Saudi Arabia: ಸೌದಿ ಅರೇಬಿಯಾದ ವಿಮಾನ ನಿಲ್ದಾಣದ ಮೇಲೆ ಡ್ರೋಣ್​ದಾಳಿ: 8ಮಂದಿಗೆ ಗಾಯ

ಕಳೆದ 24 ಗಂಟೆಗಳ ಅವಧಿಯಲ್ಲಿ ನಡೆದ ಎರಡನೇ ಡ್ರೋಣ್ ದಾಳಿ ಇದಾಗಿದೆ. ಈ ಘಟನೆ ಹೊಣೆಯನ್ನು ಯಾವುದೇ ಸಂಘಟನೆಗಳು ಹೊತ್ತುಕೊಂಡಿಲ್ಲ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಸೌದಿ ಅರೇಬಿಯಾದ (Saudi Arabia) ವಿಮಾನ ನಿಲ್ದಾಣದಲ್ಲಿ ಡ್ರೋಣ ದಾಳಿಗೆ (Drone attack) ಏಂಟು ಜನರು ಗಾಯಗೊಂಡಿದ್ದು, ನಾಗರಿಕ ವಿಮಾನವೊಂದು ಹಾನಿಗೊಂಡಿರುವ ಘಟನೆ ನಡೆದಿದೆ. ಇಲ್ಲಿನ ಅಬಾ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ಕಳೆದ 24 ಗಂಟೆಗಳ ಅವಧಿಯಲ್ಲಿ ನಡೆದ ಎರಡನೇ ಡ್ರೋಣ್ ದಾಳಿ ಇದಾಗಿದೆ. ಈ ಘಟನೆ ಹೊಣೆಯನ್ನು ಯಾವುದೇ ಸಂಘಟನೆಗಳು ಹೊತ್ತುಕೊಂಡಿಲ್ಲ. ಯೆಮನ್​ನ (Yemen ) ಇರಾನ್​ ಬೆಂಬಲಿತ ಶಿಯಾ ಹೌತಿ ( Shiite Houthi) ಬಂಡುಕೋರರು ಈ ದಾಳಿ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಯೆಮೆನ್​ನಲ್ಲಿ ಇರಾನ್​ ಬೆಂಬಲಿತ ಶಿಯಾ ಬಂಡುಕೋರರರ ವಿರುದ್ಧ ಹೋರಾಡುತ್ತಿರುವ ಸೌದಿ ನೇತೃತ್ವದ ಸೇನಾ ಒಕ್ಕೂಟವು ದಾಳಿಯ ಸಾವು ನೋವುಗಳ ಕುರಿತು ಯಾವುದೇ ಮಾಹಿತಿ ನೀಡಿಲ್ಲ. ಇದರ ಹೊರತಾಗಿ ಈ ಸ್ಪೋಟಕ ಡ್ರೋನ್​ ಅನ್ನು ತನ್ನ ಒಕ್ಕೂಟ ಪಡೆ ತಡೆದಿದೆ ಎಂದು ತಿಳಿಸಿದೆ.

    ಯೆಮನ್‌ನ ದಕ್ಷಿಣದ ಪ್ರಮುಖ ಸೇನಾ ನೆಲೆ ಮೇಲೆ ಡ್ರೋಣ್​ ಮತ್ತು ಕ್ಷಿಪಣಿಗಳ ದಾಳಿ ನಡೆದ ಕೆಲವೇ ದಿನಗಳಲ್ಲಿ ಈ ದಾಳಿ ನಡೆದಿದೆ, ಈ ದಾಳಿಯಲ್ಲಿ ಕನಿಷ್ಠ 30 ಮಂದಿ ಸೌದಿ ಬೆಂಬಲಿತ ಯೆಮೆನ್​ ಸೈನಿಕರನ್ನು ಕೊಲ್ಲಲ್ಲಾಗಿದೆ. ಇದು ದೇಶದ ಅತ್ಯಂತ ಭೀಕರ ದಾಳಿಯಾಗಿದೆ ಎನ್ನಲಾಗಿದೆ.

    ಇದನ್ನು ಓದಿ: ಜಲಿಯನ್​ ವಾಲಾಬಾಗ್​ ಸ್ಮಾರಕ ನವೀಕರಣಕ್ಕೆ ಆಕ್ಷೇಪ; ಇಂತಹ ಅಪಮಾನ ಸಹಿಸಲ್ಲ ಎಂದ ರಾಹುಲ್​ ಗಾಂಧಿ

    2015ರಿಂದಲೂ ಸೌದಿ ನೇತೃತ್ವದ ಮಿಲಿಟರಿ ಒಕ್ಕೂಟದ ವಿರುದ್ಧ ಹೋರಾಡುತ್ತಿರುವ ಯೆಮೆನ್‌ನ ಹೌತಿ ಬಂಡುಕೋರರು ದಾಳಿ ನಡೆಸುತ್ತಿದ್ದಾರೆ. ಇವರು ಪ್ರಮುಖವಾಗಿ ಸೌದಿ ಅರೇಬಿಯಾದ ವಿಮಾನ ನಿಲ್ದಾಣ, ಮಿಲಿಟರಿ ಘಟಕ, ಪ್ರಮುಖ ತೈಲ ಘಟಕಗಳ ಮೇಲೆ ದಾಳಿ ಮಾಡುತ್ತಿದ್ದಾರೆ. ಜೊತೆಗೆ ಈ ದಾಳಿಗಳು ಸಾಮಾನ್ಯವಾಗಿ ಸೌದಿಯ ದಕ್ಷಿಣ ನಗರಗಳಾದ ಅಬಾ, ಜಿಜಾನ್​ ಮೇಲೆ ನಡೆಯುತ್ತಿವೆ, ಈ ದಾಳಿಯಲ್ಲಿ ಅನೇಕರು ಗಾಯಕೊಂಡು, ಕನಿಷ್ಟ ಒಬ್ಬರಾದರೂ ಸಾವನ್ನಪ್ಪುತ್ತಿದ್ದಾರೆ. ಜೊತೆಗೆ ಈ ದಾಳಿ ಜಾಗತಿಕ ತೈಲ ಮಾರುಕಟ್ಟೆಗಳನ್ನು ತಲ್ಲಣಗೊಳಿಸುತ್ತಿದೆ.

    ಈ ಯುದ್ದ ನಿಲ್ಲಿಸಲು ಅಂತರಾಷ್ಟ್ರೀಯ ರಾಜತಾಂತ್ರಿಕ ಪ್ರಯತ್ನಗಳು ನಡೆದರೂ, ಯೆಮನ್​ ಸ್ಥಿತಿ ಮಾತ್ರ ಅನಿಶ್ಚಿತತೆಯಿಂದ ಕೂಡಿದೆ. ತೈಲ ಸಂಪನ್ಮೂಲ ಹೊಂದಿರುವ ಸೌದಿ ಸರ್ಕಾರದ ಭದ್ರಕೋಟೆಯಾದ ಮರಿಬ್ ಮೇಲೆ ನಿಯಂತ್ರಣ ಸಾಧಿಸಲು ಹೌತಿಗಳು ತಮ್ಮ ಪ್ರಯತ್ನವನ್ನು ನಡೆಸುತ್ತಲೇ ಇದ್ದಾರೆ.

    2014ರಲ್ಲಿ ಬಂಡಾಯಗಾರರು ರಾಜಧಾನಿ, ಸನಾ ಸೇರಿದಂತೆ ದೇಶದ ಉತ್ತರ ಭಾಗಗಳನ್ನು ವಶಪಡಿಸಿಕೊಳ್ಳುವ ಮೂಲಕ ಈ ಯೆಮೆನ್​ ಯುದ್ಧ ಆರಂಭವಾಯಿತು.

    (ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.)
    Published by:Seema R
    First published: