ನ್ಯೂ ಯಾರ್ಕ್(ಆ. 05): ಅಯೋಧ್ಯೆಯಲ್ಲಿ ಇವತ್ತು ನಡೆದ ರಾಮಜನ್ಮಭೂಮಿ ಶಿಲಾನ್ಯಾಸದ ಭೂಮಿಪೂಜೆ ಕಾರ್ಯಕ್ರಮದ ಸದ್ದು ದೂರದ ಅಮೆರಿಕದಲ್ಲಿ ಪ್ರತಿಧ್ವನಿಸಿದೆ. ನ್ಯೂ ಯಾರ್ಕ್ ನಗರಿಯ ಪ್ರತಿಷ್ಠಿತ ಟೈಮ್ಸ್ ಸ್ಕ್ವಯರ್ನ ಬಿಲ್ಬೋರ್ಡ್ನಲ್ಲಿ ಬೃಹತ್ ರಾಮಮಂದಿರ ಚಿತ್ರದ ಪ್ರದರ್ಶನವಾಗಿದೆ. ಈ ಸ್ಥಳದಲ್ಲಿ ಪ್ರದರ್ಶನವಾಗಿರುವ ಹಿಂದೂ ದೇವರ ಅತಿದೊಡ್ಡ ಡಿಜಿಟಲ್ ಬಿಲ್ಬೋರ್ಡ್ ಇದಾಗಿದೆ. ರಾಮಮಂದಿರದ ಭೂಮಿಪೂಜೆಗೆ ಬೆಂಬಲವಾಗಿ ನಿಂತಿರುವ ಈ ದೈತ್ಯ ಬಿಲ್ಬೋರ್ಡ್ ಬೆಳಗ್ಗೆ 10 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಪ್ರದರ್ಶನಗೊಂಡಿದೆ.
ಟೈಮ್ಸ್ ಸ್ಕ್ವೇರ್ನಲ್ಲಿ ರಾಮಮಂದಿರದ ಬಿಲ್ಬೋರ್ಡ್ ಪ್ರದರ್ಶನದ ವಿಚಾರದಲ್ಲಿ ಎಡ ಮತ್ತು ಬಲಪಂಥೀಯರ ಮಧ್ಯೆ ತೀವ್ರ ವಾಗ್ಯುದ್ಧವೇ ನಡೆದಿತ್ತು. ಫ್ಯಾಸಿಸ್ಟ್ಗಳಿಗೆ ಮನ್ನಣೆ ಕೊಡುವುದು ಅಮೆರಿಕಕ್ಕೆ ಶೋಭೆ ತರುವುದಿಲ್ಲ ಎಂಬಂಥ ವಾದಗಳು ಕೇಳಿಬಂದಿದ್ದವು. ಟೈಮ್ಸ್ ಸ್ಕ್ವೇರ್ನಲ್ಲಿ ಶ್ರೀರಾಮನ ಬಿಲ್ಬೋರ್ಡ್ ಪ್ರದರ್ಶನದ ನಿರ್ಧಾರವನ್ನು ಕೈಬಿಡಲಾಗಿದೆ ಎಂಬ ಸುದ್ದಿಯೂ ಹರಿದಾಡಿತ್ತು. ಇಂದು ಮಧ್ಯಾಹ್ನ ಕೂಡ ಶ್ರೀರಾಮನ ಬಿಲ್ಬೋರ್ಡ್ ಇರುವ ಫೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ಆದರೆ, ಅದು ನಕಲಿ ಎಂಬುದು ಸಾಬೀತಾಗಿತ್ತು. ಈಗ ಅಲ್ಲಿ ನಿಜವಾಗಿಯೂ ರಾಮಮಂದಿರದ ಬಿಲ್ಬೋರ್ಡ್ ಪ್ರದರ್ಶನಗೊಂಡಿದೆ.
#WATCH USA: A digital billboard of #RamMandir comes up in New York’s Times Square.
Prime Minister Narendra Modi performed 'Bhoomi Pujan' of #RamMandir in Ayodhya, Uttar Pradesh earlier today. pic.twitter.com/Gq4Gi2kfvR
— ANI (@ANI) August 5, 2020
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ