ್ ಕ್ಯಾಟ್ ಬದಲಿಗೆ ಚಾಣಕ್ಯ ಎಂದು ಹೇಳಿಕೊಡಲಾಗುತ್ತಿದೆ. ಹೀಗೆ ಇಂಗ್ಲೀಷ್ ಕಾಗುಣಿತಕ್ಕೆ ಹೊಸ ಪದಗಳನ್ನು ಜೋಡಿಸಿ ವಿದ್ಯಾರ್ಥಿಗಳಿಗೆ ಕಲಿಸಲಾಗುತ್ತಿದೆ. ಈ ಸುದ್ದಿ ಸದ್ಯ ವೈರಲ್ ಆಗುತ್ತಿದೆ. ಇಂಗ್ಲಿಷ್ ವರ್ಣಮಾಲೆಯ (English Letters) ಎಲ್ಲಾ 26 ಅಕ್ಷರಗಳನ್ನು ಪುರಾಣಗಳು ಅಥವಾ ಭಾರತದ ಐತಿಹಾಸಿಕ ವ್ಯಕ್ತಿಗಳ ಹೆಸರುಗಳೊಂದಿಗೆ ಗುರುತಿಸಲಾಗಿದೆ.


ಲಕ್ನೋದ ಅಮೀನಾಬಾದ್ ಇಂಟರ್ ಕಾಲೇಜು ಮಕ್ಕಳ ಪುಸ್ತಕಗಳಲ್ಲಿ ಇಂಗ್ಲಿಷ್ ವರ್ಣಮಾಲೆಯ ಬದಲಾವಣೆ ಮಾಡಿದೆ. ಮಕ್ಕಳಿಗೆ ಬಾಲ್ಯದಿಂದಲೇ ದೇಶದ ಇತಿಹಾಸ ಮತ್ತು ಪುರಾಣಗಳ ಬಗ್ಗೆ ಅರಿವು ಮೂಡಿಸುವುದು ಇದರ ಉದ್ದೇಶ ಎಂದು ಕಾಲೇಜು ತಿಳಿಸಿದೆ. ಆಂಗ್ಲ ಅಕ್ಷರಗಳನ್ನು ಬಳಸುವ ಮೂಲಕ ಶಾಲಾ ಅಧಿಕಾರಿಗಳು ಮಕ್ಕಳಿಗೆ ದೇಶದ ಇತಿಹಾಸ, ಪುರಾಣದ ವಿವಿಧ ಪಾತ್ರಗಳನ್ನು ತಿಳಿಯುವಂತೆ ಮಾಡಬೇಕೆಂಬ ಉದ್ದೇಶದಿಂದ ಈ ಬದಲಾವಣೆ ಮಾಡಲಾಗಿದೆ.


ಇದನ್ನೂ ಓದಿ: Alcohol: ದೇಶದ ಈ ರಾಜ್ಯದ ಜನರು ಹೆಚ್ಚು ಮದ್ಯ ಸೇವಿಸ್ತಾರೆ! ಕರ್ನಾಟಕದ ಸ್ಥಾನವೆಷ್ಟು?


ಕೇವಲ ಎ, ಬಿ, ಸಿ ಅಷ್ಟೇ ಅಲ್ಲ!
ಈ ಕಾಲೇಜಿನಲ್ಲಿ ಮಾಡಲಾದ ಇಂಗ್ಲೀಷ್ ಕಾಗುಣಿತದ ಬದಲಾವಣೆಯ ಪ್ರಕಾರ D ಫಾರ್ ಧ್ರುವ,  E ಫಾರ್ ಏಕಲವ್ಯ, H ಫಾರ್  ಹನುಮಂತ ಎಂದು ಹೇಳಿಕೊಡಲಾಗುತ್ತಿದೆ!


ಪ್ರಾಂಶುಪಾಲರು ಏನಂತಾರೆ?
ಲಕ್ನೋದ ಈ ಕಾಲೇಜಿನ ಪ್ರಾಂಶುಪಾಲರಾದ ಲಾಲ್ ಮಿಶ್ರಾ, ವಿದ್ಯಾರ್ಥಿಗಳಿಗೆ ಭಾರತೀಯ ಸಂಸ್ಕೃತಿಯ ಬಗ್ಗೆ ಬಹಳ ಕಡಿಮೆ ಕಲ್ಪನೆ ಇದೆ. ಹಾಗಾಗಿ ಅವರ ಜ್ಞಾನವನ್ನು ಹೆಚ್ಚಿಸಲು ನಾವು ಈ ಉಪಕ್ರಮವನ್ನು ತೆಗೆದುಕೊಂಡಿದ್ದೇವೆ ಎಂದು ತಿಳಿಸಿದ್ದಾರೆ.


ಇದನ್ನೂ ಓದಿ: Rishi Sunak: ಅಧಿಕಾರ ವಹಿಸಿಕೊಂಡ ಬಳಿಕ ಯುಕೆ ಪ್ರಧಾನಿ ರಿಷಿ ಸುನಕ್‌ ಎದುರಿಸುತ್ತಿರುವ ಸವಾಲುಗಳೇನು?


125 ವರ್ಷಗಳಷ್ಟು ಹಳೆಯ ಶಾಲೆ
ಮಕ್ಕಳ ಪುಸ್ತಕಗಳಲ್ಲಿ ಪೌರಾಣಿಕ ಮತ್ತು ಐತಿಹಾಸಿಕ ಪಾತ್ರಗಳ ಹೆಸರುಗಳು ಮಾತ್ರವಲ್ಲ, ಅವುಗಳ ವಿವರಣೆಗಳೂ ಇವೆ. ಪಟ್ಟಿ ಮತ್ತು ವಿವರಣೆಯನ್ನು ಶಾಲೆಯಿಂದಲೇ ಸಿದ್ಧಪಡಿಸಲಾಗಿದೆ. ಲಕ್ನೋದ ಈ ಶಾಲೆ 125 ವರ್ಷಗಳಷ್ಟು ಹಳೆಯದಾಗಿದ್ದು ಶಾಲೆಯನ್ನು 1897 ರಲ್ಲಿ ಸ್ಥಾಪಿಸಲಾಗಿದೆ. ಮಕ್ಕಳ ಪುಸ್ತಕದಲ್ಲಿ ಇಂಗ್ಲೀಷ್ ಕಾಗುಣಿತವನ್ನು ಹೀಗೆ ಬದಲಾವಣೆ ಮಾಡಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ. 


ದೇಶದ ಈ ರಾಜ್ಯದ ಜನರು ಹೆಚ್ಚು ಮದ್ಯ ಸೇವಿಸ್ತಾರೆ!
ತೆಲಂಗಾಣದಲ್ಲಿ 50 ಲಕ್ಷಕ್ಕೂ ಹೆಚ್ಚು ಜನರು ಮದ್ಯ (Alcohol) ಸೇವಿಸುತ್ತಾರೆ ಎಂದು ಎರಡು ವಿಭಿನ್ನ ಸಮೀಕ್ಷೆಗಳು ಬಹಿರಂಗಪಡಿಸಿವೆ. ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದಲ್ಲಿ ಲಭ್ಯವಿರುವ ಆಲ್ಕೋಹಾಲ್ ಸೇವನೆಯ ಸಮೀಕ್ಷೆಯ ಪ್ರಕಾರ, ತೆಲಂಗಾಣ (Telangana) ಜನಸಂಖ್ಯೆಯ ಹತ್ತೊಂಬತ್ತು ಪ್ರತಿಶತದಷ್ಟು ಜನರು, ಅಥವಾ 50.40 ಲಕ್ಷ ಜನರು ಮದ್ಯವನ್ನು ಸೇವಿಸುತ್ತಾರೆ ಎಂದು ಸಮೀಕ್ಷೆಗಳು ತಿಳಿಸಿವೆ. ನೆರೆಯ ಆಂಧ್ರಪ್ರದೇಶದಲ್ಲಿ (Andhra Pradesh) 65 ಲಕ್ಷಕ್ಕೂ ಹೆಚ್ಚು ಜನರು ಅಂದರೆ ಒಟ್ಟು ಜನಸಂಖ್ಯೆಯ 17.3%, ಮದ್ಯ ಸೇವಿಸುತ್ತಾರೆ. ಎರಡು ತೆಲುಗು ರಾಜ್ಯಗಳಲ್ಲಿ ಮದ್ಯ ಮಾರಾಟದ ಗ್ರಾಫ್ ಎಂದಿಗೂ ಕೆಳಮುಖವಾಗಿಯೇ ಇಲ್ಲ ಎಂದು ಸಮೀಕ್ಷೆ ತಿಳಿಸಿದೆ.


ಇಡೀ ದೇಶದಲ್ಲಿ ಮದ್ಯ ಸೇವಿಸುವವರ ಸಂಖ್ಯೆ ಎಷ್ಟು?
ದೇಶದ ಜನಸಂಖ್ಯೆಯ 17.3% ಜನರು ಆಲ್ಕೊಹಾಲ್ ಸೇವಿಸುತ್ತಾರೆ ಎಂದು ಸಮೀಕ್ಷೆಯು ಬಹಿರಂಗಪಡಿಸಿದೆ. ಅಂದರೆ, ದೇಶದಲ್ಲಿ ಸುಮಾರು 15.5 ಕೋಟಿ ಮದ್ಯಪಾನಿಗಳಿದ್ದಾರೆ. ಬೆರಳೆಣಿಕೆಯ ದೊಡ್ಡ ರಾಜ್ಯಗಳು ಮಾತ್ರ ದೇಶದ ಸರಾಸರಿಗಿಂತ ಹೆಚ್ಚು ಮದ್ಯಪಾನಿಗಳನ್ನು ಹೊಂದಿವೆ.

Published by:ಗುರುಗಣೇಶ ಡಬ್ಗುಳಿ
First published: