Drink And Drive Car Accident: ನಶೆಯಲ್ಲಿ ಕಾರು ಚಾಲನೆ; ವ್ಯಕ್ತಿಯ ಇಡೀ ಜೀವನವನ್ನೇ ಬದಲಿಸಿದ ಅಪಘಾತ

ಈ ಅಪಘಾತ ಜೀವನದಲ್ಲಿಯೇ ಮರೆಯದಂತ ಗಾಯವನ್ನು ಮಾಡಿದ್ದು, ಇಂದೂ ಸಹ ಆ ದಿನ ನೆನೆದು ಪಾಲ್ ಬೆಚ್ಚಿ ಬೀಳುತ್ತಿದ್ದಾನೆ.

ಪ್ರಾತಿನಿಧಿಕ ಚಿತ್ರ (Photo: Google)

ಪ್ರಾತಿನಿಧಿಕ ಚಿತ್ರ (Photo: Google)

  • Share this:
    ವಾಷಿಂಗ್ಟನ್: ಮದ್ಯ ಸೇವಿಸಿ ವಾಹನ ಚಲಾಯಿಸೋದು (Drink And Drive) ಅಪಾಯ ಎಂದು ಹೆದ್ದಾರಿಗಳಲ್ಲಿ ದೊಡ್ಡ ದೊಡ್ಡ ಬೋರ್ಡ್ ಹಾಕಿರುತ್ತಾರೆ. ಆದರೂ ಕೆಲವರು ಟ್ರಾಫಿಕ್ ನಿಯಮ(Traffic Rules)ಗಳನ್ನು ಉಲ್ಲಂಘಿಸಿ ನಶೆಯಲ್ಲಿ ವಾಹನ ಚಲಾಯಿಸಿ ಪ್ರಾಣವನ್ನ ಕಳೆದುಕೊಂಡಿರುವ ಉದಾಹರಣೆಗಳು ನಮ್ಮ ಮುಂದಿವೆ. ಕೆಲವರು ದೇಹದ ಒಂದೊಂದು ಅಂಗಗಳನ್ನೇ ಊನ ಮಾಡಿಕೊಂಡು ಜೀವನ ನಡೆಸುತ್ತಿರುವ ಜನರು ನಮ್ಮ ಜೊತೆಯಲ್ಲಿದ್ದಾರೆ. ಆದ್ರೆ ಅಮೆರಿಕ(America)ದ ಯುವಕನ ಜೀವನವನ್ನೇ ಅಪಘಾತ (Car Accident) ಬದಲಿಸಿದೆ. 2014ರಲ್ಲಿ ಯುವಕ ನಶೆಯಲ್ಲಿ ಕಾರ್ ಚಲಾಯಿಸಿದ್ದನು. ನಶೆಯಲ್ಲಿದ್ದರಿಂದ ಕಾರ್ ಅಪಘಾತಕ್ಕೊಳಗಾಗಿತ್ತು. ಆ ಅಪಘಾತದ ನಂತರ ತನ್ನ ಜೀವನದಲ್ಲಾದ ಬದಲಾವಣೆಗಳನ್ನು ಯುವಕ ಸೋಶಿಯಲ್ ಮೀಡಿಯಾ(Social Media)ದಲ್ಲಿ ಹಂಚಿಕೊಂಡು ಸಂದೇಶವನ್ನು ನೀಡಿದ್ದಾನೆ.

    ಯಾರು ಈ ಯುವಕ?:
    'ಡೇಲಿ ಮೇಲ್' ವರದಿ ಪ್ರಕಾರ, ಅಮೆರಿಕದ ಸೇಂಟ್ ಲೂಯಿಸ್ ಮಿಸೌರಿ (Sain Louis, Missouri) ಬಳಿ 2014ರಲ್ಲಿ ಅಪಘಾತ ಸಂಭವಿಸಿತ್ತು. 29 ವರ್ಷದ ಪಾಲ್ ಬೆರಿ (Paul Berry) ಕಾರ್ ಅಪಘಾತಕ್ಕೊಳಗಾಗಿತ್ತು. ಆ ದಿನ ಪಾಲ್ ತನ್ನ ಗೆಳತಿಯನ್ನು ಭೇಟಿಯಾಗಲು ಮಿಸೌರಿ (Missouri)ಯಿಂದ ಕೋಲಂಬಿಯಾ (Columbia)ದತ್ತ ಹೊರಟಿದ್ದನು. ಪ್ರಯಾಣದ ವೇಳೆ ಪಾಲ್ ಮದ್ಯ ಸೇವನೆ ಮಾಡಿದ್ದರಿಂದ ಮಾರ್ಗ ಮಧ್ಯೆ ನಿಯಂತ್ರಣ ಕಳದುಕೊಂಡ ಕಾರ್ ಅಪಘಾತ (Road Accident) ಕ್ಕೊಳಗಾಗಿತ್ತು. ಈ ಅಪಘಾತ ಜೀವನದಲ್ಲಿಯೇ ಮರೆಯದಂತ ಗಾಯವನ್ನು ಮಾಡಿದ್ದು, ಇಂದೂ ಸಹ ಆ ದಿನ ನೆನೆದು ಪಾಲ್ ಬೆಚ್ಚಿ ಬೀಳುತ್ತಿದ್ದಾನೆ.

    ಭಯಾನಕ ಅಪಘಾತದ ದಿನಗಳನ್ನು ಭಯಪಡುತ್ತಲೇ ನೆನಪು ಮಾಡಿಕೊಂಡಿರುವ ಪಲ್ ಬೆರಿ, ನಾನು ಹೊರ ಬೀಳುತ್ತಿದ್ದಂತೆ , ಕಾರ್ ನನ್ನ ಮೇಲೆಯೇ ಉರುಳಿತು. ಇದರ ಪರಿಣಾಮ ಕತ್ತು, ಸೊಂಟ, ದವಡೆ, ಮೂಗು ಮತ್ತು ಖಾಸಗಿ ಅಂಗಗಳು, ವೃಷಣಗಳ ಭಾಗದಲ್ಲಿ ಗಂಭೀರ ಸ್ವರೂಪದ ಗಾಯಗಳಾಗಿದ್ದವು. ಅಪಘಾತದಲ್ಲಿ ಕಾರ್ ಸಂಪೂರ್ಣ ಛಿದ್ರ ಛಿದ್ರವಾಗಿತ್ತು.

    ಇದನ್ನು ಓದಿ: ಏಕಾಏಕಿ ಕೆಲಸದಿಂದ ವಜಾ; ಸಹೋದ್ಯೋಗಿಗಳ ಮೇಲೆ ಹಲ್ಲೆ ನಡೆಸಿದ ವ್ಯಕ್ತಿ

    ಖಾಸಗಿ ಅಂಗವನ್ನೇ ಕತ್ತರಿಸಿದ ವೈದ್ಯರು:
    ಅಪಘಾತದ ಬಳಿಕ ಪಾಲ್ ಬೆರಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ವೇಳೆ ವೈದ್ಯರು ಪಾಲ್ ನ ಮರ್ಮಾಂಗ (ಖಾಸಗಿ ಅಂಗ) ಮತ್ತು ಒಂದು ವೃಷಣ (ಟೆಸ್ಟಿಕಲ್) ಕತ್ತರಿಸಿ ಬೇರ್ಪಡಿಸಿದ್ದಾರೆ. ಚಿಕಿತ್ಸೆ ಕೆಲ ದಿನಗಳ ಬಳಿಕ ಪಾಲ್ ಗೆ ಪ್ರೈವೇಟ್ ಭಾಗ ಕತ್ತರಿಸಿರುವ ವಿಷಯ ತಿಳಿದಿದೆ. ಈ ಭಯಾನಕ ಘಟನೆ ನಡೆದು ವರ್ಷಗಳೇ ಕಳೆದ್ರೂ ಪಾಲ್ ಜೀವನದಲ್ಲಿಯೇ ದುರಂತವನ್ನು ಸೃಷ್ಟಿ ಮಾಡಿದೆ.

    ಇದನ್ನು ಓದಿ: ಗರ್ಭಪಾತದ ಅವಧಿಯನ್ನು 24 ವಾರಕ್ಕೆ ವಿಸ್ತರಿಸಿದ ಕೇಂದ್ರ; ಈ ವರ್ಗದ ಮಹಿಳೆಯರಿಗೆ ಮಾತ್ರ ಅವಕಾಶ

    ಪುರುಷ ಅನ್ನೋ ಭಾವನೆಯೇ ನನಗಿಲ್ಲ;
    ನಾನು ಎಂದೂ ತಂದೆಯಾಗಲ್ಲ ಅನ್ನೋ ದುಃಖ ಜೀವನ ಪರ್ಯಂತ ಇರಲಿದೆ. ನನಗೆ ಪುರುಷ ಅನ್ನೋ ಭಾವನೆಯೇ ಬರುತ್ತಿಲ್ಲ. ನಾನು ಹೆಣ್ಣು ಮಗುವಿನ ತಂದೆ ಆಗಬೇಕು. ಆಕೆಯ ಜೊತೆ ಆಟವಾಡಬೇಕೆಂಬ ಆಸೆ ಇತ್ತು. ಈಗ ನನ್ನ ಜೀವನವೇ ಮುಗಿದು ಹೋಗಿದೆ. ಈ ತರಹದ ಕಷ್ಟ ನನ್ನ ಶತ್ರುಗಳಿಗೆ ಬರೋದು ಬೇಡ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಕುಟುಂಬಸ್ಥರು ಜೊತೆ ಇರೋದು ಮತ್ತು ಅವರ ಬೆಂಬಲ ನನ್ನನ್ನು ಮಾನಸಿಕವಾಗಿ ಸದೃಢರನ್ನಾಗಿಸಿದೆ ಎಂದು ಪಾಲ್ ಹೇಳಿಕೊಳ್ಳುತ್ತಾನೆ. ಮದ್ಯ ಸೇವನೆ ಮಾಡಿ ವಾಹನ ಚಲಾಯಿಸಬೇಡಿ. ಮದ್ಯ ಸೇವನೆ ಮಾಡಿದಾಗ ವಾಹನ ಚಾಲನೆ ಮಾಡುವ ಪ್ರಸಂಗ ಎದುರಾdರೆ ಬಾಡಿಗೆ ಚಾಲಕ ಅಥವಾ ಬಸ್ಸು, ರೈಲ್ವೆ ಬಳಸಿ ಎಂದು ಪಾಲ್ ಸಂದೇಶ ನೀಡಿದ್ದಾನೆ.

    ಮಹ್ಮದ್​ ರಫೀಕ್​ ಕೆ
    Published by:Seema R
    First published: