HOME » NEWS » National-international » A FOOD DELIVERY BOY TAKES A PANDA WITH HIM ON BIKE ADORABLE PICTURES GO VIRAL STG LG

ಪಾಂಡಾ ಜೊತೆಗೆ ಫುಡ್ ಡೆಲಿವರಿಗೆ ಹೊರಟ ಯುವಕ..!; ಫೋಟೋ ವೈರಲ್

‘ಕೊನೆಯ ದಿನ ನಾನು ಹೊರಡುವ ಮುನ್ನ ಈ ಸೋಮಾರಿ ಹುಡುಗನನ್ನು ಕೂಡ ನನ್ನ ಜೊತೆ ಕರೆತಂದೆ’ ಎಂದು ಉಜೈರ್ ಬರೆದುಕೊಂಡಿದ್ದಾನೆ. ಅಂದಹಾಗೆ ಈ ಪಾಂಡಾ ನಿಜವಾದದ್ದೇ ಎಂಬ ಪ್ರಶ್ನೆ ನಿಮ್ಮ ಮನದಲ್ಲಿ ಮೂಡಿರಬೇಕು, ಜೊತೆಗೆ ಆಶ್ಚರ್ಯವೂ ಆಗಿರಬೇಕು.

news18-kannada
Updated:February 12, 2021, 11:19 AM IST
ಪಾಂಡಾ ಜೊತೆಗೆ ಫುಡ್ ಡೆಲಿವರಿಗೆ ಹೊರಟ ಯುವಕ..!; ಫೋಟೋ ವೈರಲ್
ಪಾಂಡ ನೊತೆಗೆ ಫುಡ್ ಡೆಲಿವರಿ ಬಾಯ್
  • Share this:
ಪಾಂಡಾಗಳು ಮುದ್ದು ಮುದ್ದಾಗಿರುವ ಪ್ರಾಣಿಗಳು ಎಂಬುದು ಎಲ್ಲರಿಗೂ ಗೊತ್ತೇ ಇದೆ. ಪ್ರತಿಯೊಬ್ಬರೂ ಅವುಗಳನ್ನು ಇಷ್ಟಪಡುತ್ತಾರೆ ಅನ್ನೋದರಲ್ಲಿ ಯಾವುದೇ ಸಂದೇಹವಿಲ್ಲ. ಇವುಗಳನ್ನು ಸಾಕುಪ್ರಾಣಿಗಳನ್ನಾಗಿ ತಮ್ಮ ಮನೆಯ ಸದಸ್ಯನಂತೆ ಕಾಣಲು ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಅನೇಕರು ಮುದ್ದು ಪಾಂಡಾಗಳನ್ನು ಸಾಕಿ ತಮ್ಮ ಮನೆಯ ಸದಸ್ಯನಂತೆ ಸಲಹುತ್ತಾರೆ.

ಮಲೇಷ್ಯಾದಲ್ಲಿ ಒಂದು ವಿಶೇಷ ಘಟನೆ ನಡೆದಿದೆ. ಆನ್ ಲೈನ್ ಫುಡ್ ಡೆಲಿವರಿ ಕಂಪನಿ ಫುಡ್‌ ಪಾಂಡಾದಲ್ಲಿ ಕೆಲಸ ಮಾಡುತ್ತಿದ್ದ 22 ವರ್ಷದ ಯುವಕ ಉಜೈರ್ ಎಂಬಾತ ಕೆಲಸದ ಕೊನೆಯ ದಿನದಂದು ತನ್ನೊಂದಿಗೆ ಪಾಂಡಾ ಒಂದನ್ನು ಬೈಕ್ ಹಿಂದೆ ಕೂರಿಸಿಕೊಂಡು ಹೋಗಿದ್ದಾನೆ. ತನ್ನ ಹಾಗೂ ಪಾಂಡಾ ಬೈಕ್‌ ರೈಡಿಂಗ್‌ನ ಚಿತ್ರವನ್ನು ಟ್ವಿಟರ್‌ನಲ್ಲಿ ಶೇರ್‌ ಮಾಡಿದ್ದಾನೆ. ಸದ್ಯ ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು, ಲಕ್ಷಾಂತರ ಜನರು ವೀಕ್ಷಿಸಿದ್ದಾರೆ.

‘ಕೊನೆಯ ದಿನ ನಾನು ಹೊರಡುವ ಮುನ್ನ ಈ ಸೋಮಾರಿ ಹುಡುಗನನ್ನು ಕೂಡ ನನ್ನ ಜೊತೆ ಕರೆತಂದೆ’ ಎಂದು ಉಜೈರ್ ಬರೆದುಕೊಂಡಿದ್ದಾನೆ. ಅಂದಹಾಗೆ ಈ ಪಾಂಡಾ ನಿಜವಾದದ್ದೇ ಎಂಬ ಪ್ರಶ್ನೆ ನಿಮ್ಮ ಮನದಲ್ಲಿ ಮೂಡಿರಬೇಕು, ಜೊತೆಗೆ ಆಶ್ಚರ್ಯವೂ ಆಗಿರಬೇಕು. ಆದರೆ ಅಸಲಿಯಾಗಿ ತನ್ನೊಂದಿಗೆ ಪಾಂಡಾ ಇರುವ ಹಾಗೆ ಫೋಟೋಗಳನ್ನು ಎಡಿಟ್ ಮಾಡಿದ್ದಾನೆ ಈ ಕಿಲಾಡಿ. ಹೌದು, ಆತ ನಿಜವಾದ ಪಾಂಡಾವನ್ನು ತನ್ನ ಬೈಕ್ ನ ಹಿಂದೆ ಕೂರಿಸಿಕೊಂಡಿಲ್ಲ. ಬದಲಾಗಿ ತನ್ನ ಬೈಕ್ ನ ಹಿಂದೆ ಪಾಂಡಾ ಕುಳಿತಿರುವ ಹಾಗೆ ಫೋಟೋಗಳನ್ನು ಎಡಿಟ್ ಮಾಡಿ ತನ್ನ ಕೌಶಲ್ಯವನ್ನು ಪ್ರದರ್ಶಿಸಿದ್ದಾನೆ.

ಅಗ್ರಹಾರ ದಾಸರಹಳ್ಳಿ: ಮನೆ ಕಳೆದುಕೊಂಡವರಿಂದ ಧರಣಿ; ಇಂದು ಕೋರ್ಟ್ ಆದೇಶ

ಛಾಯಾಗ್ರಾಹಕ ಮತ್ತು ಗ್ರಾಫಿಕ್ ಡಿಸೈನರ್ ಕೂಡ ಆಗಿರುವ ಉಜೈರ್, ‘ನಾನು ಛಾಯಾಗ್ರಹಕ, ಆದ್ದರಿಂದ ನನ್ನಲ್ಲಿರುವ ಫೋಟೋ ಎಡಿಟ್ ಮಾಡುವ ಕೌಶಲ್ಯತೆ ಬಗ್ಗೆ ಹೆಚ್ಚಿನ ಆಸಕ್ತಿ ಬೆಳೆಸಿಕೊಂಡಿದ್ದೇನೆ. ಹೀಗಾಗಿಯೇ ನನ್ನ ಬೈಕ್ ಹಿಂದೆ ಪಾಂಡಾ ಕುಳಿತಿರುವ ಹಾಗೆ ಫೋಟೋಗಳನ್ನು ಎಡಿಟ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದೇನೆ’ ಎಂದು ಹೇಳಿದ್ದಾರೆ.

ಪಾಂಡಾಗಳನ್ನು ಪ್ರೀತಿಸುವ ಉಜೈರ್ ತನ್ನ ಕೆಲಸದ ಕೊನೆಯ ದಿನವನ್ನು ವಿಶೇಷವಾಗಿಸಲು ಬಯಸಿದ್ದರು. ಹೀಗಾಗಿ ತಮ್ಮ ಸೃಜನಶೀಲತೆಯಿಂದ ಫೋಟೋ ಎಡಿಟ್ ಮಾಡಿ ನಿಜವಾಗಿಯೂ ಪಾಂಡಾ ಅವರ ಹಿಂದೆ ಕುಳಿತಿರುವಂತೆ ಕೈಚಳಕ ಮಾಡಿದ್ದಾರೆ. ‘ಫುಡ್ ಪಾಂಡಾದಲ್ಲಿ ಕೆಲಸ ಮಾಡುತ್ತಿದ್ದ ನಾನು ನನ್ನ ಅಧ್ಯಯನವನ್ನು ಮುಂದುವರೆಸಬೇಕಾಗಿದೆ. ಹೀಗಾಗಿ ನನ್ನ ಕೆಲಸಕ್ಕೆ ರಾಜೀನಾಮೆ ನೀಡಿದ್ದೇನೆ. ನನ್ನ ಕೆಲಸದ ಕೊನೆಯ ದಿನವನ್ನು ಫುಡ್‌ಪಾಂಡಾದೊಂದಿಗೆ ಅವಿಸ್ಮರಣೀಯವಾಗಿಸಲು ಈ ರೀತಿ ಮಾಡಿದ್ದೇನೆ’ ಎಂದು ಅವರು ಹೇಳಿದ್ದಾರೆ.
ಈ ಫೋಟೋಗಳನ್ನು ವೀಕ್ಷಿಸಿದ ಅನೇಕ ನೆಟಿಜನ್ ಗಳು ಕಾಮೆಂಟ್ ಮಾಡುತ್ತಿದ್ದಾರೆ. ಒಬ್ಬರು ‘ಇದು ಅಕ್ಷರಶಃ ಫುಡ್‌ಪಾಂಡಾ’ ಎಂದು ಹೇಳಿದರೆ, ಮತ್ತೊಬ್ಬರು ‘ಇದು ಪಾಂಡಾವನ್ನು ತರುವ ಫುಡ್‌ಪಾಂಡಾ’ ಎಂದು ಬರೆದುಕೊಂಡಿದ್ದಾರೆ. ಮತ್ತೊಬ್ಬರು ‘ನಾನು ಈ ಪಾಂಡಾವನ್ನು ಕೊಳ್ಳಬಹುದೇ? ಎಂದು ಕೇಳಿದ್ದಾರೆ.  ಈಗ ಹೇಳಿ ಯಾರಿಗೆ ಬೇಕು ಈ ಪಾಂಡಾ..?
Published by: Latha CG
First published: February 12, 2021, 11:19 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories