• Home
  • »
  • News
  • »
  • national-international
  • »
  • Victorian Beauty Spot: ಭೀಕರ ಬರಗಾಲ, ಜಲಾಶಯದಡಿ ಮರೆಯಾಗಿದ್ದ ಸುಪ್ರಸಿದ್ಧ ವಿಕ್ಟೋರಿಯನ್ ಬ್ಯೂಟಿ ಸ್ಪಾಟ್ ಗೋಚರ

Victorian Beauty Spot: ಭೀಕರ ಬರಗಾಲ, ಜಲಾಶಯದಡಿ ಮರೆಯಾಗಿದ್ದ ಸುಪ್ರಸಿದ್ಧ ವಿಕ್ಟೋರಿಯನ್ ಬ್ಯೂಟಿ ಸ್ಪಾಟ್ ಗೋಚರ

ವಿಕ್ಟೋರಿಯನ್ ಬ್ಯೂಟಿ ಸ್ಪಾಟ್

ವಿಕ್ಟೋರಿಯನ್ ಬ್ಯೂಟಿ ಸ್ಪಾಟ್

ಎರ್‌ವುಡ್ ಜಲಾಶಯಕ್ಕೆ ದಾರಿ ಮಾಡಿಕೊಡಲು 1930 ರ ದಶಕದಲ್ಲಿ ಈ ಸುಂದರ ಗ್ರಾಮವನ್ನು ನಾಶ ಮಾಡಲಾಯಿತು. ಆದರೆ ಬರದಿಂದಾಗಿ ಉಂಟಾದ ನೀರಿನ ಕಡಿಮೆ ಮಟ್ಟದಿಂದ ನಶಿಸಿ ಹೋಗಿದ್ದ ಗೊಯ್ಟ್ಸ್ ಸೇತುವೆಯ ಗ್ರಾಮದ ಕೆಲ ಭಾಗಗಳು ಪ್ರಸ್ತುತ ಗೋಚರವಾಗುತ್ತಿದೆ.

  • Share this:

1960ರ ದಶಕದಲ್ಲಿ ಜಲಾಶಯದ (Reservoir) ನಿರ್ಮಾಣಕ್ಕಾಗಿ ನಾಶ ಮಾಡಲಾಗಿದ್ದ ಒಂದು ಸುಂದರ ಊರಿನ ಕುರುಹುಗಳು ಬರಗಾಲದಿಂದಾಗಿ ಮತ್ತೆ ಕಾಣಿಸಿಕೊಂಡಿದೆ. ಹೌದು ಹಿಂದಿನಿಂದಲೂ ಒಂದು ಪ್ರವಾಸಿ ತಾಣವಾಗಿದ್ದ (Tourist Spot) ಒಂದು ಜಾಗದ ನೆನಪು ಈಗ ಮತ್ತೆ ಮರುಕಳಿಸುತ್ತಿದ್ದು, ಮತ್ತೆ ಒಂದು ಅತ್ಯದ್ಭುತ ಸ್ಥಳವಾಗಿ ಹೊರಹೊಮ್ಮುತ್ತಿದೆ. ಡರ್ಬಿಶೈರ್‌ನಲ್ಲಿರುವ ಗೊಯ್ಟ್ಸ್ ಸೇತುವೆ ಸ್ಥಳವು ಆಗಿನ ಕಾಲದಲ್ಲಿ ವಿಕ್ಟೋರಿಯನ್ ಪ್ರವಾಸಿಗರ (Victorian tourists) ನೆಚ್ಚಿನ ಜಾಗ, ಪ್ರವಾಸೋದ್ಯಮದ ಉತ್ತಮ ಮೂಲ ಮತ್ತು ಗೋಯ್ಟ್ ಕಣಿವೆಯ (Goyt Valley) ಕೇಂದ್ರಬಿಂದು ಕೂಡ ಆಗಿತ್ತು. ಆದರೆ ಈ ಸುಪ್ರಸಿದ್ಧ ಸ್ಥಳ ಜಲಾಶಯವೊಂದರ ನಿರ್ಮಾಣದ ನಿಮಿತ್ತ ನೀರಿನಡಿ ಮುಳುಗಿ ಹೋಯಿತು.


ಎರ್‌ವುಡ್ ಜಲಾಶಯದ ನಿರ್ಮಾಣಕ್ಕಾಗಿ ಪ್ರಸಿದ್ಧ ಸ್ಥಳದ ವಿನಾಶ
ಹೌದು, ಎರ್‌ವುಡ್ ಜಲಾಶಯಕ್ಕೆ ದಾರಿ ಮಾಡಿಕೊಡಲು 1930 ರ ದಶಕದಲ್ಲಿ ಈ ಸುಂದರ ಗ್ರಾಮವನ್ನು ನಾಶ ಮಾಡಲಾಯಿತು. ಆದರೆ ಬರದಿಂದಾಗಿ ಉಂಟಾದ ನೀರಿನ ಕಡಿಮೆ ಮಟ್ಟದಿಂದ ನಶಿಸಿ ಹೋಗಿದ್ದ ಗೊಯ್ಟ್ಸ್ ಸೇತುವೆಯ ಗ್ರಾಮದ ಕೆಲ ಭಾಗಗಳು ಪ್ರಸ್ತುತ ಗೋಚರವಾಗುತ್ತಿದೆ.


ಈ ಸ್ಥಳದ ಬಗ್ಗೆ ವೆಬ್‌ಸೈಟ್ ನಡೆಸುತ್ತಿರುವ ಸ್ಥಳೀಯ ಇತಿಹಾಸಕಾರ ಡೇವಿಡ್ ಸ್ಟಿರ್ಲಿಂಗ್, ಅವರು ತಮ್ಮ ಫೋನ್‌ನಲ್ಲಿ ಜಿಪಿಎಸ್ ಅನ್ನು ಬಳಸಿ, ಕುಗ್ರಾಮದ ಹಳೆಯ ನಕ್ಷೆಗಳ ಜೊತೆಗೆ, ಕೆಲವು ಕಲ್ಲಿನ ಕಲಾಕೃತಿಗಳನ್ನು ಸೌಂದರ್ಯ ತಾಣದ ಹಳೆಯ ಛಾಯಾಚಿತ್ರಗಳಿಗೆ ಹೋಲಿಸಿ ಉಲ್ಲೇಖಿಸಿದ್ದಾರೆ. ಕಾಣಿಸಿಕೊಂಡಿರುವ ಕುರುಹುಗಳಲ್ಲಿ ಗೇಟ್ ಪೋಸ್ಟ್‌ಗಳು ಮತ್ತು ಕಲ್ಲಿನ ಗೋಡೆಗಳು ಗೋಚರವಾಗಿವೆ ಎಂದಿದ್ದಾರೆ.


ಇದನ್ನೂ ಓದಿ:  Shipwreck: 1,200 ವರ್ಷ ಹಿಂದಿನ ಹಡಗಿನ ಅವಶೇಷ ಪತ್ತೆ, ಪುರಾತತ್ವ ಶಾಸ್ತ್ರಜ್ಞರು ಏನು ಹೇಳಿದ್ದಾರೆ ನೋಡಿ


"ಹಳೆಯ ನಕ್ಷೆಗಳನ್ನು ನೋಡುವುದು ಸಾಕಷ್ಟು ಕುತೂಹಲಕಾರಿಯಾಗಿದೆ. ಇದು ಅಂತಹ ಸುಂದರವಾದ ಸ್ಥಳವಾಗಿತ್ತು ಮತ್ತು ಅದರ ವಿನಾಶ ನಿಜಕ್ಕೂ ದುಃಖಕರವಾಗಿದೆ. ಇದು ವಿಕ್ಟೋರಿಯನ್ ಕಾಲದಲ್ಲಿ ಜನರಿಗೆ ಕುದುರೆ ಎಳೆಯುವ ತರಬೇತುದಾರರಿಗೆ ಜನಪ್ರಿಯ ಮಾರ್ಗವಾಗಿತ್ತು." ಎಂದು ತಿಳಿಸಿದ್ದಾರೆ.


30 ಫಾರ್ಮ್‌ಹೌಸ್‌ಗಳನ್ನು ಹೊಂದಿದ್ದ ಸ್ಥಳ
ಇತಿಹಾಸಕಾರ ಡೇವಿಡ್ ಸ್ಟಿರ್ಲಿಂಗ್ ಅವರು ನೀರಿನಡಿ ಮುಳುಗಡೆಯಾದ ಊರು ಸುಮಾರು 30 ಫಾರ್ಮ್‌ಹೌಸ್‌ಗಳನ್ನು ಮತ್ತು ಎರ್‌ವುಡ್ ಹಾಲ್ ಅನ್ನು ಒಳಗೊಂಡಿತ್ತು ಎಂದು ವಿವರಿಸಿದರು. 1930 ರ ದಶಕದಲ್ಲಿ ಸ್ಟಾಕ್‌ಪೋರ್ಟ್ ಕಾರ್ಪೊರೇಷನ್ ಜಲಾಶಯಗಳನ್ನು ನಿರ್ಮಿಸಲು ಎಸ್ಟೇಟ್ ಅನ್ನು ಖರೀದಿಸಿದಾಗ 30 ಫಾರ್ಮ್‌ಹೌಸ್‌ಗಳನ್ನು ಮತ್ತು ಎರ್‌ವುಡ್ ಹಾಲ್ ಸೇರಿ ಇಡೀ ಊರನ್ನೇ ಕೆಡವಲಾಯಿತು ಎಂದರು.


1984ರಲ್ಲಿ ಉಂಟಾದ ಇದೇ ರೀತಿಯ ಬರಗಾಲದಲ್ಲಿ ಊರಿನ ಆಕರ್ಷಣೀಯವಾದ ಕಲ್ಲಿನ ಸೇತುವೆ ಕುರುಹು ಪತ್ತೆಯಾಗಿತ್ತಂತೆ. ಆದರೆ ಈ ವರ್ಷ ಉಂಟಾದ ಬರಗಾಲದಲ್ಲಿ ಆ ಕಲ್ಲಿನ ಸೇತುವೆ ಮರೆಯಾಗಿದೆ ಎಂದು ವರದಿಗಳಾಗಿವೆ.


ಇದೊಂದು ಹೆಸರಾಂತ ಸೌಂದರ್ಯ ತಾಣವಂತೆ 
ಈ ಮೇಲೆ ಹೇಳಿದಂತೆ ಇದೊಂದು ಹೆಸರಾಂತ ಸೌಂದರ್ಯದ ತಾಣವಾಗಿತ್ತು. ಯುನೈಟೆಡ್ ಯುಟಿಲಿಟೀಸ್‌ನ ವಕ್ತಾರರು ಹೇಳುವ ಪ್ರಕಾರ, "ಇತ್ತೀಚಿನ ಒಣ ಹವಾಮಾನದಿಂದಾಗಿ ಗೋಯ್ಟ್ ಕಣಿವೆಯೊಳಗಿನ ಜಲಾಶಯಗಳು ವರ್ಷದ ಈ ಸಮಯದಲ್ಲಿ ನಾವು ನಿರೀಕ್ಷಿಸುವುದಕ್ಕಿಂತ ಕಡಿಮೆ ನೀರಿನ ಮಟ್ಟ ಹೊಂದಿವೆ. ಹೀಗಾಗಿ ಈ ಕಡಿಮೆ ಜಲಾಶಯದ ಮಟ್ಟವು ಹಳೆಯ ಗೊಯ್ಟ್ ಗ್ರಾಮವನ್ನು ಹೊರತಂದಿದೆ" ಎಂದಿದ್ದಾರೆ.


"ಇದು ನಿಜವಾಗಿಯೂ ಆಸಕ್ತಿದಾಯಕ ಇತಿಹಾಸವಾಗಿದೆ ಮತ್ತು ಎರ್‌ವುಡ್ ಜಲಾಶಯಕ್ಕೆ ಭೇಟಿ ನೀಡುವವರು ನೀರು ಮತ್ತು ಸುತ್ತಮುತ್ತಲಿನ ಕಣಿವೆಯ ಸುತ್ತಲಿನ ಸ್ಥಳಗಳನ್ನು ನೋಡಬಹುದಾಗಿದೆ. ಆದಾಗ್ಯೂ, ಜನರು ಜಲಾಶಯದ ಹತ್ತಿರ ಪ್ರವೇಶಿಸಲು ಪ್ರಯತ್ನಿಸಬಾರದು" ಎಂದು ಹೇಳಿದ್ದಾರೆ ಜಲಾಶಯದ ಮಾಲೀಕರಾದ ಯುನೈಟೆಡ್ ಯುಟಿಲಿಟೀಸ್‌ನ ವಕ್ತಾರರು.


ಬರಗಾಲದಿಂದಾಗಿ ಆ ಪ್ರಸಿದ್ಧ ಸ್ಥಳ ಮತ್ತೆ ಗೋಚರ 
ಸ್ಥಳದ ಅವನತಿಯ ನಂತರ ಡರ್ಬಿಶೈರ್‌ನಲ್ಲಿರುವ ಗೊಯ್ಟ್ಸ್ ಸೇತುವೆ ಸ್ಥಳ ಕೇವಲ ಪೋಸ್ಟ್‌ಕಾರ್ಡ್‌ಗಳು, ವರ್ಣಚಿತ್ರಗಳು ಮತ್ತು ಛಾಯಾಚಿತ್ರಗಳಲ್ಲಿ ಉಳಿದಿತ್ತು. ಬರಗಾಲದಿಂದಾಗಿ ಆ ಪ್ರಸಿದ್ಧ ಸ್ಥಳವನ್ನು ಸ್ಥಳಿಯರು ನೋಡಬಹುದಾಗಿದೆ.


ಇದನ್ನೂ ಓದಿ: Drought in Europe: ಯುರೋಪಿನಾದ್ಯಂತ ಭೀಕರ ಬರಗಾಲ, ಇತಿಹಾಸದ ಕುರುಹುಗಳು ಪತ್ತೆ


ಇನ್ನೂ ಎರ್ ವುಡ್ ಜಲಾಶಯವು ಪೀಕ್ ಡಿಸ್ಟ್ರಿಕ್ಟ್ ನ್ಯಾಷನಲ್ ಪಾರ್ಕಿನಲ್ಲಿರುವ ಕುಡಿಯುವ-ನೀರಿನ ಜಲಾಶಯವಾಗಿದೆ, ಇದು ಡರ್ಬಿಶೈರ್ ಕೌಂಟಿಯೊಳಗೆ ಮತ್ತು ಚೆಷೈರ್ನ ಗಡಿಗೆ ಬಹಳ ಹತ್ತಿರದಲ್ಲಿದೆ. ಗೊಯ್ಟ್ ಕಣಿವೆಯಲ್ಲಿ ನಿರ್ಮಿಸಲಾದ ಎರಡು ಜಲಾಶಯಗಳಲ್ಲಿ ಇದು ಎರಡನೆಯ ಜಲಾಶಯವಾಗಿದೆ.

Published by:Ashwini Prabhu
First published: