Amitabh Bachchan: ಅಮಿತಾಭ್‌ ಬಚ್ಚನ್ ಇವರಿಗೆ ದೇವರಂತೆ, ಅಭಿಮಾನಿ ಮನೆಯಲ್ಲಿ ಬಿಗ್ ಬಿ ಪ್ರತಿಮೆ!

ಭಾರತೀಯ ಅಮೆರಿಕನ್ ದಂಪತಿಗಳಾದ ರಿಂಕು ಮತ್ತು ಗೋಪಿ ಶೇತ್ ಎಂಬುವರೇ ಅಮಿತಾಭ್ ಬಚ್ಚನ್ ಅವರ ಅಪ್ಪಟ ಅಭಿಮಾನಿಗಳು. ದಂಪತಿಗಳಿಬ್ಬರು ಆಗಸ್ಟ್ 27 ರಂದು ತಮ್ಮ ನೆಚ್ಚಿನ ನಟನ ಪ್ರತಿಮೆಯನ್ನು ಅನಾವರಣಗೊಳಿಸಿ, ಅದ್ಧೂರಿ ಉದ್ಘಾಟನಾ ಸಮಾರಂಭ ನಡೆಸಿದರು.

ಅಭಿಮಾನಿ ಮನೆಯಲ್ಲಿ ಅಮಿತಾಭ್ ಬಚ್ಚನ್ ಪ್ರತಿಮೆ

ಅಭಿಮಾನಿ ಮನೆಯಲ್ಲಿ ಅಮಿತಾಭ್ ಬಚ್ಚನ್ ಪ್ರತಿಮೆ

  • Share this:
ನ್ಯೂಜೆರ್ಸಿ, ಅಮೆರಿಕ: ಭಾರತೀಯ ಚಿತ್ರರಂಗದ (Indian Film Industry) ಖ್ಯಾತ ನಟ, ಬಾಲಿವುಡ್ (Bollywood) ದಂತಕಥೆ ಅಮಿತಾಭ್ ಬಚ್ಚನ್ (Amitabh Bachchan) ಅವರನ್ನು ಭಾರತ ಮತ್ತು ವಿದೇಶಗಳಲ್ಲಿ ಲಕ್ಷಾಂತರ ಅಭಿಮಾನಿಗಳು (Fans) ಆರಾಧಿಸುತ್ತಾರೆ. ಬಿಗ್ ಬಿ (Big B) ಅವರನ್ನು ಅವರ ಕೆಲವು ಅಭಿಮಾನಿಗಳು ದೇವರಿಗೆ (God) ಸಮಾನವೆಂದು ಪರಿಗಣಿಸುತ್ತಾರೆ. ಅವರು ಕೆಲವೊಮ್ಮೆ ಅವರ ಮೇಲಿನ ಪ್ರೀತಿಯನ್ನು ತೋರಿಸಲು ಅನೇಕ ವಿಚಿತ್ರ, ವಿಶೇಷ ಕೆಲಸಗಳನ್ನೂ ಮಾಡುವ ಕಟ್ಟಾ ಅಭಿಮಾನಿಗಳೂ ಇದ್ದಾರೆ. ಅಮೆರಿಕದ (America) ನ್ಯೂಜೆರ್ಸಿಯಲ್ಲಿರುವ (New Jersey) ಅಮಿತಾಭ್ ಅಪ್ಪಟ ಅಭಿಮಾನಿಯೊಬ್ಬರು, ಅಮಿತಾಭ್ ಬಚ್ಚನ್‌ಗಾಗಿ ಈಗ ಸುಮಾರು 60 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿದ್ದಾರೆ. ತಮ್ಮ ಮನೆ ಮುಂದೆ ಬಿಗ್ ಬಿ ಅವರಷ್ಟೇ ಎತ್ತರದ ಪ್ರತಿಮೆಯನ್ನು (Statue) ನಿರ್ಮಿಸಿ, ಸುದ್ದಿಯಾಗಿದ್ದಾರೆ.

ಮನೆ ಮುಂದೆ ಅಮಿತಾಭ್ ಪ್ರತಿಮೆ ಅನಾವರಣ

ಭಾರತೀಯ ಅಮೆರಿಕನ್ ದಂಪತಿಗಳಾದ ರಿಂಕು ಮತ್ತು ಗೋಪಿ ಶೇತ್ ಎಂಬುವರೇ ಅಮಿತಾಭ್ ಬಚ್ಚನ್ ಅವರ ಅಪ್ಪಟ ಅಭಿಮಾನಿಗಳು. ದಂಪತಿಗಳಿಬ್ಬರು ಆಗಸ್ಟ್ 27 ರಂದು ತಮ್ಮ ನೆಚ್ಚಿನ ನಟನ ಪ್ರತಿಮೆಯನ್ನು ಅನಾವರಣಗೊಳಿಸಿ, ಅದ್ಧೂರಿ ಉದ್ಘಾಟನಾ ಸಮಾರಂಭ ನಡೆಸಿದರು.



ಗಾಜಿನ ಪೆಟ್ಟಿಗೆಯೊಳಗೆ ಬಿಗ್ ಬಿ ಪ್ರತಿಮೆ

ಗಾಜಿನ ಪೆಟ್ಟಿಗೆಯಲ್ಲಿ ಅಮಿತಾಭ್ ಬಚ್ಚನ್ ವಿರಾಜಮಾನರಾಗಿದ್ದಾರೆ. ಅಮಿತಾಭ್ ಬಚ್ಚನ್ ಅವರು ಸಾಂಪ್ರದಾಯಿಕ ಕಪ್ಪು ಬಂಧಗಾಲಾ ಸೂಟ್ ಧರಿಸಿ ಕುರ್ಚಿಯ ಮೇಲೆ ಕುಳಿತಿದ್ದಾರೆ. ಪ್ರತಿಮೆಯನ್ನು ಕುಟುಂಬದ ಹೊಸ ಮನೆಯ ಹೊರಗೆ ಇರಿಸಲಾಗಿದೆ.

ಇದನ್ನೂ ಓದಿ: Yogaraj Bhat Movie: ಒಂದೇ ಸಿನಿಮಾದಲ್ಲಿ ಶಿವಣ್ಣ-ಪ್ರಭುದೇವ್! ಬೆಂಗಳೂರಲ್ಲಿ ಭರದಿಂದ ಸಾಗಿದೆ ಭಟ್ರ ಶೂಟಿಂಗ್

ಸಮಾರಂಭದಲ್ಲಿ ಇಂಡೋ-ಅಮೆರಿಕನ್ ಜನರು ಭಾಗಿ

ಟ್ವಿಟರ್‌ನಲ್ಲಿ ಫೋಟೋಗಳಲ್ಲಿ ಅಮಿತಾಭ್ ಬಚ್ಚನ್ ಪ್ರತಿಮೆ ಉದ್ಘಾಟನಾ ಸಮಾರಂಭದ ಫೋಟೋ ಹಾಕಲಾಗಿದೆ. ರಿಂಕು ಮತ್ತು ಗೋಪಿ ಶೇತ್ ಕುಟುಂಬವು ನಟನ ಪ್ರತಿಮೆಯ ಪಕ್ಕದಲ್ಲಿ ಸಾಂಪ್ರದಾಯಿಕ ಉಡುಗೆಯನ್ನು ಧರಿಸಿ ಪೋಸ್ ಕೊಟ್ಟಿದ್ದಾರೆ. ಈ ಉದ್ಘಾಟನಾ ಸಮಾರಂಭದಲ್ಲಿ ಭಾರತೀಯ-ಅಮೆರಿಕನ್ ಸಮುದಾಯದ ಅನೇಕ ಜನರು ಭಾಗವಹಿಸಿದ್ದರು.

ಬಿಗ್ ಬಿ ಮೇಲೆ ಅಪಾರ ಪ್ರೀತಿ

ಗೋಪಿ ಶೇತ್ ದಂಪತಿಗಳಿಗೆ ಅಮಿತಾಭ್ ಬಚ್ಚನ್ ಮೇಲೆ ಅಪಾರ ಪ್ರೀತಿ ಇದೆಯಂತೆ. “ನನಗೆ ಮತ್ತು ನನ್ನ ಹೆಂಡತಿಗೆ ಅಮಿತಾಭ್ ಬಚ್ಚನ್ ಅವರು ದೇವರಿಗಿಂತ ಕಡಿಮೆಯಿಲ್ಲ. ಅವರ ಬಗ್ಗೆ ನನಗೆ ಸ್ಫೂರ್ತಿ ನೀಡುವ ದೊಡ್ಡ ವಿಷಯವೆಂದರೆ ಅವರ ರೀಲ್ ಜೀವನ ಮಾತ್ರವಲ್ಲದೆ ಅವರ ನಿಜ ಜೀವನ ಕೂಡ ಆದರ್ಶವೇ. ನಿಮಗೆ ತಿಳಿದಿರುವಂತೆ ಅವರು ತುಂಬಾ ಡೌನ್ ಟು ಅರ್ಥ್ ವ್ಯಕ್ತಿ.. ಅವರು ಬೇರೆ ಸ್ಟಾರ್‌ಗಳಂತೆ ಅಲ್ಲ, ಯಾಕೆಂದ್ರೆ ಅವರು ತಮ್ಮ ಅಭಿಮಾನಿಗಳನ್ನು ಪ್ರೀತಿಯಿಂದ ಕಾಣುತ್ತಾರೆ. ಅದಕ್ಕಾಗಿಯೇ ನಾನು ನನ್ನ ಮನೆಯಲ್ಲೇ ಅವರನ್ನು ಸದಾ ಜೊತೆಗೆ ಇರಿಸಿಕೊಳ್ಳಬೇಕು ಅಂತ ನಿರ್ಧರಿಸಿ, ಅವರ ಪ್ರತಿಮೆ ನಿರ್ಮಿಸಿದ್ದೇನೆ ಅಂತ ಹೇಳಿದ್ದಾರೆ.

ಇದನ್ನೂ ಓದಿ: Gurmeet and Debina: 2ನೇ ಮಗುವಿನ ನಿರೀಕ್ಷೆಯಲ್ಲಿ ಗುರ್ಮೀತ್ ಚೌಧರಿ, ಡೆಬಿನಾ ಬೊನ್ನರ್ಜಿ ದಂಪತಿ

ಅಮಿತಾಭ್ ಬಚ್ಚನ್ ಹೆಸರಲ್ಲಿ ವೆಬ್‌ಸೈಟ್ ನಡೆಸುತ್ತಿರುವ ಗೋಪಿ ಶೇತ್

ಇಂಟರ್ನೆಟ್‌ ಭದ್ರತಾ ಎಂಜಿನಿಯರ್‌ ಆಗಿರುವ ಗೋಪಿ ಸೇತ್ 1990ರ ಸಮಯದಲ್ಲಿ ಗುಜರಾತ್‌ನಿಂದ ಅಮೆರಿಕಕ್ಕೆ ತೆರಳಿದರು. ಈಗಾಗಲೇ ಅವರು ಅಮಿತಾಭ್ ಹೆಸರಲ್ಲಿ ಒಂದು ವೆಬ್​ಸೈಟ್ ಕೂಡ ನಡೆಸುತ್ತಿದ್ದಾರೆ. ಅಮಿತಾಭ್ ಬಚ್ಚನ್ ಅವರಿಗೆ ಈ ಪ್ರತಿಮೆ ನಿರ್ಮಾಣ ಮಾಡುವ ವಿಚಾರ ಗೊತ್ತಿದೆಯಂತೆ. ಇದಕ್ಕೆ ತಾವು ಅರ್ಹರಲ್ಲ ಎಂಬುದನ್ನು ಅಮಿತಾಭ್ ಅವರು ಗೋಪಿಗೆ ತಿಳಿಸಿದ್ದಾರೆ. ಈ ಬಗ್ಗೆಯೂ ಗೋಪಿ ಅವರು ಮಾಹಿತಿ ನೀಡಿದ್ದಾರೆ.
Published by:Annappa Achari
First published: