• Home
  • »
  • News
  • »
  • national-international
  • »
  • Drunk Teacher: ಕಂಠಪೂರ್ತಿ ಕುಡಿದು, ಕ್ಲಾಸಿಗೆ ಬಂದು ಮಲಗಿದ್ಲು! ಶಿಕ್ಷಕಿ ವರ್ತನೆಗೆ ಮಕ್ಕಳು ಕಂಗಾಲು

Drunk Teacher: ಕಂಠಪೂರ್ತಿ ಕುಡಿದು, ಕ್ಲಾಸಿಗೆ ಬಂದು ಮಲಗಿದ್ಲು! ಶಿಕ್ಷಕಿ ವರ್ತನೆಗೆ ಮಕ್ಕಳು ಕಂಗಾಲು

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಇಲ್ಲಿ ಮಕ್ಕಳಿಗೆ ಕುಡಿತದ ದುಷ್ಪರಿಣಾಮದ ಬಗ್ಗೆ ತಿಳಿಸಿ ಹೇಳಬೇಕಾಗಿದ್ದ ಶಿಕ್ಷಕಿಯೇ ಕಂಠಪೂರ್ತಿ ಕುಡಿದು, ಶಾಲೆಗೆ ಬಂದಿದ್ದಾಳೆ. ಕುಡುಕ ಶಿಕ್ಷಕಿಯನ್ನು ನೋಡಿದ ಮಕ್ಕಳು ಕಂಗಾಲಾಗಿದ್ದಾರೆ.

  • Share this:

ಛತ್ತೀಸ್‌ಗಡ್: ಗುರುಗಳನ್ನು, ಅಕ್ಷರ ಕಲಿಸುವ ಶಿಕ್ಷಕರನ್ನು (Teachers) ಗುರು ಬ್ರಹ್ಮ (Brahmha) .. ಗುರು ವಿಷ್ಣು (Vishnu).. ಗುರು ದೇವೋ ಮಹೇಶ್ವರ: (God Shiva).. ಗುರು ಸಾಕ್ಷಾತ್ ಪರ ಬ್ರಹ್ಮ ತಸ್ಮೈ ಶ್ರೀ ಗುರವೇ ನಮ: ಅಂತ ಕೈಮುಗೀತಾರೆ. ತಾಯಿ (Mother) ಮಗುವಿಗೆ (Child) ಜೀವ ಕೊಟ್ಟರೆ, ಗುರು ಹೊಸ ಜೀವನ ಕೊಡುತ್ತಾನೆ. ಇಂತಹ ಮಹತ್ವದ ಸ್ಥಾನದಲ್ಲಿರುವ ಗುರು ಇನ್ನೊಬ್ಬರಿಗೆ ಮಾದರಿಯಾಗಿ ಇರಬೇಕು. ಆದರೆ ಆತನೇ ತಪ್ಪು ಮಾಡಿದ್ರೆ ಏನಾಗುತ್ತದೆ? ಇಲ್ಲೊಂದು ಘಟನೆ ನಡೆದಿದೆ. ಇಲ್ಲಿ ಮಕ್ಕಳಿಗೆ ಕುಡಿತದ ದುಷ್ಪರಿಣಾಮದ ಬಗ್ಗೆ ತಿಳಿಸಿ ಹೇಳಬೇಕಾಗಿದ್ದ ಶಿಕ್ಷಕಿಯೇ ಕಂಠಪೂರ್ತಿ ಕುಡಿದು, ಶಾಲೆಗೆ (School) ಬಂದಿದ್ದಾಳೆ. ಕುಡುಕ ಶಿಕ್ಷಕಿಯನ್ನು ನೋಡಿದ ಮಕ್ಕಳು ಕಂಗಾಲಾಗಿದ್ದಾರೆ.


 ಕುಡಿದು ಬಂದು, ಶಾಲೆಯಲ್ಲಿ ನಿದ್ದೆ ಮಾಡುವ ಶಿಕ್ಷಕಿ!


ಕುಡಿದು ಶಾಲೆಗೆ ಬಂದ ಶಿಕ್ಷಕಿ ತರಗತಿಯಲ್ಲೇ ನಿದ್ದೆಗೆ ಜಾರಿದ ಘಟನೆ ಛತ್ತೀಸ್ ಗಢದಲ್ಲಿ ನಡೆದಿದೆ. ರಾಯ್‌ಪುರದಿಂದ 430 ಕಿಲೋಮೀಟರ್ ದೂರದಲ್ಲಿರುವ ಜಶ್‌ಪುರ ಜಿಲ್ಲಾ ಕೇಂದ್ರದ ಹೊರವಲಯದಲ್ಲಿರುವ ಟಿಕೈಟ್‌ಗಂಜ್ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದೆ. ಜಶ್ಪುರ್ ಜಿಲ್ಲಾ ಶಿಕ್ಷಣಾಧಿಕಾರಿ ಸಿದ್ಧಿಕ್ ಎಂಬುವರು ಪರಿಶೀಲನೆಗಾಗಿ ಬಂದಿದ್ದಾಗ ಘಟನೆ ಬೆಳಕಿಗೆ ಬಂದಿದೆ. ಸಿದ್ಧಿಕ್ ಎಂದಿನಂತೆ ತಪಾಸಣೆಯ ಭಾಗವಾಗಿ ಶಿಕ್ಷಕಿ ಕೆಲಸ ಮಾಡುತ್ತಿದ್ದ ಸರ್ಕಾರಿ ಶಾಲೆಗೆ ಭೇಟಿ ನೀಡಿದ್ದಾರೆ. ಆಗ ಕುಡಿದು ಅಮಲಿನಲ್ಲಿದ್ದ ಶಿಕ್ಷಕಿ, ಸುಸ್ತಾಗಿ ಅಲ್ಲೇ ಕುರ್ಚಿ ಮೇಲೆ ಮಲಗಿ, ನಿದ್ದೆಗೆ ಜಾರಿದ್ದಾಳೆ. ಕೊನೆಗೆ ಅಲ್ಲೇ ನೆಲದ ಮೇಲೆ ಮಲಗಿದ್ದಾಳೆ.


ಶಿಕ್ಷಕಿಯ ಕಲ್ಯಾಣ ಗುಣ ಬಿಚ್ಚಿಟ್ಟ ವಿದ್ಯಾರ್ಥಿಗಳು


ಜಿಲ್ಲಾ ಶಿಕ್ಷಣಾಧಿಕಾರಿ ಸಿದ್ಧಿಕ್ ಅವರು ಶಿಕ್ಷಕಿಯ ಸ್ಥಿತಿ ಕಂಡು ಗಾಬರಿಯಾಗಿದ್ದಾರೆ. 3 ಮತ್ತು 4 ನೇ ತರಗತಿಗೆ ಪಾಠ ಮಾಡುವ ಶಿಕ್ಷಕಿ ಜಗಪತಿ ಭಗತ್ ನೆಲದ ಮೇಲೆ ಮಲಗಿದ್ದರು. ಆರೋಗ್ಯ ಸರಿಯಿಲ್ಲದಿರಬೇಕು ಅಂತ ತಿಳಿದು ಅಧಿಕಾರಿ, ಈ ಬಗ್ಗೆ ಮಕ್ಕಳನ್ನು ಕೇಳಿದ್ದಾರೆ. ಆಗ  ವಿದ್ಯಾರ್ಥಿಗಳು ಶಿಕ್ಷಕಿ ಅಸಲಿ ಕಹಾನಿಯನ್ನು ಶಿಕ್ಷಣಾಧಿಕಾರಿ ಮುಂದೆ ಬಿಚ್ಚಿಟ್ಟಿದ್ದಾರೆ. ಕಳೆದ ಕೆಲ ದಿನಗಳಿಂದ ಈ ಶಿಕ್ಷಕಿ ಮದ್ಯ ಸೇವಿಸಿ ಶಾಲೆಗೆ ಬರುತ್ತಿರುವ ವಿಚಾರ ತಿಳಿಸಿದ್ದಾರೆ. ಈ ವಿಚಾರ ಕೇಳುತ್ತಿದ್ದಂತೆ ಶಿಕ್ಷಣಾಧಿಕಾರಿಗಳೇ ಗಾಬರಿಯಾದರು.


ಇದನ್ನೂ ಓದಿ: Viral Video: ಅಮ್ಮನೊಂದಿಗೆ ಸಂಸ್ಕೃತ ಶ್ಲೋಕ ಪಠಿಸುವ ಕಂದಮ್ಮ! ಆಧುನಿಕ ಅಭಿಮನ್ಯುವಿನ ವಿಡಿಯೋ ನೀವೂ ನೋಡಿ


ಆಘಾತ ವ್ಯಕ್ತಪಡಿಸಿದ ಅಧಿಕಾರಿ


“ಮಕ್ಕಳು ಆಟದಲ್ಲಿ ನಿರತರಾಗಿದ್ದಾಗ ಶಿಕ್ಷಕರು ತರಗತಿಯ ನೆಲದ ಮೇಲೆ ಮಲಗಿರುವುದನ್ನು ನೋಡಿದಾಗ ನನಗೆ ಆಘಾತವಾಯಿತು. ಆರಂಭದಲ್ಲಿ, ಅವಳು ಅನಾರೋಗ್ಯಕ್ಕೆ ಒಳಗಾಗಿದ್ದಳು ಎಂದು ನಾನು ಭಾವಿಸಿದೆ. ತರಗತಿಯಲ್ಲಿದ್ದ 3 ಮತ್ತು 4ನೇ ತರಗತಿಯ ಮಕ್ಕಳೊಂದಿಗೆ ಆಕೆಯ ಆರೋಗ್ಯ ವಿಚಾರಿಸಿದಾಗ ಇನ್ನಷ್ಟು ಆಘಾತವಾಯಿತು. ಅವಳು ಮದ್ಯ ಸೇವಿಸಿದ್ದಾಳೆ ಎಂದು ಮಕ್ಕಳು ಹೇಳಿದರು. ನಂತರ ನಾನು ಅವಳನ್ನು ಕುರ್ಚಿಯಲ್ಲಿ ಕುಳಿತುಕೊಳ್ಳಲು ಸಹಾಯ ಮಾಡಲು ಮಕ್ಕಳನ್ನು ಕೇಳಿದೆ"  ಅಂತ ಶಿಕ್ಷಣಾಧಿಕಾರಿ ಸಿದ್ಧಿಕಿ ಹೇಳಿದ್ದಾರೆ.


ಇದನ್ನೂ ಓದಿ: Robbery: ತನ್ನ ಪ್ರೇಯಸಿ ಮನೆಯಲ್ಲೇ ದರೋಡೆ ಮಾಡಿದ ಪ್ರಿಯಕರ! ಕಾರಣ ಕೇಳಿದ್ರೆ ನಗುವುದೋ, ಅಳುವುದೋ ಗೊತ್ತಾಗಲ್ಲ


ಸೇವೆಯಿಂದ ಕುಡುಕ ಶಿಕ್ಷಕಿ ಅಮಾನತು


ಕೂಡಲೇ ಶಿಕ್ಷಣಾಧಿಕಾರಿ ಸಿದ್ಧಿಕ್ ಅವರು ಸದಾನಿಕಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ, ಅಲ್ಲಿಂದ ಬಂದ ಇಬ್ಬರು ಮಹಿಳಾ ಕಾನ್ ಸ್ಟೆಬಲ್ ಸಹಾಯದಿಂದ ಶಿಕ್ಷಕಿಯನ್ನು ಆಸ್ಪತ್ರೆಗೆ ಕರೆದೊಯ್ದು ರಕ್ತ ಪರೀಕ್ಷೆ ನಡೆಸಲಾಯಿತು. ಜಗಪತಿ ಭಗತ್ ಅವರ ರಕ್ತದ ಮಾದರಿಯಲ್ಲಿ ಮದ್ಯ ಸೇವಿಸಿರುವುದು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಅವರನ್ನು ಅಮಾನತುಗೊಳಿಸಲಾಗಿದೆ. ಇನ್ನು ಶಿಕ್ಷಕಿಯ ಕುಡಿತದ ಚಟದ ಬಗ್ಗೆ ವಿದ್ಯಾರ್ಥಿಗಳ ಪಾಲಕರು ದೂರಿದ್ದರು ಮತ್ತು ಶಾಲಾ ಸಮಿತಿಯು ಶಿಕ್ಷಕಿ ಭಗತ್‌ಗೆ ಈ ಅಭ್ಯಾಸವನ್ನು ಬಿಡುವಂತೆ ಎಚ್ಚರಿಕೆ ನೀಡಿದ್ದರೂ ಸಹ ಆಕೆ ತನ್ನ ಚಾಳಿ ಮುಂದುವರೆಸಿದ್ದಳು ಎನ್ನಲಾಗಿದೆ.

Published by:Annappa Achari
First published: