Shocking News: 22 ನಾಯಿಗಳ ಜೊತೆ 11 ವರ್ಷದ ಮಗನನ್ನು ಕೂಡಿ ಹಾಕಿದ ತಂದೆ-ತಾಯಿ; ಶ್ವಾನದಂತೆ ಆಡುತ್ತಿದ್ದ ಆ ಪುಟ್ಟ ಹುಡುಗ!

ಹುಡುಗನನ್ನು ಸುಮಾರು ಎರಡು ವರ್ಷಗಳ ಕಾಲ ನಾಯಿಗಳೊಂದಿಗೆ ಅಪಾರ್ಟ್ಮೆಂಟ್‌ನಲ್ಲಿ ಇರಿಸಲಾಗಿತ್ತು. ಮನುಷ್ಯರ ನೆರಳೂ ಆತನ ಮೇಲೆ ಬೀಳದಂತೆ ಇರಿಸಲಾಗಿತ್ತು. ಹೊರಗಿನವರ ಸಂಪರ್ಕ ಇಲ್ಲದೇ ಆತ ಹೇಗಾಗಿದ್ದ ಎಂದರೆ, ಆತನೂ ಸಹ ನಾಯಿಗಳಂತೆ ಬೊಗಳುವುದು, ಅದರಂತೆ ವರ್ತಿಸುವುದನ್ನೂ ಮಾಡುತ್ತಿದ್ದ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಮಹಾರಾಷ್ಟ್ರ: ಮಕ್ಕಳು (Children) ಅಂದ್ರೆ ತಂದೆ (Father) ತಾಯಿಗಳಿಗೆ (Mother) ಜೀವ. ಮಕ್ಕಳು ಏನು ಮಾಡಿದ್ರೂ ಹೆತ್ತವರು (Parents) ಅವರನ್ನು ಕ್ಷಮಿಸುತ್ತಾರೆ. ಕೆಲವೊಮ್ಮೆ ಚಿಕ್ಕಪುಟ್ಟ ಶಿಕ್ಷೆ (Punishment) ಕೊಟ್ಟು, ಅವರನ್ನು ತಿದ್ದುವ ಪ್ರಯತ್ನ ಮಾಡುತ್ತಾರೆ. ಆದರೆ ಇಲ್ಲಿ ಆಗಿದ್ದೇ ಬೇರೆ. ಪಾಪ, ಕೇವಲ 11 ವರ್ಷದ ಮಗನನ್ನು (11 Years old son) ಬರೋಬ್ಬರಿ 22 ಬೀದಿ ನಾಯಿಗಳ (Street Dogs) ಜೊತೆ ಕೂಡಿಹಾಕಿದ್ದಾರೆ. ಅದು ಅವನದ್ದೇ ತಂದೆ-ತಾಯಿ! ಅವುಗಳ ಪೈಕಿ 4 ನಾಯಿಗಳು ಸಾವನ್ನಪ್ಪಿದ್ದು, ಅಲ್ಲೇ ಈ ಬಾಲಕ (Boy) ಬದುಕುತ್ತಿದ್ದ ಎನ್ನಲಾಗಿದೆ. ಸ್ಥಳೀಯರು ನೀಡಿದ ಮಾಹಿತಿಯಿಂದಾಗಿ ಈ ಘೋರ ಹಾಗೂ ಭಯಾನಕ ಘಟನೆ ಬೆಳಕಿಗೆ ಬಂದಿದೆ. ಇದನ್ನು ಕೇಳಿ ಎಲ್ಲರೂ ಬೆಚ್ಚಿ ಬಿದ್ದಿದ್ದಾರೆ.    

22 ಬೀದಿನಾಯಿಗಳೊಂದಿಗೆ ಬಾಲಕನ ಬಂಧನ

22 ಬೀದಿನಾಯಿಗಳೊಂದಿಗೆ ಮಗುವನ್ನು ಅಪಾರ್ಟ್‌ಮೆಂಟ್‌ನಲ್ಲಿ ಇರಿಸಿದ್ದ ಆರೋಪದ ಮೇಲೆ 11 ವರ್ಷದ ಬಾಲಕನ ಪೋಷಕರ ವಿರುದ್ಧ ಪುಣೆಯ ಕೊಂಡ್ವಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಕೊಂಡ್ವಾದ ಸ್ಥಳೀಯರೊಬ್ಬರು ಬಾಲಕನ ಶೋಚನೀಯ ಸ್ಥಿತಿಯನ್ನು ಗಮನಿಸಿ ಮಕ್ಕಳಿಗಾಗಿ ತುರ್ತು ಸೇವೆಗಳನ್ನು ಒದಗಿಸುವ ಎನ್‌ಜಿಒ ಜ್ಞಾನ್ ದೇವಿ ಚೈಲ್ಡ್‌ಲೈನ್‌ನ ಸಹಾಯವಾಣಿ ಸಂಖ್ಯೆಗೆ ಮಾಹಿತಿ ನೀಡಿದ ನಂತರ ಘಟನೆ ಬಹಿರಂಗವಾಗಿದೆ.

2 ವರ್ಷಗಳಿಂದ ನಾಯಿಗಳ ಕೋಣೆಯಲ್ಲಿ ಬಂಧನ

ಹುಡುಗನನ್ನು ಸುಮಾರು ಎರಡು ವರ್ಷಗಳ ಕಾಲ ನಾಯಿಗಳೊಂದಿಗೆ ಅಪಾರ್ಟ್ಮೆಂಟ್ನಲ್ಲಿ ಇರಿಸಲಾಗಿತ್ತು. ಮನುಷ್ಯರ ನೆರಳೂ ಆತನ ಮೇಲೆ ಬೀಳದಂತೆ ಇರಿಸಲಾಗಿತ್ತು. ಹೊರಗಿನವರ ಸಂಪರ್ಕ ಇಲ್ಲದೇ ಆತ ಹೇಗಾಗಿದ್ದ ಎಂದರೆ, ಆತನೂ ಸಹ ನಾಯಿಗಳಂತೆ ಬೊಗಳುವುದು, ಅದರಂತೆ ವರ್ತಿಸುವುದನ್ನೂ ಮಾಡುತ್ತಿದ್ದ.

ಇದನ್ನೂ ಓದಿ:  Dog's Revenge: ತಾಯಿ‌ ಸಾವಿಗೆ ಕಾರಣರಾದವರ ಮೇಲೆ ಸೇಡಿಗಾಗಿ ಹವಣಿಸುತ್ತಿರುವ ನಾಯಿ! 

ನಾಯಿ ಮೇಲಿನ ಪ್ರೀತಿಯಿಂದಾಗಿ ಹೀಗೆ ಮಾಡಿದ್ವಿ ಅಂತಾರೆ!

ಸಂತ್ರಸ್ತ ಬಾಲಕನ ತಂದೆ ಒಂದು ಅಂಗಡಿ ನಡೆಸುತ್ತಿದ್ದರೆ, ಅವನ ತಾಯಿ ಪದವೀಧರರಾಗಿದ್ದಾರೆ. ನಾವು ನಾಯಿಗಳನ್ನು ತುಂಬಾ ಪ್ರೀತಿಸುತ್ತೇವೆ. ಅವುಗಳೂ ನಮ್ಮ ಮಕ್ಕಳಿದ್ದಂತೆ. ಹೀಗಾಗಿ ಅವುಗಳೊಂದಿಗೆ ನಮ್ಮ ಮಗನನ್ನು ಇರಿಸಿದ್ದೇವೆ ಅಂತ ಸಬೂಬು ಹೇಳುತ್ತಿದ್ದಾರೆ.

ನಾಯಿ ಮಲಗಳ ಮೇಲೆ ಮಲಗಿದ್ದ ಬಾಲಕ

ನಾಯಿಗಳ ಜೊತೆಯಿದ್ದ ಬಾಲಕನ ಸ್ಥಿತಿಯಂತೂ ಶೋಚನೀಯವಾಗಿತ್ತು. ಅಪಾರ್ಟ್‌ಮೆಂಟ್‌ನ ಕೋಣೆಯಿಂದ ನಾಯಿಗಳ ಮಲವನ್ನೂ ಸಹ ಸ್ವಚ್ಛಗೊಳಿಸಲಾಗಿಲ್ಲ. ಅಲ್ಲದೇ ಆತ ನಾಯಿಗಳ ಮಲ, ಮೂತ್ರದ ಮೇಲೆಯೇ ಕುಳಿತುಕೊಳ್ಳೋದು, ಮಲಗಿಕೊಳ್ಳೋದು ಮಾಡುತ್ತಿದ್ದ. ಸಾಲದ್ದಕ್ಕೆ ಮೂರ್ನಾಲ್ಕು ನಾಯಿಗಳ ಶವ ಸಹ ಅಲ್ಲೇ ಕೊಳೆತು ಬಿದ್ದಿತ್ತು ಎನ್ನಲಾಗಿದೆ.

ಸ್ಥಳೀಯರಿಂದ ಅಮಾನುಷ ಘಟನೆ ಬೆಳಕಿಗೆ

ಇನ್ನು ಸ್ಥಳೀಯರು ಪೊಲೀಸರಿಗೆ ಮತ್ತು ಮಕ್ಕಳ ಎನ್‌ಜಿಒಗೆ ವಿಚಾರ ತಿಳಿಸಿದ್ದಾರೆ. ಹೊರಗಿನಿಂದ ಅಪಾರ್ಟ್‌ಮೆಂಟ್ ಕಿಟಕಿ, ಬಾಗಿಲನ್ನು ಹಾಕಿ, ಶಬ್ದ ಸಹ ಹೊರಗೆ ಬಾರದಂತೆ ಮಾಡಲಾಗಿತ್ತು. ಆದರೂ ಸ್ಥಳೀಯರೊಬ್ಬರು ಕುತೂಹಲದಿಂದ ಕಿಟಕಿಯ ಸಂಧಿಯಲ್ಲಿ ನೋಡಿ ಗಾಬರಿಗೊಂಡಿದ್ದಾರೆ. ಬಳಿಕ ಅಕ್ಕಪಕ್ಕದ ನಿವಾಸಿಗಳಿಗೆ ವಿಚಾರ ತಿಳಿಸಿದ್ದಾರೆ. ಅವರಿಂದಲೇ ಇಂತಹ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ.

ಇದನ್ನೂ ಓದಿ: Love on the Animal: ಸಾಕು ಪ್ರಾಣಿಯ ಸ್ನೇಹ ಬಯಸಿ ಪತ್ರ ಬರೆದ ಯುವಕರು, ಶ್ವಾನದಿಂದ ಉತ್ತರವೂ ಬಂತು!

ಪಾಪಿ ಪೋಷಕರ ವಿರುದ್ಧ ದೂರು ದಾಖಲು

ಸಿಡಬ್ಲ್ಯುಸಿ ಅಧಿಕಾರಿಗಳು ಮಧ್ಯಪ್ರವೇಶಿಸಿ ಪೊಲೀಸರೊಂದಿಗೆ ಮಾತನಾಡಿದರರು. ಈ ಬಗ್ಗೆ ಅವರೇ ದೂರು ದಾಖಲಿಸಿದ್ದಾರೆ. ಈ ಬಳಿಕ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್‌ ದಾಖಲಿಸಲಾಗಿದೆ. ಬಾಲಕನ ಪೋಷಕರ ವಿರುದ್ಧ ಬಾಲ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ವರದಿಗಳು ತಿಳಿಸಿವೆ.
Published by:Annappa Achari
First published: