• ಹೋಂ
 • »
 • ನ್ಯೂಸ್
 • »
 • ದೇಶ-ವಿದೇಶ
 • »
 • Fitness Tips: ಮೊದ್ಲು ಆಹಾರ ಪ್ರಿಯೆಯಾಗಿದ್ದ ಇವ್ರು ಈಗ ಪೌಷ್ಠಿಕ ತಜ್ಞೆ! ಉತ್ತಮ ಆರೋಗ್ಯಕ್ಕೆ ಟಿಪ್ಸ್ ಕೊಟ್ಟಿದ್ದಾರೆ ಓದಿ

Fitness Tips: ಮೊದ್ಲು ಆಹಾರ ಪ್ರಿಯೆಯಾಗಿದ್ದ ಇವ್ರು ಈಗ ಪೌಷ್ಠಿಕ ತಜ್ಞೆ! ಉತ್ತಮ ಆರೋಗ್ಯಕ್ಕೆ ಟಿಪ್ಸ್ ಕೊಟ್ಟಿದ್ದಾರೆ ಓದಿ

ನೇಹಾ ರಂಗ್ಲಾನಿ

ನೇಹಾ ರಂಗ್ಲಾನಿ

ಒಂದೊಮ್ಮೆ ತುಂಬಾನೇ ಆಹಾರ ಪ್ರಿಯೆ ಆಗಿದ್ದ ಮತ್ತು ತುಂಬಾನೇ ದಪ್ಪ ಇದ್ದಂತಹ ನೇಹಾ ರಂಗ್ಲಾನಿ ಎಂಬುವವರು ಈಗ ಪ್ರಸಿದ್ಧ ಪೌಷ್ಠಿಕ ತಜ್ಞೆ ಆಗಿದ್ದಾರೆ ನೋಡಿ. ಅಷ್ಟೇ ಅಲ್ಲದೇ ಅವರಂತೆ ದೇಹದ ತೂಕವನ್ನು ಕಡಿಮೆ ಮಾಡಿಕೊಂಡು ಫಿಟ್ ಆಗಬೇಕು ಅಂತ ಅಂದುಕೊಳ್ಳುವವರಿಗೆ ಸಲಹೆಗಳನ್ನು ನೀಡುವುದರ ಮೂಲಕ ಸಹಾಯ ಮಾಡುತ್ತಿದ್ದಾರೆ.

ಮುಂದೆ ಓದಿ ...
 • Share this:

ಎಷ್ಟೋ ಜನರು ಜನವರಿ 1 ಬಂತು ಎಂದರೆ ‘ಈ ವರ್ಷ ಗ್ಯಾರೆಂಟಿ ನಾನು ನನ್ನ ದೇಹದ ತೂಕವನ್ನು ಕಡಿಮೆ  (Weight Loss) ಮಾಡಿಕೊಳ್ಳುತ್ತೇನೆ’ ಅಂತ ಆರೋಗ್ಯಕರ ಜೀವನಕ್ಕೆ ಒಂದು ಗುರಿಯನ್ನು ಹಾಕಿಕೊಳ್ಳುವುದನ್ನು ನಾವೆಲ್ಲಾ ನೋಡಿರುತ್ತೇವೆ. ಆದರೆ ಇದರಲ್ಲಿ ಎಷ್ಟು ಜನರು ನಿಜವಾಗಿಯೂ ಆ ವರ್ಷ ಕಟ್ಟುನಿಟ್ಟಾಗಿ ತಮ್ಮ ದೇಹದ ತೂಕವನ್ನು (Body Weight) ಕಡಿಮೆ ಮಾಡಿಕೊಂಡಿದ್ದಾರೆ ಅಂತ ನೋಡಿದರೆ, ಅದರಲ್ಲಿ ಕೆಲವೇ ಕೆಲವು ಜನರು ಆ ಗುರಿಯನ್ನು ಯಶಸ್ವಿಯಾಗಿ ಸಾಧಿಸಿರುತ್ತಾರೆ ಅಂತ ಹೇಳಬಹುದು. ಇಲ್ಲೊಬ್ಬರ ನಿಜವಾದ ಕಥೆಯನ್ನು ನಿಮಗೆ ಹೇಳುತ್ತೇವೆ ಕೇಳಿ.. ಒಂದೊಮ್ಮೆ ತುಂಬಾನೇ ಆಹಾರ ಪ್ರಿಯೆ (Foodie) ಆಗಿದ್ದ ಮತ್ತು ತುಂಬಾನೇ ದಪ್ಪ ಇದ್ದಂತಹ ನೇಹಾ ರಂಗ್ಲಾನಿ (Neha Ranglani) ಎಂಬುವವರು ಈಗ ಪ್ರಸಿದ್ಧ ಪೌಷ್ಠಿಕ ತಜ್ಞೆ ಆಗಿದ್ದಾರೆ ನೋಡಿ.


ಅಷ್ಟೇ ಅಲ್ಲದೆ ಅವರಂತೆ ದೇಹದ ತೂಕವನ್ನು ಕಡಿಮೆ ಮಾಡಿಕೊಂಡು ಫಿಟ್ ಆಗಬೇಕು ಅಂತ ಅಂದುಕೊಳ್ಳುವವರಿಗೆ ಸಲಹೆಗಳನ್ನು ನೀಡುವುದರ ಮೂಲಕ ಸಹಾಯ ಮಾಡುತ್ತಿದ್ದಾರೆ ನೋಡಿ. ನಮ್ಮಲ್ಲಿ ಅನೇಕರಂತೆ, ಇವರಿಗೂ ಸಹ ಮೊದಲಿಗೆ ಜಂಕ್ ಫುಡ್, ಸಿಹಿ ತಿನಿಸುಗಳು ಎಂದರೆ ತುಂಬಾನೇ ಪ್ರೀತಿ ಇತ್ತಂತೆ. ಅಷ್ಟೇಲ್ಲಾ ಆಹಾರದ ಮೇಲೆ ಪ್ರೀತಿ ಇದ್ದವರು ಇಂದು ಜನಪ್ರಿಯ ಪೌಷ್ಠಿಕ ತಜ್ಞೆ ಹೇಗೆ ಆದರು ಅಂತ ಅನೇಕರಿಗೆ ಪ್ರಶ್ನೆಯೊಂದು ಕಾಡುತ್ತಿರುತ್ತದೆ ಅಂತ ಹೇಳಬಹುದು.


ಜಂಕ್ ಫುಡ್


ಪೌಷ್ಠಿಕಾಂಶದ ಕ್ಷೇತ್ರದಲ್ಲಿ ನೇಹಾ ಅವರಿಗೆ ಏನಾದರೂ ಸಾಧಿಸಬೇಕು ಅನ್ನೋ ಗುರಿ ಇತ್ತಂತೆ


ನೀವು ಜೀವನದಲ್ಲಿ ಏನಾದರೊಂದು ಸಾಧಿಸಬೇಕು ಅಂತ ಅಂದುಕೊಂಡಾಗ ನೀವು ಅದನ್ನು ಸಾಧಿಸುವ ಕಡೆಗೆ ಕೆಲಸ ಮಾಡಲು ಶುರು ಮಾಡುತ್ತೀರಿ ಅಂತ ಹೇಳಬಹುದು. ನೇಹಾ ರಂಗ್ಲಾನಿ ಅವರು 2008 ರಲ್ಲಿ ಗೃಹ ವಿಜ್ಞಾನದಲ್ಲಿ ಪದವಿ ಪಡೆದರು ಮತ್ತು ಡಯಟೆಟಿಕ್ಸ್ ನಲ್ಲಿ ಸಹ ಕೋರ್ಸ್ ಮುಗಿಸಿದರು. ಇದು ಅವರ ಜೀವನವನ್ನೇ ಬದಲಾಯಿಸಿತು ಅಂತ ಹೇಳಬಹುದು. ಸಿಹಿತಿಂಡಿಗಳು ಮತ್ತು ಜಂಕ್ ಫುಡ್ ಅನ್ನು ಪ್ರೀತಿಸುವ ದಪ್ಪ ಹುಡುಗಿಯಿಂದ ಹಿಡಿದು ಫಿಟ್ ಆಗಿರೋ ಮಹಿಳೆಯವರೆಗಿನ ನೇಹಾ ಅವರ ಜರ್ನಿ ನಿಜಕ್ಕೂ ಅನೇಕರಿಗೆ ಸ್ಪೂರ್ತಿ ಅಂತ ಹೇಳಬಹುದು.


"ನಾನು ಸಂಪೂರ್ಣವಾಗಿ ಜಂಕ್ ಫುಡ್ ಮತ್ತು ಸಿಹಿ ತಿನಿಸುಗಳ ವ್ಯಸನಿಯಾಗಿದ್ದೆ. ನನ್ನ ಮೂಲ ಊಟವೆಂದರೆ ಹುರಿದ ತಿಂಡಿಗಳು, ಸಕ್ಕರೆ, ಬಿಸ್ಕತ್ತುಗಳು ಮತ್ತು ಕೇಕ್ ಗಳಾಗಿದ್ದವು. ನಾನು ಆರೋಗ್ಯಕರವಾಗಿ ತಿನ್ನುವ ಬಗ್ಗೆ ಎಂದಿಗೂ ಯೋಚಿಸಲಿಲ್ಲ ಮತ್ತು ಆ ಸಮಯದಲ್ಲಿ ಆರೋಗ್ಯದ ಬಗ್ಗೆ ಕಾಳಜಿ ಇಷ್ಟೊಂದು ಇರಲಿಲ್ಲ. ಜೀವನದಲ್ಲಿ ಏನು ಮಾಡಬೇಕೆಂದು ನನಗೆ ತುಂಬಾನೇ ಗೊಂದಲವಿತ್ತು, ಆದ್ದರಿಂದ ನಾನು ನನ್ನ ಸಹೋದರಿಯೊಂದಿಗೆ ಕಾಲೇಜಿಗೆ ಹೋಗಿ 'ಫುಡ್ ಆಂಡ್ ನ್ಯೂಟ್ರಿಷನ್’ ಕೋರ್ಸ್ ಅನ್ನು ಕಂಡುಕೊಂಡೆ ಮತ್ತು ಅಲ್ಲಿಂದ ನನ್ನ ಈ ಆರೋಗ್ಯಕರ ಪ್ರಯಾಣ ಶುರುವಾಯಿತು" ಎಂದು ಸಸ್ಯಾಹಾರಿಯಾಗಿ ಮಾರ್ಪಟ್ಟ ರಂಗ್ಲಾನಿ ನೆನಪಿಸಿಕೊಂಡರು.


ನೇಹಾ ಅವರ ‘ಫ್ಯಾಟ್’ ನಿಂದ ‘ಫಿಟ್’ ವರೆಗಿನ ಜರ್ನಿ ಹೇಗಿತ್ತು ಗೊತ್ತೇ?


"ನಾನು ಶಾಲೆಯಲ್ಲಿ ಅತ್ಯಂತ ದಪ್ಪ ಮಗುವಾಗಿದ್ದೆ, ನನ್ನನ್ನು ಎಲ್ಲರೂ 'ಮೋಟಿ' ಅಂತ ಕರೆಯುತ್ತಿದ್ದರು. ಆದರೆ ಪ್ರಾಮಾಣಿಕವಾಗಿ, ಅದು ನನಗೆ ಅಷ್ಟೊಂದು ಬೇಸರ ಪಡಿಸಲಿಲ್ಲ. ಏಕೆಂದರೆ ನಾನು ಅತಿಯಾಗಿ ದಪ್ಪಗಿಲ್ಲ ಎಂದು ನನಗೆ ತಿಳಿದಿತ್ತು. ಜೊತೆಗೆ, ಸಾಮಾಜಿಕ ಮಾಧ್ಯಮವು ಆಗ ಅಷ್ಟೊಂದು ಜಾಸ್ತಿ ಇರಲಿಲ್ಲ ಮತ್ತು ಈಗ ಹದಿಹರೆಯದವರಂತೆ ನಾವು ಹೆಚ್ಚು ಅವಮಾನ ಅಥವಾ ಹೋಲಿಕೆಗಳನ್ನು ಹೊಂದಿರಲಿಲ್ಲ. ಒಂದು ನಿರ್ದಿಷ್ಟ ರೀತಿಯಲ್ಲಿ ಕಾಣಲು ಹೆಚ್ಚಿನ ಒತ್ತಡವಿರಲಿಲ್ಲ" ಎಂದು ರಂಗ್ಲಾನಿ ಹೇಳುತ್ತಾರೆ.


ಸಾಂದರ್ಭಿಕ ಚಿತ್ರ


ನೇಹಾ ತುಂಬಾನೇ ಚೆನ್ನಾಗಿ ಓದುವ ಹುಡುಗಿ ಆಗಿದ್ದರಿಂದ, ಇಂತಹ ವಿಷಯಗಳ ಬಗ್ಗೆ ಅವರು ಹೆಚ್ಚು ತಲೆ ಕೆಡೆಸಿಕೊಂಡಿರಲಿಲ್ಲಂತೆ. ಆದರೆ ನೇಹಾ ಕಾಲೇಜಿಗೆ ಹೋದ ಕೂಡಲೇ, ತಾನು ಸಹ ಎಲ್ಲರಂತೆ ಚೆನ್ನಾಗಿ ಕಾಣಬೇಕೆಂಬ ಬಯಕೆ ಆಕೆಯಲ್ಲಿ ಹುಟ್ಟಿತಂತೆ. 'ನಾನು ಫ್ಯಾಟ್ ನಿಂದ ಫಿಟ್ ಆಗೋದರ ಮೇಲೆ ಸ್ವಲ್ಪ ಗಮನ ಹರಿಸಬೇಕು ಅಂತ ನಾನು ಯೋಚಿಸಿದೆ. ನಾನು ಪೌಷ್ಠಿಕಾಂಶದ ಬಗ್ಗೆಯೂ ಅಧ್ಯಯನ ಮಾಡುತ್ತಿದ್ದೆ, ಆದ್ದರಿಂದ ನಾನು ಎಲ್ಲಾ ಕಡೆಯಿಂದಲೂ ಪ್ರೇರಣೆ ಪಡೆಯುತ್ತಿದ್ದೆ. ಇದು ನನಗೆ ಸಾರ್ವತ್ರಿಕ ಯೋಜನೆಯಂತೆ ಅನ್ನಿಸಲು ಶುರುವಾಯಿತು. ಆಗ ನಾನು ಪೌಷ್ಠಿಕ ತಜ್ಞೆಯಾಗಬೇಕೆಂದು ನಿರ್ಧಾರ ಮಾಡಿದೆ'.


"ನಾನು ಎಲ್ಲವನ್ನೂ ತಿನ್ನುತ್ತಿರುವಾಗ ಇದನ್ನು ತಿನ್ನಬೇಡಿ ಎಂದು ನಾನು ಜನರಿಗೆ ಸಲಹೆ ನೀಡುತ್ತಿದ್ದೆ. ನಂತರ ಒಂದು ದಿನ ಅದು ನನಗೆ ತುಂಬಾನೇ ಬೇಸರ ತಂದಿತು, 'ಇದು ನನ್ನ ಕಡೆಯಿಂದ ಆಗುತ್ತಿರುವ ಬೂಟಾಟಿಕೆ' ಅಂತ ಹೇಳಿಕೊಂಡು, ಅಂದೇ ನಾನು ಆಹಾರದ ಮೇಲೆ ಹಿಡಿತವನ್ನು ಸಾಧಿಸಲೆಬೇಕು ಅಂತ ನಿರ್ಧಾರ ಮಾಡಿದೆ. ನಿಧಾನವಾಗಿ ಮತ್ತು ಸ್ಥಿರವಾಗಿ, ಪೌಷ್ಠಿಕಾಂಶವು ನೇಹಾ ರಂಗ್ಲಾನಿ ಅವರ ಆದ್ಯತೆಯಾಯಿತು. ಅವರು ಜಿಮ್ ಗೆ ಹೋಗಲು ಪ್ರಾರಂಭಿಸಿದರು ಮತ್ತು ಹುರಿದ ಆಹಾರವನ್ನು ಬಿಟ್ಟು, ಹಣ್ಣುಗಳನ್ನು ತಿನ್ನಲು ಶುರು ಮಾಡಿದರಂತೆ.


weight loss journey good and quick result simple meal plan
ಸಾಂದರ್ಭಿಕ ಚಿತ್ರ


"ನನ್ನ ಕಡುಬಯಕೆಗಳು ಬದಲಾದವು, ಅಭ್ಯಾಸಗಳು ಬದಲಾದವು. ಇದೆಲ್ಲವೂ ಹೀಗೆ ಪ್ರಾರಂಭವಾಯಿತು" ಎಂದು ನೇಹಾ ಹೇಳಿದರು. ನಂತರ ನೇಹಾ "ಬೆವರೆಜ್ ರೀಬೂಟ್", "ಬ್ರೇಕ್ಫಾಸ್ಟ್ ರೀಬೂಟ್" ಮತ್ತು "ಡೆಸರ್ಟ್ ರೀಬೂಟ್" ಎಂಬ ಮೂರು ಪುಸ್ತಕಗಳ ಲೇಖಕರು ಸಹ ನೇಹಾ ಆದರು.


ನೀವು ನೋಡಲು ಬಯಸುವ ಬದಲಾವಣೆ ಮೊದಲಿಗೆ ನಿಮ್ಮಲ್ಲಿ ಆಗಲಿ ಅಂತಾರೆ ನೇಹಾ


ಸಮಾಜದಲ್ಲಿ ಬದಲಾವಣೆಯನ್ನು ನೋಡಲು ಮೊದಲು ನೀವು ಬದಲಾಗಬೇಕು. ನಾವು ಇತರ ಜನರನ್ನು ಬದಲಾಯಿಸಲು ಬಯಸುವುದಕ್ಕಿಂತ, ಆ ಬದಲಾವಣೆ ನಮ್ಮೊಳಗೆ ಪ್ರಾರಂಭವಾಗಬೇಕು. ಇತರರಿಗೆ ಸಹಾಯ ಮಾಡಲು ಹೊರಡುವ ಮೊದಲು ಒಬ್ಬರ ಸ್ವಂತ ಜೀವನದಲ್ಲಿ ಬದಲಾವಣೆಗಳನ್ನು ತರುವುದು ತುಂಬಾ ಮುಖ್ಯವಾಗಿದೆ. ಸಮಗ್ರ ಆರೋಗ್ಯ ತರಬೇತುದಾರರಾಗಿ ತಮ್ಮ ಅಭ್ಯಾಸದ ಮೂಲಕ, ನೇಹಾ ರಂಗ್ಲಾನಿ ತೂಕ ನಿರ್ವಹಣಾ ಕಾರ್ಯಕ್ರಮಗಳು, ಫಲವತ್ತತೆ ಹೆಚ್ಚಿಸುವ ಆಹಾರಕ್ರಮಗಳನ್ನು ವಿನ್ಯಾಸಗೊಳಿಸುತ್ತಾರೆ, ಜೊತೆಗೆ ಪಿಸಿಒಎಸ್ ಮತ್ತು ಹಾರ್ಮೋನುಗಳ ಅಸಮತೋಲನ, ಕರುಳಿನ ಆರೋಗ್ಯ ಮತ್ತು ಹೆಚ್ಚಿನದನ್ನು ನಿರ್ವಹಿಸಲು ಜನರಿಗೆ ಸಹಾಯ ಮಾಡುತ್ತಾರೆ.


ಮಹಿಳೆಯರಿಗೆ ಆರೋಗ್ಯ ಯಾವಾಗಲೂ ಮೊದಲ ಆದ್ಯತೆ ಆಗಿರಬೇಕಂತೆ


ಈಗಂತೂ ಹೆಚ್ಚಿನ ಕ್ಷೇತ್ರಗಳಲ್ಲಿ ಮಹಿಳೆಯರು ಪ್ರೇರಕ ಶಕ್ತಿಯಾಗಿ ಮಾರ್ಪಟ್ಟಿರುವ ಜಗತ್ತಿನಲ್ಲಿ, ಸ್ವಾರ್ಥದಿಂದಲ್ಲ ಆದರೆ ಸಬಲೀಕರಣದ ರೀತಿಯಲ್ಲಿ ನಿಮ್ಮನ್ನು ನೀವು ಆದ್ಯತೆ ನೀಡುವುದು ಮುಖ್ಯ! ಆದರೆ ಅನೇಕ ಮಹಿಳೆಯರು ಜೀವನದ ಜಂಜಾಟದಲ್ಲಿ ತಮ್ಮ ಆರೋಗ್ಯವನ್ನು ನಿರ್ಲಕ್ಷಿಸುತ್ತಾರೆ.


how negative calorie foods beneficial in weight loss
ಸಾಂದರ್ಭಿಕ ಚಿತ್ರ


"ನೀವು ಮೊದಲು ನಿಮ್ಮ ಮೇಲೆ ಗಮನ ಹರಿಸಬೇಕು, ಎಂದರೆ ನೀವು ನಿಮ್ಮ ಬಗ್ಗೆ ಕಾಳಜಿ ವಹಿಸಲು ಪ್ರಾರಂಭಿಸಿದಾಗ ಮತ್ತು ನಿಮ್ಮ ಆಹಾರದ ಬಗ್ಗೆ ಮಾತ್ರವಲ್ಲದೆ, ನಿಮ್ಮ ಮನಸ್ಥಿತಿಯನ್ನು ನೀವು ಹೇಗೆ ನಿಭಾಯಿಸುತ್ತೀರಿ ಮತ್ತು ನಿಮ್ಮನ್ನು ನೀವು ಹೇಗೆ ವ್ಯಕ್ತಪಡಿಸುತ್ತೀರಿ ಎಂಬುದು ತಿಳಿದುಕೊಂಡ ನಂತರವೇ ನೀವು ನಿಮ್ಮ ಕುಟುಂಬದ ಬಗ್ಗೆ ಯೋಚಿಸಬೇಕು. ಸಂತೋಷವಾಗಿರುವ ಮಹಿಳೆ ಸಂತೋಷದ ಕುಟುಂಬವನ್ನು ಬೆಳೆಸುತ್ತಾಳೆ" ಎಂದು ನೇಹಾ ಹೇಳುತ್ತಾರೆ.


ಆರೋಗ್ಯಕರ ಜೀವನಕ್ಕಾಗಿ ನೇಹಾ ನೀಡಿರುವ ಸಲಹೆಗಳು ಇಲ್ಲಿವೆ ನೋಡಿ..


 • ಸದಾ ಆರೋಗ್ಯಕರವಾದ ಆಹಾರವನ್ನು ಸೇವಿಸಿರಿ.

 • ನಿಮ್ಮ ದೇಹವನ್ನು ನಿರ್ವಿಷಗೊಳಿಸಲು ಸಹಾಯ ಮಾಡಲು ನಿಮ್ಮ ನಿದ್ರೆಗೆ ಮೊದಲ ಆದ್ಯತೆ ನೀಡಿ.

 • ಪ್ರತಿದಿನ ಒಂದು ಗಂಟೆ ವ್ಯಾಯಾಮ ಮಾಡುವ ಮತ್ತು ಉಳಿದ ದಿನ ಮಂಚದ ಮೇಲೆ ಮಲಗುವ ಸಂಸ್ಕೃತಿಯಿಂದ ದೂರವಾಗಬೇಕು ಅಂತ ನೇಹಾ ಹೇಳುತ್ತಾರೆ. ನಿಮ್ಮ ಮೂಳೆಗಳು, ಸ್ನಾಯುಗಳು ಮತ್ತು ದೇಹವು ಬಲವಾಗಿ ಮತ್ತು ಆರೋಗ್ಯಕರವಾಗಿರಲು ಕೆಲಸದ ನಡುವೆ ವಿರಾಮ ತೆಗೆದುಕೊಳ್ಳಿ ಮತ್ತು ಆಗಾಗ ವಾಕ್ ಮಾಡುತ್ತಲೇ ಇರಿ ಅಂತ ಹೇಳ್ತಾರೆ ನೇಹಾ.

 • ಒತ್ತಡದ ಮಟ್ಟವನ್ನು ಕಡಿಮೆ ಮಾಡಿಕೊಳ್ಳಿ. ಒತ್ತಡವು ಅನಿವಾರ್ಯವಾಗಿದ್ದರೂ, ಜೀವನದ ಏರಿಳಿತಗಳನ್ನು ಎದುರಿಸಲು ನೇಹಾ ಅವರು ಪ್ರಾಣಾಯಾಮವನ್ನು ಮಾಡಲು ಹೇಳುತ್ತಾರೆ.


ಸಾಂದರ್ಭಿಕ ಚಿತ್ರ


 • ಪ್ರಾಣಾಯಾಮವು ಮನುಷ್ಯನಿಗೆ ಆಮ್ಲಜನಕದಷ್ಟೆ ಮುಖ್ಯವಾಗಿದೆ ಅಂತ ಇವರು ಹೇಳ್ತಾರೆ. “ಆರೋಗ್ಯಕರ ಆಹಾರ ಮಾತ್ರವಲ್ಲದೆ, ನಿಮಗೆ ಆಮ್ಲಜನಕವೂ ಬೇಕು. ನಿಮ್ಮ ಉಸಿರಾಟದ ಮೇಲೆ ವಿವಿಧ ರೀತಿಯಲ್ಲಿ ಕೇಂದ್ರೀಕರಿಸುವುದು ನಿಮ್ಮ ದೇಹವನ್ನು ಶಾಂತಗೊಳಿಸುತ್ತದೆ ಮತ್ತು ಒತ್ತಡವನ್ನು ಎದುರಿಸಲು ಸಹಾಯ ಮಾಡುತ್ತದೆ. ಒತ್ತಡವು ಹೋಗುವುದಿಲ್ಲ, ಆದರೆ ಅದನ್ನು ಉತ್ತಮ ರೀತಿಯಲ್ಲಿ ಹೇಗೆ ನಿಭಾಯಿಸಬೇಕೆಂದು ನೀವು ಕಲಿಯುವಿರಿ" ಎಂದು ರಂಗ್ಲಾನಿ ಹೇಳುತ್ತಾರೆ.
 • ಧ್ಯಾನ ಮಾಡುವುದರಿಂದ ನಿಮ್ಮ ಮನಸ್ಸನ್ನು ಶಾಂತಗೊಳಿಸಬಹುದು ಎಂದು ಅವರು ಹೇಳುತ್ತಾರೆ. "ಒಮ್ಮೆ ನೀವು ನಿಮ್ಮ ಮೇಲೆ, ನಿಮ್ಮ ಮನಸ್ಸಿನ ಮೇಲೆ ಗಮನವನ್ನು ಕೇಂದ್ರೀಕರಿಸಲು ಪ್ರಾರಂಭಿಸಿದರೆ, ಎಲ್ಲವೂ ಬದಲಾಗಲು ಪ್ರಾರಂಭಿಸುತ್ತದೆ" ಎಂದು ನೇಹಾ ಹೇಳುತ್ತಾರೆ.

First published: