• Home
  • »
  • News
  • »
  • national-international
  • »
  • Drushya Movie Style Murder: ಅಡುಗೆ ಕೋಣೆಯಲ್ಲಿ ಹುಗಿದಿತ್ತು ಮೃತದೇಹ! ಸಿನಿ ಸ್ಟೈಲ್ ಕೊಲೆ 'ದೃಶ್ಯ' ನೋಡಿದವರಿಗೆ ಶಾಕ್

Drushya Movie Style Murder: ಅಡುಗೆ ಕೋಣೆಯಲ್ಲಿ ಹುಗಿದಿತ್ತು ಮೃತದೇಹ! ಸಿನಿ ಸ್ಟೈಲ್ ಕೊಲೆ 'ದೃಶ್ಯ' ನೋಡಿದವರಿಗೆ ಶಾಕ್

ಕೊಲೆಯಾದ ವ್ಯಕ್ತಿ

ಕೊಲೆಯಾದ ವ್ಯಕ್ತಿ

‘ದೃಶ್ಯಂ’ ಸಿನಿಮಾದ (Drushyam Cinema) ಬಗ್ಗೆ ಎಲ್ಲರಿಗೂ ಗೊತ್ತು. ಮೂಲ ಮಲಯಾಳಂನಲ್ಲಿ (Malayalam) ಬಂದಿದ್ದ ಸಿನಿಮಾ, ಅಲ್ಲಿ ಯಶಸ್ವಿಯಾಗಿತ್ತು. ಬಳಿಕ ಕನ್ನಡ, ತಮಿಳು, ತೆಲುಗು ಹಾಗೂ ಹಿಂದಿ ಭಾಷೆಗೆ ರಿಮೇಕ್ ಆಗಿತ್ತು. ಎಲ್ಲಾ ಕಡೆ ಜನಮನ ಸೆಳೆದಿದ್ದ ಈ ಸಿನಿಮಾ, ಅನೇಕ ಕೊಲೆಗಳಿಗೆ (Murder), ಕೊಲೆಗಾರರಿಗೆ ಸ್ಫೂರ್ತಿಯಾಗಿತ್ತು. ಇದೀಗ ಇದೇ ಸಿನಿಮಾದ ಕಥೆಗೆ ಹೋಲುವಂತ ನೈಜ ಘಟನೆ (Real Incident) ಕೇರಳದಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.

ಮುಂದೆ ಓದಿ ...
  • Share this:

ಕೇರಳ: ಮರ್ಡರ್ ಮಿಸ್ಟ್ರಿ (murder mystery) ಕಥಾ ಹಂದರದ ‘ದೃಶ್ಯಂ’ ಸಿನಿಮಾದ (Drushyam Cinema) ಬಗ್ಗೆ ಎಲ್ಲರಿಗೂ ಗೊತ್ತು. ಮೂಲ ಮಲಯಾಳಂನಲ್ಲಿ (Malayalam) ಬಂದಿದ್ದ ಸಿನಿಮಾ, ಅಲ್ಲಿ ಯಶಸ್ವಿಯಾಗಿತ್ತು. ಬಳಿಕ ಕನ್ನಡ, ತಮಿಳು, ತೆಲುಗು ಹಾಗೂ ಹಿಂದಿ ಭಾಷೆಗೆ ರಿಮೇಕ್ ಆಗಿತ್ತು. ಎಲ್ಲಾ ಕಡೆ ಜನಮನ ಸೆಳೆದಿದ್ದ ಈ ಸಿನಿಮಾ, ಗಲ್ಲಾ ಪೆಟ್ಟಿಗೆ (Box Office) ದೋಚಿತ್ತು. ದೃಶ್ಯಂ 2 (Drushyam 2) ಸಹ ನಿರ್ಮಾಣವಾಗಿ, ರಿಲೀಸ್ ಆಗಿತ್ತು. ವಿಪರ್ಯಾಸ ಅಂದ್ರೆ ಇದೇ ಸಿನಿಮಾ ಅನೇಕ ಕೊಲೆಗಳಿಗೆ (Murder), ಕೊಲೆಗಾರರಿಗೆ ಸ್ಫೂರ್ತಿಯಾಗಿತ್ತು. ಇದೀಗ ಇದೇ ಸಿನಿಮಾದ ಕಥೆಗೆ ಹೋಲುವಂತ ನೈಜ ಘಟನೆ (Real Incident) ಕೇರಳದಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ. ಅಲ್ಲಿ ಬಿಜೆಪಿ ಪಕ್ಷದ ಕಾರ್ಯಕರ್ತನೊಬ್ಬನ (BJP Party Worker) ಕೊಲೆಯಾಗಿದ್ದು, ಇದೇ ದೃಶ್ಯಂ ಸಿನಿಮಾ ಮಾದರಿಯಲ್ಲಿ (Drushyam Cinema Style) ಕೊಲೆ ಮಾಡಿ, ಕೊಲೆ ವಿಚಾರ ಮುಚ್ಚಿಡುವ ಯತ್ನ ಮಾಡಿರೋದು ಬೆಳಕಿಗೆ ಬಂದಿದೆ.


ಮನೆಯಿಂದ ನಿಗೂಢವಾಗಿ ನಾಪತ್ತೆಯಾದ ವ್ಯಕ್ತಿ


ಕೇರಳ ರಾಜ್ಯದ ಆಲಪ್ಪುಳ ಜಿಲ್ಲೆಯ ಆರ್ಯಡ್‌ನಿಂದ ವ್ಯಕ್ತಿಯೊಬ್ಬ ನಿಗೂಢವಾಗಿ ನಾಪತ್ತೆಯಾಗಿದ್ದ. 44 ವರ್ಷದ ಬಿಂದು ಕುಮಾರ್ ಅಲಿಯಾಸ್ ಬಿಂದನ್ ಎಂಬಾತ ಇದೇ ಸೆಪ್ಟೆಂಬರ್ 26ರಂದು ಮನೆಯಿಂದ ನಿಗೂಢವಾಗಿ ನಾಪತ್ತೆಯಾಗಿದ್ದ. ಬಿಜೆಪಿ ಕಾರ್ಯಕರ್ತನಾಗಿದ್ದ ಈತ, ನಾಪತ್ತೆಯಾಗಿದ್ದಾಗಿ ಕುಟುಂಬಸ್ಥರು ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದರು.


a drushya movie style murder in kerala the dead body was buried in the kitchen
ಮೃತ ದೇಹ ಸಿಕ್ಕಿದ ಸ್ಥಳ


ಅಡುಗೆ ಮನೆಯಲ್ಲಿ ಸಿಕ್ಕಿತು ವ್ಯಕ್ತಿಯ ಶವ!


ಇನ್ನು ಸೆಪ್ಟೆಂಬರ್ 26ರಂದು ನಾಪತ್ತೆಯಾಗಿದ್ದ ಬಿಂದು ಕುಮಾರ್‌ನ ಶವ ನಿನ್ನೆ ಅಂದರೆ ಅಕ್ಟೋಬರ್ 1ರಂದು ಪತ್ತೆಯಾಗಿದೆ. ಅದೂ ಅಲ್ಲೇ ಹತ್ತಿರದಲ್ಲಿ ವಾಸಿಸುತ್ತಿದ್ದ ಮುತ್ತುಕುಮಾರನ್ ಎಂಬುವರ ಮನೆಯ ಅಡುಗೆ ಕೋಣೆಯಲ್ಲಿ ಬಿಂದು ಕುಮಾರ್ ಮೃತದೇಹ ಪತ್ತೆಯಾಗಿದೆ.


a drushya movie style murder in kerala the dead body was buried in the kitchen
ವಿವಿಧ ಭಾಷೆಗಳಲ್ಲಿ ಬಂದಿದ್ದ ದೃಶ್ಯಂ ಸಿನಿಮಾ


ಇದನ್ನೂ ಓದಿ: Actress Suicide: ಆತ್ಮಹತ್ಯೆೆಗೆ ಶರಣಾದ ಯುವನಟಿ! ಹೋಟೆಲ್‌ ಕೋಣೆಯಲ್ಲಿ ಶವವಾಗಿ ಪತ್ತೆ!


ಮೊಬೈಲ್ ಲೊಕೇಶನ್ ಆಧರಿಸಿ ಪತ್ತೆ


ಕೇರಳದ ಕೊಟ್ಟಾಯಂ ಜಿಲ್ಲೆಯ ಚಂಗನಸ್ಸೆರಿ ಪಟ್ಟಣದ ಕಾಲೋನಿಯೊಂದರ ಸಮೀಪದ ಟವರ್ ಲೊಕೇಷನ್‌ನಲ್ಲಿ ಬಿಂದು ಕುಮಾರ್ ಅವರ ಮೊಬೈಲ್ ಫೋನ್ ಇರುವುದನ್ನು ಪೊಲೀಸರು ಪತ್ತೆ ಹಚ್ಚಿದ್ದರು. ಅದರ ಹತ್ತಿದ ಸ್ಥಳದಲ್ಲಿ ಅವರ ಬೈಕ್ ಸಿಕ್ಕಿತ್ತು. ಅವುಗಳ ಆಧಾರದಲ್ಲಿ ಪೊಲೀಸರು ಕಾಲೋನಿಯಲ್ಲಿನ ಎಂಸಿ ರಸ್ತೆಯ ರಾಂಡಮ್ ಮಾಲಂ ಸಮೀಪದಲ್ಲಿರುವ ಮುತ್ತುಕುಮಾರ್ ಎಂಬಾತನ ಮನೆಗೆ ತೆರಳಿದ್ದರು. ಅಲ್ಲಿ ಬಿಂದು ಕುಮಾರ್ ಮೃತದೇಹ ಹೂತಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ.


ಅಡುಗೆ ಕೋಣೆಗೆ ಗಾರೆ ಹಾಕಿಸಿದ ಜಾಗ ಕಂಡು ಅನುಮಾನ


ಮೊಬೈಲ್ ಲೆೊಕೇಷನ್ ಆಧರಿಸಿ ಮುತ್ತು ಕುಮಾರ್ ಮನೆಗೆ ತೆರಳಿದ ಪೊಲೀಸರು ಅಲ್ಲಿ ಪರಿಶೀಲನೆ ಮಾಡಿದ್ದಾರೆ. ಆಗ ಮನೆಯಲ್ಲಿ ಹೊಸದಾಗಿ ಗಾರೆ ಹಾಕಿದ ಜಾಗ ಕಂಡ ಪೊಲೀಸರಿಗೆ ಅದರ ಬಗ್ಗೆ ಅನುಮಾನ ಶುರುವಾಯ್ತು. ಆಗ ಕೆಲಸಗಾರರ ಸಹಾಯದಿಂದ ಕಾಂಕ್ರೀಟ್ ಅನ್ನು ಒಡೆದು, ನೆಲ ಅಗೆಯುವ ಕಾರ್ಯ ಆರಂಭಿಸಿದ್ದರು. ಸುಮಾರು ಆರು ಗಂಟೆಗಳ ಹುಡುಕಾಟದ ಬಳಿಕ ಬಿಂದು ಕುಮಾರ್ ಮೃತದೇಹ ಅದರೊಳಗೆ ಪತ್ತೆಯಾಗಿದೆ.


ಘಟನೆ ಬಗ್ಗೆ ಪೊಲೀಸರಿಂದ ತನಿಖೆ


ಆರ್‌ಡಿಒ ಸೂಚನೆಯಂತೆ ಚಂಗನಾಶ್ಶೇರಿ ತಹಶೀಲ್ದಾರ್ ಸಮ್ಮುಖದಲ್ಲಿ ಮೃತದೇಹವನ್ನು ಹೊರ ತೆಗೆಯಲಾಯಿತು. ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ.


ಇದನ್ನೂ ಓದಿ: Love Dhoka: ಆ ಹುಡುಗಿ ಪಾಲಿಗೆ ಪ್ರಿಯಕರನೇ ವಿಲನ್! ಅತ್ಯಾಚಾರದಿಂದ ನೊಂದು ವಿಷ ಕುಡಿದ ಸಂತ್ರಸ್ತೆ


ಪರಿಚಿತರಿಂದಲೇ ಕೊಲೆಯಾದ ಬಿಂದು ಕುಮಾರ್


ಅಸಲಿಗೆ ಬಿಂದು ಕುಮಾರ್ ಹಾಗೂ ಮುತ್ತು ಕುಮಾರನ್ ಇಬ್ಬರೂ ಪರಿಚಯಸ್ಥರು ಎನ್ನಲಾಗಿದೆ. ಆದರೆ ಬಿಂದು ಕುಮಾರ್‌ನನ್ನು ಕೊಲೆ ಮಾಡಿದ್ದು ಏಕೆ ಎನ್ನುವ ವಿಚಾರ ಬಹಿರಂಗ ಗೊಂಡಿಲ್ಲ. ಇನ್ನು  ಗೋಣಿಯಲ್ಲಿ ಕಟ್ಟಿಹಾಕಲ್ಪಟ್ಟ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಸದ್ಯ ಶಂಕಿತ ಆರೋಪಿ ಮುತ್ತುಕುಮಾರ್ ತಲೆಮರೆಸಿಕೊಂಡಿದ್ದು, ಆತನ ಪತ್ತೆಗೆ ಶೋಧ ನಡೆಸಲಾಗುತ್ತಿದೆ.

Published by:Annappa Achari
First published: